2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು

ಕೇಂದ್ರ ಸರ್ಕಾರವು 2020 ರ ಬಿಕ್ಕಟ್ಟನ್ನು ದುರುಪಯೋಗಿಸಿತು. ಬೇರೆ ಸಮಯದಲ್ಲಿ ಸುಲಭದಲ್ಲಿ ಜಾರಿಗೆ ತರಲು ಸಾಧ್ಯವಿಲ್ಲದ ಕಾನೂನುಗಳನ್ನು ಈ ಬಿಕ್ಕಟ್ಟಿನ ಸಂಧರ್ಭದಲ್ಲಿ ಜಾರಿಗೆ ತಂದಿದೆ.
2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು

ಹೆಚ್ಚುತ್ತಿರುವ COVID-19 ಪ್ರಕರಣಗಳ ನಡುವೆ ನಡೆದ 7 ದಿನಗಳ 2020 ರ ಮಾನ್ಸೂನ್ ಅಧಿವೇಶನದಲ್ಲಿ 22 ಮಸೂದೆಗಳನ್ನು (ಲೋಕಸಭೆಯಲ್ಲಿ 16 ಮತ್ತು ರಾಜ್ಯಸಭೆಯಲ್ಲಿ 06) ಸಂಸತ್ತಿನಲ್ಲಿ ಪರಿಚಯಿಸಲಾಯಿತು. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತ್ಯೇಕವಾಗಿ ತಲಾ 25 ಮಸೂದೆಗಳು ಅಂಗೀಕಾರವಾಗಿವೆ. ಒಟ್ಟು 27 ಮಸೂದೆಗಳು ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲಿಯೂ ಅಂಗೀಕಾರವಾಗಿವೆ.

ಈ ಅಂಕಿಅಂಶಗಳ ಪ್ರಕಾರ, ಸದನ ನಡೆದ ದಿನಗಳನ್ನು ಲೆಕ್ಕ ಹಾಕಿದರೆ ಪ್ರತೀ ದಿನಕ್ಕೆ ಸರಾರಸರಿ 2.7 ಮಸೂದೆಗಳು ಅಂಗೀಕಾರವಾಗಿವೆ. ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಇರುವಂತಹ ಬಹುಮತದಿಂದ ಸರ್ಕಾರವು ಯಾವುದೇ ಉನ್ನತ ಮಟ್ಟದ ಚರ್ಚೆಯನ್ನು ನಡೆಸದೇ ಇರುವುದು ಕೂಡಾ ಈ ಬೆಳವಣಿಗೆಗೆ ಕಾರಣವಾಗಿದೆ ಎಂಧು ಅಂದಾಜಿಸಬಹುದು.ಈ ಅಧಿವೇಶನದಲ್ಲಿ ಸಂಸತ್ತು ಅಂಗೀಕರಿಸಿದ 25 ಮಸೂದೆಗಳಲ್ಲಿ ಪ್ರಮುಖ 6 ಮಸೂದೆಗಳ ವಿವರ ಇಲ್ಲಿದೆ.

1) ಖನಿಜ ಕಾನೂನುಗಳು (ತಿದ್ದುಪಡಿ) ಮಸೂದೆ, 2020

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ 2020 ರ ಖನಿಜ ಕಾನೂನು (ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆಯು ಸೆಪ್ಟೆಂಬರ್ 2020 ರಲ್ಲಿ ಅಂಗೀಕರಿಸಿತು. ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ತಿದ್ದುಪಡಿ ತರಲಾಯಿತು.

ಈ ಮಸೂದೆ ಕಲ್ಲಿದ್ದಲು / ಖನಿಜ ಗಣಿಗಾರಿಕೆಯಲ್ಲಿ ಯಾವುದೇ ಪೂರ್ವ ಅನುಭವವಿಲ್ಲದ ಕಂಪನಿಗಳಿಗೆ ಭಾರತದಲ್ಲಿ ಗಣಿಗಳಿಗೆ ಬಿಡ್ ಮಾಡಲು ಅವಕಾಶ ನೀಡುತ್ತದೆ. ಇದು ಮಾತ್ರವಲ್ಲದೆ, ಈ ತಿದ್ದುಪಡಿಯು ಯಶಸ್ವಿ ಬಿಡ್ದಾರರಿಗೆ ತಮ್ಮ ಅನುಮತಿ ಮತ್ತು ಪರವಾನಗಿಗಳನ್ನು ನವೀಕರಿಸದೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.

2) ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆ, 2020

ಜಿಎಸ್ಟಿ ಮತ್ತು ಐಟಿ ಕಾಯ್ದೆಯ ಪ್ರಕಾರ ಗಡುವನ್ನು ಮುಂದೂಡುವ ಮೂಲಕ ತೆರಿಗೆದಾರರ ಹೊರೆ ಕಡಿಮೆಗೊಳಿಸುವ ಉದ್ದೇಶದಿಂದ ಮಾರ್ಚ್ 2020 ರಲ್ಲಿ ತೆರಿಗೆ ಸುಗ್ರೀವಾಜ್ಞೆ ತರಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಸಂಸತ್ತಿಗೆ ತರಲಾದ ಮೊದಲ ಸುಗ್ರೀವಾಜ್ಞೆಗಳಲ್ಲಿ ಈ ಸುಗ್ರೀವಾಜ್ಞೆಗೆ ಸಂಬಂಧಿಸಿದೆ. 2019-20ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31, 2020 ರಿಂದ ನವೆಂಬರ್ 30, 2020 ಕ್ಕೆ ವಿಸ್ತರಿಸಲಾಯಿತು. ಇದಲ್ಲದೆ, ಮಸೂದೆಯು PM CARES ನಿಧಿಗೆ ನೀಡಿದ ಯಾವುದೇ ದೇಣಿಗೆಗೆ 100% ತೆರಿಗೆ ವಿನಾಯಿತಿ ನೀಡಿತು.

2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ಜನರ ಸಾವಿರಾರು ಕೋಟಿ ತೆರಿಗೆ ಹಣ ಪಡೆದೂ ತಿರುಪತಿ ಹುಂಡಿಯಾಯ್ತೆ ಪಿಎಂ ಕೇರ್ಸ್?
2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ನಿಗೂಢವಾಗಿಯೇ ಉಳಿದಿರುವ ಪಿಎಂ ಕೇರ್ಸ್ ಫಂಡ್ ಲೆಕ್ಕ!

ಈ ಮಸೂದೆ ಮೂಲಕ ಲಾಕ್‌ಡೌನ್ ಮಧ್ಯೆ ತೆರಿಗೆ ಪಾವತಿ ಅವಧಿ ವಿಸ್ತರಣೆಯು ತೆರಿಗೆ ಪಾವತಿದಾರರಿಗೆ ಸಹಾಯ ಮಾಡಿದರೂ, PM CARES ವಿನಾಯಿತಿ ಅನೇಕ ಗುಮಾನಿಗಳನ್ನು ಹೆಚ್ಚಿಸಿತು. PM CARES ಸಾರ್ವಜನಿಕ ಪ್ರಾಧಿಕಾರವಲ್ಲ, ಆದ್ದರಿಂದ, ದಾನ ಮಾಡಿದ ಒಟ್ಟು ಮೊತ್ತವನ್ನು ಅಥವಾ ದೇಣಿಗೆಯನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ನಾಗರಿಕರಿಗೆ ಬಹಿರಂಗಪಡಿಸಲು ಯಾವುದೇ ಮಾರ್ಗಗಳಿಲ್ಲ. ಅದಾಗ್ಯೂ, PM CARES ಗೆ ದೇಣಿಗೆ ನೀಡುವುದನ್ನು ಉತ್ತೇಜಿಸಲು ತೆರಿಗೆ ವಿನಾಯಿತಿ ಘೋಷಿಸಿದರ ಹಿಂದಿರುವ ಷಡ್ಯಂತ್ರವೇನು ಎಂಬುದರ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಸಾಕಷ್ಟು ಪ್ರಶ್ನೆಗಳೆದ್ದಿತು.

2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
“ಪಿಎಂ- ಕೇರ್ಸ್” ದೇಣಿಗೆ ಗೌಪ್ಯತೆ; ಪ್ರಧಾನಿ ನರೇಂದ್ರ ಮೋದಿಗೆ ನೈತಿಕ ಸೋಲು!

