2021ರಲ್ಲಿ ನೆರವೇರುವುದೇ ಭಾರತದ 5ಜಿ ಕನಸು?

ಇದೀಗ 2021ಕ್ಕೆ ರಿಲಾಯನ್ಸ್‌ ಜಿಯೋ 5ಜಿ ಸೇವೆ ನೀಡುವುದಾಗಿ ಭರವಸೆ ನೀಡಿದ್ದು, ಉಳಿದ ಸಂಸ್ಥೆಗಳ ಗ್ರಾಹಕರನ್ನು ಸೆಳೆಯುವ ಸಂಭವವಿದೆ.
2021ರಲ್ಲಿ ನೆರವೇರುವುದೇ ಭಾರತದ 5ಜಿ ಕನಸು?

ಟೆಲಿಕಾಂ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬಳಕೆದಾರರಿಗೆ ವಿವಿಧ ಆಫರ್‌ಗಳನ್ನು ನೀಡಿವ ಮುಖೇನ ಖಾಸಗಿ ಟೆಲಿಫೋನ್ ಸಂಸ್ಥೆಗಳು ಪೈಪೋಟಿ ನಡೆಸುತ್ತಿದ್ದು, ಟೆಲಿಫೋನ್ ಸೇವಾ ಕ್ಷೇತ್ರದಲ್ಲಿ 5ಜಿ ಯುಗ ಆರಂಭವಾಗಿದೆ. ಜಗತ್ತಿನಾದ್ಯಂತ ವೈರ್‌ಲೆಸ್ ಸಂವಹನ ಸಂಪರ್ಕ ಸಾಧಿಸಿರುವ ಟೆಲಿಪೋನ್ ಸಂಸ್ಥೆಯ 5ನೇ ತಲೆಮಾರಿಗೆ ಅನುಕೂಲವಾಗುವ ಹೊಸ ತಂತ್ರಜ್ಞಾನ ಇದಾಗಿದ್ದು, 5ಜಿ ಸೇವೆ ಅತ್ಯಂತ ವೇಗದ ವೈರ್‌ಲೆಸ್ ತಂತ್ರಜ್ಞಾನ. ಮಲ್ಟಿ ಡೇಟಾ ವ್ಯವಸ್ಥೆ ಮತ್ತು ಹೆಚ್ಚು ವಿಶ್ವಾಸಾರ್ಹತೆ, ಬೃಹತ್ ನೆಟ್ವರ್ಕ್‌ ಸಾಮರ್ಥ್ಯ, ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ.

ಅಮೇರಿಕಾ, ಸೇರಿದಂತೆ ಹಲವು ದೇಶಗಳು ಗ್ರಾಹಕರಿಗೆ 5ಜಿ ಸೇವೆಯನ್ನ ಈಗಾಗಲೇ ಒದಗಿಸಿದ್ದು, ಇದೀಗ ಭಾರತ ಕೂಡ ವಿಜ್ಞಾನ ತಂತ್ರಜ್ಞಾನ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚು ಡಿಜಿಟಲಿಕರಣ ಹೊಂದಿ ತ್ವರಿತವಾಗಿ ಕಾರ್ಯನಿರ್ವಹಿಸಲು ಚಿಂತನೆ ನಡೆಸಿದೆ. 2020 ಜನವರಿಯಿಂದ ಇಲ್ಲಿಯವರೆ 34 ದೇಶಗಳಲ್ಲಿ 378 ನಗರಗಳಲ್ಲಿ ವ್ಯಾಣಿಜ್ಯಾತ್ಮಕ 5ಜಿ ನೆಟ್ವರ್ಕ್ ನಿಯೋಜಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


5ಜಿ ಸೇವೆ ಬಗ್ಗೆ ಪ್ರಧಾನಿ ಮಾತು

ಭವಿಷ್ಯದಲ್ಲಿ ಪ್ರಗತಿ ಕಾಣಲು ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಲಕ್ಷಾಂತರ ಭಾರತೀಯರನ್ನು ಸಬಲೀಕರಣ ಮಾಡಲು 5ಜಿ ಹೊಸ ಟೆಲಿಕಾಂ ಕ್ರಾಂತಿ ಕಾರಣವಾಗಿಲಿದ್ದು, ಹಳ್ಳಿಗಳಲ್ಲಿ ಹೈಸ್ಪೀಡ್ ಆಪ್ಟಿಕಲ್ ಫೈಬರ್ ನೆಟ್ವರ್ಕ್‌ ಮೂಲಕ ತ್ವರಿತ ಸಂಪರ್ಕಕ್ಕೆ ಕಾರಣವಾಗುತ್ತದೆ. ಟೆಲಿಕಾಂ ವಸ್ತುಗಳ ಉತ್ಪಾದನೆ ಅಭಿವೃದ್ಧಿ, ಜಾಗತೀಕ ಮಟ್ಟದಲ್ಲಿ ಸ್ಪರ್ಧೆ ನೀಡಲು ಸಹಕಾರಿ. ಮುಂದಿನ ಪೀಳಿಗೆ ತಂತ್ರಜ್ಞಾನದಲ್ಲಿ ವೇಗವಾಗಿ ಪ್ರಗತಿ ಕಾಣಲು ಹೂಡಿಕೆ ದಾರರು ಕೈಜೋಡಿಸ ಬೇಕು. ಆರ್ಥಿಕತೆ ಸೃಷ್ಟಿಸುವಂತಹ ಕಾರ್ಯಪಡೆ ರಚಿಸಬೇಕೆಂಬ ಬೇಡಿಕೆಯನ್ನು ಸಂಸ್ಥೆಯ ಮುಂದಿರಿಸ ಬೇಕೆಂದು 2020 ರ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾರಂಭದ ಉದ್ಘಾಟನೆಯಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಒಗ್ಗೂಡಿದ ರಿಲಯನ್ಸ್‌ – ಗೂಗಲ್

