ಉಜ್ಜಯಿನಿ: BJYM ಮೆರವಣಿಗೆಯಿಂದಲೇ ಕೋಮು ಸಂಘರ್ಷ ಆರಂಭ!

ಸ್ಥಳೀಯ ನಿವಾಸಿಯೂ ಆಗಿರುವ ಮೊಹಮ್ಮದ್ ಅಯೂಬ್, ಅವರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಯಾರೊಬ್ಬರನ್ನೂ ಪೊಲೀಸರು ಬಂಧಿಸಿಲ್ಲ, ನಾವು ಕಾರ್ಯಕರ್ತರು ಕಲ್ಲು ತೂರಾಟ ಮತ್ತು ವಾಹನಗಳನ್ನು ಹಾನಿಗೊಳಿಸಿದ ಕುರಿತು ಅನೇಕ ವೀಡಿಯೋ ದ್ರಶ್ಯಾವಳಿಗಳನ್ನೂ ಪೋಲೀಸರಿಗೆ ನೀಡಿದ್ದೇವೆ. ಆದರೆ ಈವರೆಗೆ ಬಂಧನವಾಗಿಲ್ಲ ಎಂದು ತಿಳಿಸಿದರು.
ಉಜ್ಜಯಿನಿ: BJYM ಮೆರವಣಿಗೆಯಿಂದಲೇ ಕೋಮು ಸಂಘರ್ಷ ಆರಂಭ!

ಸಂಘ ಪರಿವಾರ ಕಾರ್ಯಕರ್ತರ ಮೇಲೆ ಮುಸ್ಲಿಂ ಮಹಿಳೆಯರು ಕಲ್ಲು ಎಸೆಯುತ್ತಿರುವ ವೀಡಿಯೋ ಒಂದು ವೈರಲ್ ಆಗಿತ್ತು. ಈ ವೈರಲ್ ಆಗಿರುವ ವೀಡಿಯೋ ಉಜ್ಜಯಿನಿ ನಗರದ್ದಾಗಿದ್ದು ಮುಸ್ಲಿಂ ಬಾಹುಳ್ಯದ ಬೇಗಂ ಭಾಗ್ ಎಂಬ ಬಡಾವಣೆಯಲ್ಲಿ ನಡೆದ ಈ ಘಟನೆಗೆ ದೇಶಾದ್ಯಂತ ಬಹಳಷ್ಟು ಖಂಡನೆ ವ್ಯಕ್ತವಾಗಿತ್ತು. ಏಕೆಂದರೆ ಶಾಂತವಾಗಿ ತೆರಳುತಿದ್ದ ಮೆರವಣಿಗೆಯ ಮೇಲೆ ಮಹಿಳೆಯರು ಕಲ್ಲು ಎಸೆಯುತ್ತಿರುವ ದೃಶ್ಯಾವಳಿ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಮುಸ್ಲಿಂ ಮಹಿಳೆಯರದೇ ತಪ್ಪು ಎಂದು ಕಂಡು ಬಂದರೂ ನೀವು ತಿಳಿಯದ ಸತ್ಯ ಬೇರೇಯೇ ಇದೆ.

ಕಳೆದ ಡಿಸೆಂಬರ್ 25 ರಂದು ಮಧ್ಯ ಪ್ರದೇಶದ ಉಜ್ಜಯಿನಿ ನಗರದ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶವಾದ ಬೇಗಂ ಭಾಗ್ ನಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸುತಿದ್ದರು. ಮಾಧ್ಯಮ ವರದಿಗಳ ಪ್ರಕಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದವರು ಪ್ರಚೋದನಾಕಾರಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮೂಹದ ಕೆಲವರು ಕಲ್ಲುಗಳನ್ನು ರ್ಯಾಲಿಯ ಮೇಲೆ ಎಸೆದಿದ್ದಾರೆ. ಇದಾದ ಮಾರನೇ ದಿನವೇ ಸ್ಥಳೀಯ ಆಡಳಿತವು ಅಕ್ರಮ ಕಟ್ಟಡ ನಿರ್ಮಿಸಿದ ಆರೋಪದಡಿಯಲ್ಲಿ ಒಂದು ಮನೆಯನ್ನು ಕೆಡವಿ ಹಾಕಿದೆ. ಮತ್ತು ಅದರ ಪಕ್ಕದ ಇನ್ನೊಂದು ಮನೆಯನ್ನೂ ಬಾಗಶಃ ಹಾನಿಗೊಳಿಸಿದೆ.

