ಅಜಾತ ಶತ್ರುವಿನ ಆಡಳಿತ ಎಂದೆಂದಿಗೂ ಅಜರಾಮರ

ರಾಜಕೀಯ ರಂಗದಲ್ಲಿ ಯಾರಿಗೂ ತಲೆಬಾಗದೆ ಕಾನೂನಿಗೆ ಗೌರವ ಕೊಟ್ಟು ಸ್ವತಂತ್ರ ಮತ್ತು ಕಠಿಣ ನಿರ್ಧಾರ ತೆಗೆದುಕೊಂಡು ಕ್ರಿಯಾಶೀಲರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತೆ. ದೇಶದ ಪ್ರಮುಖ ವಿಚಾರಗಳ ಚರ್ಚೆಯ ಸಂದರ್ಭದಲ್ಲಿ ತಮ್ಮ ಮತ ಧರ್ಮ ಜಾತಿಯ ಪರ ಹೇಳಿಕೆ ನೀಡದೆ ತಪ್ಪಿರುವ ವಿಚಾರವನ್ನು ಒಪ್ಪದೆ ವಿಮರ್ಶಿಸಿ ನ್ಯಾಯದ ಪರ ಧ್ವನಿಯೆತ್ತುತ್ತಿದ್ದ ನಿಷ್ಠಾವಂತ ನಾಯಕ.
ಅಜಾತ ಶತ್ರುವಿನ ಆಡಳಿತ ಎಂದೆಂದಿಗೂ ಅಜರಾಮರ

ಅಜಾತ ಶತ್ರು ಮರೆಯಲಾಗದ ಮಾಣಿಕ್ಯ ರಾಜಕೀಯ ಕ್ಷೇತ್ರದ ದಿಗ್ಗಜರಲ್ಲೊಬ್ಬರು. ಸರಳ ವ್ಯಕ್ತಿತ್ವ, ಬರಹಗಾರ, ಕವಿ ಮಾನವೀಯತೆಯಿಂದ ಬೇಧ ಭಾವದ ಆಡಳಿತ ಮಾಡದೇ ಕೋಟ್ಯಾಂತರ ಭಾರತೀಯರ ಮನಗೆದ್ದ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಮೂರು ಬಾರಿ ದೇಶದ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.

ರಾಜಕೀಯ ರಂಗದಲ್ಲಿ ಯಾರಿಗೂ ತಲೆಬಾಗದೆ ಕಾನೂನಿಗೆ ಗೌರವ ಕೊಟ್ಟು ಸ್ವತಂತ್ರ ಮತ್ತು ಕಠಿಣ ನಿರ್ಧಾರ ತೆಗೆದುಕೊಂಡು ಕ್ರಿಯಾಶೀಲರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತೆ. ದೇಶದ ಪ್ರಮುಖ ವಿಚಾರಗಳ ಚರ್ಚೆಯ ಸಂದರ್ಭದಲ್ಲಿ ತಮ್ಮ ಮತ ಧರ್ಮ ಜಾತಿಯ ಪರ ಹೇಳಿಕೆ ನೀಡದೆ ತಪ್ಪಿರುವ ವಿಚಾರವನ್ನು ಒಪ್ಪದೆ ವಿಮರ್ಶಿಸಿ ನ್ಯಾಯದ ಪರ ಧ್ವನಿಯೆತ್ತುತ್ತಿದ್ದ ನಿಷ್ಠಾವಂತ ನಾಯಕ. ಇದರಿಂದಲೇ ಅಜಾತಶತ್ರು ರಾಜಕೀಯ ಮುತ್ಸದಿ, ಚಾಣಕ್ಯ ಎಂದು ವಾಜಪೇಯಿ ಗುರುತಿಸಿಕೊಂಡರು.ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉದ್ಯೋಗ ಜೀವನ

ಮೊದಲಿಗೆ ಪತ್ರಕರ್ತರಾಗಿ ಉದ್ಯೋಗ ಜೀವನ ಆರಂಭಿಸಿದ ಇವರು ರಾಷ್ಟ್ರಧರ್ಮ, ಸ್ವದೇಶಿ, ವೀರ ಅರ್ಜುನ ಪ್ರತಿಕೆಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅಂದರೆ ಜೂನ್‌ 1975 ರಂದು ತುರ್ತು ಪರಿಸ್ಥಿತಿ ವೇಳೆ ಸೆರೆ ಮನೆ ಸೇರಿ ಅಲ್ಲಿಂದಲೇ ಅನೇಕ ಬರಹಗಳನ್ನು ಬರೆಯುವ ಮೂಲಕ ಉತ್ತಮ ಬರಹಗಾರರೆಂಬ ಕೀರ್ತಿಗೂ ಪಾತ್ರರಾಗಿದ್ದರು. ಸಾಮಾಜಿಕ ಕಾರ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಆಸಕ್ತಿಹೊಂದಿದ ವಾಜುಪೇಯಿ ರಾಷ್ಟ್ರೀಯ ಭಾವೈಕ್ಯತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ರಾಜಕೀಯ ಜೀವನ

