ಲವ್ ಜಿಹಾದ್ ಕಾನೂನಿಗೆ ಒಂದು ತಿಂಗಳಾಗುವಾಗ 35 ಮಂದಿಯನ್ನು ಬಂಧಿಸಿದ ಉ.ಪ್ರ ಪೊಲೀಸರು

ಎತಾಹ್‌ನಿಂದ ಎಂಟು ಮಂದಿಯನ್ನು, ಸಿತಾಪುರ್‌ನಿಂದ ಏಳು ಮಂದಿಯನ್ನು, ಗ್ರೇಟರ್ ನೊಯ್ಡಾದಿಂದ ಎಂಟು ಮಂದಿಯನ್ನು, ಶಹಜಾನ್‌ಪುರ್ ಮತ್ತು ಆಝಂಗರ್‌ನಿಂದ ತಲಾ ಮೂವರನ್ನು, ಮೊರಾದಾಬಾದ್, ಮುಜಾಫರ್ ನಗರ್, ಬಿಂಜೋರ್ ಮತ್ತು ಕನ್ನೌಜ್‌ನಿಂದ ತಲಾ ಇಬ್ಬರನ್ನು ಮತ್ತು ಬರೇಲಿ ಮತ್ತು ಹರ್ದೋಯ್‌ನಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ.
ಲವ್ ಜಿಹಾದ್ ಕಾನೂನಿಗೆ ಒಂದು ತಿಂಗಳಾಗುವಾಗ 35 ಮಂದಿಯನ್ನು ಬಂಧಿಸಿದ ಉ.ಪ್ರ ಪೊಲೀಸರು

ಅಸ್ತಿತ್ವದಲ್ಲೇ ಇಲ್ಲದ 'ಲವ್ ಜಿಹಾದ್'ಗೆ ಕಾನೂನು ರೂಪಿಸಿದ ಮೊದಲ ರಾಜ್ಯ ಉತ್ತರ ಪ್ರದೇಶ. ನವೆಂಬರ್ 27ರಂದು ಕಾನೂನಾದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಒಂದು ತಿಂಗಳಾಯ್ತು. ಈ ಒಂದು ತಿಂಗಳ ಸಮಯದಲ್ಲಿ ಉತ್ತರ ಪ್ರದೇಶದ ಪೊಲೀಸರು 35 ಮಂದಿಯನ್ನು ಬಂಧಿಸಿದ್ದು ವಿವಿಧ ಠಾಣೆಗಳಲ್ಲಿ ಒಂದು ಡಝನ್‌ನಷ್ಟು ಎಫ್.ಐ.ಆರ್‌ಗಳು ದಾಖಲಾಗಿವೆ.

ಎತಾಹ್‌ನಿಂದ ಎಂಟು ಮಂದಿಯನ್ನು, ಸಿತಾಪುರ್‌ನಿಂದ ಏಳು ಮಂದಿಯನ್ನು, ಗ್ರೇಟರ್ ನೊಯ್ಡಾದಿಂದ ಎಂಟು ಮಂದಿಯನ್ನು, ಶಹಜಾನ್‌ಪುರ್ ಮತ್ತು ಆಝಂಗರ್‌ನಿಂದ ತಲಾ ಮೂವರನ್ನು, ಮೊರಾದಾಬಾದ್, ಮುಜಾಫರ್ ನಗರ್, ಬಿಂಜೋರ್ ಮತ್ತು ಕನ್ನೌಜ್‌ನಿಂದ ತಲಾ ಇಬ್ಬರನ್ನು ಮತ್ತು ಬರೇಲಿ ಮತ್ತು ಹರ್ದೋಯ್‌ನಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ.


ಕಾಯ್ದೆ ಜಾರಿಗೆ ಬಂದ ಮರುದಿನವೇ ಬರೇಲಿಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಶರೀಫ್ ನಗರದ 20 ವರ್ಷದ ಹುಡುಗಿಯ ತಂದೆ ತಿಕಾರಾಮ್ ರಾಥೋರ್ ಎಂಬವರು ದೂರು ದಾಖಲಿಸಿದ್ದರು. 22 ವರ್ಷದ ಉವೈಷ್ ಅಹ್ಮದ್ ಎಂಬವರು ಅವರ ಮಗಳನ್ನು 'ಪುಸಲಾಯಿಸಿ, ಒತ್ತಡ ಹೇರಿ, ಆಮಿಷ ಒಡ್ಡಿ' ಮತಾಂತರಿಸಲು‌ ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಬರೇಲಿಯ ಜಿಲ್ಲೆಯ ಡಿಯೊರೇನಿಯಾ ಪೊಲೀಸ್ ಸ್ಟೇಷನ್ ‌ನಲ್ಲಿ ಎಫ್. ಐ.ಆರ್ ದಾಖಲಾಗಿದ್ದು ಡಿಸೆಂಬರ್ ಮೂರರಂದು ಆರೋಪಿಯನ್ನು ಬಂಧಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


