ಕುಸಿಯುತ್ತಿರುವ ರಫ್ತು; ಒಟ್ಟು ವಿತ್ತೀಯ ಕೊರತೆ 15.71 ಬಿಲಿಯನ್ ಡಾಲರ್‌ಗಳಿಗೆ ಏರಿಕೆ

ದೇಶದ ಆಮದು ರಫ್ತಿಗಿಂತಲೂ ಅಧಿಕವಾಗಿರುವುದರಿಂದ ವಿತ್ತೀಯ ಕೊರತೆ 15.71 ಶತಕೋಟಿ ಡಾಲರ್ ಗಳಿಗೆ ಏರಿಕೆ ದಾಖಲಿಸಿದೆ. ಸತತ ಮೂರನೇ ತಿಂಗಳು ಭಾರತದ ರಫ್ತು ಡಿಸೆಂಬರ್ 2020 ತಿಂಗಳಿನಲ್ಲಿ ಶೇ 0.8 ರಷ್ಟು ಕುಸಿತ ದಾಖಲಿಸಿದೆ.
ಕುಸಿಯುತ್ತಿರುವ ರಫ್ತು; ಒಟ್ಟು ವಿತ್ತೀಯ ಕೊರತೆ 15.71 ಬಿಲಿಯನ್ ಡಾಲರ್‌ಗಳಿಗೆ ಏರಿಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕುಸಿದಿರುವ ದೇಶಧ ಆರ್ಥಿಕತೆಯನ್ನು ಸರಿದಾರಿಗೆ ಭಾರೀ ಸರ್ಕಸ್ ಮಾಡುತ್ತಿದೆ. ಅದರಲ್ಲೂ ಮೋದಿ ಅವರು ವಿದೇಶಗಳಿಂದ ಆಮದನ್ನು ಕಡಿಮೆ ಮಾಡಿ, ದೇಶೀಯವಾಗಿಯೇ ಉತ್ಪಾದನೆಯನ್ನು ಹೆಚ್ಚಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರುತಿದ್ದಾರೆ. ಮೋದಿ ಅವರ ಮಹತ್ವಾಕಾಂಕ್ಷೆಯ ಅತ್ಮ ನಿರ್ಭರ ಭಾರತ್ ಯೋಜನೆ ಕೂಡ ದೇಶದಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.

ಆಮದಿನಲ್ಲಿ ಸಿಂಹ ಪಾಲು ಹೊಂದಿರುವ ರಕ್ಷಣಾ ಉಪಕರಣಗಳನ್ನು ದೇಶೀಯವಾಗಿಯೇ ತಯಾರಿಸಲು ರಷ್ಯಾದ ಕಂಪೆನಿಗಳ ಜತೆ ಸಹಯೋಗಕ್ಕೆ ಮುಂದಾಗಿದ್ದರೂ ಅದು ಕೇಳುತ್ತಿರುವ ದುಬಾರಿ ರಾಯಧನದಿಂದಾಗಿ ಅದೂ ವಿಫಲಗೊಂಡಿದೆ . ಸಾವಿರಾರು ಸ್ಟಾರ್ಟ್ ಅಪ್ ಕಂಪೆನಿಗಳು ಇನ್ನೂ ಭ್ರೂಣಾವಸ್ಥೆಯಲ್ಲಿಯೇ ಇವೆ. ಹೀಗಾಗಿ ರಫ್ತು ಕುಸಿತವನ್ನೇ ದಾಖಲಿಸುತ್ತಿದೆ.

