ತೀವ್ರಗೊಂಡ ರೈತರ ಹೋರಾಟ; ಅನ್ನದಾತರ ಕೂಗು ಜನರಿಗೆ ತಲುಪಿಸಲು ಸಮೂಹ ನ್ಯೂಸ್ ಬ್ಯೂರೋ ಕಾರ್ಯಾರಂಭ

ಪರಿಣಿತ ಹಿರಿಯ ಪತ್ರಕರ್ತರ ಮಾರ್ಗದರ್ಶನದಡಿ ಈ ತಂಡವು ನೇರವಾಗಿ ಹೋರಾಟದ ಸ್ಥಳದಲ್ಲೇ ಇದ್ದು ನಿಷ್ಪಕ್ಷಪಾತ ವರದಿ, ವಿಶ್ಲೇಷಣೆಗಳನ್ನು ತಯಾರಿಸಲಿದೆ. ಅಲ್ಲಿಂದ ಬರುವ ಸುದ್ದಿ, ವಿಡಿಯೋ ಫೂಟೇಜ್ ಇತ್ಯಾದಿಗಳನ್ನು ವರದಿ, ವಿಶ್ಲೇಷಣೆಗಳನ್ನಾಗಿ ಸಿದ್ಧಗೊಳಿಸಲು ಇಲ್ಲೊಂದು ತಂಡವೂ ಸಿದ್ಧವಾಗಬೇಕಿದೆ.
ತೀವ್ರಗೊಂಡ ರೈತರ ಹೋರಾಟ; ಅನ್ನದಾತರ ಕೂಗು ಜನರಿಗೆ ತಲುಪಿಸಲು ಸಮೂಹ ನ್ಯೂಸ್ ಬ್ಯೂರೋ ಕಾರ್ಯಾರಂಭ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ಮಾಡುತ್ತಿರುವ ಪ್ರತಿಭಟನಾನಿರತ ರೈತ ಹೋರಾಟಗಾರರೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತಿನ ಸಭೆಗಳು ವಿಫಲವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆಗಿನ ಅನೌಪಚಾರಿಕ ಮಾತುಕತೆಯೂ ವಿಫಲವಾದ ಬಳಿಕ ರಾಷ್ಟ್ರ ರಾಜಧಾನಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ರೈಲು ತಡೆ ಎಚ್ಚರಿಕೆ ನೀಡಿದ್ದಾರೆ. ಇತ್ತ ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಭಾರೀ ಸರ್ಕಸ್‌ ನಡೆಸುತ್ತಿದೆ. ಹೀಗಿರುವಾಗಲೇ ದೆಹಲಿಯ ಹೋರಾಟನಿರತ ರೈತರ ದನಿಯನ್ನು ಜನರಿಗೆ ತಲುಪಿಸಲು ದೆಹಲಿಯಲ್ಲಿ ಸಮೂಹ ನ್ಯೂಸ್ ಬ್ಯೂರೋ ಕಾರ್ಯಾರಂಭ ಮಾಡಲಾಗಿದೆ. ರೈತ ದನಿಯನ್ನು ಬಲಪಡಿಸಲು ಬಯಸುವ ಆಸಕ್ತ ಪತ್ರಕರ್ತರು, ಹವ್ಯಾಸಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಇದು ಸದವಕಾಶ ಎಂದು ಮಾಸ್ ಮೀಡಿಯಾ ಫೌಂಡೇಷನ್‍ ತಿಳಿಸಿದೆ.

ಜನದನಿಯೇ ಮುಖ್ಯವಾಹಿನಿ ಎಂಬ ತಿಳುವಳಿಕೆಯೊಂದಿಗೆ ಕರ್ನಾಟಕದಲ್ಲಿ ಜನಪರ ಪತ್ರಿಕೋದ್ಯಮವನ್ನು ವಿಸ್ತರಿಸಲು ಆರಂಭವಾಗಿರುವ ಸಂಸ್ಥೆಯೇ ಮಾಸ್ ಮೀಡಿಯಾ ಫೌಂಡೇಷನ್. ವಿನೂತನ ಬಗೆಯ ಹಲವು ಯೋಜನೆಗಳನ್ನು ಬೆಂಬಲಿಸುವ ಉದ್ದೇಶದಿಂದ ಜನಾಂದೋಲನಗಳು ಮತ್ತು ಪತ್ರಿಕಾ ವೃತ್ತಿಯಲ್ಲಿರುವ ಕೆಲವರು ಸೇರಿ ಇದಕ್ಕೊಂದು ಆರಂಭಿಕ ರೂಪವನ್ನು ಕೊಟ್ಟಿದ್ದಾರಾದರೂ, ಇದು ಭಾರತದ ಸಮಸ್ತ ಪ್ರಜ್ಞಾವಂತರು ಜೊತೆಗೂಡಿ ಮಾಡಬೇಕಾದ ಕೆಲಸವಾಗಿದೆ ಎನ್ನುತ್ತಾರೆ ಮಾಸ್ ಮೀಡಿಯಾ ಫೌಂಡೇಷನ್‍ ಪ್ರಮುಖರಾದ ಗುರುಪ್ರಸಾದ್ ಕೆರಗೋಡು ಮತ್ತು ಉಮರ್ ಯು.ಎಚ್.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಒಂದೂವರೆ ತಿಂಗಳಿನಿಂದ ದೆಹಲಿಯ ಸುತ್ತ ನಡೆಯುತ್ತಿರುವ ರೈತ ಚಳವಳಿಯ ಕುರಿತು ನಿಮಗೆ ತಿಳಿದಿದೆ. ಪಂಜಾಬ್, ಹರಿಯಾಣ ಸೇರಿದಂತೆ ದೇಶದ ನಾನಾ ರಾಜ್ಯಗಳ ರೈತರು ಕೊರೆಯುವ ಚಳಿಯಲ್ಲಿ ಈ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಆಂದೋಲನದ ಭಾಗವಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿಯೂ ರೈತರು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರವು ಈಗಾಗಲೇ ಚಳವಳಿ ನಿರತರ ಜೊತೆ ಆರು ಸುತ್ತಿನ ಮಾತುಕತೆಗಳನ್ನು ನಡೆಸಿದೆ. ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, ಅದರ ಹಲವು ಆಯಾಮಗಳ ಕುರಿತ ಸುದ್ದಿ, ವಿಶ್ಲೇಷಣೆಯನ್ನು ಕರ್ನಾಟಕದ ಜನರಿಗೆ ನಿರಂತರ ತಲುಪಿಸುವ ಅಗತ್ಯವಿದೆ. ಹೀಗಾಗಿ ಮಾಸ್ ಮೀಡಿಯಾ ಫೌಂಡೇಶನ್ ಒಂದು ತಂಡವನ್ನು ಕರ್ನಾಟಕದಿಂದಲೂ ದೆಹಲಿಗೆ ಕಳುಹಿಸಲು ತೀರ್ಮಾನಿಸಿದೆ.

