ಪಶ್ಚಿಮ ಬಂಗಾಳ; ‘ಜೈ ಶ್ರೀರಾಮ್’ನಿಂದ ‘ಜೈಕಾಳಿಮಾ’ಗೆ ಬದಲಾದ ಬಿಜೆಪಿ ಘೋಷಣೆ

ಬಂಗಾಳಿಗಳಿಗೆ ದುರ್ಗಾ ಮತ್ತು ಕಾಳಿ ಮುಖ್ಯ ದೇವತೆಗಳಾಗಿದ್ದಾರೆ. ಕೃಷ್ಣ ಅಥವಾ ರಾಮನ ಆರಾಧನೆಯು ಅವರ ಧಾರ್ಮಿಕ ಸಂಪ್ರದಾಯಗಳಲ್ಲಿ ಇದ್ದರೂ ರಾಮ, ಕೃಷ್ಣರ ಆರಾಧನೆಯು ಅವರ ಹಬ್ಬಗಳಲ್ಲಿ ಇಲ್ಲ.
ಪಶ್ಚಿಮ ಬಂಗಾಳ; ‘ಜೈ ಶ್ರೀರಾಮ್’ನಿಂದ ‘ಜೈಕಾಳಿಮಾ’ಗೆ ಬದಲಾದ ಬಿಜೆಪಿ ಘೋಷಣೆ

ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಗೆಲ್ಲಲೇಬೇಕೆಂದು ಶತಾಯ ಗತಾಯ ಹೋರಾಡುತ್ತಿರುವ ಬಿಜೆಪಿಯು ಅಲ್ಲಿ ತನ್ನ ಚುನಾವಣಾ ತಂತ್ರಗಳನ್ನು ಬದಲಾಯಿಸಿಕೊಳ್ಳುತ್ತಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನಕ್ಕೆ ಕಲ್ಲು ಹೊಡೆದ ಘಟನೆಯ ಒಂದು ತಿಂಗಳ ನಂತರ ಪಶ್ಚಿಮ ಬಂಗಾಳಕ್ಕೆ ಶನಿವಾರ ಆಗಮಿಸಿದ ನಡ್ಡಾ ಅವರು ಒಂದು ದಿನದ ರೈತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೂ ಕೂಡ ಚುನಾವಣಾ ಪ್ರಚಾರದಲ್ಲೇ ವಿಲೀನವಾಯಿತು.

ಆದರೆ ಈ ಬಾರಿ ಮನೆಮನೆ ತೆರಳಿ ಪ್ರಚಾರ ಅಭಿಯಾನ, ರೋಡ್ ಶೋಗಳನ್ನು ಮಾಡುವುದು , ರೈತರನ್ನು ಭೇಟಿಯಾಗುವುದರ ಹೊರತಾಗಿಯೂ ನಡ್ಡಾ ಅವರು ಬಿಜೆಪಿಯ 'ಜೈ ಶ್ರೀ ರಾಮ್' ಘೋಷಣೆಯನ್ನು ಮಾರ್ಪಡಿಸಿಕೊಂಡು ಈಗ 'ಜೈ ಮಾ ದುರ್ಗಾ, ಜೈ ಮಾ ಕಾಳಿ' ಎಂಬ ಹೊಸ ಘೋಷಣೆಯನ್ನು ಬಂಗಾಳದ ಚುನಾವಣಾ ಪ್ರಚಾರಕ್ಕೆ ನೀಡಿದರು. ಈ ಹಿಂದೆ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಇತ್ತೀಚೆಗೆ ಬಂಗಾಳದಲ್ಲಿ ನಡೆದ ಸಾರ್ವಜನಿಕ ಸಭೆಗಳಲ್ಲಿ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಮೊಳಗಿಸುತಿದ್ದರೂ ಈಗಲೂ ‘ಜೈ ಶ್ರೀ ರಾಮ್’ಘೋಷಣೆ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಪ್ರಾಥಮಿಕ ಘೋಷಣೆಯಾಗಿ ಉಳಿದಿದೆ. ರಾಜಕೀಯ ವೀಕ್ಷಕರು ಹೇಳುವಂತೆ ಬಿಜೆಪಿಯ ಪ್ರಮುಖ ಘೋಷಣೆಗಳ ಈ ಬದಲಾವಣೆ ಆಸಕ್ತಿದಾಯಕವಾಗಿದೆ. ಏಕೆಂದರೆ ಅದು ಪಕ್ಷವು