CBSC ಶಾಲಾ-ಕಾಲೇಜುಗಳ ಪರೀಕ್ಷೆ ಮುಂದೂಡಿಕೆ – ಶಿಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹತ್ತನೆ ಮತ್ತು ಹನ್ನೆರಡನೇ ತರಗತಿ ಮೌಖಿಕ ಪರೀಕ್ಷೆಯನ್ನು ಮಾರ್ಚ್ 01 ರಿಂದ ಆರಂಭವಾಗಲಿದೆ. ಲಿಖಿತ ಪರೀಕ್ಷೆಯನ್ನು ಮೇ 4 ರಿಂದ ಜೂನ್ 10 ರವರೆಗೆ ನಡೆಸಲಾಗುವುದು. ಪರೀಕ್ಷಾ ಫಲಿತಾಂಶ ಜುಲೈ 15 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
CBSC ಶಾಲಾ-ಕಾಲೇಜುಗಳ ಪರೀಕ್ಷೆ ಮುಂದೂಡಿಕೆ – ಶಿಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಏಜುಕೇಷನ್ (CBSC) ಶಾಲೆಗಳ ಹತ್ತನೇ ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಯನ್ನು ಮುಂದೂಡಿದೆ ಎಂದು ಕೇಂದ್ರೀಯ ಶಿಕ್ಷಣ ಮಂಡಳಿ ಗುರುವಾರ ಆದೇಶ ಹೊರಡಿಸಿದೆ. ಇದರಿಂದ ಪರೀಕ್ಷಾ ತಯಾರಿಗೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬಿಡುವು ಸಿಕ್ಕಂತಾಗಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಗುರುವಾರ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹತ್ತನೆ ಮತ್ತು ಹನ್ನೆರಡನೇ ತರಗತಿ ಮೌಖಿಕ ಪರೀಕ್ಷೆಯನ್ನು ಮಾರ್ಚ್ 01 ರಿಂದ ಆರಂಭವಾಗಲಿದೆ. ಲಿಖಿತ ಪರೀಕ್ಷೆಯನ್ನು ಮೇ 4 ರಿಂದ ಜೂನ್ 10 ರವರೆಗೆ ನಡೆಸಲಾಗುವುದು. ಪರೀಕ್ಷಾ ಫಲಿತಾಂಶ ಜುಲೈ 15 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಪ್ರಕಟಣೆ ತಿಳಿದು ಶಾಲಾ ಕಾಲೇಜುಗಳ ಪ್ರಾಂಶುಪಾಲರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಕರೋನಾ ಕಾರಣದಿಂದಾಗಿ ತರಗತಿಗಳು ನಡೆಯದೆ ಪರೀಕ್ಷಾ ತಯಾರಿ ನಡೆಸುವುದು ವಿದ್ಯಾರ್ಥಿಗಳಿಗೆ ಕಷ್ಟ ಸಾಧ್ಯವಾಗುತ್ತಿತ್ತು. ಜೊತೆಗೆ ಆತುರದಿಂದ ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಿದ್ದರೆ ವಿದ್ಯಾರ್ಥಿಗಳಿಗೆ ಒತ್ತಡ ಹಾಕಿದಂತಾಗುತ್ತಿತ್ತು ಎಂದು ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲೆಯಾದ ಅಲ್ಕಾ ಕಪೂರ್‌ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಹಿಂದೆ ಜನವರಿಯಲ್ಲಿ ಮೌಖಿಕ ಪರೀಕ್ಷೆ, ಫೆಬ್ರವರಿಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಮಾರ್ಚ್ ಹೊತ್ತಿಗೆ ಮುಕ್ತಾಯವಾಗುತ್ತಿತ್ತು. ಈ ಬಾರಿ ಕರೋನಾ ಕಾರಣಕ್ಕೆ ಸಿಬಿಎಸ್‌ಸಿ ಬೋರ್ಡ್ ನಿರ್ಧಾರ ಬದಲಿಸಿರುವುದು ಅನುಕೂಲಕರವಾಗಿದೆ ಎಂದು ಡಿಪಿಎಸ್ ಇಂದಿರಾಪುರಂ ಪ್ರಾಂಶುಪಾಲರಾದ ಸಂಗೀತಾ ಹಜೇಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಚಿವಾಲಯ ಬಿಡುಗಡೆ ಮಾಡಿದ ವೇಳಾಪಟ್ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಭಾರತ ಮತ್ತು ವಿದೇಶದಲ್ಲಿರುವ ಸಿಬಿಎಸ್ಸಿ ಶಾಲೆಗಳಿಗೆ ಅನುಕೂಲವಾಗಿದೆ. ಪರೀಕ್ಷಾ ದಿನಾಂಕ ಮತ್ತು ಫಲಿತಾಂಶ ಪ್ರಕಟಮಾಡುವ ದಿನಾಂಕ ಸೂಕ್ತವಾಗಿದೆ ಎಂದು ಮೌಂಟ್ ಅಬು ಪ್ರಾಂಶುಪಾಲರಾದ ಜ್ಯೋತಿ ಅರೋರ ಹೇಳಿದ್ದಾರೆ.

ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯೂ ಸಿಬಿಎಸ್ ಗಳಿಗೆ 2021 ಮೇ ನಿಂದ ಪರೀಕ್ಷೆ ಆರಂಭಿಸುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರರಿಗೆ ತಯಾರಿ ನಡೆಸಲು ಸಾಕಷ್ಟು ಸಮಯ ಸಿಕ್ಕಂತಾಗುತ್ತದೆ.ಈ ಕಾರ್ಯವನ್ನು ನಾವು ಪ್ರಶಂಶಿಸುತ್ತೇವೆಂದು ದೇಶದ ಖಾಸಗಿ ಶಾಲೆಗಳ ಒಕ್ಕೂಟ ಸಂಸ್ಥೆ ಅಂಬ್ರೆಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭರತ್ ಅರೋರ ಮಂಡಳಿಯ ಈ ನಿರ್ಧಾರವನ್ನು ಪ್ರಶಂಸಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com