ಇನ್ನೂ ಆರಂಭಗೊಳ್ಳದ ರಷ್ಯಾ-ಭಾರತ ಸಹಯೋಗದ ರಕ್ಷಣಾ ಕ್ಷೇತ್ರದ ಜಂಟಿ ಉದ್ಯಮಗಳು

ರಕ್ಷಣಾ ಇಲಾಖೆಯು ಅಸಾಲ್ಟ್ ರೈಫಲ್ಗಳು ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್ಗಳು (LUH) ನ್ನು ರಷ್ಯಾ ಸಹಯೋಗದೊಂದಿಗೆ ತಯಾರಿಕೆಗೆ ಹೆಚ್ಚಿದ ವೆಚ್ಚಗಳು, ದೋಷಪೂರಿತ ಯೋಜನೆಯ ಕಾರಣದಿಂದ ಇನ್ನೂ ಆರಂಭಿಕ ಹಂತದಲ್ಲೆ ಇವೆ.
ಇನ್ನೂ ಆರಂಭಗೊಳ್ಳದ ರಷ್ಯಾ-ಭಾರತ ಸಹಯೋಗದ ರಕ್ಷಣಾ ಕ್ಷೇತ್ರದ ಜಂಟಿ ಉದ್ಯಮಗಳು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಆತ್ಮನಿರ್ಭರ ಭಾರತ ಯೋಜನೆಯಡಿ ದೇಶವು ಆಮದು ಮಾಡಿಕೊಳ್ಳುವ ಬಹುತೇಕ ವಸ್ತುಗಳನ್ನು ಇಲ್ಲಿಯೇ ತಯಾರಿಸಿ ವಿದೇಶಗಳಿಗೂ ರಫ್ತು ಮಾಡುವ ಗುರಿ ಹೊಂದಿದೆ. ಆದರೆ ದೇಶದ ಪ್ರಮುಖ ರಕ್ಷಣಾ ಉಪಕರಣವನ್ನು ಭಾರತ ಮತ್ತು ರಷ್ಯಾ ಸಹಯೋಗದೊಂದಿಗೆ ತಯಾರಿಕೆಯ ಈ ಯೋಜನೆ ಇನ್ನೂ ಕಾಗದದಲ್ಲೆ ಉಳಿದಿದೆ. ರಕ್ಷಣಾ ಇಲಾಖೆಯು ಅಸಾಲ್ಟ್ ರೈಫಲ್ಗಳು ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್ಗಳು (LUH) ನ್ನು ರಷ್ಯಾ ಸಹಯೋಗದೊಂದಿಗೆ ತಯಾರಿಕೆಗೆ ಹೆಚ್ಚಿದ ವೆಚ್ಚಗಳು, ದೋಷಪೂರಿತ ಯೋಜನೆಯ ಕಾರಣದಿಂದ ಇನ್ನೂ ಆರಂಭಿಕ ಹಂತದಲ್ಲೆ ಇವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿಭಾರತದ ಮಿಲಿಟರಿಗೆ ಅವಶ್ಯವಿರುವ 750,000 ಕಲಾಶ್ನಿಕೋವ್ ಎಕೆ -203 ರೈಫಲ್ಗಳನ್ನು ಸರಬರಾಜು ಮಾಡಲು ಇಂಡೋ-ರಷ್ಯನ್ ಪ್ರೈವೇಟ್ ಲಿಮಿಟೆಡ್ (IRPL) ಮತ್ತು 200 ಕಾಮೋವ್ -226 ಟಿ 'ಹುಡ್ಲಮ್' ಹೆಲಿಕಾಪ್ಟರ್ ಗಳನ್ನು ಭಾರತೀಯ ವಾಯುಪಡೆಗೆ (IAF) ನೀಡಲು ಸ್ಥಾಪಿಸಲಾದ ಭಾರತ-ರಷ್ಯಾ ಹೆಲಿಕಾಪ್ಟರ್ ಲಿಮಿಟೆಡ್ (IRHL) ಮತ್ತು ಆರ್ಮಿ ಏವಿಯೇಷನ್ ಕಾರ್ಪ್ಸ್ (AAC) ಕಂಪೆನಿಗಳು ಇನ್ನೂ ಕೂಡ ಕಾರ್ಯಾರಂಭ ಮಾಡಲು ಸಾಧ್ಯವಾಗಿಲ್ಲ. ಈ ರೈಫಲ್ ಮತ್ತು ಹೆಲಿಕಾಪ್ಟರ್ ಗಳು