JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್

ಈ ಹಿಂದೆ ಯಾವುದೇ 'ಕಾರ್ಪೊರೇಟ್' ಅಥವಾ 'ಕಾಂಟ್ರಾಕ್ಟ್' ಕೃಷಿಯನ್ನು ಮಾಡಿಲ್ಲ, ಮತ್ತು ಈ ವ್ಯವಹಾರವನ್ನು ಪ್ರವೇಶಿಸುವ ಯಾವುದೇ ಯೋಜನೆಯನ್ನು ಕಂಪೆನಿ ಹೊಂದಿಲ್ಲ
JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್

ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧದ ರೈತರ ಕೋಪ ಇದೀಗ ಬೃಹತ್‌ ಕಾರ್ಪೊರೇಟ್‌ ಸಂಸ್ಥೆ ರಿಲಯನ್ಸ್‌ ಮೇಲೆ ತಿರುಗಿದೆ. ಈ ಕಾನೂನುಗಳಿಂದ ರಿಲಯನ್ಸ್‌ ನೇರವಾಗಿ ಲಾಭಪಡೆಯುತ್ತದೆ ಎನ್ನುವ ಕಾರಣಕ್ಕೆ ರೈತರು ರಿಲಯನ್ಸ್‌ ವಸ್ತುಗಳನ್ನು ಬಹಿಷ್ಕಾರ ಮಾಡಲು ಕರೆ ನೀಡಿದ್ದಾರೆ.

ಅಲ್ಲದೆ, ಪಂಜಾಬ್‌ ಮತ್ತು ಹರಿಯಾಣದ ಹಲವು ಭಾಗಗಳಲ್ಲಿ ರಿಲಯನ್ಸ್‌ ಜಿಯೋ ಟೆಲಿಕಾಂ ಟವರ್‌ಗಳಿಗೆ ಉದ್ರಿಕ್ತ ರೈತರು ದಾಳಿ ಮಾಡಿದ್ದಾರೆ. ಪಂಜಾಬ್‌ ಒಂದರಲ್ಲೇ 1500 ಕ್ಕೂ ಹೆಚ್ಚು ಜಿಯೋ ಟೆಲಿಕಾಂ ಟವರ್‌ಗಳು ರೈತರ ಆಕ್ರೋಶಕ್ಕೆ ತುತ್ತಾಗಿದೆ ಎಂದು NDTV ವರದಿ ಮಾಡಿದೆ.

JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್
ರೈತರ ಪ್ರತಿಭಟನೆಗೆ ಬಂಡವಾಳ ಹೂಡಿದೆ ಏರ್ಟೆಲ್, ವಿಐ – ಜಿಯೋ ಆರೋಪ

ಪಂಜಾಬ್‌ ಮತ್ತು ಹರ್ಯಾಣ ರೈತರು ರಿಲಯನ್ಸ್‌ ಗೆ ಸೇರಿದ ಟವರ್‌ಗಳ ಕೇಬಲ್‌ಗಳನ್ನು ತುಂಡರಿಸುವುದರ ಮೂಲಕ, ವಿದ್ಯುತ್‌ ಸಂಚಾರಕ್ಕೆ ವ್ಯತ್ಯಯ ಮಾಡುವ ಮೂಲಕ ಟವರ್‌ಗಳಿಗೆ ಹಾನಿ ಮಾಡುತ್ತಿದ್ದಾರೆ. ಹಲವು ಕಡೆ ಟವರ್‌ಗಳಿಗೆ ಸೇರಿದ ಜನರೇಟರ್‌ಗಳು ಕಳವಾಗಿದೆಯೆಂದು ರಿಲಯನ್ಸ್‌ ಪ್ರತಿನಿಧಿಯೊಬ್ಬರು NDTVಗೆ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್
ರೈತರ ಕರೆಗೆ ಓಗೊಟ್ಟ ದೇಶದ ಜನತೆ; ಜಿಯೋದಿಂದ ಪೋರ್ಟ್ ಆಗುತ್ತಿರುವ ಯುವಕರು

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌, ಟವರ್‌ಗಳಿಗೆ ಹಾನಿ ಮಾಡುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