ವರದಿಗಳ ಪ್ರಕಾರ ಈ ರ‍್ಯಾಲಿಯಲ್ಲಿ 300 ಜನ ಕಾರ್ಯಕರ್ತರು ಮತ್ತು 60 ಬೈಕ್ ಗಳು ಪಾಲ್ಗೊಂಡಿದ್ದವು. ಸಂಜೆ 6.30 ಕ್ಕೆ ನಡೆಸಿದ ಈ ರ‍್ಯಾಲಿಯು ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡಲು ಆಯೋಜನೆ ಮಾಡಲಾಗಿತ್ತು. ಆದರೆ ರ್ಯಾಲಿಯಲ್ಲಿದ್ದ ಕಾರ್ಯಕರ್ತರು ರಾಮಮಂದಿರ ನಿರ್ಮಾಣದ ಸಂಬಂದ ಪ್ರಚೋದನಾಕಾರಿ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಉದ್ರಿಕ್ತರಾದ ಮುಸ್ಲಿಮರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಕಲ್ಲು ತೂರಾಟದಿಂದ 11 ಜನರು ಗಾಯಗೊಂಡಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದರ ಪರಿಣಾಮವಾಗಿ, ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಮೂರು ಜನರ ಮೇಲೆ ಗಲಭೆ ಮತ್ತು ಕೊಲೆ ಯತ್ನದ ಆರೋಪ ಹೊರಿಸಿದ್ದಾರೆ. ರ‍್ಯಾಲಿಯ ಒಂದು ದಿನದ ನಂತರ ಜಿಲ್ಲಾಡಳಿತವು ಈ ಪ್ರದೇಶದಲ್ಲಿ ಅಕ್ರಮ ಅತಿಕ್ರಮಣ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ಒಂದು ಮನೆಯನ್ನು ಪೂರ್ಣವಾಗಿ ಮತ್ತು ಇನ್ನೊಂದು ಮನೆಯನ್ನು ಬಾಗಶಃ ಕೆಡವಿ ಹಾಕಿದೆ.

ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಅಯೂಬ್ ಅವರು ಮಾಹಿತಿ ನೀಡಿದ್ದು “ಕಲ್ಲು ತೂರಾಟದ ವಿಡಿಯೋ ಆಧರಿಸಿ, ಮಹಿಳೆಯೊಬ್ಬರು ಕಲ್ಲು ತೂರಾಟ ನಡೆಸುತ್ತಿರುವ ಮನೆಯನ್ನು ನೆಲಸಮ ಮಾಡಲು ಅಧಿಕಾರಿಗಳು ಬಂದಿದ್ದರು. ಆದರೆ ಅದು ಹಿಂದೂ ಕುಟುಂಬದ ಒಡೆತನಕ್ಕೆ ಸೇರಿದೆ ಎಂದು ತಿಳಿದುಕೊಂಡು ನಂತರ ಅದರ ಪಕ್ಕದಲ್ಲಿದ್ದ ಇನ್ನೊಂದು ಮನೆಯನ್ನು ಕೆಡವಿ ಹಾಕಿದರು.

ಉಜ್ಜಯಿನಿ: BJYM ಮೆರವಣಿಗೆಯಿಂದಲೇ ಕೋಮು ಸಂಘರ್ಷ ಆರಂಭ!
ಕೋಮು ಘರ್ಷಣೆ ಬಳಿಕ ಅಭಿವೃದ್ಧಿ ಹೆಸರಿನಲ್ಲಿ ಮನೆಗಳನ್ನು ಒಡೆದ ಅಧಿಕಾರಿಗಳು

ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ ವ್ಯಕ್ತಿಗಳಲ್ಲಿ ಅಯಾಜ್ ಮೊಹಮ್ಮದ್, ವಾಸಿಮ್ ಅಸ್ಲಂ, ಶಾದಾಬ್ ಅಕ್ರಮ್ಮತ್ತು ಅಲ್ತು ಅಸ್ಲಾಮ್ ಸೇರಿದ್ದಾರೆ. ಇತರ ಮೂವರ ಮೇಲೆ ಕೊಲೆ ಯತ್ನ, ಗಲಭೆ, ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು ಮತ್ತು ಸುಳ್ಳು ಹೇಳಿಕೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಮೂವರಲ್ಲಿ ಇಬ್ಬರು ಮಹಿಳೆಯರಾಗಿದ್ದು ಅವರಲ್ಲಿ ಒರ್ವಳನ್ನು ಬಂಧಿಸಲಾಗಿದೆ, ಇನ್ನೊಬ್ಬರು ಪರಾರಿಯಾಗಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

ಈ ಪ್ರಕರಣದ ಕುರಿತು ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಕುಮಾರ್‌ ಶುಕ್ಲಾ ಅವರು ತಮ್ಮ ವರದಿಯಲ್ಲಿ “ಬೇಗಂ ಬಾಗ್ ಪ್ರದೇಶವು ಕೋಮು ಸೂಕ್ಷ್ಮವಾಗಿದೆ. ಮತ್ತು ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ ಆರೋಪಿಗಳು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದಾರೆ. ಪೊಲೀಸ್‌ ತನಿಖೆಯಲ್ಲಿ ವಸ್ತುನಿಷ್ಠವಾಗಿದ್ದು, ಎರಡೂ ಕಡೆಯಿಂದ ಎಫ್ಐಆರ್ ದಾಖಲಿಸಲಾಗಿದೆ. ಮೊದಲ ಎಫ್ಐಆರ್ ನಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಎರಡನೇ ಎಫ್ಐಆರ್ ಅಪರಿಚಿತ ವ್ಯಕ್ತಿಗಳ ವಿರುದ್ಧವಾಗಿದ್ದರೆ, ಮೂರನೇ ಎಫ್ಐಆರ್ನಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗಿದೆ.

