ಭಾರತ: ಪ್ರತೀ ಕೋವಿಡ್‌ ಪ್ರಕರಣ ಪತ್ತೆಯಾಗುವಾಗ ಕಣ್ತಪ್ಪುತ್ತಿವೆ 90 ಪ್ರಕರಣಗಳು

ಭಾರತದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಡೆಸಿದ ವಿಶ್ಲೇಷಣೆ ಪ್ರಕಾರ ಭಾರತದಲ್ಲಿ ಪ್ರತೀ ಒಂದು ಕೋವಿಡ್‌ ಪ್ರಕರಣ ಪತ್ತೆಯಾಗುವಾಗ 90 ಪ್ರಕರಣಗಳು ಕಣ್ತಪ್ಪುತ್ತಿವೆ
ಭಾರತ: ಪ್ರತೀ ಕೋವಿಡ್‌ ಪ್ರಕರಣ ಪತ್ತೆಯಾಗುವಾಗ ಕಣ್ತಪ್ಪುತ್ತಿವೆ 90 ಪ್ರಕರಣಗಳು

ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕೋವಿಡ್ 19 ಸಾಂಕ್ರಮಿಕ ಪ್ರಕರಣಗಳು ಭಾರತವನ್ನೂ ಹೈರಾಣನ್ನಾಗಿಸಿದೆ. ಲಕ್ಷಾಂತರ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ, ಕೋಟ್ಯಾಂತರ ಕಾರ್ಮಿಕರು ಕೆಲಸವಿಲ್ಲದೆ ಇದ್ದಾರೆ ಅಥವಾ ಕಡಿಮೆ ಸಂಬಳಕ್ಕೆ ದುಡಿಯಬೇಕಾಗಿದೆ. ಪ್ರಧಾನಿ ನರೆಂದ್ರ ಮೋದಿ ಅವರ ಕೇಂದ್ರ ಸರ್ಕಾರ ಕೋವಿಡ್ ವಿರುದ್ದ ಹೋರಾಡಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ತೆಗೆದುಕೊಂಡಿರುವ ಕ್ರಮಗಳಲ್ಲಿ ಲೋಪ ಇದೆ ಎಂದು ತಿಳಿದು ಬಂದಿದೆ. ದೇಶಾದ್ಯಂತ ಲಕ್ಷಾಂತರ ಆರೋಗ್ಯ ಕ್ಷೇತ್ರದ ಕಾರ್ಯಕರ್ತರು, ಕಾರ್ಯಕರ್ತೆಯರು ಕೋವಿಡ್ ಯೋಧರಾಗಿ ಮುಂಚೂಣಿಯಲ್ಲಿ ಕೆಲಸ ಮಾಡುತಿದ್ದಾರೆ. ಈವರೆಗೂ ನೂರಾರು ಕೋವಿಡ್ ಯೋಧರೂ ಸೇವೆ ಮಾಡುವಾಗಲೇ ಸಾವನ್ನಪ್ಪಿದ್ದಾರೆ. ಕೋವಿಡ್ ವಿರುದ್ದ ಹೋರಾಟ ಇನ್ನೂ ಮುಂದುವರಿದಿದ್ದು ಕಳೆದ ನವೆಂಬರ್ ವರೆಗೆ, ಪತ್ತೆಯಾದ ಪ್ರತಿಯೊಂದು ಸೋಂಕು ಪ್ರಕರಣಕ್ಕೂ ದೇಶವು ಸುಮಾರು 90 ಸೋಂಕುಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇವುಗಳಲ್ಲಿ ದೆಹಲಿ ಮತ್ತು ಕೇರಳದಂತಹ ರಾಜ್ಯಗಳು ಪ್ರತಿ ಸೋಂಕು ಪ್ರಕರಣಕ್ಕೆ ಕೇವಲ 25 ಸೋಂಕುಗಳು ಪತ್ತೆಯಾಗಿಲ್ಲ ಅಥವಾ ತಪ್ಪಿಸಿಕೊಂಡಿವೆ, ಉತ್ತರ ಪ್ರದೇಶ ಮತ್ತು ಬಿಹಾರವು ಪತ್ತೆಯಾದ ಪ್ರತಿಯೊಂದು ಪ್ರಕರಣಕ್ಕೂ ಸುಮಾರು 300 ಸೋಂಕುಗಳು ಪತ್ತೆ ಆಗಿಲ್ಲ ಅಥವ ತಪ್ಪಿಸಿಕೊಂಡಿವೆ ಎಂದು ಅಂದಾಜಿಸಲಾಗಿದೆ.

