ಕೇಜ್ರಿವಾಲ್ ಭರವಸೆ ಅತಂತ್ರರಾದ ಮನೆಮಾಲೀಕ-ಬಾಡಿಗೆದಾರ; ದೆಹಲಿ ಹೈಕೋರ್ಟ್‌ಗೆ ಮನವಿ

ಈ ಸಮಸ್ಯೆ ಸಂಬಂಧ ದೆಹಲಿ ಸರ್ಕಾಕ್ಕೆ 2020 ಆಗಸ್ಟ್ ನಿಂದ ಅಕ್ಟೋಬರ್ ವೇಳೆಗೆ 360 ಪತ್ರ ಸಂದೇಶ ಮತ್ತು ಈಮೇಲ್ ಮೂಲಕ ಮುಖ್ಯಮಂತ್ರಿ ಕೇಜ್ರಿವಾಲ್ ಸರ್ಕಾರದ ಗಮನಕ್ಕೆ ತರಲಾಗಿತ್ತು. ಲಾಕ್ಡೌನ್ ವೇಳೆ ಜನರ ಮನವೊಲಿಸುವ ದೃಷ್ಟಿಯಿಂದ ಮಾತಿನ ಭರವಸೆ ನೀಡಿತ್ತು. ಆದರೀಗ ಸರ್ಕಾರ ಸಮರ್ಪಕ ಉತ್ತರ ನೀಡುವಲ್ಲಿ ವಿಫಲವಾಗಿದೆ.
ಕೇಜ್ರಿವಾಲ್ ಭರವಸೆ ಅತಂತ್ರರಾದ ಮನೆಮಾಲೀಕ-ಬಾಡಿಗೆದಾರ;  ದೆಹಲಿ ಹೈಕೋರ್ಟ್‌ಗೆ ಮನವಿ

ವಿಶ್ವದಲ್ಲಿ ಕರೋನಾ ಮಹಾಮಾರಿ ಕಾಲಿಟ್ಟಿದ್ದರಿಂದ ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಯಾವುದೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೆ ಧಿಡೀರನೆ ಲಾಕ್ ಡೌನ್ ಘೋಷಣೆ ಮಾಡಿದ್ದವು. ಇದರಿಂದ ಬಡ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಮಧ್ಯಮ ವರ್ಗದವರ ಬದುಕು ಅತಂತ್ರ ಸ್ಥಿತಿಗೆ ಬಂದು ತಲುಪ್ಪಿತ್ತು. ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಇತ್ತ ರಾಷ್ಟ್ರರಾಜಧಾನಿ ದೆಹಲಿಯ ವಲಸೆ ಕಾರ್ಮಿಕರಿಗೆ ಕೆಲಸವಿಲ್ಲದೆ ಬಾಡಿಗೆ ಕಟ್ಟಲಾಗದ ಕೆಟ್ಟ ಪರಿಸ್ಥಿತಿ ಎದುರಾಗಿತ್ತು. ಬಾಡಿಗೆ ಕಟ್ಟುವಂತೆ ಮನೆಮಾಲೀಕರ ಒತ್ತಡದಿಂದ ಬೇಸತ್ತು ಕೇಜ್ರಿವಾಲ್ ಸರ್ಕಾರದ ಮೊರೆ ಹೋಗಿದ್ದರು. ಅಲ್ಲಿನ ಸರ್ಕಾರ ಮಾತಿನ ಭರವಸೆ ನೀಡಿತೇ ಹೊರತು ಸಮಸ್ಯೆ ಇನ್ನೂ ಅಂತ್ಯಕಾಣಲಿಲ್ಲ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭರವಸೆ

ಕರೋನಾ ಕಾರಣದಿಂದ ಮಾ 24 2020 ರಂದು ದೇಶದಲ್ಲಿ ಲಾಕ್ಡೌನ್ ಘೋಷಣೆಯಾದ ಐದೇ ದಿನಗಳಲ್ಲಿ ಅಂದರೆ ಮಾರ್ಚ್ 29 ರಂದು ದೆಹಲಿಯ ಕೇಜ್ರಿವಾಲ್ ಸರ್ಕಾರ ಮನೆಮಾಲೀಕರು ಮತ್ತು ಬಾಡಿಗೆದಾರರಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ನೀಡಿತ್ತು. ಅದೇನೆಂದರೆ ಮನೆ ಮಾಲೀಕರು ಬಾಡಿಗೆದಾರರಿಂದ ಹಣ ಪಡೆಯುವ ಸಮಯ ವಿಸ್ತರಿಸಬೇಕು. ಬಾಡಿಗೆದಾರರಿಗೆ ಕಿರುಕುಳ ನೀಡಬಾರದು. ಒಂದು ವೇಳೆ ಕೂಲಿ ಕಾರ್ಮಿಕರು ಬಡವರು ಹಣ ಕಟ್ಟಲಾಗದೆ ಇರುವಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ಮನೆ ಮಾಲೀಕರಿಗೆ ಹಣ ಪಾವತಿಸುತ್ತದೆ ಎಂಬ ಭರವಸೆ ನೀಡಲಾಗಿತ್ತು. ಇದರಿಂದ ಮನೆಮಾಲೀಕರು ಮತ್ತು ಬಾಡಿಗೆದಾರರು ನಿಟ್ಟುಸಿರುಬಿಟ್ಟಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸರ್ಕಾರದ ಭರವಸೆ ಪ್ರಶ್ನಿಸಿ ದೆಹಲಿ ಕೋರ್ಟ್ಗೆ ಮನವಿ

ದೆಹಲಿಯ ಪಾಲಂ ಮತ್ತು ಚಿರಾಗ್ ಪ್ರದೇಶದಲ್ಲಿದ್ದ ವಾಸವಿದ್ದ ಐದು ಜನ ಬಾಡಿಗೆದಾರರು ಮತ್ತು ಒಬ್ಬ ಮನೆಯ ಮಾಲೀಕ ಸರ್ಕಾರದ ನಿರೀಕ್ಷೆ ಮತ್ತು ಭರವಸೆ ಪ್ರಶ್ನಿಸಿ ದೆಹಲಿಯ ಹೈರ್ಕೋಟ್ ಮೆಟ್ಟಿಲೇರಿದ್ದಾರೆ. ಈ ವಿಚಾರ ಸಂಬಂಧ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

2018 ಮತ್ತು 2019 ರಲ್ಲಿ ದೆಹಲಿಯ (ಡಿಇಎಸ್) ಸಮೀಕ್ಷೆಯ ಪ್ರಕಾರ ರಾಜಧಾನಿಯಲ್ಲಿರುವ ಮೂರು ಕೋಟಿ ಜನಸಂಖ್ಯೆಯಲ್ಲಿ 1ಕೋಟಿ ಜನರು ಬಾಡಿಗೆ ವಸತಿ ನಿಲಯಗಳಲ್ಲಿ ವಾಸಿಸುತ್ತಿದ್ದಾರೆ. ಅಂದರೆ ಶೇಕಡಾ 33 ರಷ್ಟು ಜನರು ಬಾಡಿಗೆ ವಸತಿ ನಿಲಯಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಶೇಕಡಾ 20 ರಷ್ಟು ಬಾಡಿಗೆದಾರರ ಜೀವನೋಪಾಯ ಕಷ್ಟದ ಸ್ಥಿತಿಗೆ ತಲುಪಿದೆ. ಇನ್ನು ಲಾಕ್ಡೌನ್ ನಿಂದಾಗಿ 2 ಮಿಲಿಯನ್ ಜನರು ಉದ್ಯೋಗವನ್ನು ಕಳೆದುಕೊಂಡು ಜೀವನೋಪಾಯ ನಡೆಸುವುದೇ ಕಷ್ಟವಾಗಿದೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಇವರಲ್ಲಿ ಹೆಚ್ಚಾಗಿ ಆಟೋ ಓಡಿಸುವವರು, ದೈನಂದಿನ ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ಗಳಲ್ಲಿ ದುಡಿಯುವವರು, ಮನೆಕೆಲಸ ಮಾಡುವವರ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ದಿನಗೂಲಿಯನ್ನೆ ನಂಬಿಕೊಂಡು ಬದುಕುವ ವರ್ಗಕ್ಕೆ ದೊಡ್ಡ ಸಮಸ್ಯೆ ಎದುರಾದಂತಿದೆ. ಇದರ ಮಧ್ಯೆ ಬಾಡಿಗೆ ಕಟ್ಟಲಾಗದೆ ಮಾಲೀಕರು ಕಿರುಕುಳಕ್ಕೂ ಒಳಗಾಗಿದ್ದಾರೆ.

