ಪಶ್ಚಿಮ ಬಂಗಾಳ: ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಲಕ್ಷ್ಮಿ ರತನ್‌ ಶುಕ್ಲಾ

ಈಗಾಗಲೆ ಸುವೆಂದು ಅಧಿಕಾರಿ ಸೇರಿದಂತೆ 13 ಶಾಸಕ ಸಚಿವರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲೆ ಬ್ಯಾನರ್ಜಿ ಸರ್ಕಾಕ್ಕೆ ಸಚಿವ ಲಕ್ಷ್ಮೀ ರತನ್‌ ಶುಕ್ಲಾ ರಾಜೀನಾಮೆ ಶಾಕ್‌ ತಂದಂತಿದೆ.
ಪಶ್ಚಿಮ ಬಂಗಾಳ: ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಲಕ್ಷ್ಮಿ ರತನ್‌ ಶುಕ್ಲಾ

ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆಯುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಗೂ ಮುಂಚೆಯೇ ಮುಖ್ಯಮಂತ್ರಿ ಬ್ಯಾನರ್ಜಿ ಸರ್ಕಾರಕ್ಕೆ ಟಿಎಂಸಿ ಶಾಸಕ ಸಚಿವರ ರಾಜೀನಾಮೆಯಿಂದ ಆಘಾತ ಎದುರಾಗಿದೆ. ಇದೀಗ ಮತ್ತೆ ಟಿಎಂಸಿ ನಾಯಕ ಹಾಗೂ ಸಚಿವ ಲಕ್ಷ್ಮಿ ರತನ್‌ ಶುಕ್ಲಾ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಲಕ್ಷ್ಮಿ ರತನ್‌ ಶುಕ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೆ ಸುವೆಂದು ಅಧಿಕಾರಿ ಸೇರಿದಂತೆ 13 ಶಾಸಕ ಸಚಿವರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲೆ ಬ್ಯಾನರ್ಜಿ ಸರ್ಕಾಕ್ಕೆ ಸಚಿವ ಲಕ್ಷ್ಮೀ ರತನ್‌ ಶುಕ್ಲಾ ರಾಜೀನಾಮೆ ಶಾಕ್‌ ತಂದಂತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ರಾಜೀನಾಮೆ ಪತ್ರವನ್ನು ಸಿಎಂ ಮತ್ತು ರಾಜ್ಯಪಾಲ ಜಗ್‌ದೀಪ್‌ ಧನ್ಕರ್‌ ಅವರಿಗೆ ರವಾನಿಸಿದ್ದಾರೆ. ಈ ವೇಳೇ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ ಶುಕ್ಲಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆಯೆ ವಿನಃ ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

2016 ರ ವಿಧಾನಸಭಾ ಚುನಾವಣೆ ವೇಳೆ ಶುಕ್ಲಾ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಅವರು ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವುದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಹೌರಾ ಶಾಸಕರಾಗಿ ಮುಂದುವರೆಯುವುದರ ಮೂಲಕ ಪಕ್ಷಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಊಹಾಪೋಹಗಳನ್ನು ಸೃಷ್ಟಿಸಬೇಡಿ ಎಂದು ಪಶ್ಚಿಮ ಬಂಗಾಳದ ಸಿಎಂ ಬ್ಯಾನರ್ಜಿ ಸ್ಪಷ್ಟ ಪಡಿಸಿದ್ದಾರೆ.

ಶುಕ್ಲಾ ಅವರ ನಿರ್ಧಾರ ಬೇಸರ ತಂದಿದೆ. ಅವರು ಉತ್ತಮ ಕ್ರೀಡಾ ಪಟು ಜೊತೆಗೆ ಅತ್ಯುತ್ತಮ ಮಾನವೀಯ ಗುಣವುಳ್ಳ ನಾಯಕ ಆದರೆ ಪಕ್ಷದಲ್ಲಿ ಕೆಲವು ತೊಂದರೆಯಿಂದಾಗಿ ರಾಜೀನಾಮೆ ನೀಡಿರಬಹುದು. ಈ ವಿಚಾರ ಕುರಿತು ಗಂಭೀರವಾಗಿ ಚರ್ಚಿಸಬೇಕೆಂದು ಟಿಎಂಸಿ ಯ ಹಿರಿಯ ನಾಯಕ ಶೌಕತ್‌ ರಾಯ್‌ ಸರ್ಕಾರಕ್ಕೆ ಸೂಚಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com