ದೇಶದ ಸೇನೆಗೆ ತುರ್ತು ಅವಶ್ಯಕತೆ ಇರುವ ವಸ್ತುಗಳಾಗಿವೆ. ಇವುಗಳ ತೀವ್ರ ಕೊರತೆ ಇರುವುದರಿಂದ ಈಗಲೂ ತುರ್ತಿನ ಸಂದರ್ಭ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈಗ ವಾಯುಸೇನೆಯು ಬಳಸುತ್ತಿರುವ ಚೀತಾ ಮತ್ತು ಚೇತಕ್ ಹೆಲಿಕಾಫ್ಟರ್ ಗಳು 1960 ರಷ್ಟು ಹಳೆಯವು. ಉತ್ಪಾದನೆ ಇನ್ನೂ ಆರಂಬಗೊಳ್ಳದಿರುವುದಕ್ಕೆ ರಕ್ಷಣಾ ಸಚಿವಾಲಯದ (MoD) ದೋಷಪೂರಿತ ಯೋಜನೆ ಕಾರಣವಾಗಿದೆ ಎಂದು ಮಾಜಿ ಸೇನಾಧಿಕಾರಿಯೊಬ್ಬರು ಹೇಳಿದರು. ಮಿಲಿಟರಿ ಸಾಮರ್ಥ್ಯ ಅಭಿವೃದ್ಧಿಗೆ ಪ್ರಾಯೋಗಿಕ ಮತ್ತು ವಾಸ್ತವಿಕ ವಿಧಾನವನ್ನು ಅನುಸರಿಸುವ ಬದಲು ಸೇನೆ ಮತ್ತು ರಕ್ಷಣಾ ಸಚಿವಾಲಯವು ಜಗಳವಾಡುತಿದ್ದಾರೆ ಎಂದೂ ಅವರು ಹೇಳಿದರು.

ಶಸ್ತ್ರಾಸ್ತ್ರ ವ್ಯವಸ್ಥೆಗಾಗಿ ಸೈನ್ಯದ ಇನ್ಫಾಂಟ್ರಿ ನಿರ್ದೇಶನಾಲಯವು ರೂಪಿಸಿದ ದೋಷಪೂರಿತ ಅವಶ್ಯಕತೆ ಪಟ್ಟಿಯ ಕಾರಣ ಐದು ವರ್ಷಗಳ ಪ್ರಯೋಗಗಳು ಮತ್ತು ಮೌಲ್ಯಮಾಪನಗಳ ನಂತರ ಸೈನ್ಯದ ಸಂಪೂರ್ಣ ಅಪ್ರಾಯೋಗಿಕ ಮಲ್ಟಿ-ಕ್ಯಾಲಿಬರ್ ಅಟ್ಯಾಕ್ ರೈಫಲ್ ಟೆಂಡರ್ ಅನ್ನು 2015 ರಲ್ಲಿ ರದ್ದುಗೊಳಿಸಿತು. ಈ ಅಟ್ಯಾಕ್ ರೈಫಲ್ ಗಳನ್ನು 1990 ರ ದಶಕದ ಮಧ್ಯಭಾಗದಲ್ಲಿ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಭಾರತೀಯ ಸಣ್ಣ ಶಸ್ತ್ರಾಸ್ತ್ರ ವ್ಯವಸ್ಥೆ (INSAS) ರೈಫಲ್ಗಳಿಗೆ ಬದಲಾಗಿ ಉಪಯೋಗಿಸಲು ಉದ್ದೇಶಿಸಲಾಗಿತ್ತು, ಈ ಟೆಂಡರ್ ನ್ನು ರದ್ದುಗೊಳಿಸಿದ ನಂತರ ಸರ್ಕಾರಿ-ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (OFB) ಯಿಂದ ಆಕ್ರಮಣಕಾರಿ ರೈಫಲ್ ಅನ್ನು ಪಡೆಯಲು ಸಚಿವಾಲಯ ತೀರ್ಮಾನಿಸಿತು . ಆದರೆ ನಾಲ್ಕು ವರ್ಷಗಳ ನಂತರ, 2019 ರ ಮಾರ್ಚ್ನಲ್ಲಿ, ಸಾರ್ವತ್ರಿಕ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮೇಥಿ ಬಳಿಯ ಕೊರ್ವಾದಲ್ಲಿ ಒಎಫ್ಬಿ ಕಾರ್ಖಾನೆಯನ್ನು