ಫಿಜರ್ ಲಸಿಕೆ ಪಡೆದ ಮೇಲ್ ನರ್ಸ್ ಗೆ ಕೋವಿಡ್ ಸೋಂಕು ದೃಢ!

ಕೋವಿಡ್-19 ಲಸಿಕೆ ಪಡೆದ ಬಳಿಕವೂ ಸೋಂಕಿತರಾಗಿರುವ ಸುದ್ದಿ ವೈರಲ್ ಆಗಿದ್ದು, ಭಾರೀ ಭರವಸೆಯೊಂದಿಗೆ ಬ್ರಿಟನ್ ನಲ್ಲಿ ಡಿಸೆಂಬರ್ ಮೊದಲ ವಾರದ ಹೊತ್ತಿಗೆ ಜನಬಳಕೆಗೆ ಬಂದಿದ್ದ ಫಿಜರ್ ಲಸಿಕೆಯ ಕುರಿತು ವ್ಯಾಪಕ ಚರ್ಚೆ ಆರಂಭವಾಗಿದೆ.
ಫಿಜರ್ ಲಸಿಕೆ ಪಡೆದ ಮೇಲ್ ನರ್ಸ್ ಗೆ ಕೋವಿಡ್ ಸೋಂಕು ದೃಢ!

ಡಿಸೆಂಬರ್ ಹೊತ್ತಿಗೆ ಲಸಿಕೆ ಬಳಕೆಗೆ ಬರುತ್ತಿದ್ದಂತೆ, ಬಹುತೇಕ ಒಂದು ವರ್ಷದಿಂದ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದ ಕರೋನಾ ವೈರಸ್ ಗೆ ಅಂತೂ ಒಂದು ಪರಿಹಾರ ಸಿಕ್ಕಿತು ಎಂದು ಎಲ್ಲರೂ ನಿರಾಳರಾಗಿದ್ದರು. ಇನ್ನು ಜೀವಭಯದಿಂದ ಮುಕ್ತರಾಗಬಹುದು ಎಂದು ಜನ ಭಾವಿಸಿದ್ದರು.

ಆದರೆ, ಈ ನಡುವೆ ದಿಢೀರನೇ ಬ್ರಿಟನ್ ನಲ್ಲಿ ಕರೋನಾದ ರೂಪಾಂತರಿ ಅವತಾರ ಸುದ್ದಿಯಾಯಿತು. ಆ ಆಘಾತದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದ್ದು, ಭಾರೀ ಭರವಸೆ ಹುಟ್ಟಿಸಿದ್ದ ಫಿಜರ್ ಲಸಿಕೆ ಪಡೆದುಕೊಂಡಿದ್ದ ಕ್ಯಾಲಿಫೋರ್ನಿಯಾದ ಪುರುಷ ಆರೋಗ್ಯ ಸಹಾಯಕರೊಬ್ಬರು ಕೋವಿಡ್ ಸೋಂಕಿತರಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಎರಡು ಸ್ಥಳೀಯ ಖಾಸಗೀ ಆಸ್ಪತ್ರೆಗಳಲ್ಲಿ ಆರೋಗ್ಯ ಸಹಾಯಕರಾಗಿ ಕೆಲಸ ಮಾಡುತ್ತಿರುವ 45 ವರ್ಷದ ಮಾಥ್ಯು ಎಂಬುವರು, ತಾವು ಫಿಜರ್ ಲಸಿಕೆ ತೆಗೆದುಕೊಂಡ ವಾರದ ಬಳಿಕ ತಮಗೆ ಕರೋನಾ ಸೋಂಕಿನ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಆ ಹಿನ್ನೆಲೆಯಲ್ಲಿ ಕ್ರಿಸ್ ಮಸ್ ಮಾರನೇ ದಿನ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಇದೀಗ ವರದಿ ಪಾಸಿಟಿವ್ ಬಂದಿದೆ ಎಂದು ಬಹಿರಂಗಪಡಿಸಿರುವುದಾಗಿ ಎಬಿಸಿ ನ್ಯೂಸ್ ಮಾಧ್ಯಮ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಡಿಸೆಂಬರ್ 18ರಂದು ತಾನು ಫಿಜರ್ ಲಸಿಕೆ ತೆಗೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಬಳಿಕ ಕ್ರಿಸ್ ಮಸ್ ಕಳೆದ ಆರು ದಿನದಲ್ಲಿ ತಮಗೆ ಕೋವಿಡ್ ಆಸ್ಪತ್ರೆಯ ಕರ್ತವ್ಯದ ಮೇಲಿರುವಾಗ ಚಳಿ- ಮೈಕೈ ನೋವು ಕಾಣಿಸಿಕೊಂಡಿತು. ಆ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ಇದೀಗ ದೃಢಪಡಿಸಿದ್ದಾರೆ ಎಂದು ವರದಿ ಹೇಳಿದೆ.

