ಕೇಂದ್ರ ಸರ್ಕಾರ ಕೃಷಿ ವಿರೋಧಿ ನೀತಿ ವಿರೋಧಿಸಿ ರೈತರೆಲ್ಲ ಒಂದುಗೂಡಿ ದೇಶದಲ್ಲಿ 27 ದಿನದಿಂಧ ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರದ ವಿರೋಧ ಪಕ್ಷದ ನಾಯಕರು ಕೃಷಿಕಾನೂನಿಗೆ ಸಂಬಂಧಿಸಿದಂತೆ ಮತ್ತು ರೈತರ ಪ್ರತಿಭಟನೆಗೆ ಸರ್ಕಾರ ಉತ್ತರ ನೀಡುವಂತೆ ಲಿಖಿತ ರೂಪದಲ್ಲಿ ರಾಷ್ಟ್ರಪತಿಗೆ ಪತ್ರ ರವಾನಿಸಿದ್ದಾರೆ. ಮೋದಿಯೊಬ್ಬ ಕಳ್ಳ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುರುವಾರದಂದು ರಾಹುಲ್ ಗಾಂಧಿ ನಾಯಕತ್ವದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಒಳಗೊಂಡ ನಿಯೋಗ ರಾಷ್ಟ್ರಪತಿಭವನಕ್ಕೆ ಭೇಟಿ ನೀಡಿ ಕೃಷಿಕಾಯ್ದೆಗಳನ್ನು ತಡೆದು ರೈತರಿಗೆ ನ್ಯಾಯ ಕೊಡಿಸಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇತ್ತ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಭವನದವರೆಗೆ ಹಮ್ಮಿಕೊಂಡ ಪಾದಯಾತ್ರೆಯನ್ನು ಪೊಲೀಸರು ತಡೆದಿದ್ದರು. ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಸೇರಿದಂತೆ ಹಲವು ನಾಯಕರನ್ನು ಈ ಸಂದರ್ಭದಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಸರ್ಕಾರ ಅಧಿಕಾರಿಗಳನ್ನು ತಮಗೆ ಬೇಕಂತೆ ನಡೆಸಿಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ರಾಃಉಲ್ ಗಾಂಧಿ ಹರಿಹಾಯ್ದಿದ್ದಾರೆ.
ಬಂಡವಾಳಶಾಹಿಗಳನ್ನು ಮೋದಿ ಉದ್ಧಾರ ಮಾಡಲು ಹೊರಟಿದ್ದಾರೆ. ದೇಶದ ಜನತೆಗೆ ಮತ್ತು ರೈತರಿಗೆ ಈ ಸತ್ಯ ತಿಳಿದೇ ರೈತರು ಪ್ರಧಾನಿ ಮೋದಿಯ ಮೋಡಿನ ಮಾತಿಗೆ ಮೋಸ ಹೋಗದೆ ಪ್ರತಿಭಟನೆಯನ್ನು ಮುಂದುವರೆಸುತ್ತಿರುವುದು. ಈ ವೇಳೆ ಸರ್ಕಾರ ರೈತರನ್ನು ಕೀಳುಮಟ್ಟದಲ್ಲಿ ನೋಡಿ ಅವಮಾನವೀಯವಾಗಿ ನಡೆಸಿಕೊಂಡಿದ್ದಾರೆ. ದೆಹಲಿಯ ಗಡಿಯಲ್ಲಿ ಹೋರಾಡುವ ರೈತರಿಗೆ ಮೋದಿಯೊಬ್ಬ ಕಳ್ಳ ಎಂದು ತಿಳಿದಿದೆ,” ಎಂದು ರಾಹುಲ್ ಗಾಂಧಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ರೈತರನ್ನು ಹಾಗೂ ಕಾರ್ಮಿಕರನ್ನು ಎದುರಿಸುವ ಶಕ್ತಿ ದೇಶದಲ್ಲಿ ಯಾರಿಗೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರಶ್ನೆ ಮಾಡುವ, ನ್ಯಾಯ ಕೇಳುವ ಹಕ್ಕಿದೆ. ಈ ರೈತರ ಪ್ರತಿಭಟನೆ ಕೇವಲ ಬಿಜೆಪಿ, ಆರ್ಎಸ್ಎಸ್ ನಂತಹ ಸಂಸ್ಥೆಗಳಿಗೆ ಮಾತ್ರ ನಷ್ಟ ಉಂಟುಮಾಡುವುದಿಲ್ಲ, ಬದಲಗಿ ಸಂಪೂರ್ಣ ದೇಶಕ್ಕೆ ನಷ್ಟವನ್ನು ಉಂಟುಮಾಡುತ್ತದೆ. ಹೀಗೆ ಮಾಡಿದರೆ ದೇಶದಲ್ಲಿ ಅಶಾಂತಿಯ ವಾತಾವರಣ ಹೆಚ್ಚುತ್ತದೆ. ಈ ಬಗ್ಗೆ ಸರ್ಕಾರ ಬಹುಬೇಗನೆ ಎಚ್ಚೆತ್ತುಕೊಂಡು ಕಾಯ್ದೆಯನ್ನು ಹಿಂಪಡೆಯುಬೇಕು ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಎಚ್ಚರಿಸಿದ್ದಾರೆ.