ಕಳಪೆ ಆರೋಗ್ಯ ಮೂಲಸೌಕರ್ಯ; ಸಾಂಕ್ರಾಮಿಕ ಕಾಲದಲ್ಲಿ ಸಂಕಷ್ಟಕ್ಕೀಡಾಗುತ್ತಿರುವ ಆದಿವಾಸಿಗಳು

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16 ಅಂಕಿಅಂಶಗಳು ಸರ್ಕಾರ ಆದಿವಾಸಿ ಸಮುದಾಯಗಳ ಆರೋಗ್ಯದ ಕುರಿತು ವಹಿಸಿದ ನಿರ್ಲಕ್ಷ್ಯವನ್ನು ಸೂಚಿಸುತ್ತದೆ.
ಕಳಪೆ ಆರೋಗ್ಯ ಮೂಲಸೌಕರ್ಯ; ಸಾಂಕ್ರಾಮಿಕ ಕಾಲದಲ್ಲಿ ಸಂಕಷ್ಟಕ್ಕೀಡಾಗುತ್ತಿರುವ ಆದಿವಾಸಿಗಳು

ಹಕ್ಕುಗಳು, ಮಾನ್ಯತೆ ಮತ್ತು ಸರ್ಕಾರದ ಬೆಂಬಲದ ವಿಷಯದಲ್ಲಿ ಈಗಾಗಲೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯಗಳು ಸಾಂಕ್ರಾಮಿಕ ಸಮಯದಲ್ಲಿ ಇನ್ನೂ ಹೆಚ್ಚಿನ ಕಷ್ಟಗಳನ್ನು ಅನುಭವಿಸಿರುವುದಾಗಿ ವರದಿಗಳು ಹೇಳಿವೆ.

ಕೋವಿಡ್ -19 ಸಾಂಕ್ರಾಮಿಕವು ಜಗತ್ತನ್ನು ಕಾಡಿ ಉದ್ಯೋಗಾವಕಾಶಗಳು ಬತ್ತಿಹೋದಾಗ, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ, ಆದಿವಾಸಿಗಳು ಕಾಡುಗಳ ಸಮೀಪವಿರುವ ತಮ್ಮ ಪೂರ್ವಾಶ್ರಮಕ್ಕೆ ಮರಳಿದ್ದಾರೆ.

ಮಾರ್ಚ್ 24 ರಂದು ಭಾರತವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿತು. ಘೋಷಣೆಯಾದ ಕೆಲವೇ ದಿನಗಳಲ್ಲಿ, ಸಮಾಜದ ಅಂಚಿನಲ್ಲಿರುವ ಆದಿವಾಸಿ ಸಮುದಾಯಗಳಿಗೆ ತೊಂದರೆ ಶುರುವಾಗಿದೆ. ಆದಿವಾಸಿಗಳು ಮನೆಗೆ ಸುದೀರ್ಘ ಪ್ರಯಾಣ ಮಾಡಿ, ಕೆಲವರು ಪ್ರಯಾಣದ ನಡುವೆ ಸಾವನ್ನಪ್ಪಿದ್ದಾರೆ.

ವಿಪರ್ಯಾಸವೆಂದರೆ, ಕಟ್ಟುನಿಟ್ಟಾದ ಲಾಕ್‌ಡೌನ್ ಪರಿಣಾಮವಾಗಿ ಆದಿವಾಸಿ ಸಮುದಾಯಗಳು ಎದುರಿಸಿದ ಅಪಾರ ಕಷ್ಟಗಳ ಸುಳಿಯಲ್ಲಿ ಸಿಲುಕಿದರೂ, ಅವರ ಸಂಕಟಕ್ಕೆ ಮೊದಲ ಪ್ರತಿಕ್ರಿಯೆ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಅಥವಾ ಆರೋಗ್ಯ ಸಚಿವಾಲಯದಿಂದ ಬಂದಿಲ್ಲ. ಬದಲಾಗಿ, ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಬಂದಿದ್ದು, ಏಪ್ರಿಲ್ 6 ರಂದು, ಆದಿವಾಸಿ ಜನರು ಸಂರಕ್ಷಿತ ಅರಣ್ಯಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಅಂತಹ ಪ್ರವೇಶದ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ ಸಹ.