ಕಳೆದ ತಿಂಗಳವರೆಗೆ ಭಾರತದ ಕೋವಿಡ್ ಸಂಖ್ಯೆಗಳ ವಿಶ್ಲೇಷಣೆಯು ಈ ಅಂಕಿಅಂಶಗಳನ್ನು ಪತ್ತೆ ಮಾಡಿದೆ. ಇದನ್ನು ಪತ್ತೆ ಮಾಡಿರುವುದು ಯಾವುದೋ ಖಾಸಗೀ ಸಂಸ್ಥೆ ಅಥವಾ ಎನ್ಜಿಓ ಅಲ್ಲ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ರಚಿಸಿದ ಸಮಿತಿಯ ಸದಸ್ಯರು ಈ ವಿಶ್ಲೇಷಣೆಯನ್ನು ನಡೆಸಿದರು, ಇದೇ ಸಮಿತಿ ಮುಂದಿನ ಫೆಬ್ರವರಿ 2021 ರ ವೇಳೆಗೆ ಭಾರತದಲ್ಲಿ ಸಾಂಕ್ರಾಮಿಕ ರೋಗವು ಕಡಿಮೆಯಾಗುತ್ತದೆ ಎಂದು ಊಹೆ ಮಾಡಿತ್ತು. ಆದರೆ ಪತ್ತೆಯಾದ ಪ್ರತಿಯೊಂದು ಪ್ರಕರಣಕ್ಕೂ ಭಾರತವು ಸುಮಾರು 60-65 ಸೋಂಕುಗಳನ್ನು ಕಳೆದುಕೊಂಡಿದೆ ಎಂದು ಸೆಪ್ಟೆಂಬರ್ನಲ್ಲಿ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ. ನಾವು ರಾಜ್ಯವಾರು ವಿಶ್ಲೇಷಣೆ ಮಾಡುತ್ತಿದ್ದೇವೆ, ಕಳೆದ ನವೆಂಬರ್ ಮಧ್ಯಭಾಗದವರೆಗೆ, ದೆಹಲಿ ಮತ್ತು ಕೇರಳವು ಪ್ರತಿ ಪ್ರಕರಣಕ್ಕೂ ಸುಮಾರು 25 ಸೋಂಕುಗಳನ್ನು ತಪ್ಪಿಸಿಕೊಂಡಿದೆ ಎಂದು ತೋರಿಸುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉತ್ತರ ಪ್ರದೇಶ ಮತ್ತು ಬಿಹಾರದ ಪ್ರತಿಯೊಂದು ಪ್ರಕರಣಕ್ಕೂ ಈ ಸಂಖ್ಯೆ ಸುಮಾರು 300 ಆಗಿದೆ. ಹೆಚ್ಚಿನ ರಾಜ್ಯಗಳು 70-120 ಪ್ರಕರಣಗಳನ್ನು ಕಳೆದುಕೊಂಡಿವೆ ಎಂದು ಡಿಎಸ್ಟಿ ಸಮಿತಿಯ ಸದಸ್ಯ ಮತ್ತು ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಮನೀಂದ್ರ ಅಗ್ರವಾಲ್ ಅವರು ತಿಳಿಸಿದರು. ಭಾರತದ ಅಂಕಿ ಅಂಶವು ಪ್ರತಿ ಪ್ರಕರಣಕ್ಕೂ 90 ಸೋಂಕುಗಳು ತಪ್ಪಿಹೋಗಿವೆ. ನೀವು ಅದನ್ನು ಇಟಲಿ ಮತ್ತು ಯುನೈಟೆಡ್ ಕಿಂಗ್ಡಂನಂತಹ ದೇಶಗಳೊಂದಿಗೆ ಹೋಲಿಸಿದರೆ, ಅಲ್ಲಿ ಪತ್ತೆ ಮಾಡಲಾದ ಪ್ರತೀ ಸೋಂಕು ಪ್ರಕರಣಕ್ಕೆ 10-15 ಪ್ರಕರಣಗಳು ತಪ್ಪಿ ಹೋಗಿವೆ ಎಂದು ಅವರು ಹೇಳಿದರು. ವಾಸ್ತವವಾಗಿ ನಮ್ಮ ಮಾದರಿ ದೆಹಲಿಯ ಮೂರನೇ ಹಂತದ ಹರಡುವಿಕೆ ದೊಡ್ಡದಾಗಿದ್ದರೂ, ಸೋಂಕಿನ ನಿಜವಾದ ಹರಡುವಿಕೆಯು ಬಹುತೇಕ ಒಂದೇ ಆಗಿತ್ತು ಎಂದು ಕಂಡು ಬಂದಿದೆ. ಎರಡನೇ ಹಂತದ ಸೋಂಕು ಹರಡುವ ಪೀಕ್ ಸಮಯದಲ್ಲಿ, ದೆಹಲಿಯು ಪ್ರತಿ ಪ್ರಕರಣಕ್ಕೆ 43 ಸೋಂಕುಗಳನ್ನು ಕಳೆದುಕೊಂಡರೆ, ಮೂರನೆಯದರಲ್ಲಿ ಅದು ಕೇವಲ 21 ಅನ್ನು ಕಳೆದುಕೊಂಡಿತು. ದೆಹಲಿ ಸರ್ಕಾರವು ಪರೀಕ್ಷೆಯನ್ನು ಚುರುಕುಗೊಳಿಸಿದ್ದರಿಂದ ಮೂರನೇ ಹಂತದಲ್ಲಿ ತಪ್ಪಿ ಹೋದ ಪ್ರಕರಣಗಳ ಸಂಖ್ಯೆ ಕಡಿಮೆ ಎಂದು ಅಗ್ರವಾಲ್ ಹೇಳಿದರು.

