ಅಮೆರಿಕ ಸಂಸತ್ತು ದಾಳಿ; ತರುಣ್‌ vs ತರೂರ್‌ ಟ್ವೀಟ್‌ ಸಮರಕ್ಕೆ ಕಾರಣವಾದ ತ್ರಿವರ್ಣ ಪತಾಕೆ

ಬಾವುಟ ಹಾರಿಸಿದ ವ್ಯಕ್ತಿ 2015 ರಲ್ಲಿ ಶಶಿ ತರೂರನ್ನು ಭೇಟಿಯಾಗಿದ್ದರು ಹಾಗೂ ಅವರ ಅಭಿಮಾನಿಯೆನ್ನುವ ವಿಚಾರ ಭಾರೀ ವೈರಲ್‌ ಆಗಿದೆ
ಅಮೆರಿಕ ಸಂಸತ್ತು ದಾಳಿ; ತರುಣ್‌ vs ತರೂರ್‌ ಟ್ವೀಟ್‌ ಸಮರಕ್ಕೆ ಕಾರಣವಾದ ತ್ರಿವರ್ಣ ಪತಾಕೆ

ಟ್ರಂಪ್‌ ಬೆಂಬಲಿಗರಿಂದ ಅಮೆರಿಕ ಸಂಸತ್ತು ಮೇಲೆ ದಾಳಿ ನಡೆಯುವ ಮೊದಲು ನಡೆದ ಪ್ರತಿಭಟನೆಯಲ್ಲಿ ಹಾರಾಡಿದ ಭಾರತದ ದೇಶೀಯ ಧ್ವಜ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹಾಗೂ ಬಿಜೆಪಿ ಸಂಸದ ತರುಣ್‌ ಗಾಂಧಿ ನಡುವಿನ ಟ್ವೀಟ್‌-ಪ್ರತಿ ಟ್ವೀಟ್‌ಗಳಿಗೆ ಕಾರಣವಾಗಿದೆ. ಉಭಯ ನಾಯಕರೂ ಪರಸ್ಪರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ವರುಣ್‌ ಗಾಂಧಿಯವರ ಟ್ವೀಟ್‌ನೊಂದಿಗೆ ಇದು ಆರಂಭವಾಯಿತು. ಅಮೆರಿಕಾದಲ್ಲಿ ನಡೆದ ತೀವ್ರತರವಾದ ಪ್ರತಿಭಟನೆಯ ವೇಳೆಯಲ್ಲಿ ತ್ರಿವರ್ಣ ಧ್ವಜ ಏಕೆ ಅಲ್ಲಿ ಹಾರಿಸಲಾಯಿತು ಎಂದು ಅವರು ಕೇಳಿದ್ದರು. ಇದು ಬಹುತೇಕರ ಪ್ರಶ್ನೆಯೂ ಆಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತರುಣ್‌ ಗಾಂಧಿಯವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಶಶಿ ತರೂರ್‌, ಟ್ರಂಪ್‌ ಪರ (ದಾಂಧಲೆ ಎಬ್ಬಿಸಿದ) ಗುಂಪುಗಳಂತೆಯೇ ಕೆಲವು ಭಾರತೀಯರ ಮನಸ್ಥಿತಿಯೂ ಇದೆ ಎಂದು ಹೇಳಿದ್ದಾರೆ. (ಇದು ಸೂಚ್ಯವಾಗಿ ಮೋದಿ ಭಕ್ತರ ಕುರಿತು ಅವರು ಹೇಳಿದ್ದಾರೆ ಎನ್ನಲಾಗುತ್ತಿದೆ).