ಭಾರತದಲ್ಲಿ 2021 ರ ದ್ವಿತಿಯಾರ್ದದಲ್ಲಿ ರಿಲಯನ್ಸ್ ಜಿಯೋ 5 ಜೀ ಸೇವೆ ಆರಂಭಿಸಲಾಗುವುದೆಂದು ಮುಖ್ಯಸ್ಥ ಮುಖೇಶ್ ಅಂಬಾನಿ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾರಂಭದಲ್ಲಿ ಮಾಹಿತಿಯನ್ನ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿ ಈ ಸೌಲಭ್ಯ ಒದಗಿಸಲಾಗುತ್ತಿದೆಯಂತೆ.

ರಿಲಯನ್ಸ್ ಜೊತೆ ಗೂಗಲ್ ಕೂಡ ಒಂದುಗೂಡಿ 5ಜಿ ಹೊಸ ಸೌಲಭ್ಯ ಜಾರಿ ತರುವಲ್ಲಿ ಭಾಗಿಯಾಗುತ್ತಿದ್ದು, ಇದರ ಮಧ್ಯೆಯೇ ಸಾಮಾನ್ಯ ಜನತೆಗೂ ಕೈಗೆಟುಕುವ ದರದಲ್ಲಿ ಹೊಸ ಅಂಡ್ರಾಯ್ಡ್ ಪೋನ್‌ಗಳನ್ನು ಮಾರುಕಟ್ಟೆಗೆ ತರುವ ಮಾರ್ಗಸೂಚಿಗಳು ತಯಾರಾಗುತ್ತಿದ್ದು, ಸದ್ಯದಲ್ಲಿಯೇ ಪರಿಚಯಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.

5ಜಿ ಸೇವೆಯ ಅನುಕೂಲಗಳು

ದೇಶದ ಅಭಿವೃದ್ಧಿತ ನೆಟ್ವರ್ಕ್, ಹಾರ್ಡ್ವೇರ್, ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುಬೇಗ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ 5ಜಿ ತಂತ್ರಜ್ಞಾನ ಮಾರುಕಟ್ಟೆಯ ಪ್ರಮಾಣ 2.7 ಟ್ರಿಲಿಯನ್ ತಲುಪಿದೆ. ಈ ಬಾರಿ ಆರ್ಥಿಕ ಪ್ರಮಾಣ 1 ಟ್ರಿಲಿಯನ್‌ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಇಂಟರ್ನೆಟ್‌ ವೇಗವು 4ಜಿಗಿಂತ ಹತ್ತು ಪಟ್ಟು ವೇಗವಾಗಿರುತ್ತದೆ. ಮೈಕ್ರೋ ವೇವ್ ಸಿಸ್ಟಮ್ 70 ರಿಂದ 80 GHz ಆವರ್ತನಗಳಲ್ಲಿ ಡೇಟಾವನ್ನು ರವಾನಿಸುತ್ತದೆ. ಹೆಚ್ಚಿನ ಸಿಗ್ನಲ್ ಗಾಳಿಯ ಮೂಲಕ ಸಾಗಿಸಿ ಅಧಿಕ ಪ್ರಮಾಣದ ಡೇಟಾವಾನ್ನ ರವಾನಿಸಲು ಅನುವು ಮಾಡಿಕೊಡುವ ವ್ಯವಸ್ಥೆಹೊಂದಿದೆ. ಕೈಗಾರಿಕೆಗಳ ಕಾರ್ಯವೈಖರಿಯಲ್ಲಿ ಹೆಚ್ಚು ಡಿಜಿಟಲಿಕರಣ ಹೊಂದಲು ಸಾಧ್ಯ.

ಹೊಸ ಸೇವೆ ಮತ್ತು ಅಪ್ಲಿಕೇಶನ್ ನೀಡುವುದರಿಂದ ಸಾರ್ವಜನಿಕರಿಗೆ ಅನುಕೂಲಕಾರಿಯಾಗಲಿದೆ. ಉದಾಹರಣೆಗೆ 5ಜಿ ತಂತ್ರಜ್ಞಾನವು ಸ್ವಯಂ ಚಾಲಿತ ಕಾರುಗಳು ಮತ್ತು ಗಣಿಗಳಲ್ಲಿ ಕೆಲಸ ಮಾಡುವ ರೋಬೋರ್ಟ್ಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಹೆಚ್ಚಿನ ಬ್ಯಾಂಡ್ ವಿಡ್ತ್ ಮತ್ತು ಉತ್ತಮ ಸಂವಹನ ಸಾಮರ್ಥ್ಯ ದೊರಕಿಸುವಲ್ಲಿ ಸಹಕಾರಿಯಾಗುತ್ತದೆ.