ಮೂರು ಬಾರಿ ಭಾರತದ ಪ್ರಧಾನಿಯಾಗಿ, ವಿದೇಶಾಂಗ ಸಚಿವರಾಗಿ, ಲೋಕಸಭೆ ಮತ್ತು ಕೆಳಮನೆಗೆ ಒಟ್ಟು 10 ಬಾರಿ ಆಯ್ಕೆಯಾಗಿದ್ದರು. ರಾಜ್ಯಸಭೆಗೆ 2 ಬಾರಿ ಆಯ್ಕೆಯಾಗಿ 40 ವರ್ಷಗಳ ಕಾಲ ಸಂಸತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರು ಸಲಿಸಿದ ಸೇವೆಗೆ 1992 ರಲ್ಲಿ ಪದ್ಮವಿಭೂಷಣ ಮತ್ತು 2015 ರಲ್ಲಿ ಭಾರತ ರತ್ನ ಪ್ರಶಸ್ತಿಗಳು ಲಭಿಸಿವೆ. ಬಾಲ್ಯದಲ್ಲಿಯೇ ಪ್ರತಿಭಾವಂತರಾಗಿ ಗುರುತಿಸಿಕೊಂಡ ಇವರು 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಗೆ ದುಮುಕಿದರು. ಇದಾದ ಬಳಿಕ ಆರ್‌ಎಸ್‌ಎಸ್ ಗೆ ಸೇರ್ಪಡೆಯಾದರು. ಅಲ್ಲಿಂದ 2018 ರವರೆಗೂ ರಾಜಕೀಯ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ತಪ್ಪು ಸರಿಗಳನ್ನು ವಿಮರ್ಶಿಸುತ್ತಲೇ ಬಂದಿದ್ದರು.

ಅಧಿಕಾರ ಅವಧಿಯಲ್ಲಿ ವಿವಿಧ ದೇಶಗಳ ನಡುವೆ ಶಾಂತಿ ಸೌಹಾರ್ದತೆ ವೃದ್ದಿಸಲು ಉತ್ತಮ ಕೆಲಸಗಳು ಕೂಡ ಹೊರ ಹೊರಹೊಮ್ಮಿದವು ಉದಾಹರಣೇ 1999 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಬಸ್ ಸಂಚಾರ ಆರಂಭಿಸಿದ ಹೆಗ್ಗಳಿಕೆಯೂ ಇವರ ಪಾಲಿಗೆ ಸೇರುತ್ತದೆ. ಪೋಖ್ರಾಣ್‌ ಅಣುಬಾಂಬ್ ಪರೀಕ್ಷಾರ್ಥ ಸ್ಫೋಟ ನಡೆಸಿ ಭಾರತವು ಅಣುಬಾಂಬ್ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗುವಂತೆ ಮಾಡಿದರು. ಇವರ ಅಧಿಕಾರವಧಿಯಲ್ಲಿಯೇ 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿ. ನಂತರ ದಿನಗಳಲ್ಲಿ ಉಭಯ ದೇಶಗಳ ನಡುವೆ ಶಾಂತಿ ಸೌಹಾರ್ದತೆಯ ವಾತಾವರಣ ಸೃಷ್ಟಿಯಾಯಿತು.

ನನಗೊಂದು ಭವ್ಯ ಭಾರತದ ಕಲ್ಪನೆಯಿದೆ. ಅದೇನೆಂದರೆ ಭಾರತವನ್ನು ಹಸಿವು ಮತ್ತು ಭಯದಿಂದ ಮುಕ್ತವಾಗಿಸುವುದು ಇದರಿಂದ ದೇಶ ದಾರಿದ್ರ್ಯದಿಂದ ಹೊರಬರಲು ಸಾಧ್ಯವೆಂದು ತಿಳಿದು ಗ್ರಾಮೀಣ ಭಾಗದ ಬಡವರ, ಕೃಷಿಕರ, ಕಾರ್ಮಿಕರ ಪರ ಹೆಚ್ಚಿನ ಧ್ವನಿಯೆತ್ತಿ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮತ್ತು ಆರ್ಥಿಕ ಸಬಲೀಕರಣದ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು.

25 ಡಿಸೆಂಬರ್‌ 1924 ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನ ಶಿಂದೆ ಕಿ ಚವ್ವಾಣಿ ಗ್ರಾಮದಲ್ಲಿ ಕೃಷ್ಣ ದೇವಿ ಮತ್ತು ಕೃಷ್ಣ ಬಿಹಾರಿ ವಾಜಪೇಯಿ ಅವರ ಮಗನಾಗಿ ಜನಿಸಿದರು. ಅಟಲ್ ಬಿಹಾರಿ ವಾಜಪೇಯಿಯವರ ತಂದೆ ಒಬ್ಬ ಕವಿ ಮತ್ತು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಂದೆಯ ಗರಡಿ ಮನೆಯಲ್ಲಿ ಬೆಳೆದ ಮಗ ದೇಶವೇ ಗುರುತಿಸುವಂತಹ ಪ್ರಬುದ್ಧ ರಾಜಕರಣಿಯಾಗಿ ಬೆಳೆದು ಅಜಾತಶತ್ರುವೆಂಬ ಬಿರುದು ಪಡೆದು 16 ಆಗಸ್ಟ್ 2018 ರಲ್ಲಿ ಕೊನೆಯುಸಿರೆಳೆದರು. ದೇಶಕ್ಕೆ ನೀಡಿದ ಸೇವೆ ಮತ್ತು ಇವರ ಆಡಳಿತಾವಧಿಯನ್ನು ಇಂದಿಗೂ ಜನ ನೆನೆಯುತ್ತಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com