ತನ್ನ ಕೆಲವು ಮೂಲಭೂತ ನೀತಿಗಳನ್ನು ಬದಲಾಯಿಸುತ್ತಿದೆ ಎಂದು ತೋರಿಸುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿಬಂಗಾಳಿಗಳು ಸಾಂಪ್ರದಾಯಿಕ ದೇವತೆಗಳನ್ನು ಪೂಜಿಸುತ್ತಾರೆ ಮತ್ತು ದುರ್ಗಾ ಮತ್ತು ಕಾಳಿ ಅವರ ಮುಖ್ಯ ದೇವತೆಗಳಾಗಿದ್ದಾರೆ. ಕೃಷ್ಣ ಅಥವಾ ರಾಮನ ಆರಾಧನೆಯು ಅವರ ಧಾರ್ಮಿಕ ಸಂಪ್ರದಾಯಗಳಲ್ಲಿ ಇದ್ದರೂ ರಾಮ, ಕೃಷ್ಣರ ಆರಾಧನೆಯು ಅವರ ಹಬ್ಬಗಳಲ್ಲಿ ಇಲ್ಲ. ಈ ಕುರಿತು ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಬಂಗಾಳಿಗಳು ಮಾ ಕಾಳಿ ಮತ್ತು ಮಾ ದುರ್ಗಾ ಅವರ ಆರಾಧನೆಯನ್ನು ಭಾವನಾತ್ಮಕವಾಗಿ ಮಾಡುತಿದ್ದಾರೆ. ಈ ದೇವತೆಗಳನ್ನು ನಾವು ಕುಟುಂಬದ ಸದಸ್ಯರಂತೆ ನೋಡುತ್ತೇವೆ. ಇದಲ್ಲದೆ, ಮಾ ಕಾಳಿ ಶಕ್ತಿ ಮತ್ತು ಸಂಕಲ್ಪದ ದೇವತೆ. ಆ ರೀತಿಯಲ್ಲಿ ಬಂಗಾಳಿಗಳ ಮನೆಗಳನ್ನು ತಲುಪುವುದು ಸುಲಭ. ನಾವು ಬೇರು ಮಟ್ಟದ ಜನರ ಭಾವನೆಗಳನ್ನು ಪರಿಶೀಲಿಸಿ ನಮ್ಮ ನೀತಿಗಳನ್ನು ವಿಕಸಿಸುತ್ತಿದ್ದೇವೆ ಮತ್ತು ಬದಲಾಯಿಸುತ್ತಿದ್ದೇವೆ ಎಂದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ಎದುರಿಸಲು ಇದು ರಾಷ್ಟ್ರೀಯ ಪಕ್ಷದ ಮಾರ್ಗವಾಗಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ, ತೃಣಮೂಲ ಕಾಂಗ್ರೆಸ್ ಪಕ್ಷವು ಬಿಜೆಪಿ ನಾಯಕರನ್ನು ‘ಹೊರಗಿನವರು’ ಎಂದು ಕರೆದಿದ್ದು ಚುನಾವಣಾ ಪ್ರಚಾರದಲ್ಲೂ ಇದನ್ನೆ ಮುಂದಿಟ್ಟುಕೊಂಡು ಟೀಕಿಸುತ್ತಿದೆ ಮತ್ತು ಇದನ್ನು ‘ಹಸು ಬೆಲ್ಟ್ ಪಕ್ಷ ಎಂದು ಟೀಕಿಸುತ್ತಿದೆ. ಬಂಗಾಳದ ರಾಜಕೀಯ ಇತಿಹಾಸದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಧಾರ್ಮಿಕ ಘೋಷಣೆ ಅಥವಾ ದೇವತೆಗಳ ಹೆಸರನ್ನು ಘೋಷವನ್ನಾಗಿ ಮಾಡಿಕೊಂಡಿದ್ದೇ ಇಲ್ಲ. ಬಿಜೆಪಿಯು ತನ್ನ ಬದಲಾಯಿಸಿಕೊಂಡಿರುವ ನೀತಿಯಲ್ಲಿ ಬಿಜೆಪಿಯ ಸ್ವಂತ ಬದಲಾವಣೆಯೂ ಆಸಕ್ತಿದಾಯಕವಾಗಿದೆ ಎಂದು ರಾಜಕೀಯ ವಿಶ್ಲೇಷಕ ಬಿಸ್ವಾನಾಥ್ ಚಕ್ರವರ್ತಿ ಹೇಳಿದ್ದಾರೆ.