19 ವರ್ಷದ ಯುವತಿಯೊಬ್ಬರು, ಮದುವೆಗೆ ಮುಂಚಿತವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಮತ್ತು ತನನ್ನು ಬಲವಂತವಾಗಿ ಮತಾಂತರ ಮಾಡಲು ಪ್ರಯತ್ನಿಸಲಾಗಿದೆ ಎಂದು ಮೊಹಮ್ಮದ್ ಆಜಾದ್ ವಿರುದ್ಧ ಇದೇ ಪ್ರಕರಣದಡಿಯಲ್ಲಿ ಹರ್ದೋಯಿ ಜಿಲ್ಲೆಯ ಶಹಾಬಾದ್ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆಜಾದ್ ಯುವತಿಯನ್ನು ದೆಗಲಿಯಲ್ಲಿ ಮಾರಲೂ ಯತ್ನಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.

ಆರೋಪಿಯನ್ನು ಅತ್ಯಾಚಾರ ಮತ್ತು ಮತಾಂತರ ನಿಷೇಧ ಕಾಯ್ದೆಯನ್ವಯ ಬಂಧಿಸಲಾಗಿದೆ.
ಬಲಪಂಥೀಯರು, ಬಿಜೆಪಿ ಮತ್ತು ಕೆಲ‌ ಮಾಧ್ಯಮಗಳು ಹುಟ್ಟುಹಾಕಿದ 'ಲವ್ ಜಿಹಾದ್' ಕಾನೂನು ಜಾರಿಗೆ ಬಂದು ಒಂದು ತಿಂಗಳಾಗುವಷ್ಟರಲ್ಲಿ ಇಂತಹ ಹತ್ತಾರು ಘಟನೆಗಳು ನಡೆದಿವೆ. ಜೌನ್‌ಪುರ್‌ನಲ್ಲಿ ಉಪ ಚುನಾವಣಾ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು 'ರಾಮ ನಾಮ್ ಸತ್ಯ್ ಹೆ' ಎಂಬ ಪದ ಬಳಕೆ ಮಾಡಿ ಬಹುಸಂಖ್ಯಾತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿ ಕಟ್ಟಿ ಮತ ಸೆಳೆಯುವ ಪ್ರಯತ್ನ ಮಾಡಿದ್ದರು. ಬೌದ್ಧಿಕ ವಲಯದಿಂದ ಈ ಕ್ರಮಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಸಾಮಾಜಿಕ ಕಾರ್ಯಕರ್ತ "ಹೊಸ ಕಾನೂನಿನಿಂದ ನಮಗೆ ಯಾವ ಸಮಸ್ಯೆಯೂ‌ ಇಲ್ಲ. ಆದರೆ ಅದನ್ನು ಜಾರಿಗೆ ತರುವಾಗ ಜನಸಾಮಾನ್ಯರಿಗೆ ಕಿರುಕುಳವಾಗಬಾರದು ಮತ್ತು ಕಾನೂನಿನ ದುರ್ಬಳಕೆ ಆಗಬಾರದು" ಎನ್ನುತ್ತಾರೆ.

"ಹೊಸ ಕಾನೂನು ಬಂದ ಕೂಡಲೇ ಬಲವಂತದ ಮತಾಂತರ ನಿಲ್ಲುತ್ತದೆ ಎಂದಲ್ಲ, ಅಂತಿಮವಾಗಿ ಕಾನೂನು ಜಾರಿಗೆ ತರುವವರು ಪೊಲೀಸರು. ಈಗಲೇ ಕಾನೂನಿನ ಗುರಿಯ ಯಶಸ್ಸಿನ ಬಗ್ಗೆ ಮಾತಾಡುವುದು ತಪ್ಪಾಗುತ್ತದೆ. ಆದರೆ ಈ ಕಾನೂನನ್ನು ಜಾರಿ ಮಾಡುವಾಗ ಜಾಗರೂಕರಾಗಿರಬೇಕು" ಎಂದೂ ಹೇಳುತ್ತಾರೆ.

"ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಇದೊಂದು ಉತ್ತಮ ಕಾನೂನು. ಆಧುನಿಕ ಸಮಾಜದ ಚೌಕಟ್ಟನಿನಲ್ಲಿ ನಿಂತು ನೋಡುವುದಾದರೆ ಜನ ತಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದೂ ಯೋಚಿಸಬಹುದು" ಎನ್ನುತ್ತಾರೆ ಉ.ಪ್ರದ ಮಾಜಿ ಪೊಲೀಸ್ ನಿರ್ದೇಶಕರಾದ ಯಶ್‌ಪಾಲ್ ಸಿಂಗ್. ಹೈಕೋರ್ಟ್ ಲಾಯರ್ ಸಂದೀಪ್ ಚೌಧುರಿಯವರ ಪ್ರಕಾರ "ಹೊಸ ಕಾನೂನು ಧರ್ಮದ ಆಯ್ಕೆ ಮತ್ತು ಬದಲಾವಣೆಯ ಅವಕಾಶ ನೀಡುವ ಮೂಲಭೂತ ಹಕ್ಕನ್ನೇ ಕಿತ್ತುಕೊಳ್ಳುತ್ತದೆ.

ವ್ಯಕ್ತಿಯೊಬ್ಬನಿಗೆ ಖಾಸಗಿತನ, ಘನತೆ, ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ನೀಡುವ ಸಂವಿಧಾನದ 21ನೇ ವಿಧಿಯನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ" . ಅಲಹಾಬಾದ್ ಹೈಕೋರ್ಟ್ ‌ನಲ್ಲಿ ಈಗಾಗಲೇ ಕಾನೂನಿನ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿದ್ದು ಈಗ ಈ ಸಂಬಂಧ ಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಹೊಸ ಕಾನೂನು ಮೂಲಭೂತ ಹಕ್ಕಾದ ಆಯ್ಕೆಯ ಸ್ವಾತಂತ್ರ್ಯ ಮತ್ತು ಧರ್ಮ ಬದಲಾವಣೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ ಎಂಬ ದೂರಿನ ಬಗ್ಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.

ಮತಾಂತರ ನಿಷೇಧ ಕಾಯ್ದೆ 2020ರ ಪ್ರಕಾರ ಕಾನೂನಿನ ಉಲ್ಲಂಘನೆಯಾದರೆ ಆರೋಪಿಗೆ ಹತ್ತು ವರ್ಷಗಳ ಜೈಲು ಶಿಕ್ಷೆಯಾಗಲಿದೆ ಮತ್ತು ಮಹಿಳೆಯನ್ನು ಮತಾಂತರ ಮಾಡುವ ಉದ್ದೇಶದಿಂದಷ್ಟೇ ಮದುವೆಯಾಗುವುದಾದರೆ ಆ ಮದುವೆಯೇ ಅನೂರ್ಜಿತವಾಗಲಿದೆ. ಮಹಿಳೆಯ ಆಯ್ಕೆಯ ಸ್ವಾತಂತ್ರ್ಯವನ್ನು ನಿರಾಕರಿಸುವ, ವಿವೇಚನೆಯನ್ನು ಅನುಮಾನಿಸುವ, ಸಂಗಾತಿಯ ಆಯ್ಕೆಯನ್ನು ಪುರುಷ ಮಾಡಿದಾಗ ಮಾತ್ರ ಸರಿಹೊಂದುತ್ತದೆ ಎನ್ನುವ ಪುರುಷಾಧಿಪತ್ಯದ ನಿಲುವನ್ನು ಬೆಂಬಲಿಸುವ ಈ ಕಾಯ್ದೆಯಲ್ಲಿ ವಿವಾಹ 'ಕೇವಲ ಮತಾಂತರ'ದ ಉದ್ದೇಶದಿಂದ ನಡೆದಿಲ್ಲ ಎಂದು ನಿರೂಪಿಸುವುದೇ ತ್ರಾಸದಾಯಕವಾಗಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com