ಆದರೆ ಬೇಗಂ ಬಾಗ್ ನಿವಾಸಿಗಳ ಪ್ರಕಾರ, ಈ ಪ್ರದೇಶವು ಹಗಲಿನಲ್ಲಿ ಅನೇಕ ಸಂದರ್ಭಗಳಲ್ಲಿ ರ‍್ಯಾಲಿಗೆ ಸಾಕ್ಷಿಯಾಗಿದೆ, ಮತ್ತು ರ‍್ಯಾಲಿಯಲ್ಲಿ ಬಿಜೆವೈಎಂ ಕಾರ್ಯಕರ್ತರು ಬರೀ ಘೋಷಣೆಗಳನ್ನು ಕೂಗುತ್ತಿರಲಿಲ್ಲ ಬದಲಿಗೆ ಸ್ಥಳೀಯರ ವಿರುದ್ದ ನಿಂದನೆಗಳನ್ನೂ ಮಾಡುತಿದ್ದರು. ಈ ಕುರಿತು ಮಾತನಾಡಿದ ಸ್ಥಳೀಯರಾದ ಸೆಹರ್ ಎ ಕಾಲಿಖುರ್ ರೆಹಮಾನ್‌ ಅವರು ಸ್ಥಳೀಯರನ್ನು ನಿಂದಿಸುತಿದ್ದುದು ಅವರನ್ನು ಕೆರಳಿಸಿತು. ಅವರು

ಕಲ್ಲು ಎಸೆದರು. ನಂತರ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವರೂ ಮನೆಗಳ ಮೇಲೆ ಕಲ್ಲು ಎಸೆದರು. ಇದು ಎರಡೂ ಕಡೆಯವರಿಗೆ ಹಾನಿ ಆಯಿತು. ಅನೇಕ ವಾಹನಗಳು ಕಟ್ಟಡಗಳು ಮತ್ತು ಕ್ಲಿನಿಕ್ ಒಂದು ಹಾನಿಗೀಡಾಯಿತು.

ಸ್ಥಳೀಯ ನಿವಾಸಿಯೂ ಆಗಿರುವ ಮೊಹಮ್ಮದ್ ಅಯೂಬ್, ಅವರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಯಾರೊಬ್ಬರನ್ನೂ ಪೊಲೀಸರು ಬಂಧಿಸಿಲ್ಲ, ನಾವು ಕಾರ್ಯಕರ್ತರು ಕಲ್ಲು ತೂರಾಟ ಮತ್ತು ವಾಹನಗಳನ್ನು ಹಾನಿಗೊಳಿಸಿದ ಕುರಿತು ಅನೇಕ ವೀಡಿಯೋ ದ್ರಶ್ಯಾವಳಿಗಳನ್ನೂ ಪೋಲೀಸರಿಗೆ ನೀಡಿದ್ದೇವೆ. ಆದರೆ ಈವರೆಗೆ ಬಂಧನವಾಗಿಲ್ಲ ಎಂದು ತಿಳಿಸಿದರು.

ಈ ಕುರಿತು ಮಾತನಾಡಿದ ಮತ್ತೊಬ್ಬ ನಿವಾಸಿ ಶಹರ್ ಖಾಜಿ ಖಲೀಕ್-ಉರ್-ರಹಮಾನ್, ಪೋಲೀಸ್ ಅಧಿಕಾರಿಗಳು ನ್ಯಾಯಯುತವಾಗಿ ವರ್ತಿಸಲಿಲ್ಲ, ಬಿಜೆವೈಎಂ ಕಾರ್ಯಕರ್ತರೇ ಮೊದಲು ಕಲ್ಲು ಎಸೆದವು ಎಂದು ಹೇಳಿದ್ದು ಇದಕ್ಕೆ ಸ್ಥಳೀಯರು ಪ್ರತೀಕಾರ ತೆಗೆದುಕೊಂಡರು ಎಂದು ತಿಳಿಸಿದರು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳು ಅಲ್ಪಸಂಖ್ಯಾತ ಸಮುದಾಯವನ್ನು ಭಯಭೀತಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಒಟ್ಟಿನಲ್ಲಿ ಈ ಘಟನೆಯು ಬಿಜೆಪಿ ರಾಜ್ಯ ಸರ್ಕಾರಗಳಿರುವ ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ ನೀಡುತ್ತಿರುವ ರಕ್ಷಣೆ ಬಗ್ಗೆ ಪ್ರಶ್ನೆಗಳನ್ನು ಎದ್ದಿವೆ. ಸರ್ಕಾರಗಳು ಇದನ್ನು ಗಂಭಿರವಾಗಿ ಪರಿಗಣಿಸಿ ಪ್ರಬುದ್ದತೆ ಮೆರೆಯಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com