ರೈತರ ಪ್ರತಿಭಟನೆಗೆ ಸಾಥ್‌ ನೀಡಲು ಅಮೇರಿಕಾದಿಂದ ಬಂದಿಳಿದ ವಿದ್ಯಾರ್ಥಿ

ನನಗೂ ಕೃಷಿಗೂ ಸಂಬಂಧವೇ ಇಲ್ಲ ಎಂದು ಜನರು ಅಂದುಕೊಳ್ಳಬಹುದು. ಆದರೆ, ನನ್ನ ಕುಟುಂಬದ ಮುಖ್ಯ ವರಮಾನ ಕೃಷಿ. ಕೃಷಿ ಇಲ್ಲದಿದ್ದರೆ ನಾನು ಅಮೇರಿಕಾ ತಲುಪುವುದೇ ಸಾಧ್ಯವಾಗುತ್ತಿರಲಿಲ್ಲ. ಎಂದು ರೈತರ ಪ್ರತಿಭಟನೆಯೊಂದಿಗೆ ಕೈಜೋಡಿಸಿದ ವಿದ್ಯಾರ್ಥಿ ಹೇಳಿದ್ದಾರೆ.
ರೈತರ ಪ್ರತಿಭಟನೆಗೆ ಸಾಥ್‌ ನೀಡಲು ಅಮೇರಿಕಾದಿಂದ ಬಂದಿಳಿದ ವಿದ್ಯಾರ್ಥಿ

ಕೃಷಿ ಕಾಯ್ದೆಗಳ ವಿರುದ್ದ ರೈತರ ಪ್ರತಿಭಟನೆ ನಿರಂತರವಾಗಿ ನಡೆಯುತ್ತಲೇ ಇದೆ. ಇದರ ಮಧ್ಯೆ ಗುರುವಾರ ಬೃಹತ್‌ ಟ್ರಾಕ್ಟರ್‌ ಮೆರವಣಿಗೆ ನಡೆಸಿ ಜನವರಿ 26ರ ಪೂರ್ವಭಾವಿ ತಯಾರಿಯನ್ನೂ ನಡೆಸಿದ್ದಾರೆ. ಈ ಪ್ರತಿಭಟನೆಗೆ ದೇಶದಾದ್ಯಂತ ಉತ್ತಮ ಬೆಂಬಲ ದೊರೆತಿದೆ. ಈಗ ಈ ಪ್ರತಿಭಟನೆಗೆ ಬೆಂಬಲ ನೀಡಲುಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರು ವಾಪಾಸ್‌ ಪಂಜಾಬ್‌ಗೆ ಮರಳಿದ್ದಾರೆ.

22 ವರ್ಷದ ವಿದ್ಯಾರ್ಥಿ ನವಪಾಲ್‌ ಸಿಂಗ್‌ ಎಂಬುವವರು, ಅಮೇರಿಕಾದ ಟೆಕ್ಸಾಸ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡುತ್ತಿದ್ದರು. ಅವರ ಕುಟುಂಬವು ಪಂಜಾಬ್‌ನಲ್ಲಿದ್ದು, ಅವರ ತಂದೆ ಮತ್ತು ಅಜ್ಜ ಇಬ್ಬರೂ ರೈತರು. ಈಗ ನಡೆಯುತ್ತಿರುವ ಪ್ರತಿಭಟನೆ ನಾನು ಭಾರತಕ್ಕೆ ಮರಳುವಂತೆ ಮಾಡಿತು ಎಂದು ನವಪಾಲ್‌ ಹೇಳಿದ್ದಾರೆ. ಈಗ ಪ್ರತಿದಿನ ಸಿಂಘು ಗಡಿಗೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


“ಕಳೆದ ವರ್ಷ ಮಾರ್ಚ್‌ನಲ್ಲಿ ಭಾರತಕ್ಕೆ ಬಂದಿದ್ದೆ. ಈ ವರ್ಷ ಬರುವ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ, ಈಗ ನಡೆಯುತ್ತಿರುವ ಪ್ರತಿಭಟನೆಗೆ ಭಾರತ ಮತ್ತು ಇತರ ದೇಶಗಳಲ್ಲಿ ಸಿಗುತ್ತಿರುವ ಬೆಂಬಲವನ್ನು ನೋಡಿ ನನಗೆ ಅಲ್ಲಿರಲು ಆಗಲಿಲ್ಲ,” ಎಂದಿದ್ದಾರೆ.

ನನಗೂ ಕೃಷಿಗೂ ಸಂಬಂಧವೇ ಇಲ್ಲ ಎಂದು ಜನರು ಅಂದುಕೊಳ್ಳಬಹುದು. ಆದರೆ, ನನ್ನ ಕುಟುಂಬದ ಮುಖ್ಯ ವರಮಾನ ಕೃಷಿ. ಕೃಷಿ ಇಲ್ಲದಿದ್ದರೆ ನಾನು ಅಮೇರಿಕಾ ತಲುಪುವುದೇ ಸಾಧ್ಯವಾಗಿರಲಿಕ್ಕಿಲ್ಲ. ಕೃಷಿ ನನ್ನ ಜೀವನದಲ್ಲಿ ಸಾಕಷ್ಟು ಸಹಾಯ ಮಾಡಿದೆ. ಈಗ ಕೃಷಿ ಮತ್ತು ಕೃಷಿಕರ ಬೆಂಬಲಕ್ಕೆ ನಿಲ್ಲುವುದು ನನ್ನ ಜವಾಬ್ದಾರಿ, ಎಂದು ನವದೀಪ್‌ ಹೇಳಿದ್ದಾರೆ.

ಪದೇ ಪದೇ ವಿಫಲಗೊಳ್ಳುತ್ತಿರುವ ಮಾತುಕತೆಯ ಕುರಿತು ಮಾತನಾಡಿರುವ ಸಿಂಗ್‌, “ಈ ರೀತಿ ಪದೇ ಪದೇ ಮಾತುಕತೆಯ ದಿನಾಂಕವನ್ನು ಮುಂದೂಡುತ್ತಲೇ ಬರುವುದರಿಂದ ನಮ್ಮ ಉತ್ಸಾಹ ಕಡಿಮೆಯಾಗುತ್ತದೆ ಎಂದು ಸರ್ಕಾರ ತಪ್ಪು ತಿಳಿಸುಕೊಂಡಿದೆ. ಈ ರೀತಿಯ ಚಳವಳಿಗಳು ಮತ್ತೆ ಮತ್ತೆ ನಡೆಯುವುದಿಲ್ಲ. ಗುರುವಾರ ನಡೆದ ಟ್ರಾಕ್ಟರ್‌ ರ್ಯಾಲಿ ನಮ್ಮ ಬಲವನ್ನು ದೇಶದ ಎದುರು ಸಾಬೀತು ಪಡಿಸಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com