ಈ ಆಘಾತಕಾರಿ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಯಾನ್ ಡಿಯೋದ ಆರೋಗ್ಯ ಕೇಂದ್ರದ ಸಾಂಕ್ರಾಮಿಕ ರೋಗ ತಜ್ಞ ಕ್ರಿಶ್ಚಿಯನ್ ರೇಮರ್ಸ್, ಇಂತಹ ಬೆಳವಣಿಗೆ ನಮಗೆ ಅನಿರೀಕ್ಷಿತವೇನಲ್ಲ. ಏಕೆಂದರೆ ವೈರಾಣು ವಿರುದ್ಧ ನಿರೋಧಕ ಶಕ್ತಿ ವೃದ್ಧಿಯಾಗಲು 10-14 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಆ ಮುಂಚೆ ವೈರಾಣು ಸಂಪರ್ಕಕ್ಕೆ ಬಂದಲ್ಲಿ ಸೋಂಕಿತರಾಗುವ ಸಾಧ್ಯತೆ ಇದೆ ಎಂಬುದು ಲಸಿಕೆಯ ಪರೀಕ್ಷಾರ್ಥ ಪ್ರಯೋಗದಲ್ಲೇ ದೃಢಪಟ್ಟಿತ್ತು. ಅಲ್ಲದೆ ಮೊದಲ ಡೋಸ್ ವ್ಯಕ್ತಿಗೆ ಕೇವಲ ಶೇ.50ರಷ್ಟು ಮಾತ್ರ ಕೋವಿಡ್ ವೈರಾಣು ನಿರೋಧಕತೆ ಬೆಳೆಸುತ್ತದೆ. ಕನಿಷ್ಟ ಶೇ.95ರಷ್ಟು ನಿರೋಧಕತೆ ಬೇಕೆಂದರೆ ಎರಡನೇ ಡೋಸ್ ತೆಗೆದುಕೊಳ್ಳುವುದು ಅನಿವಾರ್ಯ” ಎಂದು ಹೇಳಿದ್ದಾರೆ.

ಸಹಜವಾಗೇ ಕೋವಿಡ್-19 ಲಸಿಕೆ ಪಡೆದ ಬಳಿಕವೂ ಸೋಂಕಿತರಾಗಿರುವ ಸುದ್ದಿ ವೈರಲ್ ಆಗಿದ್ದು, ಭಾರೀ ಭರವಸೆಯೊಂದಿಗೆ ಬ್ರಿಟನ್ ನಲ್ಲಿ ಡಿಸೆಂಬರ್ ಮೊದಲ ವಾರದ ಹೊತ್ತಿಗೆ ಜನಬಳಕೆಗೆ ಬಂದಿದ್ದ ಫಿಜರ್ ಲಸಿಕೆಯ ಕುರಿತು ವ್ಯಾಪಕ ಚರ್ಚೆ ಆರಂಭವಾಗಿದೆ. ಜೊತೆಗೆ ಅದೇ ಬ್ರಿಟನ್ ನಲ್ಲಿಯೇ ಕರೋನಾದ ರೂಪಾಂತರಿ ವೈರಾಣು ಹಲವರ ಜೀವ ಬಲಿತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನಿಜಕ್ಕೂ ಕರೋನಾಕ್ಕೆ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲವೆ? ಅಥವಾ ಮಾಸ್ಕ್, ದೈಹಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆಯೇ ಅಂತಿಮವಾಗಿ ಜೀವ ರಕ್ಷಣೆಗೆ ಉಳಿದಿರುವ ಅನಿವಾರ್ಯ ಆಯ್ಕೆಯೇ ಎಂಬ ಪ್ರಶ್ನೆಗಳು ಎದ್ದಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com