ಬ್ರಿಟನ್ನಲ್ಲಿ ಹೊಸ ರೀತಿಯ ರೂಪಾಂತರ ಕರೋನಾ ವೈರಸ್ ಕಂಡುಬಂದ ಹಿನ್ನಲೆ, ವಿಶ್ವದೆಲೆಡೆ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ಈಗಾಗಲೆ ಭಾರತ ಮತ್ತು ಬ್ರಿಟನ್ ನಡುವಿನ ವಿಮಾನ ಹಾರಾಟವನ್ನು ಡಿ23 ರಿಂದ ಡಿ31 ರವರೆಗೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಜ.7 2021 ರವರೆಗೆ ಈ ನಿಷೇಧವನ್ನು ವಿಸ್ತರಿಸಲಾಗಿದೆ.
ಯುಕೆ ಗೆ ವಿಮಾನಯಾನವನ್ನು ತಾತ್ಕಾಲಿಕವಾಗಿ ಡಿ. 31 ರವರೆಗೆ ರದ್ದು ಮಾಡಲಾಗಿತ್ತು. ಇದೀಗ ಮತ್ತೆ ಜ 7 ರವರೆಗೆ ಮುಂದೂಡಲಾಗಿದೆ. ಮತ್ತೆ ಪುನರಾರಂಭದ ಬಗ್ಗೆ ಚರ್ಚೆ ನಡೆಸಿ ಶೀಘ್ರದಲ್ಲಿ ಮಾಹಿತಿ ತಿಳಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎಸ್ಎಆರ್ಎಸ್ ಕೋವಿಡ್-2 ಪರೀಕ್ಷೆ ನಡೆಸಿದ ವೇಳೆ ಯುಕೆ ಯಿಂದ ಭಾರತಕ್ಕೆ ಮರಳಿರುವವರಲ್ಲಿ 20 ಮಂದಿಗೆ ಹೊಸ ಪ್ರಬೇಧದ ಕರೋನಾ ಪಾಸಿಟಿವ್ ವರದಿ ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಂಗಳವಾರದ ವರದಿಯಲ್ಲಿ ಮತ್ತೆ 6 ಜನಕ್ಕೆ ಪಾಸಿಟಿವ್ ವರದಿ ಬಂದಿದ್ದು, ಸೋಂಕಿತರನ್ನು ಪ್ರತ್ಯೇಕ ಐಸುಲೇ಼ಷನ್ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟನ್ನಲ್ಲಿರಿಸಲು ಆಯಾ ರಾಜ್ಯಸರ್ಕಾರಗಳಿಗೆ ಸೂಚಿಸಲಾಗಿದೆ.
ಯುಕೆ ಮತ್ತು ಇತರೆ ದೇಶಗಳಿಂದ ಬಂದವರ ಕುಟುಂಬದವರ ಮಾಹಿತಿ, ಟ್ರಾವೆಲಿಂಗ್ ಇಸ್ಟ್ರಿ ಕಲೆ ಹಾಕಲಾಗುತ್ತಿದೆ. ತಜ್ಞರ ಸೂಕ್ತ ಸಲಹೆಗಳ ಮೇರೆಗೆ ತನಿಖೆ ಪರೀಕ್ಷೆಗಳು ನಡೆಯುತ್ತಿದ್ದು, ಎಲ್ಲಾ ರಾಜ್ಯಗಳಿಗೂ ಈ ಬಗ್ಗೆ ಸೂಕ್ತ ಸಲಹೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಶೇಕಡಾ 70 ಕಿಂತಲೂ ಹೆಚ್ಚು ವೇಗದಲ್ಲಿ ಹರಡುವ ಹೊಸ ಪ್ರಬೇಧದ ಕರೋನಾ ವೈರಸ್ ಡೆನ್ಮಾರ್ಕ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಸ್ವಿಡನ್, ಪ್ರಾನ್ಸ್, ಸ್ವಿಡ್ಜರ್ಲ್ಯಾಂಡ್, ಜರ್ಮನಿ, ಕೆನಡಾ, ಜಪಾನ್, ಸಿಂಗಪುರ್ ಸೇರಿದಂತೆ ಇತರೆ ದೇಶಗಳಲ್ಲಿಯೂ ವರದಿಯಾಗಿದೆ.
ನ25 ರಿಂದ ಡಿ23 ರವರೆಗೆ ಯುಕೆ ಯಿಂದ ಭಾರತಕ್ಕೆ 33.000 ಜನ ವಿಮಾನ ಪ್ರಯಾಣಿಕರು ಬಂದಿದ್ದಾರೆ. ಇವರಿಗೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