ಹುತಾತ್ಮ ರೈತರ ಪರವಾಗಿ ಅಭಿಯಾನ ಆರಂಭಿಸಿದ ಯುವ ಕಾಂಗ್ರೆಸ್‌

ಅಭಿಯಾನದಿಂದ ಸಂಗ್ರಹಿಸಿದ ಮಣ್ಣಿನಿಂದ ಭಾರತದ ಭೂಪಟವನ್ನು ಸೃಷ್ಟಿಸಿ ರೈತರ ಪ್ರತಿಭಟನೆಗೆ ಗೌರವ ಸೂಚಿಸಲಾಗುವುದು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್‌‌ ಹೇಳಿದ್ದಾರೆ.
ಹುತಾತ್ಮ ರೈತರ ಪರವಾಗಿ ಅಭಿಯಾನ ಆರಂಭಿಸಿದ ಯುವ ಕಾಂಗ್ರೆಸ್‌

ಭಾರತೀಯ ಯುವ ಕಾಂಗ್ರೆಸ್‌ ವತಿಯಿಂದ ʼಏಕ್‌ ಮುಟ್ಟಿ ಮಿಟ್ಟಿ ಶಹೀದೋಂ ಕೆ ನಾಮ್‌ʼ (ಒಂದು ಮುಷ್ಟಿ ಮಣ್ಣು ಹುತಾತ್ಮರ ಹೆಸರಿನಲ್ಲಿ) ಎಂಬ ಅಭಿಯಾನವನ್ನು ಆರಂಭಿಸಲಾಗಿದೆ. ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಹುತಾತ್ಮರಾದ 60ಕ್ಕೂ ಹೆಚ್ಚು ರೈತರ ನೆನಪಿನಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ.

ಈ ಅಭಿಯಾನದಡಿಯಲ್ಲಿ ದೇಶದ ಪ್ರತೀ ಗ್ರಾಮಗಳಿಂದ ಒಂದು ಮುಷ್ಟಿ ಮಣ್ಣನ್ನು ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಂಗ್ರಹಿಸಲಿದ್ದಾರೆ. ವಿಶೇಷವಾಗಿ ಪ್ರತಿಭಟನಾ ಸಂದರ್ಭದಲ್ಲಿ ಮೃತಪಟ್ಟ ರೈತರ ಜಮೀನಿನ ಮಣ್ಣನ್ನು ಕೂಡಾ ಸಂಗ್ರಹಿಸಲಾಗುವುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತಾಗಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಭಾರತೀಯ ಯುವ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರಾದ ಶ್ರೀನಿವಾಸ್‌ ಬಿ ವಿ ಅವರು, 60ಕ್ಕೂ ಹೆಚ್ಚು ರೈತರು ಪ್ರತಿಭಟನಾ ಸಮಯದಲ್ಲಿ ಹುತಾತ್ಮರಾಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಒಮ್ಮೆಯೂ ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟಿಲ್ಲ. ಕೊರೆಯುವ ಚಳಿಯಲ್ಲಿಯೂ ರೈತರು ಶಾಂತವಾಗಿ ಪ್ರತಿಭಟನೆ ನಡೆಸುತ್ತಿದ್ದರೆ, ಪೊಲೀಸರು ಅವರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ, ಎಂದು ಹೇಳಿದ್ದಾರೆ.

“ತನ್ನನ್ನು ತಾನು ರೈತನ ಮಗ ಎಂದು ಹೇಳಿಕೊಳ್ಳುವ ಪ್ರಧಾನಿ ಮೋದಿಯವರು, ಅಮೇರಿಕಾದ ಪ್ರಜಾಪ್ರಭುತ್ವದ ಬಗ್ಗೆ ಚಿಣತೆ ಮಾಡುತ್ತಿದ್ದಾರೆ. ಆದರೆ, ಅವರ ನಿವಾಸದಿಂದ 10 ಕಿ.ಮೀ. ಸುತ್ತಳತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರನ್ನು ಭೇಟಿಯಾಗಲು ಅವರ ಬಳಿ ಸಮಯವಿಲ್ಲ. ಈ ಸರ್ಕಾರವು ಮೂಕ, ಕಿವುಡ ಹಾಗೂ ಸರ್ವಾಧಿಕಾರಿ ಸರ್ಕಾರವಾಗಿದೆ,” ಎಂದು ಕಿಡಿಕಾರಿದ್ದಾರೆ.

ಅಭಿಯಾನದಿಂದ ಸಂಗ್ರಹಿಸಿದ ಮಣ್ಣಿನಿಂದ ಭಾರತದ ಭೂಪಟವನ್ನು ಸೃಷ್ಟಿಸಿ ರೈತರ ಪ್ರತಿಭಟನೆಯನ್ನು ಸ್ಮರಿಸಲಾಗುವುದು ಎಂದಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com