ಆದಿವಾಸಿಗಳ ರಕ್ಷಣೆಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಸರ್ಕಾರ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16 ಅಂಕಿಅಂಶಗಳು ಸರ್ಕಾರ ಆದಿವಾಸಿ ಸಮುದಾಯಗಳ ಆರೋಗ್ಯದ ಕುರಿತು ವಹಿಸಿದ ನಿರ್ಲಕ್ಷ್ಯವನ್ನು ಸೂಚಿಸುತ್ತದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯ ಪ್ರಕಾರ, ಆದಿವಾಸಿಗಳಲ್ಲಿ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ (1,000 ಜನನಗಳಿಗೆ 57 ಸಾವುಗಳು) ಇತರ ಹಿಂದುಳಿದ ವರ್ಗಗಳಿಗಿಂತ ಗಣನೀಯವಾಗಿ ಹೆಚ್ಚಾಗಿದೆ (1,000 ಜನನಗಳಿಗೆ 39 ಸಾವುಗಳು). ಅಲ್ಲದೆ, ಆದಿವಾಸಿ ಮಹಿಳೆಯರು ನುರಿತ ತಜ್ಞರಿಂದ ಪ್ರಸವಪೂರ್ವ ಆರೈಕೆಯನ್ನು ಪಡೆಯುವ ಸಾಧ್ಯತೆ ಕೂಡಾ ಕಡಿಮೆ ಇದೆ(ಮೇಲ್ಜಾತಿಯ 86% ಗೆ ಹೋಲಿಸಿದರೆ 73%)

Picasa

ಮೇಲ್ಜಾತಿಗಳಿಗೆ ಹೋಲಿಸಿದರೆ, ಆದಿವಾಸಿ ಮಹಿಳೆಯರು ಪ್ರಸವಪೂರ್ವ ಆರೋಗ್ಯ ಸೌಲಭ್ಯದಲ್ಲಿ ಪಡೆಯುವ ಸಾಧ್ಯತೆ ಕೂಡಾ ಕಡಿಮೆ (ಮೇಲ್ಜಾತಿಯ 83% ಕ್ಕೆ ಹೋಲಿಸಿದರೆ ಆದಿವಾಸಿ ಮಹಿಳೆಯರು ಸೌಲಭ್ಯ ಪಡೆಯುವ ಅವಕಾಶ 68%)

ಆರೋಗ್ಯ ಕ್ಷೇತ್ರದಲ್ಲಿ ಆದಿವಾಸಿಗಳು ಎದುರಿಸುವ ದೊಡ್ಡ ಸಮಸ್ಯೆಗಳೆಂದರೆ ಔಷಧಗಳು ಮತ್ತು ಪೂರೈಕೆದಾರರ ಅಲಭ್ಯತೆ. ಆರೋಗ್ಯ ಸೌಲಭ್ಯ ಪಡೆಯಲು ಇವರಿಗೆ ಸಾರಿಗೆಯೂ ಒಂದು ಸಮಸ್ಯೆಯಾಗಿ ಉಳಿದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಟ್ಟಾರೆಯಾಗಿ, 76.7% ಆದಿವಾಸಿಗಳು ಆರೋಗ್ಯ ಸೌಲಭ್ಯಗಳನ್ನು ಪಡೆಯುವಲ್ಲಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದಿವಾಸಿ ಆರೋಗ್ಯ ರಕ್ಷಣೆಗೆ ಯಾವುದೇ ಸಮಗ್ರ ನೀತಿ-ನಿಯಮ ಇಲ್ಲ ಎಂದು ನೀತಿ ಅಧಿಕಾರಿಗಳು ಒಪ್ಪಿಕೊಂಡರೂ, ವಿಶ್ವಾಸಾರ್ಹ ದತ್ತಾಂಶವನ್ನು ಆಧರಿಸಿದ ಪರಿಹಾರವು ಇನ್ನೂ ಇಲ್ಲವಾಗಿರುವುದು ಆಡಳಿತ ಯಂತ್ರದ ನಿಷ್ಕ್ರಿಯತೆಗೆ ಅಥವಾ ಆದಿವಾಸಿಗಳ ಕಡೆಗಿನ ನಿರ್ಲಕ್ಷ್ಯದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತದೆ.