ಅಗ್ರವಾಲ್ ಅವರಲ್ಲದೆ, ಸಮಿತಿಯಲ್ಲಿ ಐಐಟಿ ಹೈದರಾಬಾದ್ ನ ಪ್ರಾಧ್ಯಾಪಕ ಎಂ. ವಿದ್ಯಾಸಾಗರ್, ಸಿಎಮ್ಸಿ ವೆಲ್ಲೂರಿನ ಡಾ.ಗಗಂದೀಪ್ ಕಾಂಗ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಬಿಮನ್ ಬಾಗ್ಚಿ, ‌ ಕೋಲ್ಕತ್ತಾದ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಪ್ರಾದ್ಯಾಪಕರುಗಳಾದ ಅರುಫ್ ಘೋಷ್ ಮತ್ತು ಶಂಕರ್ ಪಾಲ್ ರಕ್ಷಣಾ ಸಚಿವಾಲಯದ ಲೆಪ್ಟಿನೆಂಟ್ ಜನರಲ್ ಮಾಧುರಿ ಕನಿತ್ಕರ್ ಅವರೂ ಇದ್ದರು. ಇವರಲ್ಲಿ ತಮ್ಮ ಸಂಶೋಧನೆಗಳನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟಿಸಲಾಗಿದೆ, ಇದನ್ನು ಅಗ್ರವಾಲ್, ವಿದ್ಯಾಸಾಗರ್ ಮತ್ತು ಕನಿಟ್ಕರ್ ಬರೆದಿದ್ದಾರೆ.