ಉತ್ತರ ಭಾರತದ ರಾಜ್ಯಗಳ ಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿರುವ ಮತ್ತು ರಾಮನನ್ನು ಆರಾಧಿಸುವ ಪಕ್ಷವು ಬಂಗಾಳದಲ್ಲಿ ಹೆಚ್ಚಿನ ಮತ ಸೆಳೆಯಲು ತನ್ನ ಮೂಲ ನೀತಿಗಳನ್ನು ಬದಲಾಯಿಸುತ್ತಿದೆ. ಅಂತಹ ಅಭಿಯಾನಗಳಿಗೆ ಜನರು ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಬಿಜೆಪಿ ನಾಯಕರು ದೇವತೆಗಳ ಹೆಸರನ್ನು ಜಪಿಸುವುದನ್ನು ನಾವು ನೋಡಿಲ್ಲ. ಜೈ ಮಾ ಕಾಳಿ ’ಯನ್ನು ರಾಜ್ಯದ ಎಲ್ಲಾ ಧರ್ಮಗಳ ಜನರೂ ಸ್ವೀಕರಿಸಿದ್ದಾರೆ. ಮುಸ್ಲಿಮರಲ್ಲಿ ಇತ್ತೀಚೆಗೆ ಮತಾಂತರಗೊಂಡ ಒಂದು ವರ್ಗವು ರಾಜ್ಯದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಾ ಕಾಳಿಯನ್ನು ಪೂಜಿಸುತ್ತದೆ . ಆದರೆ, ‘ಜೈ ಶ್ರೀ ರಾಮ್’ ಆ ರೀತಿಯ ಪ್ರಭಾವವನ್ನು ಉಂಟು ಮಾಡಲು ಸಾಧ್ಯವಿಲ್ಲ.

ಇದು ಬಿಜೆಪಿಯ ಕಾರ್ಯತಂತ್ರದ ವಿಷಯವಾಗಿದೆ ಎಂದೂ ಅವರು ಹೇಳಿದರು. ಬಂಗಾಳದಲ್ಲಿ ಮಾತನಾಡಿದ ರೈತರ ತಲುಪುವಿಕೆ ಕಾರ್ಯಕ್ರಮದಲ್ಲಿ ನಡ್ಡಾ ಅವರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಸಮರ್ಥಿಸಿಕೊಂಡರು, ಕೇಂದ್ರ ಸರ್ಕಾರವು ರೈತರಿಗೆ ಸ್ವಾತಂತ್ರ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವಾಗಲೂ ರೈತರ ಹಿತಾಸಕ್ತಿಯನ್ನು ಕಾಪಾಡುತ್ತದೆ ಮತ್ತು ಈ ವರ್ಷದ ಮೇ ತಿಂಗಳಿನಿಂದ ರಾಜ್ಯದ ರೈತರಿಗೆ ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳ ಅನುಕೂಲಗಳನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದರು. ಅವರು ರಾಜ್ಯದ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ ಅನ್ನು "ಅಕ್ಕಿ ಕಳ್ಳರು" ಎಂದು ಟೀಕಿಸಿದರಲ್ಲದೆ ಅವರು ಸುಲಿಗೆಯ ಮೂಲಕ ಬದುಕುತಿದ್ದಾರೆ ಎಂದು ಆರೋಪಿಸಿದರು. ರೈತರ ಕಾರ್ಯಕ್ರಮವು ಮುಂದಿನ ಜನವರಿ 24 ರ ವರೆಗೂ ನಡೆಯಲಿದೆ.