3) ಕಾರ್ಮಿಕ ಕಾನೂನುಗಳ ತಿದ್ದುಪಡಿ

ಕೈಗಾರಿಕಾ ಸಂಬಂಧ ಸಂಹಿತೆ-2020, ಸಾಮಾಜಿಕ ಭದ್ರತೆ ಸಂಹಿತೆ-2020, ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ-2020 ಎಂಬ ಕಾರ್ಮಿಕ ವಲಯಕ್ಕೆ ಸಂಬಂಧಿಸಿದಂತಹ ಮೂರು ಮಸೂದೆಗಳನ್ನು ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿತು.

ಕೈಗಾರಿಕಾ ಸಂಬಂಧ ಸಂಹಿತೆ-2020 ಪ್ರಕಾರ 300 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಕಂಪನಿಗಳಿಗೆ ಸರ್ಕಾರದ ಪೂರ್ವ ಅನುಮತಿ ಪಡೆಯದೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಮತ್ತು ಕೆಲಸದಿಂದ ತೆಗೆದುಹಾಕಲು ಶೀಘ್ರದಲ್ಲೇ ಅವಕಾಶ ನೀಡಲಾಗಿತ್ತು. ಈ ತಿದ್ದುಪಡಿಗಳು ಕಾರ್ಮಿಕರ ಹಕ್ಕನ್ನು ಚ್ಯುತಿಗೊಳಿಸುತ್ತದೆ. ಇದನ್ನು ಹಿಂಪಡೆಯಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆ.

2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ರೈತ ವಿರೋಧಿ ಮಸೂದೆಗಳ ಬಳಿಕ ಕಾರ್ಮಿಕ ವಿರೋಧಿ ಮಸೂದೆ ಮಂಡಿಸಿದ ಸರ್ಕಾರ
2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?
2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿರುವುದು ಆಘಾತ ತಂದಿದೆ- ಅಝೀಂ ಪ್ರೇಮ್‌ಜಿ

4) ಮೂರು ಕೃಷಿ ಕಾನೂನು


ಕೇಂದ್ರ ಸರ್ಕಾರ ತಂದ ಮೂರು ಕೃಷಿ ಕಾನೂನು ಸ್ವಾತಂತ್ರೋತ್ತರ ಭಾರತ ಕಂಡ ದೊಡ್ಡ ಪ್ರತಿಭಟನೆಗಳಿಗೆ ನಾಂದಿಯಾಯಿತು. ಪ್ರಸ್ತುತ ದೆಹಲಿಯ ಅತ್ಯಂತ ಚಳಿಯನ್ನೂ ಲೆಕ್ಕಿಸದೆ ಲಕ್ಷಾಂತರ ರೈತರು ಈ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

  • “ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020”

  • “ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆ, 2020” ಇದನ್ನು“ಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯ” ಸುಗ್ರೀವಾಜ್ಞೆ ಎಂದು ಭಾವಿಸಬಹುದು.

  • “ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ, 2020” ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯಾಗಿ ಪರಿಗಣಿಸಲಾಗಿದೆ.

ಈ ಕೃಷಿ ಮಸೂದೆಗಳು ಬಂಡವಾಳಶಾಹಿಗಳ ಪರ ಇದೆ, ರೈತ ವಿರೋಧಿಯಾಗಿವೆ ಎಂದು ರೈತ ಸಂಘಟನೆಗಳು ಸತತವಾಗಿ ಪ್ರತಿಭಟನೆ ನಡೆಸುತ್ತಿವೆ.

2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?
2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ವಿಧೇಯಕಗಳ ಮರು ಸುಗ್ರೀವಾಜ್ಞೆ ಸಂವಿಧಾನ ವಿರೋಧಿ – ರೈತ ಸಂಘಟನೆಗಳ ಒಕ್ಕೂಟ
2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಕಾನೂನು ತರಲು ಸನ್ನದ್ದಗೊಂಡ ರಾಜಸ್ತಾನ, ಛತ್ತೀಸ್ಗಡ
2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ವಿವಾದಿತ ಮೂರು ಕೃಷಿ ಮಸೂದೆ: ರಾಜ್ಯಸಭೆಯ ಬಲಾಬಲದ ಲೆಕ್ಕಾಚಾರವೇನು?
2020 ರಲ್ಲಿ ಅಂಗೀಕರಿಸಲ್ಪಟ್ಟ ಆರು ನಿರ್ಣಾಯಕ ಮಸೂದೆಗಳು
ಕೃಷಿ ಮಸೂದೆ: ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳುವಂತೆ ಜೆಜೆಪಿ ಮೇಲೆ ಒತ್ತಡ

5) ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಮಸೂದೆ, 2019

ಲೋಕಸಭೆಯಲ್ಲಿ 2019 ರಲ್ಲಿ ಅಂಗೀಕರಿಸಲ್ಪಟ್ಟ ಈ ಮಸೂದೆ ರಾಜ್ಯಸಭೆಯಲ್ಲಿ ಮಾತ್ರ ಮಾರ್ಚ್ 2020 ರಲ್ಲಿ ಅಂಗೀಕರಿಸಲ್ಪಟ್ಟಿತು. ವೈದ್ಯಕೀಯ ಕೇಂದ್ರ ಮಂಡಳಿ ಕಾಯ್ದೆ, 1970 ಕಾಯ್ದೆಯನ್ನು ಬದಲಾಯಿಸಲು ಈ ಕಾಯ್ದೆಯನ್ನು ತರಲಾಗಿತ್ತು. ಈ ಕಾಯ್ದೆಯ ಪ್ರಕಾರ, ಭಾರತೀಯ ವೈದ್ಯಕೀಯ ವ್ಯವಸ್ಥೆ ಹಾಗೂ ಆರೋಗ್ಯ ಕಾರ್ಯಕರ್ತರ ಅಗತ್ಯತೆಗಳನ್ನು ಪರಿಶೀಲಿಸಲು ಹೊಸ ಆಯೋಗವನ್ನು ರೂಪಿಸುವ ಯೋಜನೆಯಿತ್ತು.

ಆದರೆ, ಈ ಮಸೂದೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಸೇರಿಸದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲದೇ, ಈ ಮಸೂದೆಯೂ ದೂರದೃಷ್ಟಿತ್ವದಿಂದ ಕೂಡಿಲ್ಲ ಎಂಬ ಅಪವಾದವೂ ಕೇಳಿ ಬಂದಿತ್ತು.

6) ಪ್ರಮುಖ ಬಂದರು ಪ್ರಾಧಿಕಾರದ ಮಸೂದೆ, 2020

ಖಾಸಗೀಕರಣದತ್ತ ಮತ್ತೊಂದು ಹೆಜ್ಜೆಯಲ್ಲಿ, ಕೇಂದ್ರವು 2020 ರ ಸೆಪ್ಟೆಂಬರ್‌ನಲ್ಲಿ ಪ್ರಮುಖ ಬಂದರು ಪ್ರಾಧಿಕಾರದ ಮಸೂದೆಯನ್ನು ಅಂಗೀಕರಿಸಿತು. ಇದರ ಪ್ರಕಾರ ಬಂದರು ಕಾರ್ಯಾಚರಣೆಯಲ್ಲಿ ವೃತ್ತಿಪರತೆಯನ್ನು ತರಲು ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಗೆ ಕೊಂಡೊಯ್ಯಲು ಭಾರತದ ಎಲ್ಲಾ 12 ಪ್ರಮುಖ ಬಂದರುಗಳ ಮೂಲಸೌಕರ್ಯವನ್ನು ಖಾಸಗಿ ನಿರ್ವಾಹಕರಿಗೆ ಗುತ್ತಿಗೆ ನೀಡಲಾಗುವುದು.

ಕೇಂದ್ರ ಸರ್ಕಾರವು 2020 ರ ಬಿಕ್ಕಟ್ಟನ್ನು ದುರುಪಯೋಗಿಸಿತು. ಬೇರೆ ಸಮಯದಲ್ಲಿ ಸುಲಭದಲ್ಲಿ ಜಾರಿಗೆ ತರಲು ಸಾಧ್ಯವಿಲ್ಲದ ಕಾನೂನುಗಳನ್ನು ಈ ಬಿಕ್ಕಟ್ಟಿನ ಸಂಧರ್ಭದಲ್ಲಿ ಜಾರಿಗೆ ತಂದಿದೆ. ಇದೀಗ ಚಳಿಗಾಲದ ಅಧಿವೇಶನವನ್ನೂ ರದ್ದುಪಡಿಸುವುದಾಗಿ ಸರ್ಕಾರ ಘೋಷಿಸಿದೆ. ಒಟ್ಟಾರೆ 2020 ಭಾರತದ ಪ್ರಜಾಪ್ರಭುತ್ವಕ್ಕೂ‌ ಸಾಕಷ್ಟು ಹಾನಿಯಾದ ವರ್ಷ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com