ರೈತರಿಗೆ 18,000 ಕೋಟಿ ರೂ ಅನುದಾನ ಘೋಷಿಸಿದ ಮೋದಿ ಸರ್ಕಾರ

ರೈತರು ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಮುಂದಾಗಬೇಕು. 18,000 ಕೋಟಿ ರೂ ಅನುದಾನ ಮೊತ್ತ ರೈತರ ಖಾತೆಗೆ ನೇರವಾಗಿ ಜಮ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ.
ರೈತರಿಗೆ 18,000 ಕೋಟಿ ರೂ ಅನುದಾನ ಘೋಷಿಸಿದ ಮೋದಿ ಸರ್ಕಾರ

ದೇಶದಲ್ಲಿ ರೈತರ ಹೋರಾಟ ತೀರ್ವ ಸ್ವರೂಪ ತಾಳುತ್ತಿರುವುದರ ಮಧ್ಯೆಯೇ ಕೇಂದ್ರ ಸರ್ಕಾರ, ಹೋರಾಟ ನಿರತ ರೈತರ ಮನವೊಲಿಸಲು ಪ್ರಯತ್ನಪಟ್ಟಿದೆ. ವಾಜಪೇಯಿ ಜನ್ಮದಿನದ ಪ್ರಯುಕ್ತ ಪ್ರಧಾನಿ ಮೋದಿ ನೇತೃತ್ವದಲ್ಲಿ ಆಡಳಿತ ಪಕ್ಷದ ನಾಯಕರು ರೈತರೊಂದಿಗೆ ಸಂವಾದ ನಡೆಸಿದ್ದಾರೆ.

ಕೇಂದ್ರ ಸರ್ಕಾರ ʼಕಿಸಾನ್ ಸಮ್ಮನ್ʼ ಯೋಜನೆ ಅಡಿ 18,000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. ಈ ಸೌಲಭ್ಯ ದೇಶದ 9 ಕೋಟಿಗೂ ಅಧಿಕ ರೈತರಿಗೆ ಸಿಗಲಿದೆ. ಹಣ ಮಧ್ಯವರ್ತಿಗಳ ಪಾಲಾಗದೆ ಕೆಲವೇ ದಿನಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವೇಳೆ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಎಂಎಸ್ಪಿ ಬಗ್ಗೆ ವಿರೋಧ ಪಕ್ಷಗಳು ತಪ್ಪು ಮಾಹಿತಿ ಹಬ್ಬಿಸಿ ದಾರಿ ತಪ್ಪಿಸುತ್ತಿವೆ. ರೈತರ ಭೂಮಿಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ, ಕೃಷಿ ಕಾಯ್ದೆಗಳ ತಿದ್ದುಪಡಿಯಿಂದ ರೈತನಿಗೆ ಒಳಿತಾಗುತ್ತದೆ. ಇನ್ನೊಮ್ಮೆ ರೈತರೊಂದಿಗೆ ಮಾತನಾಡಲು ಸಿದ್ದ ಎಂದು ತಿಳಿಸಿದ್ದಾರೆ.

ರೈತರು ಪ್ರತಿಭಟನೆಯನ್ನು ಕೈಬಿಟ್ಟು ಮಾತುಕತೆಗೆ ಮುಂದಾಗಬೇಕು. 18,000 ಕೋಟಿ ರೂ ಅನುದಾನ ಮೊತ್ತ ರೈತರ ಖಾತೆಗೆ ನೇರವಾಗಿ ಜಮ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ.

ರೈತ ಸಂವಾದದಲ್ಲಿ ಮಾತನಾಡಿದ ಮೋದಿ, ವಾಜಪೇಯಿ ಅವರ ಕೃಷಿಪರ ಧೋರಣೆಗಳನ್ನು ನೆನೆದಿದ್ದಾರೆ. ನಮ್ಮ ಸರ್ಕಾರ ರೈತರ ಪರವಿದೆ. ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದಕ್ಕೆ ತಲೆಬಾಗಬೇಡಿ ಎಂದಿದ್ದಾರೆ.