ಅಲ್ಲಿಯವರೆಗೂ ಬಿಜೆಪಿ ಕಾರ್ಯಕರ್ತರು 40,000 ಗ್ರಾಮಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಇದರ ನಂತರ ಪಕ್ಷದ ಕಾರ್ಯಕರ್ತರು ಜನವರಿ 31 ರವರೆಗೆ ‘ಕೃಷಕ್ ಭೋಜ್’ (ರೈತರೊಂದಿಗೆ ಊಟ ) ಕಾರ್ಯಕ್ರಮ ನಡೆಸಲಿದ್ದಾರೆ. ಈ ಸಮಯದಲ್ಲಿ, ಪಶ್ಚಿಮ ಬಂಗಾಳದ ರೈತರಿಗೆ ಏನು ಅನ್ಯಾಯವಾಗುತ್ತಿದೆ ಎಂದು ಪಕ್ಷವು ವಿವರಿಸುತ್ತದೆ ಎಂದು ರ್ಯಾಲಿಯಲ್ಲಿ ನಡ್ಡಾ ಹೇಳಿದರು. ನಡ್ಡಾ ಸ್ವತಃ ಇತರ ನಾಯಕರೊಂದಿಗೆ ಕಟ್ವಾದ ಮಥುರಾ ಮೊಂಡಾಲ್ ಎಂಬ ರೈತನ ಮನೆಯಲ್ಲಿ ಊಟ ಮಾಡಿದರು. ರಾಜ್ಯದ ಅಕ್ಕಿ ಬಟ್ಟಲು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಕೃಷಿ ಬರ್ಧಾಮನ್ ಪುರ್ಬಾ ಪ್ರಾಂತ್ಯದ ಭೇಟಿಯನ್ನು ರಾಜ್ಯದ ರೈತರನ್ನು ಹೆಚ್ಚು ನೇರವಾಗಿ ತಲುಪುವ ಪ್ರಯತ್ನವಾಗಿದೆ. ಇಂದು, ಮುಖ್ಯ ಮಂತ್ರಿ ಮಮತಾ ಜಿ ಅವರು ಪ್ರಧಾನಿಯವರ ಕಿಸಾನ್ ಯೋಜನೆಯನ್ನು ಜಾರಿಗೆ ತರಲು ತಮ್ಮ ಸರ್ಕಾರ ಸಿದ್ಧವಿದೆ ಎಂದು
ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ ನೀವು ರೈತರ ಬೆಂಬಲವನ್ನು ಕಳೆದುಕೊಳ್ಳುತ್ತಿರುವಿರಿ ಎಂದು ಅರಿವಾದಾಗ, ನೀವು ಯೋಜನೆಯನ್ನು ಈ ಕಾರ್ಯಗತಗೊಳಿಸಲು ಬಯಸುತ್ತೀರಿ. ನಿಮ್ಮ ಒಪ್ಪಿಗೆ ನಮಗೆ ಈಗ ಅಗತ್ಯವಿಲ್ಲ. ಬಿಜೆಪಿಯ ಮುಂದಿನ ಚುನಾಯಿತ ಸರ್ಕಾರವು ಈ ಯೋಜನೆಯನ್ನು ಮೇ 2021 ರಲ್ಲಿ ಬಂಗಾಳದಲ್ಲಿ ಜಾರಿಗೆ ತರಲಿದೆ ಎಂದು ಅವರು ಹೇಳಿದರು. ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂ. ನೀಡುವ ಯೋಜನೆಯನ್ನು ಜಾರಿಗೆ ತರಲು ಕಳೆದ ಎರಡು ವರ್ಷಗಳಲ್ಲಿ ಕೇಂದ್ರದ ಹಲವಾರು ಮನವಿಗಳನ್ನು ಮಮತಾ ಬ್ಯಾನರ್ಜಿ ಸರ್ಕಾರ ನಿರ್ಲಕ್ಷಿಸಿದೆ ಎಂದು ಬಿಜೆಪಿ ಮುಖ್ಯಸ್ಥ ನಡ್ಡಾ ಹೇಳಿದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com