ಮುಂದಿನ ಎರಡೇ ವರ್ಷದಲ್ಲಿ ಟೋಲ್ ಬೂತ್‌ ರಹಿತ ಇಂಡಿಯಾ: ನಿತಿನ್ ಗಡ್ಕರಿ

ಈಗಾಗಲೆ ಪ್ರಯಾಣಿಕರ ಮತ್ತು ಸರಕು ಸಾಗಣೆಯ ಹೊಸ ಮಾದರಿ ವಾಹನಗಳಲ್ಲಿ ಜಿಪಿಎಸ್ ಸೇವೆ ಒದಗಿಸಲಾಗಿದೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ
ಮುಂದಿನ ಎರಡೇ ವರ್ಷದಲ್ಲಿ ಟೋಲ್ ಬೂತ್‌ ರಹಿತ ಇಂಡಿಯಾ: ನಿತಿನ್ ಗಡ್ಕರಿ

ಟೋಲ್ಬೂತ್ ರಹಿತ ಇಂಡಿಯಾ ಮಾಡಲು ಕೇಂದ್ರ ಸರ್ಕಾರ ಯೋಚಿಸಿದ್ದು, ಎರಡು ವರ್ಷಗಳಲ್ಲಿ ವಾಹನಗಳಿಗೆ ಜಿಪಿಎಸ್ ಸೇವೆ ಒದಗಿಸಿ ಆನ್ಲೈನ್ ಮೂಲಕ ನೇರವಾಗಿ ಟೋಲ್ ಸಂಗ್ರಹ ಮಾಡುವುದರ ಜೊತೆಗೆ ಹೆದ್ದಾರಿ ಮಧ್ಯೆಯಿರುವ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಈಗಾಗಲೆ ಪ್ರಯಾಣಿಕರ ಮತ್ತು ಸರಕು ಸಾಗಣೆಯ ಹೊಸ ಮಾದರಿ ವಾಹನಗಳಲ್ಲಿ ಜಿಪಿಎಸ್ ಸೇವೆ ಒದಗಿಸಲಾಗಿದೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಹೆಚ್ಚಿನ ಚಿಂತನೆ ಮತ್ತು ಪರೀಕ್ಷೆ ನಡೆಸಿ ಯೋಜನೆಗೆ ಅನುಮತಿ ನೀಡಲಾಗಿದ್ದು, ಎರಡು ವರ್ಷಗಳಲ್ಲಿ ಈ ಯೋಜನೆ ದೇಶಾದ್ಯಂತ ಸಂಪೂರ್ಣವಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡುವುದರಿಂದ ಟ್ರ್ಯಾಕ್ ಮಾಡಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದಲೇ ನೇರವಾಗಿ ಟೋಲ್ ಹಣ ಸ್ವೀಕರಿಸಬಹುದು. ಇಂಡಿಯಾದಲ್ಲಿ ಟೋಲ್ ರಹಿತ ಹೆದ್ದಾರಿ ವ್ಯವಸ್ಥೆ ಜಾರಿ ಬರುವುದಲ್ಲದೆ, ಟೋಲ್ಗಳಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರ ತಪ್ಪಿಸಲು ಸಹಾಯಕವಾಗುತ್ತದೆ. ಜೊತಗೆ ಪ್ರಯಾಣಿಕರ ಸುಗಮ ಸಂಚಾರಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಹೆಚ್ಚಲಿದೆ ಹೆದ್ದಾರಿ ಆದಾಯ; ಗಡ್ಕರಿ

ಹೆದ್ದಾರಿಗಳಿಂದ ಬರುವ ಆದಾಯ ₹ 34,000 ಕೋಟಿಯನ್ನು ತಲುಪಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಜಿಪಿಎಸ್ ಆಧಾರಿತ ಟೋಲ್‌ ಬೂತ್‌ನೊಂದಿಗೆ ಹೆದ್ದಾರಿಗಳು ಮುಂದಿನ ಐದು ವರ್ಷಗಳಲ್ಲಿ 1,34,000 ಕೋಟಿ ಆದಾಯವನ್ನು ಗಳಿಸುತ್ತವೆ ಎಂದು ಅವರು ಅಂದಾಜಿಸಿದ್ದಾರೆ. "ಈಗ ಎಲ್ಲಾ ವಾಣಿಜ್ಯ ವಾಹನಗಳು ವಾಹನ ಟ್ರ್ಯಾಕಿಂಗ್ ವ್ಯವಸ್ಥೆಗಳೊಂದಿಗೆ ಬರುತ್ತಿದೆ, ಹಳೆಯ ವಾಹನಗಳಲ್ಲಿ ಜಿಪಿಎಸ್ ತಂತ್ರಜ್ಞಾನವನ್ನು ಸ್ಥಾಪಿಸಲು ಸರ್ಕಾರವು ಕೆಲವು ಯೋಜನೆಯನ್ನು ತರಲಿದೆ" ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com