ನಿಗೂಢ ರೀತಿಯಲ್ಲಿ ಸಾಯುತ್ತಿರುವ ಹಕ್ಕಿಗಳು: ಮ.ಪ್ರ, ರಾಜಸ್ಥಾನದಲ್ಲಿ ಹಕ್ಕಿಜ್ವರದ ಭೀತಿ

ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ, ರಾಜಸ್ಥಾನದ ಜ಼ಲವಾರ್‌ ಪ್ರದೇಶದಲ್ಲಿಯೂ ಕಾಗೆಗಳ ಮೃತದೇಹ ಪತ್ತೆಯಾಗಿದ್ದು, ಮಾರಣಾಂತಿಕ ಹಕ್ಕಿ ಜ್ವರದ ಸೋಂಕು ಈ ಕಾಗೆಗಳ ಮೃತದೇಹದಲ್ಲೂ ಪತ್ತೆಯಾಗಿದೆ
ನಿಗೂಢ ರೀತಿಯಲ್ಲಿ ಸಾಯುತ್ತಿರುವ ಹಕ್ಕಿಗಳು: ಮ.ಪ್ರ, ರಾಜಸ್ಥಾನದಲ್ಲಿ ಹಕ್ಕಿಜ್ವರದ ಭೀತಿ

ಇಂದೋರ್‌ ನಗರದಲ್ಲಿ ಕೆಲವು ದಿನಗಳ ಹಿಂದೆ ಕಂಡು ಬಂದ 50 ಕ್ಕೂ ಹೆಚ್ಚು ಕಾಗೆಗಳ ಮೃತದೇಹದಲ್ಲಿ ಹಕ್ಕಿ ಜ್ವರದ ಸೋಂಕು ಕಂಡು ಬಂದಿರುವುದು ಮಧ್ಯಪ್ರದೇಶದಾದ್ಯಂತ ಹೊಸ ಆತಂಕವನ್ನು ಸೃಷ್ಟಿಸಿದೆ. ಈ ಪ್ರದೇಶದಲ್ಲಿ ಜ್ವರದ ಲಕ್ಷಣಗಳು ಕಂಡುಬರುವವರನ್ನು ಗುರುತಿಸಲು ಅಧಿಕಾರಿಗಳು ಈಗ ಶುರು ಮಾಡಿದ್ದಾರೆ.

ʼಡಾಲಿ ಕಾಲೇಜಿನ ಆವರಣದಲ್ಲಿ ಮಂಗಳವಾರ ಸುಮಾರು ಐವತ್ತು ಕಾಗೆಗಳು ಶವವಾಗಿ ಪತ್ತೆಯಾಗಿವೆ. ಕೆಲವು ಮೃತದೇಹಗಳನ್ನು ಭೋಪಾಲ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಅವು H5N8 ವೈರಸ್ ಇರುವುದನ್ನು ಧೃಡಪಡಿಸಿದೆ" ಎಂದು ಇಂದೋರ್ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಪೂರ್ಣಿಮಾ ಗಡರಿಯಾ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಕಾಲೇಜು ಇರುವ ವಸತಿ ಪ್ರದೇಶದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೀತ, ಕೆಮ್ಮು ಮತ್ತು ಜ್ವರ ಇರುವವರನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲಾಗುತ್ತಿದೆ. ಶಂಕಿತ ರೋಗಿಗಳ ಸ್ವ್ಯಾಬ್ ಮಾದರಿಗಳನ್ನು ಪರೀಕ್ಷಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಮಾತ್ರವಲ್ಲದೆ, ರಾಜಸ್ಥಾನದ ಜ಼ಲವಾರ್‌ ಪ್ರದೇಶದಲ್ಲಿಯೂ ಕಾಗೆಗಳ ಮೃತದೇಹ ಪತ್ತೆಯಾಗಿದ್ದು, ಮಾರಣಾಂತಿಕ ಹಕ್ಕಿ ಜ್ವರದ ಸೋಂಕು ಈ ಕಾಗೆಗಳ ಮೃತದೇಹದಲ್ಲೂ ಪತ್ತೆಯಾಗಿದೆ. ರಾಜ್ಯದ ವಿವಿಧ ಪ್ರದೇಶದಲ್ಲಿ ನಿಗೂಢ ರೀತಿಯಲ್ಲಿ ಕಾಗೆಗಳು ಸೇರಿದಂತೆ ಹಲವು ಪಕ್ಷಿಗಳು ಸಾವನ್ನಪ್ಪುತ್ತಿರುವುದರ ಹಿಂದೆ ಹಕ್ಕಿ ಜ್ವರವೇ ಇದೆ ಎಂದು ಅಂದಾಜಿಸಿರುವ ರಾಜಸ್ಥಾನ ವನ್ಯಜೀವಿ ಇಲಾಖೆ ಹಕ್ಕಿಜ್ವರದ ಎಚ್ಚರಿಕೆಯನ್ನು ನೀಡಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

50 ಕ್ಕೂ ಹೆಚ್ಚು ನವಿಲುಗಳು ಸೇರಿದಂತೆ ನೂರಾರು ಪಕ್ಷಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವುದಾಗಿ ನಾಗವರ್‌ ಜಿಲ್ಲೆಯಿಂದ ವರದಿಯಾಗಿವೆ. ಜ಼ಲಾವರ್‌ ನ ಪನ್ವಾರ್‌ ಪ್ರದೇಶದಲ್ಲಿ 60 ಕ್ಕೂ ಮಿಕ್ಕಿ ಕೋಳಿಗಳು ಮೃತಪಟ್ಟಿವೆ ಎಂದು ವರದಿ ಹೇಳಿದೆ.

ವನ್ಯಜೀವಿ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ರಾಜ್ಯದಲ್ಲಿ ಪಕ್ಷಿ ಜ್ವರದ ಎಚ್ಚರಿಕೆಯನ್ನು ಘೋಷಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com