ದೇಶದ ಆಮದು ರಫ್ತಿಗಿಂತಲೂ ಅಧಿಕವಾಗಿರುವುದರಿಂದ ವಿತ್ತೀಯ ಕೊರತೆ 15.71 ಶತಕೋಟಿ ಡಾಲರ್ ಗಳಿಗೆ ಏರಿಕೆ ದಾಖಲಿಸಿದೆ. ಸತತ ಮೂರನೇ ತಿಂಗಳು ಭಾರತದ ರಫ್ತು ಡಿಸೆಂಬರ್ 2020 ತಿಂಗಳಿನಲ್ಲಿ ಶೇ 0.8 ರಷ್ಟು ಕುಸಿತ ದಾಖಲಿಸಿದೆ. ವಾಣಿಜ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, 2020 ರ ಡಿಸೆಂಬರ್ ತಿಂಗಳಿನಲ್ಲಿ ರಫ್ತು 26.89 ಬಿಲಿಯನ್ ಡಾಲರ್ ಆಗಿದ್ದು, 2019 ರ ಇದೇ ತಿಂಗಳಲ್ಲಿ ರಫ್ತು 27.11 ಬಿಲಿಯನ್ ಡಾಲರ್ ಆಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿದೇಶದ ರಫ್ತಾಗುವ ಸರಕುಗಳ ಪ್ರಮಾಣವು ಕಳೆದ ನವೆಂಬರ್ 2020 ಕ್ಕಿಂತ ಡಿಸೆಂಬರ್ ನಲ್ಲಿ ಅಲ್ಪ ಏರಿಕೆ ದಾಖಲಿಸಿದೆ. ಇದು ಮುಖ್ಯವಾಗಿ ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್ ಮತ್ತು ರಾಸಾಯನಿಕಗಳಂತಹ ಕೆಲವು ವಲಯಗಳ ರಫ್ತು ಹೆಚ್ಚಳವಾಗಿದೆ. ಒಂಬತ್ತು ತಿಂಗಳ ಅಂತರದ ನಂತರ, ಡಿಸೆಂಬರ್ ನಲ್ಲಿ ಆಮದು ಪ್ರಮಾಣ ಶೇ 7.6 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಈ ಮೊತ್ತ 42.6 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ. ಕಳೆದ ಫೆಬ್ರವರಿ 2020 ರಲ್ಲಿ ಅದು ಶೇಕಡಾ 2.48 ರಷ್ಟು ಏರಿಕೆ ದಾಖಲಿಸಿತ್ತು. ಡಿಸೆಂಬರ್ 2020 ರಲ್ಲಿ ಭಾರತವು ನಿವ್ವಳ ಆಮದುದಾರರಾಗಿದ್ದು, 15.71 ಬಿಲಿಯನ್ ಡಾಲರ್ ನಷ್ಟು ವಿತ್ತೀಯ ಕೊರತೆ ದಾಖಲಿಸಿದೆ. ಈ ಹಿಂದೆ ಈ ಕೊರತೆ 12.49 ಬಿಲಿಯನ್ ಡಾಲರ್ ಗಳ ಕೊರತೆ ಗೆ ಹೋಲಿಸಿದರೆ ಇದು ಇದು 25.78 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ವಿತ್ತೀಯ ಕೊರತೆ (ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ)ಯು ಜುಲೈ 2020 ರಿಂದ ಸತತ ಏರಿಕೆ ದಾಖಲಿಸುತ್ತಲೇ ಬಂದಿದೆ. ಆಧರೆ ಜೂನ್ 2020 ರಲ್ಲಿ ದೇಶವು ಆಮದಿಗಿಂತ ರಫ್ತು ಹೆಚ್ಚು ದಾಖಲಿಸಿತ್ತು. . ಏಪ್ರಿಲ್-ಡಿಸೆಂಬರ್ 2020-21ರಲ್ಲಿ, ದೇಶದ ಸರಕು ರಫ್ತು ಶೇ .15.8 ರಷ್ಟು ಕುಸಿದು 200.55 ಬಿಲಿಯನ್ ಡಾಲರ್ ಗಳಿಗೆ ತಲುಪಿದೆ, ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ದೇಶದ ಒಟ್ಟು ರಫ್ತು 238.27 ಬಿಲಿಯನ್ ಡಾಲರ್ ಗಳಾಗಿತ್ತು.