ಭಾರತದಲ್ಲಿ ರಿಲಯನ್ಸ್ ಜಿಯೋ 5ಜಿ ಸೇವೆ

ಹತ್ತು ವರ್ಷಗಳಲ್ಲಿ ಭಾರತವನ್ನು ಡಿಜಿಟಲ್ ಪ್ರಧಾನ ದೇಶವನ್ನಾಗಿ ಮಾಡುವ ಸಲುವಾಗಿ ಸಂಸ್ಥೆ ಸರ್ಕಾರದ ನಿಯಮಗಳಿಗೆ ಅನುಗುಣವಾಗಿ 5ಜಿ ಪರಿಚಯಿಸ ಹೊರಟಿದ್ದು, ಶಿಕ್ಷಣ, ಕೈಗಾರಿಕೆ, ಆರೋಗ್ಯ ಕ್ಷೇತ್ರ ಸೇರಿದಂತೆ ಇತರೆ ಹೊಸ ರೀತಿಯ ಬದಲಾವಣೆಗೆ ಸಹಕಾರಿಯಾಗುವುದೆಂದು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಯ ಮಾತಾಗಿದೆ.

ಇತ್ತ ಭಾರತದಲ್ಲಿ ಲಕ್ಷಾಂತರ ಸಣ್ಣ ಉದ್ಯಮಗಳನ್ನು ಬೆಂಬಲಿಸುವಲ್ಲಿ ಕಾರಣವಾಗುವುದು. ಹಾಗೆಯೇ ಸಾಮಾಜಿಕ ಜಾಲತಾಣ ಹೆಚ್ಚು ಸದ್ದು ಮಾಡುತ್ತಿರುವ ಕಾಲವಿದು, ಡಿಜಿಟಲ್ ಪ್ಲಾಟ್‌ಪಾರ್ಮ್‌ಗಳಲ್ಲಿ ಫೋಟೋ ವಿಡಿಯೋಗಳು ಅಧಿಕ ಮಟ್ಟದಲ್ಲಿ ಹಂಚಿಕೆಯಾಗುತ್ತಿದ್ದು, 5ಜಿ ನೆಟ್ವರ್ಕ್ ಸೇವೆ ಪರಿಚಯಿಸುವುದರಿಂದ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬುವುದು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ಸ್ ಜುಕರ್ ಬರ್ಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರಾದ ರವಿಶಂಕರ್ ಪ್ರದಾಸ್ 5ಜಿ ಆಗಮನದ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ, ಈ ಕಾರ್ಯಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದು, ಭವಿಷ್ಯದಲ್ಲಿ ಉತ್ತಮ ಅವಕಾಶಗಳು ತೆರೆದುಕೊಳ್ಳುವ ಭರವಸೆ ಇದೆ ಎಂದಿದ್ದಾರೆ.

ಇತರೆ ಟೆಲಿಕಾಂ ಸಂಸ್ಥೆಗಳಿಗೆ ತಲೆನೋವಾದ ರಿಲಯನ್ಸ್‌ ಜಿಯೋ ನಿರ್ಧಾರ

ಇದರ ಮಧ್ಯೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ಏರ್ಟೆಲ್‌, ವೊಡಾ, ಐಡಿಯಾ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿರುವ ರಿಲಯನ್ಸ್‌ನ ಮತ್ತೊಂದು ಹೆಜ್ಜೆ ನೋಡಿ ಇತರೆ ಸಂಸ್ಥೆಗಳಿಗೆ ತಲೆನೋವುಂಟಾಗಿದೆ. ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಈಗಾಗಲೇ ಅನೇಕ ಸೇವೆಗಳನ್ನು ನೀಡಿದ್ದು, ಈ ಹಿಂದೆ ರಿಲಯನ್ಸ್ ಜಿಯೋ ಪ್ರೀಪೇಯ್ಡ್ ಸೇವೆಗಳಿಗೆ ಮಾತ್ರಾ ಸೀಮಿತವಾಗಿತ್ತು. ಇದೀಗ ಕೆಲವು ತಿಂಗಳ ಹಿಂದೆ ಫೋಸ್ಟ್ ಪೇಯ್ಡ್ ಸೇವೆ ನೀಡುವುದಾಗಿ ಭರವಸೆ ನೀಡಿ ಇತರೆ ಸಂಸ್ಥೆಗಳ ವಿರುದ್ಧ ಸಮರಸಾರಿತ್ತು. ಇದೀಗ 2021ಕ್ಕೆ 5ಜಿ ಸೇವೆ ನೀಡುವುದಾಗಿ ಭರವಸೆ ನೀಡಿದ್ದು, ಉಳಿದ ಸಂಸ್ಥೆಗಳ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ನೂತನ ಯೋಚನೆಯತ್ತ ಜಿಯೋ ತೊಡಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com