ಏಷ್ಯಾದ ಕರೆನ್ಸಿಗಳಲ್ಲಿಯೇ ಅತೀ ಹೆಚ್ಚು ಕುಸಿತ ಕಂಡ ಭಾರತದ ರೂಪಾಯಿ

2020 ಡಿಸೆಂಬರ್ ತಿಂಗಳ ಆರಂಭದಲ್ಲಿ ಅಮೇರಿಕಾ ಡಾಲರ್‌ ಎದುರು ಚೇತರಿಸಿಕೊಂಡಿತ್ತು. ಇದೀಗ ಡಾಲರ್ ಮತ್ತು ಪಾಶ್ಚಿಮಾತ್ಯ ಕೆಲವು ದೇಶಗಳ ಕರೆನ್ಸಿ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಏಷ್ಯಾದ ವಾಣಿಜ್ಯ ಷೇರು ಮಾರುಕಟ್ಟೆಯಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಸೂಚ್ಯಂಕ ತೀವ್ರವಾಗಿ ಕಡಿಮೆಯಾಗಿದೆ.
ಏಷ್ಯಾದ ಕರೆನ್ಸಿಗಳಲ್ಲಿಯೇ ಅತೀ ಹೆಚ್ಚು ಕುಸಿತ ಕಂಡ ಭಾರತದ ರೂಪಾಯಿ

ಕರೋನಾ ಸಂಕಷ್ಟದಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಮಟ್ಟದ ಕುಸಿತ ಕಂಡಿದ್ದು, ಏಷ್ಯಾದ ಇತರೆ ದೇಶಗಳ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ಮೌಲ್ಯ ಪಾತಾಳಕ್ಕೆ ಇಳಿದಿದೆ.

2020 ಡಿಸೆಂಬರ್ ತಿಂಗಳ ಆರಂಭದಲ್ಲಿ ಅಮೇರಿಕಾ ಡಾಲರ್‌ ಎದುರು ಚೇತರಿಸಿಕೊಂಡಿತ್ತು. ಇದೀಗ ಡಾಲರ್ ಮತ್ತು ಪಾಶ್ಚಿಮಾತ್ಯ ಕೆಲವು ದೇಶಗಳ ಕರೆನ್ಸಿ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಏಷ್ಯಾದ ವಾಣಿಜ್ಯ ಷೇರು ಮಾರುಕಟ್ಟೆಯಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಸೂಚ್ಯಂಕ ತೀವ್ರವಾಗಿ ಕಡಿಮೆಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವರ್ಷದ ಮಧ್ಯದಲ್ಲಿ ರೂಪಾಯಿ ಮೌಲ್ಯ ಯುಎಸ್ ನ ಡಾಲರ್ ಎದುರು 3.28% ರಷ್ಟು ಭಾರೀ ಕುಸಿತ ಕಂಡುಬಂದ ಕಾರಣ ಆರ್ಥಿಕ ಸೂಚ್ಯಂಕವೂ ಕುಂಠಿತವಾಗಿದೆ. ಅಧಿಕ ಸಾಲದ ಹೊರೆ ಹೊಂದಿದ ಪಾಕಿಸ್ತಾನದ ಕರೆನ್ಸಿ 3.53 ರಷ್ಟು ಕುಸಿದಿದೆ. ಮತ್ತೊಂದೆಡೆ ಪ್ರವಾಸೋದ್ಯಮದಲ್ಲಿ ಹೆಚ್ಚು ಆದಾಯಗಳಿಸುತ್ತಿದ್ದ ಥೈಲಾಂಡ್ ಕರೆನ್ಸಿ ಮೌಲ್ಯದಲ್ಲಿ 1.42% ದಷ್ಟು ಇಳಿಕೆ ಕಂಡಿದೆ.

ಭಾರತದಲ್ಲಿ ರೂಪಾಯಿ ಮೌಲ್ಯ ಕುಸಿಯಲು ಕಾರಣ RBIಯ ಕೆಲವೊಂದು ನಿಯಮಗಳೇ ಕಾರಣ ಎಂಬುವುದು ತಜ್ಞರ ಅಭಿಪ್ರಾಯ. ಇದರಿಂದ ವಿದೇಶಿ ಕರೆನ್ಸಿಗಳಿಗೆ ಪೈಪೋಟಿ ಕೊಡಲು ಸಾಧ್ಯವಾಗದೆ ನಿಧಿ ಸಂಗ್ರಹಿಸುವುದರಲ್ಲಿ ಮತ್ತು ವಿದೇಶಿ ಒಳಹರಿವಿನ ಹೆಚ್ಚಳದಲ್ಲಿ ಸಮಸ್ಯೆ ಉಂಟಾಗಿ ಈಗಿನ ರುಪಾಯಿಯ ದುರ್ಬಲ ಸ್ಥಿತಿಗೆ ಕಾರಣವಾಗಿದೆ, ಎಂದು ಹೇಳಿದ್ದಾರೆ.

RBIನ ಕೆಲವೊಂದು ನಿಬಂಧನೆಗಳು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಮತ್ತು ಗ್ರಾಹಕರ ಭಾಗವಹಿಸುವಿಕೆಯಲ್ಲಿ ಇಳಿಕೆ ಕಂಡು ಬಂದಿದ್ದರಿಂದ ರೂಪಾಯಿ ಮೌಲ್ಯ ಕುಸಿದಿರ ಬಹುದು ಎಂದು ಹಿರಿಯ ಸಂಶೋಧಕ, ವಿಮರ್ಶಕ, ಹಿರಿಯ ಆರ್ಥಿಕ ವಿಶ್ಲೇಷಕರಾಗಿರುವ ಶ್ರೀರಾಮ್ ಐಯರ್ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com