ಉದ್ಘಾಟಿಸಿದರು. ಇಲ್ಲಿ 7,50,000 ರಷ್ಯಾದ ಕಲಾಶ್ನಿಕೋವ್ ಎಕೆ -203 7.62x39 ಎಂಎಂ ದಾಳಿ ರೈಫಲ್ಗಳನ್ನು ನಿರ್ಮಿಸಲು ಪರವಾನಗಿ ನೀಡಿದರು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಹಯೋಗವನ್ನು ಮಾಡಲು ಅಂತರ-ಸರ್ಕಾರಿ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಈ ಐಆರ್ಪಿಎಲ್ ನಲ್ಲಿ , ಶೇಕಡಾ ಭಾರತದ ಕಂಪೆನಿ 50.5 % ರಷ್ಟು , ಕಲಾಶ್ನಿಕೋವ್ ಗ್ರೂಪ್ 42% ಮತ್ತು ರಷ್ಯಾದ ಸರ್ಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ರಫ್ತು ಸಂಸ್ಥೆ ರೋಸನ್ಬೊರೊನೆಕ್ಸ್ಪೋರ್ಟ್ನ ಶೇಕಡಾ 7.5 ರಷ್ಟು ಪಾಲನ್ನು ಹೊಂದಿದೆ.

ಸೈನ್ಯದ ತುರ್ತು ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು ಐಆರ್ಪಿಎಲ್ ಸುಮಾರು 1,00,000 ಎಕೆ -203 ಗಳನ್ನು ಸುಮಾರು ತಲಾ 81,000 ರೂಪಾಯಿಗಳ ದರಕ್ಕೆ ಆಮದು ಮಾಡಿಕೊಳ್ಳುವ ಉದ್ದೇಶವಿತ್ತು, ನಂತರ ಉಳಿದ 650,000 ರೈಫಲ್ ಗಳನ್ನು ಇಲ್ಲಿಯೇ ತಯಾರಿಸುವ ಯೋಜನೆ ಇತ್ತು. ಆಧರೆ ಹೊಂದಾಣಿಕೆ ಮಾಡಲಾಗದ ಬೆಲೆ ವ್ಯತ್ಯಾಸಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಸಮಸ್ಯೆಗಳು ಎದುರಾದವು. , ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಳೆ ದ ಸೆಪ್ಟೆಂಬರ್ನಲ್ಲಿ ನಡೆದ ಮಾಸ್ಕೋ ಭೇಟಿಯ ಸಂದರ್ಭದಲ್ಲಿಯೂ ದರದ ಸಮಸ್ಯೆಯನ್ನು ಬಗೆಹರಿಸಲಾಗಿಲ್ಲ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಇದನ್ನು ಪರಿಹರಿಸಲು ಒoಆ ಸೆಪ್ಟೆಂಬರ್ನಲ್ಲಿ ‘ವೆಚ್ಚ ಸಮಿತಿ’ ಯನ್ನು ಸ್ಥಾಪಿಸಿತು. ಈ ಸಮಿತಿಯ ವರದಿಯನ್ನು ಒoಆ ಗೆ ಸಲ್ಲಿಸಲಾಗಿದೆಯೆ ಮತ್ತು ಅದು ಹಾಗಿದ್ದಲ್ಲಿ, ಫಲಿತಾಂಶ ಏನು ಎಂದು ಸ್ಪಷ್ಟವಾಗಿಲ್ಲ. ಜೆವಿ (ಜಾಯಿಂಟ್ ವೆಂಚರ್ ) ನಡಿ ಉತ್ಪಾದಿಸಿದ ಎಕೆ -203 ರೈಫಲ್ಗೆ ತಲಾ $ 200 ರ ರಾಯಧನವನ್ನು ರಷ್ಯನ್ನರು ಕೋರಿದ್ದಾರೆ ಎಂದು ವರದಿಯಾಗಿದೆ, ಇದು 650,000 ಯುನಿಟ್ಗಳಿಗೆ 130 ದಶಲಕ್ಷ ಡಾಲರ್ ಆಗುತ್ತದೆ. ಜೆ.