ಪ್ರಧಾನಿ ಮೋದಿ ರೈತರ ʼಮನ್ ಕಿ ಬಾತ್ʼ ಕೇಳಲಿ- ಶ್ರೀನಿವಾಸ್ ಬಿ ವಿ

ರೈತರಿಗೆ ʼಅಚ್ಚೇ ದಿನ್ʼ ಎಂಬ ಭ್ರಮೆ ತೋರಿಸಿ ಮೋಸ ಮಾಡಲಾಗಿದೆ. ಈಗ ಅವರು ತಮ್ಮ ಹಳೆಯ ದಿನಗಳನ್ನು ವಾಪಾಸ್ ಕೇಳುತ್ತಿದ್ದಾರೆ
ಪ್ರಧಾನಿ ಮೋದಿ ರೈತರ ʼಮನ್ ಕಿ ಬಾತ್ʼ ಕೇಳಲಿ- ಶ್ರೀನಿವಾಸ್ ಬಿ ವಿ

ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕಡೆಗಣಿಸುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಖಂಡಿಸಿದೆ. ಈ ಕುರಿತಾಗಿ ಹೇಳಿಕೆ ನೀಡಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಅವರು, ಪ್ರಧಾನಿ ಮೋದಿಯವರು ರೈತರು ʼಮನ್ ಕಿ ಬಾತ್ʼಅನ್ನು ಕೇಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

“ದೇಶದ ಅನ್ನದಾತರು ಲಕ್ಷಾಂತರ ಸಂಖ್ಯೆಯಲ್ಲಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವವರೆಗೂ ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ಈ ಕುರಿತಾಗ ಮೌನ ವಹಿಸಿದ್ದಾರೆ. ಅಲ್ಲಿ ಪ್ರತಿಭಟನಾ ನಿರತ ರೈತರು ಸಾವನ್ನಪ್ಪುತ್ತಿದ್ದಾರೆ. ಆದರೆ, ಪ್ರಧಾನಿಯವರಿಗೆ ಇದರ ಪರಿವೆಯೇ ಇಲ್ಲ. ಬದಲಾಗಿ, ತಮ್ಮ ಬಂಡವಾಳಶಾಹಿ ಸ್ನೇಹಿತರಿಗೆ ಉಪಯೋಗವಾಗುವ ಕಾನೂನು ರೂಪಿಸುವತ್ತ ದೃಷ್ಟಿ ನೆಟ್ಟಿದ್ದಾರೆ,” ಎಂದು ಶ್ರೀನಿವಾಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೈತರಿಗೆ ʼಅಚ್ಚೇ ದಿನ್ʼ ಎಂಬ ಭ್ರಮೆ ತೋರಿಸಿ ಮೋಸ ಮಾಡಲಾಗಿದೆ. ಈಗ ಅವರು ತಮ್ಮ ಹಳೆಯ ದಿನಗಳನ್ನು ವಾಪಾಸ್ ಕೇಳುತ್ತಿದ್ದಾರೆ ಎಂದಿದ್ದಾರೆ.

AICC ಜಂಟಿ ಕಾರ್ಯದರ್ಶಿಯಾಗಿರುವ ಕೃಷ್ಣ ಅಲ್ಲವರು ಅವರು, ರೈತರ ಸಾವಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಸರ್ಕಾರ ನೇರ ಕಾರಣ. ಮೈ ನಡುಗುವ ಚಳಿಯಲ್ಲಿಯೂ, ರೈತರು ತಮ್ಮ ಹಕ್ಕುಗಳನ್ನು ಕೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ನಿರ್ದಯಿಯಾಗಿ ಕುಳಿತಿದೆ ಎಂದು ಟೀಕಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com