ಹೊಸ ತಳಿಯ ಕರೋನಾ ವೈರಾಣು ಕುರಿತು ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು – ಪ್ರಿಯಾಂಕ್ ಖರ್ಗೆ

ಇಂಗ್ಲೆಂಡ್ ನಿಂದ 2 ದಿನದಲ್ಲಿ 291 ಮಂದಿ ದೇಶಕ್ಕೆ ಬಂದಿದ್ದಾರೆ. ಅವರಲ್ಲಿ 69 ಮಂದಿ ಬಳಿ ಕರೋನಾ ನೆಗೆಟಿವ್ ವರದಿ ಇಲ್ಲ. ಕರ್ನಾಟಕಕ್ಕೆ 138 ಮಂದಿ ಬಂದಿದ್ದಾರೆ. ಜನರಿಗೆ ಮಾಸ್ಕ್ ಹಾಕಿಲ್ಲ ಎಂದು ದಂಡ ಹಾಕುವ ಸರ್ಕಾರ ವಿದೇಶದಿಂದ ಬರುವವರನ್ನು ಪರೀಕ್ಷಿಸದೆ ಒಳ ಬಿಡುತ್ತಿದೆ. ಅವರಿಗೆ ಕ್ವಾರಂಟೈನ್ ಇಲ್ಲ
ಹೊಸ ತಳಿಯ ಕರೋನಾ ವೈರಾಣು ಕುರಿತು ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು – ಪ್ರಿಯಾಂಕ್ ಖರ್ಗೆ

ಕರೋನಾ ಸೋಂಕಿನ ಹೊಸ ತಳಿಯ ವೈರಾಣುಗಳು ಯುಕೆಯಲ್ಲಿ ಪತ್ತೆಯಾದ ಬೆನ್ನಲ್ಲೇ, ಭಾರತಕ್ಕೂ ಸೋಂಕು ತಲುಪಿದೆ. ಈ ಸಂದರ್ಭದಲ್ಲಿ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿರುವ ಶಾಸಕ ಪ್ರಿಯಾಂಕ್‌ ಖರ್ಗೆ ಅವರು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಕರೋನಾ ನಿರ್ಲಕ್ಷ್ಯಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ. ಕರೋನಾ ಕಂಡುಬಂದ ಆರಂಭದಲ್ಲಿ ಸೋಂಕನ್ನು ಕಡೆಗಣಿಸಿತ್ತು. ತಕ್ಷಣ ಎಚ್ಚೆತ್ತು ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಿದ್ದರೆ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರಲಿಲ್ಲ. ಕೆಲವರನ್ನು ಕ್ವಾರಂಟೈನ್ ಮಾಡುವ ಅವಕಾಶವನ್ನು ಕೈಚೆಲ್ಲಿದ ಕೇಂದ್ರ ಸರ್ಕಾರ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅವೈಜ್ಞಾನಿಕ ಲಾಕ್ ಡೌನ್ ಜಾರಿ ಮಾಡಿ ದೇಶವನ್ನ ಅಧೋಗತಿಗೆ ತಳ್ಳಿತ್ತು. ಈಗ ಮತ್ತೊಮ್ಮೆ ಅದೇ ರೀತಿಯ ನಿರ್ಲಕ್ಷ್ಯವನ್ನು ಸರ್ಕಾರ ಅನುಸರಿಸಿದೆ. ಸೋಂಕು ಇಳಿಮುಖವಾಗಿದೆ ಎಂದು ಎಲ್ಲಾ ಮುನ್ನೆಚೆರಿಕೆಗಳನ್ನು ಗಾಳಿಗೆ ತೂರಲಾಗಿದೆ,” ಎಂದಿದ್ದಾರೆ.

