ಜ. 31 ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಮುಂದೂಡಿಕೆ

ಲಾಕ್ ಡೌನ್ ಮುಗಿದ ಬಳಿಕ ನಿರ್ಬಂಧವನ್ನು ಸ್ವಲ್ಪಮಟ್ಟಿಗೆ ಸಡಿಲಿಸಲಾಗಿತ್ತು. ಕೆಲವು ರಾಷ್ಟ್ರಗಳಿಂದ ಪ್ರವಾಸಿಗರ ಪ್ರವೇಶವೂ ನಿರ್ಬಂಧಿಸಲಾಗಿತ್ತು. ಇದರೊಂದಿಗೆ, ಸೋಂಕು ಹೆಚ್ಚಿರುವ ದೇಶಗಳಲಿಗೆ ಭಾರತವು ವಿಮಾನ ಹಾರಾಟಕ್ಕೆ ನಿರ್ಬಂಧಗೊಳಿಸಿತ್ತು. ಮತ್ತೆ ಈ ನಿರ್ಬಂಧವನ್ನು ಜನವರಿ 31 ರವರೆಗೆ ಮುಂದೂಡಿದೆ.
ಜ. 31 ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಮುಂದೂಡಿಕೆ

ಕರೋನಾ ಹಾವಳಿಯಿಂದಾಗಿ ಅಂತರಾಷ್ಟ್ರೀಯ ವಿಮಾನ ಹಾರಾಟವು ರದ್ದಾಗಿತ್ತು. ಆದರೆ ಈಗ ರೂಪಾಂತರಿ ಕರೋನಾ ಸಮಸ್ಯೆ ಬಂದ ಕಾರಣದಿಂದ ಈ ನಿರ್ಬಂಧವು ಮತ್ತೆ ಮುಂದುವರೆಯಲಿದೆ.

ಲಾಕ್ ಡೌನ್ ಮುಗಿದ ಬಳಿಕ ನಿರ್ಬಂಧವನ್ನು ಸ್ವಲ್ಪಮಟ್ಟಿಗೆ ಸಡಿಲಿಸಲಾಗಿತ್ತು. ಕೆಲವು ರಾಷ್ಟ್ರಗಳಿಂದ ಪ್ರವಾಸಿಗರ ಪ್ರವೇಶವೂ ನಿರ್ಬಂಧಿಸಲಾಗಿತ್ತು. ಇದರೊಂದಿಗೆ, ಸೋಂಕು ಹೆಚ್ಚಿರುವ ದೇಶಗಳಲಿಗೆ ಭಾರತವು ವಿಮಾನ ಹಾರಾಟಕ್ಕೆ ನಿರ್ಬಂಧಗೊಳಿಸಿತ್ತು. ಮತ್ತೆ ಈ ನಿರ್ಬಂಧವನ್ನು ಜನವರಿ 31 ರವರೆಗೆ ಮುಂದೂಡಿದೆ.

ಇದೀಗ ರೂಪಾಂತರಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಅಂತರಾಷ್ಟ್ರೀಯ ವಿಮಾನ ಹಾರಾಟವು ಮತ್ತೆ ಸ್ಥಗಿತಗೊಂಡಿದೆ. ಬ್ರಿಟನ್‌ನಲ್ಲಿ ರೂಪಾಂತರ ಕರೋನಾ ಹಾವಳಿ ಹೆಚ್ಚಾಗಿದ್ದು, ಬ್ರಿಟನ್ನಿಂದ ಭಾರತಕ್ಕೆ ಬಂದವರಲ್ಲಿಯೂ ರೂಪಾಂತರಿ ಕರೋನಾ ಲಕ್ಷಣಗಳು ಕಂಡುಬಂದಿದ್ದರಿಂದ ಕೇಂದ್ರ ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಈಗಾಗಲೆ ಯುಕೆ ಯಿಂದ ಬ್ರಿಟನ್‌ಗೆ ಡಿಸೆಂಬರ್‌ 30 ರಿಂದ ಡಿಸೆಂಬರ್‌ 31 ರವರೆಗೆ ತಾತ್ಕಾಲಿಕವಾಗಿ ವಿಮಾನಯಾನ ರದ್ದುಗೊಳಿಸಿದ್ದನ್ನು ಜನವರಿ7 ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲೆ ನಾಗರೀಕ ವಿಮಾನಯಾನ ನಿರ್ದೇಶನಾಲಯ (ಡಿಜೆಸಿಎ) ಕೆಲವೊಂದು ದೇಶಗಳಿಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧವನ್ನು ಜನವರಿ 31 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ ಎಂದಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com