ಪ್ರಸಕ್ತ ಹಣಕಾಸು ವರ್ಷದ ಒಂಬತ್ತು ತಿಂಗಳಲ್ಲಿನ ಆಮದು ಶೇಕಡಾ 29.08 ರಷ್ಟು ಇಳಿಕೆಯಾಗಿ ಒಟ್ಟು 258.29 ಬಿಲಿಯನ್ ಡಾಲರ್ ಗಳಿಗೆ ತಲುಪಿದೆ. ಇದು 2019-20ರ ಏಪ್ರಿಲ್-ಡಿಸೆಂಬರ್ ನಲ್ಲಿ 364.18 ಬಿಲಿಯನ್ ಡಾಲರ್ ಆಗಿತ್ತು. 2020 ರ ಡಿಸೆಂಬರ್ ನಲ್ಲಿ ತೈಲ ಆಮದು ಶೇಕಡಾ 10.37 ರಷ್ಟು ಇಳಿಕೆಯಾಗಿ 9.61 ಬಿಲಿಯನ್ ಡಾಲರ್ ಗಳಿಗೆ ಕುಸಿದಿತ್ತು. ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ತೈಲ ಆಮದು ಶೇ 44.46 ರಷ್ಟು ಕುಸಿದು 53.71 ಬಿಲಿಯನ್ ಡಾಲರ್ ಗಳಿಗೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.

ಕಳೆದ 6 ತಿಂಗಳುಗಳಲ್ಲಿ ರಫ್ತಿನಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿರುವ ಪ್ರಮುಖ ಸರಕುಗಳಲ್ಲಿ ತೈಲ ಆಹಾರ ಪದಾರ್ಥಗಳು ಶೇಕಡಾ 192.60 ರಷ್ಟು, ಕಬ್ಬಿಣದ ಅದಿರು ಶೇಕಡಾ 69.26 ರಷ್ಟು , ಕಾರ್ಪೆಟ್ ಶೇಕಡ 21.12 , ಔಷಧಗಳು 17.44 ಶೇಕಡಾ, ಮಸಾಲೆ ಪದಾರ್ಥಗಳು 17.06 ಶೇಕಡಾ , ಎಲೆಕ್ಟ್ರಾನಿಕ್ ಸರಕುಗಳು ಶೇಕಡಾ 16.44, ಹಣ್ಣುಗಳು ಮತ್ತು ತರಕಾರಿಗಳು ಶೇಕಡಾ 12.82 ಮತ್ತು ರಾಸಾಯನಿಕಗಳು ಶೇಕಡಾ 10.73 ಏರಿಕೆ ದಾಖಲಿಸಿವೆ. ಇತರ ಸರಕುಗಳಲ್ಲಿ ಹತ್ತಿ ನೂಲು , ಜವಳಿ ಉತ್ಪನ್ನಗಳು ಮಗ್ಗ ಉತ್ಪನ್ನಗಳು ಶೇಕಡಾ 10.09 , ಅಕ್ಕಿ ಶೇ .8.60 ,ಮಾಂಸ ಡೈರಿ ಮತ್ತು ಕೋಳಿ ಉತ್ಪನ್ನಗಳು ಶೇ 6.79 ರತ್ನಗಳು ಮತ್ತು ಆಭರಣಗಳು ಶೇಕಡಾ 6.75 ಚಹಾ ಶೇ 4.47 , ಮತ್ತು ಎಂಜಿನಿಯರಿಂಗ್ ಸರಕುಗಳು ಶೇ 0.12 ರಷ್ಟು ಏರಿಕೆ ದಾಖಲಿಸಿವೆ.ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಕ್ಷೇತ್ರಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಶೇಕಡಾ 40.47 , ತೈಲ ಬೀಜಗಳು 31.80 ಶೇಕಡಾ ಚರ್ಮ ಮತ್ತು ಚರ್ಮೋದ್ಯಮ ಉತ್ಪನ್ನಗಳು ಶೇಕಡಾ 17.74, ಕಾಫಿ ಶೇಕಡಾ 16.39 ಎಲ್ಲಾ ಜವಳಿಗಳ ಸಿದ್ದ ಉಡುಪುಗಳು ಶೇ 15.7, ಮಾನವ ನಿರ್ಮಿತ ನೂಲು , ಬಟ್ಟೆಗಳ ತಯಾರಿಕೆಗಳು ಶೇ.14.61 ಸಮುದ್ರ ಉತ್ಪನ್ನಗಳು ಶೇ 14.27 , ಗೋಡಂಬಿ ಶೇ 12.04 , ಪ್ಲಾಸ್ಟಿಕ್ ಮತ್ತು ಲಿನೋಲಿಯಂ ಶೇ 7.43 ಶೇಕಡಾ ಮತ್ತು ತಂಬಾಕು ಶೇಕಡಾ 4.95 ರಷ್ಟು ಕುಸಿತ ದಾಖಲಿಸಿವೆ.