ಜನರಿಗೆ ಮಾತ್ರ ಮಾಸ್ಕ್ ಧರಿಸಬೇಕೆಂದು ಒತ್ತಡ ಹೇರಿ ದಂಡ ವಸೂಲಿ ಮಾಡಲಾಗುತ್ತಿದೆ.‌ಆದರೆ ಸರ್ಕಾರ ಮಾತ್ರ ತನ್ನ ಪಾಲಿನ ಜವಾಬ್ದಾರಿಗಳಿಂದ ನುಣಚಿಕೊಳ್ಳುತ್ತಿದೆ. ಶಾಲಾ ಕಾಲೇಜು ಆರಂಭಿಸಲಾಗಿದೆ. ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಮುಕ್ತವಾಗಿ ತೆರೆದಿಡಲಾಗಿದೆ. ಆದರೆ ಎಲ್ಲಿಯೂ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಕಳೆದ ಸೆಪ್ಟಂಬರ್ ನಿಂದಲೂ ಇಂಗ್ಲೆಂಡ್ ನಲ್ಲಿ ಸಕ್ರಿಯವಾಗಿರುವ ಹೊಸ ತಳಿಯ ವೈರಸ್ ಕೋವಿಡ್ -19ಗಿಂತಲೂ ಶೇ.70ರಷ್ಟು ವೇಗವಾಗಿ ಹರಡುತ್ತಿದೆ ಎಂಬ ವರದಿ ಇದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಬಹಿರಂಗಗೊಂಡು ವಾರವಾಗಿದೆ. ನಮ್ಮ ದೇಶದ ಆರೋಗ್ಯ ಇಲಾಖೆ ನಿನ್ನೆಯವರೆಗೂ ಎಚ್ಚೆತ್ತುಕೊಂಡಿಲ್ಲ, ಎಂದು ಆರೋಗ್ಯ ಇಲಾಖೆಯ ವಿರುದ್ದ ಕಿಡಿಕಾರಿದ್ದಾರೆ.

ಹೊಸ ತಳಿಯ ಕರೋನಾ ವೈರಾಣು ಕುರಿತು ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು – ಪ್ರಿಯಾಂಕ್ ಖರ್ಗೆ
ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕರೋನಾ: ವಿಮಾನ ಸಂಚಾರ ನಿರ್ಬಂಧಿಸಿದ ಭಾರತ

“ಇಂಗ್ಲೆಂಡ್ ನಿಂದ 2 ದಿನದಲ್ಲಿ 291 ಮಂದಿ ದೇಶಕ್ಕೆ ಬಂದಿದ್ದಾರೆ. ಅವರಲ್ಲಿ 69 ಮಂದಿ ಬಳಿ ಕರೋನಾ ನೆಗೆಟಿವ್ ವರದಿ ಇಲ್ಲ. ಕರ್ನಾಟಕಕ್ಕೆ 138 ಮಂದಿ ಬಂದಿದ್ದಾರೆ. ಜನರಿಗೆ ಮಾಸ್ಕ್ ಹಾಕಿಲ್ಲ ಎಂದು ದಂಡ ಹಾಕುವ ಸರ್ಕಾರ ವಿದೇಶದಿಂದ ಬರುವವರನ್ನು ಪರೀಕ್ಷಿಸದೆ ಒಳ ಬಿಡುತ್ತಿದೆ. ಅವರಿಗೆ ಕ್ವಾರಂಟೈನ್ ಇಲ್ಲ,” ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಇಂಗ್ಲೆಂಡ್ ನಿಂದ ಬಂದವರು ದೇಶದ ಒಳಗೆ ಸಂಚರಿಸಲು ಸುಲಭವಾಗಿ ಬಿಡಲಾಗಿದೆ. ಹೊಸ ತಳಿಯ ಸೋಂಕು ಅವರಿಂದ ಹಬ್ಬಿದ್ದರೆ ಅದರ ಹೊಣೆ ಯಾರು ಹೊರುತ್ತಾರೆ? ಮತ್ತೆ ಚಿಕಿತ್ಸೆ ಹೆಸರಿನಲ್ಲಿ ಲೂಟಿ ಹೊಡೆಯಲು ಬೊಕ್ಕಸದಲ್ಲೂ ಹಣ ಇಲ್ಲ. ಹಾಗಿದ್ದೂ ಸರ್ಕಾರ ಜನರ ಪ್ರಾಣದ ಜೊತೆ ಆಟ ಆಡುತ್ತಿರುವುದೇಕೆ?, ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com