ಯುಕೆ: ದ್ವೇಷ ಪೂರಿತ ಕಾರ್ಯಕ್ರಮ ಪ್ರಸಾರ ಮಾಡಿದ ʼರಿಪಬ್ಲಿಕ್‌ ಭಾರತ್‌ʼಗೆ ದಂಡ

ಜುಲೈ 22 2019 ರಲ್ಲಿ ನಡೆದ ಚಂದ್ರಯಾನ-2 ಉಡಾವಣೆ ಕುರಿತಂತೆ ಪಾಕಿಸ್ತಾನದ ಮೂವರು ಹಾಗೂ ಭಾರತೀಯ ಮೂವರು ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಪಾಕ್ ಮತ್ತು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಪ್ರಗತಿ ಕುರಿತು ಚರ್ಚಿಸುವ ವೇಳೆ ಭಯೋತ್ಪಾದನಾ ವಿಚಾರ ಪ್ರಸ್ತಾಪಿಸಿ, ಪಾಕಿಸ್ತಾನದ ಎಲ್ಲರೂ ಭಯೋತ್ಪಾದಕರು ಎಂಬಂತೆ ಬಿಂಬಿಸಲಾಗಿದೆ ಎಂದು ರಿಪಬ್ಲಿಕ್‌ ಟಿವಿ ವಿರುದ್ಧ ಆರೋಪ ಸಾಬೀತಾಗಿದೆ.
ಯುಕೆ: ದ್ವೇಷ ಪೂರಿತ ಕಾರ್ಯಕ್ರಮ ಪ್ರಸಾರ ಮಾಡಿದ ʼರಿಪಬ್ಲಿಕ್‌ ಭಾರತ್‌ʼಗೆ ದಂಡ

ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ಕಾರ್ಯಕ್ರಮದ ಕುರಿತಂತೆ ಯುನೈಟೆಡ್‌ ಕಿಂಗ್‌ಡಂ ನ ಆಫೀಸ್‌ ಆಫ್‌ ಕಮ್ಯುನಿಕೇಷನ್ (Ofcom) 20 ಲಕ್ಷ ರೂ ದಂಡವಿಧಿಸಿದೆ. ತನ್ನ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ವಿರುದ್ಧ ದ್ವೇಷಕಾರುವಂತಹ ಹಾಗೂ ಅಕ್ಷೇಪಾರ್ಹ ಪದಬಳಕೆ ಮಾಡಿದಕ್ಕಾಗಿ Ofcom ದಂಡ ವಿಧಿಸಿದೆ. ಯುಕೆಯಲ್ಲಿ ರಿಪಬ್ಲಿಕ್‌ ಟಿವಿಯ ಪ್ರಸಾರ ಪರವಾನಿಗೆ ಹೊಂದಿರುವ ʼವರ್ಡ್ ವ್ಯೂವ್ ಮಿಡಿಯಾ ನೆಟ್ವರ್ಕ್ ಲಿಮಿಟೆಡ್ʼ ಗೆ Ofcom ದಂಡವಿಧಿಸಿದೆ.

ಬ್ರಿಟನ್ ನಲ್ಲಿ ಹಿಂದಿಮಾತನಾಡುವವರನ್ನು ಪ್ರಚೋಧಿಸುತ್ತಿರುವುದಲ್ಲದೆ. ಪಾಕಿಸ್ತಾನಿಗರ ಮೇಲೆ ದ್ವೇಷಕಾರುವಂತಹ ಕಾರ್ಯಕ್ರಮಗಳನ್ನು ಪ್ರಸಾರಮಾಡಲಾಗುತ್ತಿದೆ ಎನ್ನಲಾಗಿದೆ.

2019ರ ಸೆಪ್ಟೆಂಬರ್‌ 6 ರಂದು ಅರ್ನಾಬ್‌ ಗೋಸ್ವಾಮಿ ನಿರೂಪಣೆಯಲ್ಲಿ ಪ್ರಸಾರವಾದ 'Poochta Hai Bharat' ಕಾರ್ಯಕ್ರಮದಲ್ಲಿ ಪಾಕಿಸ್ತಾನಿಗಳ ವಿರುದ್ಧ ಆಕ್ಷೇಪಾರ್ಹ ಪದಬಳಸಲಾಗಿದೆಯೆಂದು ರಿಪಬ್ಲಿಕ್ ಟಿವಿಯ ಮೇಲೆ ಆರೋಪಿಸಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾರ್ಯಕ್ರಮದಲ್ಲಿ, ಪಾಕಿಸ್ತಾನದ ಎಲ್ಲಾ ವಿಜ್ಞಾನಿಗಳು, ವೈದ್ಯರು, ನಾಯಕರು, ರಾಜಕಾರಣಿಗಳು ಹಾಗೂ ಕ್ರೀಡಾಪಟುಗಳು ಭಯೋತ್ಪಾದಕರು. ಅಲ್ಲಿನ ಪ್ರತಿ ಮಗುವೂ ಉಗ್ರಗಾಮಿಗಳು ಎಂದು ರಿಪಬ್ಲಿಕ್‌ ಟಿವಿ ಸಲಹಾ ಸಂಪಾದಕ ಗೌರವ್‌ ಆರ್ಯ ಹೇಳಿರುವುದನ್ನು Ofcom ಉಲ್ಲೇಖಿಸಿದೆ.