ಪತ್ರ ಹಾಗೂ ಇ-ಮೇಲ್ ಸಂದೇಶಕ್ಕೆ ಪ್ರತಿಕ್ರಿಯಿಸದ ಸರ್ಕಾರ

ಈ ಸಮಸ್ಯೆ ಸಂಬಂಧ ದೆಹಲಿ ಸರ್ಕಾಕ್ಕೆ 2020 ಆಗಸ್ಟ್ ನಿಂದ ಅಕ್ಟೋಬರ್ ವೇಳೆಗೆ 360 ಪತ್ರ ಸಂದೇಶ ಮತ್ತು ಈ ಮೇಲ್ ಮೂಲಕ ಮುಖ್ಯಮಂತ್ರಿ ಕೇಜ್ರಿವಾಲ್ ಸರ್ಕಾರದ ಗಮನಕ್ಕೆ ತರಲಾಗಿತ್ತು. ಲಾಕ್ಡೌನ್ ವೇಳೆ ಜನರ ಮನವೊಲಿಸುವ ದೃಷ್ಟಿಯಿಂದ ಮಾತಿನ ಭರವಸೆ ನೀಡಿತ್ತು. ಆದರೀಗ ಸರ್ಕಾರ ಸಮರ್ಪಕ ಉತ್ತರ ನೀಡುವಲ್ಲಿ ವಿಫಲವಾಗಿದೆ.

ಈ ವಿಚಾರ ಗಂಭೀರವಾಗಿ ಪರಿಗಣಿಸಿದ ದೆಹಲಿ ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿ ದೆಹಲಿಯ ಬಾಡಿಗೆದಾರರು ಮತ್ತು ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು 2020 ನವೆಂಬರ್ 11ಕ್ಕೆ ಕೈಗೆತ್ತುಕೊಂಡಿತ್ತು. ಬಳಿಕ ನವೆಂಬರ್ 25 ಕ್ಕೆ ಮುಂದೂಡಿತ್ತು. ನಂತರ ಮತ್ತೆ ಎರಡು ಬಾರಿ ಅಂದರೆ ಡಿಸೆಂಬರ್ 8 ಮತ್ತು ಡಿಸೆಂಬರ್ 17ಕ್ಕೆ ಮುಂದೂಡಿತ್ತು. ಅಂತಿಮವಾಗಿ ಡಿಸೆಂಬರ್ 17 ರ ವಿಚಾರಣೆಯಲ್ಲಿ ಸರ್ಕಾರಕ್ಕೆ ನೋಟೀಸ್ ನೀಡಿದೆ. ಸರ್ಕಾರವು ಈ ವಿಚಾರ ಕುರಿತು ಸ್ಪಷ್ಟ ನಿಲುವು ನೀಡಬೇಕು. ಮುಂದಿನ ನಾಲ್ಕು ವಾರಗಳಲ್ಲಿ ಕೋರ್ಟಿಗೆ ಅಪ್ಡೇಟ್ ಸಲ್ಲಿಸಬೇಕು ಎಂದು ಹೇಳಿದೆ.

ಮನೆಮಾಲೀಕರು ಮತ್ತು ಬಾಡಿಗೆದಾರರರಿಂದ ಬಂದ 360 ಕ್ಕೂ ಹೆಚ್ಚು ಪತ್ರಗಳು ಮತ್ತು ಇ ಮೇಲ್ ಸಂದೇಶಗಳು ಬಂದು 09 ತಿಂಗಳಾದರೂ ಸರ್ಕಾರ ಉತ್ತರ ನೀಡದಿರುವುದು ನ್ಯಾಯಸಮ್ಮತವಲ್ಲ, ಇದು ಸರ್ಕಾರದ ಅಸಹಾಯಕ ಸ್ಥಿತಿ ತೋರುತ್ತದೆ. ಸರ್ಕಾರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉತ್ತರಿಸುವಂತೆ ಸೂಚಿಸಿದೆ.

ಕೃಪೆ- ದಿ ವೈರ್

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com