ಕಳೆದ 2020 ರ ಡಿಸೆಂಬರ್ ತಿಂಗಳಿನಲ್ಲಿ ಧನಾತ್ಮಕ ಬೆಳವಣಿಗೆಯೊಂದಿಗೆ ಆಮದು ಮಾಡಿಕೊಂಡಿರುವ ಪ್ರಮುಖ ಸರಕುಗಳಲ್ಲಿ ದ್ವಿದಳ ಧಾನ್ಯಗಳು ಶೇ 245.15 ,ಚಿನ್ನ ಶೇ
81.82 , ಸಸ್ಯಜನ್ಯ ಎಣ್ಣೆ ಶೇ 43.50 , ರಾಸಾಯನಿಕಗಳು ಶೇ 23.30, ಎಲೆಕ್ಟ್ರಾನಿಕ್ ಸರಕುಗಳು ಶೇಕಡಾ 20.90 , ಯಂತ್ರೋಪಕರಣಗಳು ಶೇಕಡಾ 13.46, ಮುತ್ತುಗಳು ಮತ್ತು ಅಮೂಲ್ಯ ಕಲ್ಲುಗಳು ಶೇಕಡಾ 7.81 , ಮತ್ತು ರಸಗೊಬ್ಬರಗಳು ಶೇಕಡಾ 1.42 ಏರಿಕೆ ದಾಖಲಿಸಿವೆ.

ಈ ಅಂಕಿ ಅಂಸಗಳ ಬಗ್ಗೆ ಪ್ರತಿಕ್ರಿಯಿಸಿದ ಫೆಡರೇಶನ್ ಆಫ್ ಇಂಡಿಯನ್ ರಫ್ತು ಸಂಸ್ಥೆ (ಎಫ್ಐಇಒ) ಅಧ್ಯಕ್ಷ ಶರದ್ ಕುಮಾರ್ ಸರಫ್, ರಫ್ತು ಆರ್ಡರ್ ಗಳು ನಿರಂತರವಾಗಿ ಸುಧಾರಿಸುತ್ತಿರುವುದರಿಂದ ಕೇವಲ 0.8 ಶೇಕಡಾ ಅಲ್ಪ ಕುಸಿತವು ಪುನರುಜ್ಜೀವನದ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಹೇಳಿದರು. ಈ ಹೆಚ್ಚಿದ ಆರ್ಡರ್ ಗಳಿಂದಾಗಿ ನಮ್ಮ ಕಾರ್ಖಾನೆಗಳಲ್ಲಿನ ದಾಸ್ತಾನುಗಳು ಖಾಲಿ ಆಗುತ್ತವೆ. ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಅವರು ಹೇಳಿದರು. ಕಂಟೇನರ್ಗಳ ಸಮರ್ಪಕ ಲಭ್ಯತೆ, ಸರಕು ಸಾಗಣೆ ಶುಲ್ಕವನ್ನು ಇಳಿಸುವುದು , ಅಗತ್ಯವಾದ ಎಂಇಐಎಸ್ (ಭಾರತ ಯೋಜನೆಯಿಂದ ಸರಕು ರಫ್ತು) ಉತ್ತೇಜನ ಬಿಡುಗಡೆ ಮತ್ತು ಎಸ್ಇಐಎಸ್ (ಭಾರತ ಯೋಜನೆಯಿಂದ ಸೇವೆಗಳ ರಫ್ತು) ಪ್ರಯೋಜನಗಳ ಸ್ಪಷ್ಟತೆ ಸೇರಿದಂತೆ ರಫ್ತು ಉದ್ಯಮದ ಕೆಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವಂತೆ ಸರಫ್ ಸರ್ಕಾರವನ್ನು ಒತ್ತಾಯಿಸಿದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com