ವಿ ವಾರ್ಷಿಕವಾಗಿ 70,000 ಎಕೆ -203 ಗಳನ್ನು ಉತ್ಪಾದಿಸಲು ಯೋಜಿಸಲಾಗಿತ್ತು. ಆದರೆ ಒಪ್ಪಂದದ ಸಮಸ್ಯೆಗಳು ಇಲ್ಲಿಗೆ ಕೊನೆಯಾಗಿಲ್ಲ. ಅಮೇರಿಕಾದಿಂದ 2019 ರಲ್ಲಿ ಆಮದು ಮಾಡಿಕೊಂಡ ಎಕೆ 203 ರೈಫಲ್ ಗಳ ಬೆಲೆ 72,400 ರೂಪಾಯಿ ಆಗಿದೆ. ಹೀಗಾಗಿ ಇಲ್ಲೆ ತಯಾರಿಸಿದರೆ ಹೆಚ್ಚು ಖರ್ಚಾಗುವುದರಿಂದ ಏಕೆ ತಯಾರಿಸಬೇಕು ಎಂಬ ಪ್ರಶ್ನೆ ಎದ್ದಿದೆ.

ಇನ್ನು ಹೆಲಿಕಾಪ್ಟರ್ ತಯಾರಿಕೆಯ ವಿಷಯದಲ್ಲೂ ರಷ್ಯಾ ಸಹಯೋಗದೊಂದಿಗೆ ಐಆರ್ಹೆಚ್ಎಲ್ ಎಂಬ ಜೆವಿಯನ್ನು ಸ್ಥಾಪಿಸಲಾಯಿತು. ಇದರಲ್ಲಿ ರಷ್ಯಾದ ರೋಸ್ಟೆಕ್ ಕಾರ್ಪೊರೇಷನ್ 49.5% ಪಾಲನ್ನು ಹೊಂದಿದೆ ಮತ್ತು ಭಾರತದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಪಾಲು 51.5% ನಷ್ಟಿದೆ. ಈ ಜೆವಿ ತುಮಕೂರಿನ ಬಳಿ ಘಟಕ ಆರಂಬಿಸಲು ಸಿದ್ದತೆ ನಡೆಸಿತ್ತು. ಮೊದಲಿಗೆ 40 ಹುಡ್ಲಮ್ ಹೆಲಿಕಾಪ್ಟರ್ ಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವುದು , ನಂತರ 60 ಹೆಲಿಕಾಫ್ಟರ್ ಗಳನ್ನು ಇಲ್ಲಿಯೇ ಆಮದು ಮಾಡಿದ ಬಿಡಿ ಭಾಗ ಬಳಸಿ ಜೋಡಿಸುವುದು ತದನಂತರ 100 ಹೆಲಿಕಾಫ್ಟರ್ ಗಳನ್ನು ಸಂಪೂರ್ಣ ದೇಶೀಯವಾಗಿ ತಯಾರಿಸುವುದು ಎಂದು ಯೋಜಿಸಲಾಗಿತ್ತು. ಆದರೆ ರಷ್ಯಾವು ತಂತ್ರಜ್ಞಾನ ವರ್ಗಾವಣೆಗೆ ಹೆಚ್ಚಿನ ಹಣ ಕೇಳಿದ್ದರಿಂದ ಇದೂ ಕೂಡ ಮುರಿದು ಬೀಳಲಿದೆ. ದೇಶವು ಇಂದು ಅತ್ಯಂತ ಹೆಚ್ಚು ಖರೀದಿ ಮಾಡುವುದು ರಕ್ಷಣಾ ಉಪಕರಣಗಳನ್ನು ಆಗಿದ್ದು ಇದರಲ್ಲೆ ಆತ್ಮನಿರ್ಭರ ಯೋಜನೆ ವಿಫಲವಾದರೆ ಬೇರೆ ರಂಗದಲ್ಲಿ ಯಶಸ್ಸು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.

ದಿ ವೈರ್

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com