ಸಂವಾದದಲ್ಲಿ ಪ್ರಧಾನಿಯೊಂದಿಗೆ ಮಾತನಾಡಿದ ಮಹರಾಷ್ಟ್ರದ ರೈತರೋರ್ವರು, ʼಫಸಲ್ ಭೀಮಾʼ ಯೋಜನೆಯಿಂದ ಪ್ರಯೋಜನ ಆಗಿದೆ ಎಂದಿದ್ದಾರೆ. ಈ ವೇಳೆ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ರೈತರು ಸೌಲಭ್ಯದ ಪ್ರಯೋಜನ ಪಡೆಯುವಂತೆ ಹೇಳಿ ಎಂದು ಮೋದಿ ಮನವಿ ಮಾಡಿಕೊಂಡಿದ್ದಾರೆ.

ಕೃಷಿ ಕಾಯ್ದೆ ತಿದ್ದುಪಡಿಯಿಂದ ಯಾವುದೇ ತೊಂದರೆಯಾಗುವುದಿಲ್ಲ. ರೈತರ ಏಳಿಗೆಗೆ ಕೃಷಿ ಕಾನೂನು ತಿದ್ದುಪಡಿ ಮಾಡಲಾಗಿದೆ ಎಂದು ಮಧ್ಯ ಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ರೈತರೊಂದಿಗಿನ ಸಂವಾದದಲ್ಲಿ ಮೋದಿ ಭರವಸೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ಯೋಜನೆಯ ಸೌಲಭ್ಯ ಅಲ್ಲಿನ ರೈತರಿಗೆ ಸಿಗುತ್ತಿಲ್ಲ. ಸುಮಾರು 70 ಲಕ್ಷ ರೈತರು ಸೌಲಭ್ಯ ವಂಚಿತರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಎಂಎಸ್ಪಿ ದರ ಹೆಚ್ಚಿಸಿದೆ. ಹಿಂದೆ ಇದ್ದ ಸರ್ಕಾರಗಳು ರೈತರ ಒಳಿತಿಗಾಗಿ ಯಾವುದೇ ರೀತಿಯ ಯೋಜನೆ ಸೌಲಭ್ಯ ಜಾರಿಗೆ ತಂದಿಲ್ಲ, ಸರ್ಕಾರ ಬೀಳಿಸುವುದೇ ವಿರೋಧ ಪಕ್ಷಗಳ ಉದ್ದೇಶ ಮತ್ತು ಅಧಿಕಾರಕ್ಕೆ ಬರಲು ದೇಶ ವಿರೋಧಿ ಹೇಳಿಕೆ ನೀಡಿ ಜನತೆಯನ್ನು ಹಾದಿ ತಪ್ಪಿಸಲಾಗುತ್ತಿದೆ ಎಂದಿದ್ದಾರೆ.

ರೈತರು ಎಚ್ಚೆತ್ತು ಕೊಳ್ಳಬೇಕು, ಆಧುನಿಕ ಯುಗದಲ್ಲಿ ಕೃಷಿಕ್ಷೇತ್ರದಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ. ಇದರಿಂದ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ. ಇದು ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಮಾರುಕಟ್ಟೆ ಲಭ್ಯವಾಗಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಅಲ್ಲದೆ, ಭೂಮಿ ಕಳೆದು ಕೊಳ್ಳುತ್ತೇವೆಂಬ ಭಯ ರೈತರಿಗೆ ಕಾಡುತ್ತಿದೆ. ಇನ್ನೊಮ್ಮೆ ಈ ಎಲ್ಲಾ ವಿಚಾರಗಳ ಕುರಿತು ರೈತರೊಂದಿಗೆ ಮಾತುಕತೆ ಮಾಡಲು ಸರ್ಕಾರ ಸದಾ ಸಿದ್ದವಿರುತ್ತದೆ ಎನ್ನುವ ಮೂಲಕ ಮುಷ್ಕರವನ್ನು ಹಿಂಪಡೆಯುವಂತೆ ಪ್ರಧಾನಿ ಮೋದಿ ರೈತ ಸಂವಾದದಲ್ಲಿ ಮನವಿ ಮಾಡಿಕೊಂಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com