ಜೋ ಬಿಡೆನ್‌ಗೆ ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿದ ಟ್ರಂಪ್

ಚುನಾವಣಾ ಫಲಿತಾಂಶಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ ಜನವರಿ 20 ರಂದು ಕ್ರಮಬದ್ಧವಾಗಿ ಅಧಿಕಾರವನ್ನು ಹಸ್ತಾಂತರಿಸುವುದಾಗಿ ಟ್ರಂಪ್ ಹೇಳಿದ್ದಾರೆ.
ಜೋ ಬಿಡೆನ್‌ಗೆ ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿದ ಟ್ರಂಪ್

ಅಮೆರಿಕಾದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಗೆ ಜನವರಿ 20 ರಂದು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ನಿರ್ಗಮಿತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

ನವೆಂಬರ್ ಮೂರರಂದು ನಡೆದ ಚುನಾವಣೆಯಲ್ಲಿ ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಜೋ ಬೈಡೆನ್ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ ಎಂದು ಅಮೆರಿಕಾ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಔಪಚಾರಿಕವಾಗಿ ಘೋಷಿಸಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಚುನಾವಣಾ ಫಲಿತಾಂಶಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ ಜನವರಿ 20 ರಂದು ಕ್ರಮಬದ್ಧವಾಗಿ ಅಧಿಕಾರವನ್ನು ಹಸ್ತಾಂತರಿಸುವುದಾಗಿ ಟ್ರಂಪ್ ಹೇಳಿದ್ದಾರೆ.

ಕಾನೂನಾತ್ಮಕ ಮತಗಳನ್ನು ಮಾತ್ರ ಎಣಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಇದು ಅಧ್ಯಕ್ಷೀಯ ಇತಿಹಾಸದ ಶ್ರೇಷ್ಠ ಮೊದಲ ಅವಧಿಯ ಅಂತ್ಯವನ್ನು ಪ್ರತಿನಿಧಿಸುತ್ತದೆಯಾದರೂ, ಇದು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸುವ ನಮ್ಮ ಹೋರಾಟದ ಪ್ರಾರಂಭ ಮಾತ್ರ!" ಎಂದು ಟ್ರಂಪ್‌ ಹೇಳಿದ್ದಾರೆ.

ಫಲಿತಾಂಶವನ್ನು ಡೊನಾಲ್ಡ್‌ ಟ್ರಂಪ್‌ ಒಪ್ಪದ ಕಾರಣ ಹಾಗೂ ಸತತವಾಗಿ ಚುನಾವಣೆಯಲ್ಲಿ ಮೋಸವಾಗಿದೆಯೆಂದು ಬಿಂಬಿಸಿದ ಕಾರಣ ಟ್ರಂಪ್‌ ಬೆಂಬಲಿಗರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ನಡೆದ ಬೆನ್ನಿಗೆ ಅಮೆರಿಕಾ ಲಾ ಮೇಕರ್ಸ್‌ ಟ್ರಂಪ್‌ ತಕ್ಷಣ ಹುದ್ದೆಯಿಂದ ಕೆಳಗಿಳಿಯಬೇಕೆಂದ ಆಗ್ರಹಿಸಿದ್ದಾರೆ.

ಜನವರಿ 20ರಂದು 78 ವರ್ಷದ ಜೋ ಬೈಡೆನ್ ಹಾಗೂ 56 ವರ್ಷದ ಕಮಲಾ ಹ್ಯಾರಿಸ್ ಕ್ರಮವಾಗಿ ಅಮೆರಿಕದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸರಳವಾಗಿ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ.

ಜೋ ಬಿಡೆನ್‌ಗೆ ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿದ ಟ್ರಂಪ್
ಟ್ರಂಪ್ ಬೆಂಬಲಿಗರಿಂದ ಅಮೆರಿಕ ಸಂಸತ್ತಿನ ಮೇಲೆ ದಾಳಿ; ಟ್ರಂಪ್ ಪದಚ್ಯುತಿಗೆ ಕೇಳಿಬಂದ ಆಗ್ರಹ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com