ಪಾಕಿಸ್ತಾನ ಪ್ರಜೆಗಳು ಕಳ್ಳರು, ಭಯೋತ್ಪಾದಕರು, ಜೊತೆಗೆ ಭಾರತೀಯರ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಪಾಕ್ ನಿರಂತರ ಕುಮ್ಮಕ್ಕು ನಡೆಸುತ್ತಿರುತ್ತದೆ ಎಂದು ಹೇಳಲಾಗಿರುವ ಕಾರ್ಯಕ್ರಮದಲ್ಲಿ ಪಾಕ್ ಜನತೆಯನ್ನು ಕತ್ತೆ ಮತ್ತು ಕೋಳಿಗೆ ಹೋಲಿಸಲಾಗಿತ್ತು. ಪಾಕಿ ಎಂಬ ಪದ ಬಳಸಿ ಪಾಕಿಸ್ತಾನಿಗಳನ್ನು ಟೀಕಿಸಲಾಗಿದೆ. ನಿಂದನೆ ಮತ್ತು ಅವಹೇಳನಕಾರಿ ಹೇಳಿಕೆ ಬಳಸಲಾಗಿದೆ ಎಂದು ಆಫ್ಕೋಂ ಹೇಳಿದೆ.

ನಾವು ವಿಜ್ಞಾನಿಗಳನ್ನು ಸೃಷ್ಟಿಸುತ್ತೇವೆ, ನೀವು ಭಯೋತ್ಪಾದಕರನ್ನು ಸೃಷ್ಟಿಸುತ್ತೀರಿ ಎಂದು ಕಾರ್ಯಕ್ರಮ ನಿರೂಪಕ ಗೋಸ್ವಾಮಿ ಪಾಕಿಸ್ತಾನವನ್ನು ಉದ್ಧೇಶಿಸಿ ನೀಡಿರುವ ಹೇಳಿಕೆಯನ್ನು Ofcom ಗಂಭೀರವಾಗಿ ಪರಿಗಣಿಸಿದೆ.

ಅಲ್ಲದೆ, ಭಾರತ 370ನೇ ವಿಧಿ ರದ್ದು ಮಾಡಿದ ವೇಳೆ, ಜಮ್ಮು ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆಯೂ ದ್ವೇಷಕಾರುವ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ ಎಂದು Ofcom ಪ್ರಸ್ತಾಪಿಸಿದೆ. ವರ್ಲ್ಡ್ ಮಿಡಿಯಾ ನೆಟ್ವರ್ಕ್ ಲಿಮಿಟೆಡ್ ಸಂಸ್ಥೆ ಕಾನೂನು ಬದ್ಧವಾದ ತತ್ವಗಳನ್ನು ಮೀರಿ ಯುಕೆಯಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು.

ಇದು ದೇಶ ದೇಶಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಮಾಡುವುದಲ್ಲದೆ. ಇದರಿಂದ ಯುಕೆ ಮತ್ತು ಭಾರತದಲ್ಲಿರುವಂತಹ ಪಾಕಿಸ್ತಾನ ಪ್ರಜೆಗಳಿಗೆ ತೊಂದರೆಯಾಗಿದೆ ಎಂದು Ofcom ಅಭಿಪ್ರಾಯಪಟ್ಟಿದೆ.

ಕಳೆದ ಫೆಬ್ರವರಿ 24 ರಲ್ಲಿ Ofcom ಕೋಡ್ ಉಲ್ಲಂಘನೆ ಕುರಿತಂತೆ ನಿರ್ಧಾರ ತೆಗೆದುಕೊಂಡಿತ್ತು. ಮಂಗಳವಾರದಂದು ದಂಡ ವಿಧಿಸಿ ಆದೇಶ ಹೊರಡಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com