ತೀವ್ರಗೊಂಡ ರೈತರ ಹೋರಾಟ; ಅನ್ನದಾತರ ಕೂಗು ಜನರಿಗೆ ತಲುಪಿಸಲು ಸಮೂಹ ನ್ಯೂಸ್ ಬ್ಯೂರೋ ಕಾರ್ಯಾರಂಭ
ಟ್ರಾಕ್ಟರ್ ರ‍್ಯಾಲಿ ಹಾಗೂ ರಾಜಭವನದತ್ತ ಮೆರವಣಿಗೆ ನಡೆಸಲು ರೈತರ ತೀರ್ಮಾನಪರಿಣಿತ ಹಿರಿಯ ಪತ್ರಕರ್ತರ ಮಾರ್ಗದರ್ಶನದಡಿ ಈ ತಂಡವು ನೇರವಾಗಿ ಹೋರಾಟದ ಸ್ಥಳದಲ್ಲೇ ಇದ್ದು ನಿಷ್ಪಕ್ಷಪಾತ ವರದಿ, ವಿಶ್ಲೇಷಣೆಗಳನ್ನು ತಯಾರಿಸಲಿದೆ. ಅಲ್ಲಿಂದ ಬರುವ ಸುದ್ದಿ, ವಿಡಿಯೋ ಫೂಟೇಜ್ ಇತ್ಯಾದಿಗಳನ್ನು ವರದಿ, ವಿಶ್ಲೇಷಣೆಗಳನ್ನಾಗಿ ಸಿದ್ಧಗೊಳಿಸಲು ಇಲ್ಲೊಂದು ತಂಡವೂ ಸಿದ್ಧವಾಗಬೇಕಿದೆ. ಈ ವರದಿ/ವಿಶ್ಲೇಷಣಾ ವರದಿಗಳು, ವಿಡಿಯೋಗಳು ಇತ್ಯಾದಿ ಯಾವುದೇ ಒಂದು ಮಾಧ್ಯಮ ಸಂಸ್ಥೆಗೆ ಮಾತ್ರ ಸೀಮಿತವಾದುದಲ್ಲ. ವಸ್ತುನಿಷ್ಠ ಹಾಗೂ ಕರ್ತವ್ಯನಿಷ್ಠ ಮಾಧ್ಯಮ ಸಂಸ್ಥೆಗಳೆಲ್ಲರೂ ಬಳಸಿಕೊಳ್ಳಬಹುದಾದ ಕಂಟೆಂಟ್ ತಯಾರಿಸುವುದು ಇದರ ಉದ್ದೇಶವಾಗಿರುತ್ತದೆ.

ಇನ್ನು, ತಂಡದ ಜೊತೆಗೆ ದೆಹಲಿಗೆ ಹೋಗಲು ಅಥವಾ ಇಲ್ಲೇ ಇದ್ದು, ಜೊತೆಗೂಡಲು ಸಾಧ್ಯವಿರುವವರು ತಂಡದ ಭಾಗವಾಗಬಹುದು. ದೆಹಲಿಗೆ ಹೋಗಿ ಬರುವ ಖರ್ಚನ್ನು ಅವರವರೇ ವಹಿಸಿಕೊಂಡರೆ, ಅಲ್ಲಿನ ವ್ಯವಸ್ಥೆ ಹಾಗೂ ಇನ್ನಿತರ ಖರ್ಚುಗಳನ್ನು ಫೌಂಡೇಶನ್ ವತಿಯಿಂದ ನಿಭಾಯಿಸಲಾಗುವುದು. ಈ ಕಂಟೆಂಟ್‍ಅನ್ನು ತಮ್ಮ ಮಾಧ್ಯಮ ಸಂಸ್ಥೆಯಲ್ಲಿ ಬಿತ್ತರಿಸುವ ಮೂಲಕ ಜೊತೆಯಾಗಬಹುದು. ಆಸಕ್ತರು ಹೆಸರು ನೋಂದಾವಣೆ ಮತ್ತಿತರ ಮಾಹಿತಿಗಳಿಗಾಗಿ ಈ ಕೆಳಗಿನ ಸಂಖ್ಯೆ 8088625216 ಸಂಪರ್ಕಿಸಬಹುದು ಎನ್ನುತ್ತಿದೆ ಮಾಸ್ ಮೀಡಿಯಾ ಫೌಂಡೇಶನ್.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com