ಇದು ರಿಲಯನ್ಸ್‌ ಸಂಸ್ಥೆಯನ್ನು ಆತಂಕಕ್ಕೆ ದೂಡಿದೆ. ಈಗಾಗಲೇ ರೈತ ಆಂದೋಲನದ ಪರವಾಗಿ ಜಿಯೋ ನೆಟ್‌ವರ್ಕ್‌ಗಳಿಂದ ಗ್ರಾಹಕರು ವಿಮುಖರಾಗುತ್ತಿದ್ದಾರೆ. ಇದರ ಹಿಂದೆ ಬೇರೆ ಕಂಪೆನಿಗಳ ಹುನ್ನಾರವಿದೆಯೆಂದು ರಿಲಯನ್ಸ್‌ ಈ ಹಿಂದೆ ಆರೋಪಿಸಿತ್ತು. ಅಲ್ಲದೆ, ತನ್ನ ಟವರ್‌ಗಳಿಗೆ ರಕ್ಷಣೆ ನೀಡಲು ಮಧ್ಯಪ್ರವೇಶಿಸಬೇಕೆಂದು ಕೋರ್ಟ್‌ ಮೊರೆ ಹೋಗಿರುವ ರಿಲಯನ್ಸ್‌, ತನ್ನ ವಿರುದ್ಧ ಪ್ರಚಾರ ಮಾಡಲು ರೈತ ಆಂದೋಲನವನ್ನು ಬಳಸುವುದರ ಹಿಂದೆ ಕೆಲವೊಬ್ಬರ ಲಾಭದಾಯಕ ಹಿತಾಸಕ್ತಿ ಕೆಲಸ ಮಾಡುತ್ತಿದೆ ಎಂದು ಕೋರ್ಟ್‌ಗೆ ಹೇಳಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಮೊರೆ ಹೋಗಿರುವ ರಿಲಯನ್ಸ್‌, ದುಷ್ಕರ್ಮಿಗಳ ವಿಧ್ವಂಸಕ ಕೃತ್ಯಗಳಿಗೆ ಸಂಪೂರ್ಣ ನಿಲುಗಡೆ ತರಲು ಸರ್ಕಾರದ ತುರ್ತು ಹಸ್ತಕ್ಷೇಪ ಕೋರಿದೆ.

JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್
ದೇಶದ ಹಿತಾಸಕ್ತಿ ಬಲಿಕೊಟ್ಟು ರಿಲಯನ್ಸ್ ಬೆಳೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ!
JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್
ಜಿಯೋ ಮೇಲೆ ಫೇಸ್‌ಬುಕ್‌ನ ಬಂಡವಾಳವೂ ಮತ್ತು ಟಿಕ್‌ಟಾಕ್ ಮೇಲಿನ ಕೇಂದ್ರದ ನಿಷೇಧವೂ..

"ಈ ಹಿಂಸಾಚಾರವು ತನ್ನ ಸಾವಿರಾರು ಉದ್ಯೋಗಿಗಳ ಜೀವಕ್ಕೆ ಅಪಾಯವನ್ನುಂಟು ಮಾಡಿದೆ ಮತ್ತು ಎರಡು ರಾಜ್ಯಗಳಲ್ಲಿ ಅದರ ಅಂಗಸಂಸ್ಥೆಗಳು ನಡೆಸುತ್ತಿರುವ ಪ್ರಮುಖ ಸಂವಹನ ಮೂಲಸೌಕರ್ಯ, ಮಾರಾಟ ಮತ್ತು ಸೇವಾ ಮಳಿಗೆಗಳಿಗೆ ಹಾನಿ ಮತ್ತು ವ್ಯವಹಾರಕ್ಕೆ ಅಡ್ಡಿ ಉಂಟುಮಾಡಿದೆ" ಎಂದು ಅರ್ಜಿಯಲ್ಲಿ ಹೇಳಿದೆ.

ವಿಧ್ವಂಸಕ ಕೃತ್ಯದಲ್ಲಿ ಪಾಲ್ಗೊಳ್ಳುವ ದುಷ್ಕರ್ಮಿಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ನಮ್ಮ ವ್ಯಾಪಾರ ಪ್ರತಿಸ್ಪರ್ಧಿಗಳು ಪ್ರಚೋದಿಸಿದ್ದಾರೆ ಹಾಗೂ ಸಹಾಯ ಮಾಡಿದ್ದಾರೆ ಎಂದು ರಿಲಯನ್ಸ್‌ ಗಂಬೀರ ಆರೋಪವನ್ನು ಮಾಡಿದೆ.

