ಕರೋನಾ ಲಸಿಕೆ ಬಳಕೆಗೆ ಒಪ್ಪಿಗೆ ಸಿಗಲು ಇನ್ನೊಂದೇ ಮೆಟ್ಟಿಲು

ಮೂರು ಬಾರಿ ಹೆಚ್ಚುವರಿ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಿದೆ‌. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಗಳ ಪರಿಶೀಲನೆ ಮುಗಿದಿದ್ದು ತನ್ನ ಕಡೆಯಿಂದ ಒಪ್ಪಿಗೆ ಸೂಚಿಸಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಶಿಫಾರಸು ಮಾಡಿದೆ.
ಕರೋನಾ ಲಸಿಕೆ ಬಳಕೆಗೆ ಒಪ್ಪಿಗೆ ಸಿಗಲು ಇನ್ನೊಂದೇ ಮೆಟ್ಟಿಲು

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಾರದಲ್ಲಿ ಕರೋನಾ ಲಸಿಕೆ ಸಿಗಲಿದೆ‌. ಏಕೆಂದರೆ ಕರೋನಾ ಲಸಿಕೆ ಬಳಕೆಗೆ ಒಪ್ಪಿಗೆ ಪಡೆಯಲು ಉಳಿದಿರುವುದು ಇನ್ನೊಂದೇ ಮೆಟ್ಟಿಲು. ಏಕೆಂದರೆ ಭಾರತದಲ್ಲಿ ಬಳಸಬಹುದಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹಸಿರು ನಿಶಾನೆ ತೋರುವ ಪ್ರಕ್ರಿಯೆಯೊಂದು ಮಾತ್ರ ಬಾಕಿ ಉಳಿದಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್‌ (CDSCO) ಶಿಫಾರಸನ್ನು ಪರಿಗಣಿಸಬೇಕು. ಈ ಹಿನ್ನಲೆಯಲ್ಲಿ ಈಗಾಗಲೇ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್‌ ನ ಸಬ್ಜೆಕ್ಟ್ ಎಕ್ಸಫರ್ಟ್ ಕಮಿಟಿ (SEC) ಈ ವಾರವೊಂದರಲ್ಲೇ ಮೂರು ಸಭೆ ನಡೆಸಿದೆ. ಸಭೆಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬಳಕೆ ಬಗ್ಗೆ ವಿಶೇಷವಾಗಿ ಈ ಲಸಿಕೆಗಳ ಸುರಕ್ಷತೆ ಬಗ್ಗೆ ಹಾಗೂ ಅವು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಬ್ಜೆಕ್ಟ್ ಎಕ್ಸಫರ್ಟ್ ಕಮಿಟಿ ಮುಂದೆ ಸದ್ಯ ಎರಡು ಪ್ರಸ್ತಾವಗಳಿದ್ದವು. ಒಂದು ಕೋವಿಶೀಲ್ಡ್ ಗೆ ಸಂಬಂಧಿಸಿದ್ದು. ಅಂದರೆ ಬ್ರಿಟನ್ನಿನ ಆಕ್ಸ್​​ಫರ್ಡ್ ವಿಶ್ವವಿದ್ಯಾಲಯ ಹಾಗೂ ಹೆಸರಾಂತ ಫಾರ್ಮಾ ಸಂಸ್ಥೆ ಆಸ್ಟ್ರಾಜೆನೆಕಾದ ವಿಜ್ಞಾನಿಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಮತ್ತು ಭಾರತದ ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ (SII) ಪ್ರಯೋಗ ಮಾಡುತ್ತಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಬಳಸಲು ಅನುಮತಿ ನೀಡಿ ಎಂದು ಕೇಳಿಕೊಂಡಿದ್ದ ಪ್ರಸ್ತಾವನೆ. ಇನ್ನೊಂದು ಕೋವ್ಯಾಕ್ಸಿನ್ ಗೆ ಸಂಬಂಧಿಸಿದ್ದು. ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಬಳಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದ ಪ್ರಸ್ತಾವನೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್‌ ಅಡಿಯಲ್ಲಿ ಬರುವ ಸಬ್ಜೆಕ್ಟ್ ಎಕ್ಸಫರ್ಟ್ ಕಮಿಟಿ ಸೆರಮ್ ಇನ್ಸ್ಟಿಟ್ಯೂಟಿನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಡೆಟಾಗಳನ್ನು ಪರಿಶೀಲಿಸಿದೆ. ಮೂರು ಬಾರಿ ಹೆಚ್ಚುವರಿ ಮಾಹಿತಿ ತರಿಸಿಕೊಂಡು ಪರಿಶೀಲನೆ ನಡೆಸಿದೆ‌. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಗಳ ಪರಿಶೀಲನೆ ಮುಗಿದಿದ್ದು ತನ್ನ ಕಡೆಯಿಂದ ಒಪ್ಪಿಗೆ ಸೂಚಿಸಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಶಿಫಾರಸು ಮಾಡಿದೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್‌ ಶಿಫಾರಸು ಮಾಡಿದ ಬಳಿಕ ಲಸಿಕೆಗಳ ಸುರಕ್ಷತೆ, ಕಾರ್ಯಕ್ಷಮತೆ ಅಥವಾ ಪರಿಣಾಮಕಾರಿತ್ವದ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮತ್ತೊಮ್ಮೆ ಪರಿಶೀಲನೆ ನಡೆಸುವ ಸಾಧ್ಯತೆ ಇರುವುದಿಲ್ಲ.‌ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 'ಮುಂದಿನ ಪ್ರಕ್ರಿಯೆಗಳಿಗೆ' ಒತ್ತು ನೀಡಲಿದೆ. 'ದರ', 'ಪಾರದರ್ಶಕತೆ', 'ವಿತರಣೆ'ಗಳ ಬಗ್ಗೆ ನಿಗಾವಹಿಸಲಿದೆ. ಹಾಗಾಗಿ ಆದಷ್ಟು ಬೇಗ ಕರೋನಾ ಲಸಿಕೆ ಪಡೆಯಲು ಪೂರೈಸಬೇಕಾದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತವೆ ಎನ್ನಲಾಗಿದೆ.

ಇದೇ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಜನವರಿ 2ರಂದು ದೇಶಾದ್ಯಂತ 116 ಜಿಲ್ಲೆಯ 259 ನಗರಗಳಲ್ಲಿ 'ಕೋವಿಡ್ ಡ್ರೈ ರನ್' ಕೂಡ ನಡೆಸಿದೆ. ಡ್ರೈ ರನ್ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಆದುದರಿಂದ ಮುಂದಿನ ವಾರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಗಳ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅಂತಿಮ ಹಸಿರು ನಿಶಾನೆ ತೋರಿದರೆ ಲಸಿಕೆ ವಿತರಣೆ ಕಾರ್ಯವನ್ನು ಆರಂಭಿಸಬಹುದಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com