ಇದುವರೆಗೂ ವರದಿಯಾಗಿರುವ ಮಲೇರಿಯಾ ಪ್ರಕರಣಗಳಲ್ಲಿ 30% ರಷ್ಟು ಪ್ರಕರಣಗಳು ಹಾಗೂ ಮಲೇರಿಯಾ ಪ್ರಕರಣದ 50% ಮರಣ ದೇಶದ ಒಟ್ಟು ಜನಸಂಖ್ಯೆಯಲ್ಲಿ ಕೇವಲ 8% ಇರುವ ಆದಿವಾಸಿಗಳಲ್ಲಿಯೇ ವರದಿಯಾಗಿದೆ. ಇದು ಆದಿವಾಸಿಗಳ ಆರೋಗ್ಯದ ಕಡೆಗೆ ಸರ್ಕಾರ ತೋರಿರುವ ನಿರ್ಲಕ್ಷ್ಯಕ್ಕೆ ಇನ್ನೊಂದು ಉದಾಹರಣೆ.

ಆದಿವಾಸಿ ಪ್ರಾಬಲ್ಯದ ಪ್ರದೇಶಗಳಲ್ಲಿನ ಆರೋಗ್ಯ ವೃತ್ತಿಪರರ ತೀವ್ರ ಕೊರತೆ ನೀಗಿಸಲು ಸ್ಥಳೀಯ ಜನರನ್ನು, ವಿಶೇಷವಾಗಿ ಆದಿವಾಸಿ ಯುವಜನಾಂಗವನ್ನು ಆರೋಗ್ಯ ಕಾರ್ಯಪಡೆಗೆ ಸೇರಲು ಪ್ರೇರೇಪಿಸುವ ಮತ್ತು ತರಬೇತಿ ನೀಡುವ ಅಗತ್ಯವನ್ನು ಆದಿವಾಸಿಗಳ ಆರೋಗ್ಯದ ಕುರಿತಾಗಿ ಸಮೀಕ್ಷೆ ನಡೆಸಿದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ಸೂಚಿಸಿದೆ.

ವಿಲಕ್ಷಣಕಾರಿ ಅಂಶವೇನೆಂದರೆ, ಆದಿವಾಸಿ ಜನಾಂಗ ಹೆಚ್ಚಿರುವ ಕಡೆಗಳಲ್ಲಿ ಆಶಾಕಾರ್ಯಕರ್ತೆಯಂತಹ ಆರೋಗ್ಯ ಕಾರ್ಯಕರ್ತರ ನಿಖರ ಮಾಹಿತಿಯೇ ನಿಖರವಾಗಿಲ್ಲ. ಆ ಹಿನ್ನೆಲೆಯಲ್ಲಿ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಯಾಕೆಂದರೆ ಆಧುನಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಹೆಚ್ಚಿನ ನಂಬಿಕೆ ಇಲ್ಲದ ಈ ಪ್ರದೇಶಗಳಲ್ಲಿ ಸ್ಥಳೀಯರು ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.

ಕೋವಿಡ್‌-19 ಅಸಮರ್ಪಕ ಮಾಹಿತಿ

ಉಳಿದ ಸಾಂಕ್ರಾಮಿಕ ರೋಗಗಳೆಂತೆಯೇ ಕೋವಿಡ್‌ 19 ಕುರಿತೂ ಅಸಮರ್ಪಕ ಮಾಹಿತಿಗಳಿಂದಾಗಿ ಆದಿವಾಸಿಗಳು ತೊಂದರೆಗೀಡಾಗಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ತೆಗೆದುಕೊಳ್ಳಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಆದಿವಾಸಿ ಸಮುದಾಯಗಳು ಮತ್ತು ಅರಣ್ಯವಾಸಿಗಳಲ್ಲಿ ಮಾಹಿತಿಯ ಕೊರತೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಿವೆ. ಸರ್ಕಾರದ ಕಡೆಯಿಂದ ಈ ಕೊರತೆಯನ್ನು ನೀಗಿಸುವ ಗಂಭೀರ ಕ್ರಮಗಳು ನಡೆಯದಿರುವುದು ಈ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ. ಇದು ಆದಿವಾಸಿಗಳ ಆರೋಗ್ಯದ ಕುರಿತಂತೆ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com