ಪ್ರತಿಭಟನೆ ನಡೆಸುವ ರೈತರ ಕೋಪಕ್ಕೆ ತುತ್ತಾಗಿರುವ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆ, ʼಕಾರ್ಪೊರೇಟ್ ಅಥವಾ ಗುತ್ತಿಗೆ ಕೃಷಿಯಲ್ಲಿ ಆಸಕ್ತಿ ಇಲ್ಲದಿರುವುದರಿಂದ ಕೃಷಿ ಕಾನೂನುಗಳೊಂದಿಗೆ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್
ರಿಲಯನ್ಸ್ ಪೆಟ್ರೋಲಿಯಂ ಪ್ರಕರಣ: RIL, ಮುಖೇಶ್‌ ಅಂಬಾನಿಗೆ 40 ಕೋಟಿ ದಂಡ

"ರಿಲಯನ್ಸ್ ರಿಟೇಲ್, ರಿಲಯನ್ಸ್ ಜಿಯೋ ಇನ್ಫೋಕಾಮ್, ಅಥವಾ ನಮ್ಮ ಮೂಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ನ ಯಾವುದೇ ಅಂಗಸಂಸ್ಥೆ, ಈ ಹಿಂದೆ ಯಾವುದೇ 'ಕಾರ್ಪೊರೇಟ್' ಅಥವಾ 'ಕಾಂಟ್ರಾಕ್ಟ್' ಕೃಷಿಯನ್ನು ಮಾಡಿಲ್ಲ, ಮತ್ತು ಈ ವ್ಯವಹಾರವನ್ನು ಪ್ರವೇಶಿಸುವ ಯಾವುದೇ ಯೋಜನೆಯನ್ನು ಕಂಪೆನಿ ಹೊಂದಿಲ್ಲ ಎಂದು ಸ್ಪಷ್ಟ ಪಡಿಸಿದೆ.

JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್
ರಿಲಯನ್ಸ್ ಜಿಯೋ ಪಾಲು ಪಡೆದ ಫೇಸ್‌ಬುಕ್‌; ಗ್ರಾಹಕರಾದ ನಿಮಗಾಗುವ ಲಾಭ- ನಷ್ಟ ಎಷ್ಟು?

ಅಲ್ಲದೆ, ಆ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್ ಅಥವಾ ಹರಿಯಾಣದಲ್ಲಿ ಯಾವುದೇ ಭೂಮಿಯನ್ನು ಖರೀದಿಸಿರುವುದನ್ನು ನಿರಾಕರಿಸಿದೆ, ಹಾಗೂ 1.3 ಬಿಲಿಯನ್‌ ಭಾರತೀಯರ ಅನ್ನದಾತರಾದ ಕೃಷಿಕರನ್ನು ರಿಲಯನ್ಸ್‌ ಎಂದಿಗೂ ಗೌರವಿಸುತ್ತದೆ ಎಂದು ಹೇಳಿದೆ.

ರೈತರ ಆಕ್ರೋಶ ತನ್ನ ಮೇಲೆ ತಿರುಗುತ್ತಿರುವುದರ ಆತಂಕದಲ್ಲೋ ಅಥವಾ ತನ್ನ ಸಂಸ್ಥೆಗಳ ವಿರುದ್ಧ ನಕರಾತ್ಮಕ ಪರಿಣಾಮ ಬೀರುವುದರ ಬೆನ್ನಲ್ಲೋ ಏನೋ ಒಟ್ಟಿನಲ್ಲಿ ಕಾರ್ಪೊರೇಟ್‌ ಕೃಷಿಯಲ್ಲಿ ತನಗೆ ಯಾವ ಆಸಕ್ತಿಯೂ ಇಲ್ಲವೆಂಬಂತೆ ರಿಲಯನ್ಸ್‌ ತೋರಿಸುತ್ತಿದೆ. ಕೃಷಿ ಕಾನೂನುಗಳ ತಿದ್ದುಪಡಿಯಾದಾಗಿನಿಂದ ಅಂಬಾನಿ ಹಾಗೂ ಅದಾನಿ ಸಂಸ್ಥೆಗಳಿಗೆ ಈ ಕಾನೂನುಗಳ ಮೂಲಕ ಸಾಕಷ್ಟು ಲಾಭವಿದೆಯೆಂದು ಹೇಳಲಾಗುತ್ತಿತ್ತು.

JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್
ಏಕಸ್ವಾಮ್ಯ ಮಾರುಕಟ್ಟೆಯತ್ತ ಜಿಯೋ: ಮುಂದಿನ ಅಪಾಯಕ್ಕೆ ಮುನ್ನುಡಿ ಬರೆಯಿತಾ ಸುಪ್ರೀಂ?
JIO ಟವರ್‌ಗಳಿಗೆ ಹೆಚ್ಚುತ್ತಿರುವ ಹಾನಿ: ಕೃಷಿ ಕ್ಷೇತ್ರಕ್ಕೆ ಬರುವುದಿಲ್ಲವೆಂದ ರಿಲಯನ್ಸ್
ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯವೀಗ ಹತ್ತು ಲಕ್ಷ ಕೋಟಿ ರುಪಾಯಿಗಳು!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com