ಇದಕ್ಕೆ ಪ್ರತ್ಯುತ್ತರ ನೀಡಿದ ವರುಣ್‌ ಗಾಂಧಿ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ನಮ್ಮ ಗರ್ವವನ್ನು ತೋರಿಸಿಕೊಳ್ಳಲು ಭಾರತದ ಧ್ವಜವನ್ನು ಹಿಡಿಯುವುದು ತುಂಬಾ ಸುಲಭವಾಗಿದೆ. ಅದೇ ಸಮಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೂ ಭಾರತದ ಧ್ವಜವನ್ನು ಬಳಸಿಕೊಳ್ಳಲಾಗುತ್ತಿದೆ. ದುರದೃಷ್ಟವಶಾತ್‌, ಹೆಚ್ಚಿನ ʼliberals' ಪದೇ ಪದೇ ಭಾರತದ ಧ್ವಜವನ್ನು ತಪ್ಪಾಗಿ ಬಳಕೆ ಮಾಡುತ್ತಿದ್ದಾರೆ. ದೇಶ ವಿರೋಧಿ ಪ್ರತಿಭಟನೆಯಲ್ಲಿ ಭಾರತದ ಧ್ವಜವನ್ನು ಬಳಸಲಾಗುತ್ತಿದೆ (ಉದಾಹರಣಗೆ ಜೆಎನ್‌ಯು). ಭಾರತದ ಧ್ವಜ ನಮ್ಮ ಹಮ್ಮೆ. ಯಾವುದೇ ʼಮನಸ್ಥಿತಿʼಯ ವ್ಯಕ್ತಿಗಳಿಗೂ ಸಂಬಂಧಿಸದಂತೆ ನಾವು ಅದನ್ನು ಪೂಜಿಸುತ್ತೇವೆ.ʼ ಎಂದು ಹೇಳಿದ್ದಾರೆ.

ಇದಾದ ಬೆನ್ನಿಗೆ, ಬಾವುಟ ಹಾರಿಸಿದ ವ್ಯಕ್ತಿಯೇ ಇವರಿಬ್ಬರನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದಾರೆ. ʼಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ನಂಬುವ ಅಮೆರಿಕದ ದೇಶಭಕ್ತರು, ವಿಯೆಟ್ನಾಮ್‌, ಇಂಡಿಯನ್‌, ಕೊರಿಯನ್‌, ಇರಾನಿಯನ್‌ ಮೂಲದವರು ಹಾಗೂ ಅನೇಕ ವಿವಿಧ ದೇಶಗಳ, ಜನಾಂಗಗಳ ಜನತೆ ನಿನ್ನೆ ಟ್ರಂಪ್‌ಗಾಗಿ ಒಂದಾಗಿ ನಿಂತಿದ್ದೆವು. ಶಾಂತಿಯುತ ಪ್ರತಿಭಟನೆಕಾರರಾಗಿ ನಮ್ಮ ಹಕ್ಕು ಚಲಾಯಿಸಿದೆವುʼ ಎಂದಿದ್ದಾರೆ.

ಬಳಿಕ ವಿದ್ಯಮಾನ ಅನಿರೀಕ್ಷಿತ ತಿರುವು ಪಡೆದಿದ್ದು, ಬಾವುಟ ಹಾರಿಸಿದ ವ್ಯಕ್ತಿ 2015 ರಲ್ಲಿ ಶಶಿ ತರೂರನ್ನು ಭೇಟಿಯಾಗಿದ್ದರು ಹಾಗೂ ಅವರ ಅಭಿಮಾನಿಯೆನ್ನುವ ವಿಚಾರ ಭಾರೀ ವೈರಲ್‌ ಆಗಿದೆ. ಈ ವ್ಯಕ್ತಿ 2015 ರಲ್ಲಿ ಶಶಿ ತರೂರಿನೊಂದಿಗೆ ಭೇಟಿ ಮಾಡಿದ ಚಿತ್ರವನ್ನು ಹಂಚಿಕೊಂಡ ವರುಣ್‌ ಗಾಂಧಿ ಶಶಿ ತರೂರ್‌ ಅವರನ್ನು ಪ್ರಶ್ನಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com