ಸೂಪರ್ ಮಾಡೆಲ್ ಪ್ರೊಜೆಕ್ಷನ್ ಗಳ ಪ್ರಕಾರ, ಭಾರತವು ಮತ್ತೊಂದು ಪೀಕ್ ನ್ನು ಕಾಣುವುದಿಲ್ಲ ಮತ್ತು ಫೆಬ್ರವರಿ 2021 ರ ಮೂಲ ಪ್ರೊಜೆಕ್ಷನ್ ಸರಿಯಾಗಿದೆ. ಎಂದು ಅಗ್ರವಾಲ್ ದೃಢವಾಗಿ ಹೇಳಿದ್ದಾರೆ. ಅಂದರೆ, ದೇಶವು ಸುಮಾರು 20,000 ಸಕ್ರಿಯ ಪ್ರಕರಣಗಳೊಂದಿಗೆ ಸಾಂಕ್ರಾಮಿಕ ರೋಗದ ಅಂತ್ಯವನ್ನು ನೋಡುತ್ತದೆ. ಇವುಗಳು ಈಗಿನ ಪರೀಕ್ಷೆಯಲ್ಲಿ ತಪ್ಪಿಸಿಕೊಂಡಿರುವ ಪ್ರಕರಣಗಳೇ ಆಗಿವೆ. ಈ ಸಮಿತಿಯ ಸಂಶೋಧನೆಯ ಪ್ರಕಾರ, ದೇಶದ ಸುಮಾರು 60 ಪ್ರತಿಶತದಷ್ಟು ಜನರು ಈಗಾಗಲೇ ಸೋಂಕಿಗೆ ಒಳಗಾಗಿದ್ದಾರೆ, ಅವರಿಗೆ ಪ್ರತಿಕಾಯಗಳಿವೆ ಎಂದು ಅವರು ಹೇಳಿದರು. ಹಬ್ಬದ ಋತುವಿನ ನಂತರವೂ ದೆಹಲಿಯನ್ನು ಹೊರತುಪಡಿಸಿ, ಅನೇಕ ರಾಜ್ಯಗಳು ಏರಿಕೆಯನ್ನು ಕಾಣಲಿಲ್ಲ ಎಂಬ ಅಂಶದಿಂದ ಇದು ದೃಢೀಕರಿಸಲ್ಪಟ್ಟಿದೆ.

ಭಾರತವು ಒಂದೇ ಕೋವಿಡ್ ಪೀಕ್ ನೊಂದಿಗೆ ಕೊನೆಗೊಂಡರೆ, ಅದು ನಿಜಕ್ಕೂ ಅನುಕೂಲವಾಗುತ್ತದೆ. ಪ್ರಪಂಚದ ಹೆಚ್ಚಿನ ದೇಶಗಳು ಅನೇಕ ಪೀಕ್ ಗಳನ್ನು ಕಂಡಿವೆ. ಕಳೆದ ಸೆಪ್ಟೆಂಬರ್ನಲ್ಲಿ ಭಾರತವು ಕೇವಲ ಒಂದು ಪೀಕ್ ನಿಂದ ಕೋವಿಡ್ 19 ನಿಂದ ಹೊರಬರುವ ಬಗ್ಗೆ ಅಗರ್ ವಾಲ್ ಅವರು ಮಾತನಾಡಿ ನಮ್ಮ ಅಸಮರ್ಥತೆಯು ಇಲ್ಲಿ ನಮಗೆ ಸಹಾಯ ಮಾಡಿದೆ. ಜರ್ಮನಿಯಲ್ಲಿ ಲಾಕ್ ಡೌನ್ ಘೋಷಿಸಿದಾಗ, ಎಲ್ಲವನ್ನೂ ಮುಚ್ಚಲಾಯಿತು, ಜನರು ಹೊರಗೆ ಹೋಗುವುದನ್ನು ನಿಲ್ಲಿಸಿದರು. ಆದರೆ ನಮ್ಮಲ್ಲಿ ಲಾಕ್ ಡೌನ್ ಘೋಷಿಸಿದ್ದರೂ ಜನರು ಹೊರೆ ಓಡಾಟ ನಡೆಸಿದರು. ಅಲ್ಲದೆ ಮುಖ ಗವುಸು ಹಾಕಿಕೊಳ್ಳುವುದನ್ನೂ ಬಿಟ್ಟು ಲಕ್ಷಾಂತರ ರೂಪಾಯಿ ದಂಡ ತೆತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಹರಡಿತು.

ಜರ್ಮನಿಯಂತಹ ದೇಶಗಳು ಇನ್ನೂ ಸೋಂಕುರಹಿತ ಜನಸಂಖ್ಯೆಯನ್ನು ಹೊಂದಿವೆ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವ ಅನೇಕ ದೇಶಗಳಲ್ಲಿ ಸೋಂಕು ಕಡಿಮೆ ಆಗುತ್ತ ಬಂದಿದೆ. ಆದರೆ ನಮ್ಮಲ್ಲಿ ಸರ್ಕಾರದ ದೋಷಕ್ರಮಗಳು ಜನರ ಸಹಕಾರ ಇಲ್ಲದೆ ಇರುವುದರಿಂದ ಸೋಂಕು ಪ್ರಕರಣಗಳ ಸಂಖ್ಯೆ ಅಲ್ಪ ಮಾತ್ರ ಇಳಿಕೆ ದಾಖಲಿಸುತ್ತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com