ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕರೋನಾ: ವಿಮಾನ ಸಂಚಾರ ನಿರ್ಬಂಧಿಸಿದ ಭಾರತ

ಎರಡನೇ ಪ್ರಭೇದದ ಕೋವಿಡ್ ವೈರಸ್ ಶೇಕಡಾ 70 ರಷ್ಟು ವೇಗವಾಗಿ ಹರಡುತ್ತಿದ್ದು, ಮಾನವ ಪ್ರಪಂಚಕ್ಕೆ ಮತ್ತಷ್ಟು ಅಪಾಯಕಾರಿಯಾಗಿದೆ. ಜೊತೆಗೆ ಲಸಿಕೆ ಸಂಶೋಧನೆಯಲ್ಲಿಯೂ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ
ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕರೋನಾ: ವಿಮಾನ ಸಂಚಾರ ನಿರ್ಬಂಧಿಸಿದ ಭಾರತ

ಬ್ರಿಟನ್‌ ನಲ್ಲಿ ನೂತನ ಮಾದರಿಯ ಕೋವಿಡ್ ಸೋಂಕು ಹರಡುವಿಕೆಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಲ್ಲಿ ಸರ್ಕಾರ ಈ ಬಗ್ಗೆ ಹೆಚ್ಚಿನ ಚಿಂತನೆ ನಡೆಸಿ ನಿಯಂತ್ರಣಾ ಕ್ರಮಗಳನು ಜಾರಿಗೆ ತರುವ ಮುಖೇನ ಮತ್ತೆ ಲಾಕ್ಡೌನ್ ಮಾಡಲು ನಿರ್ಧರಿಸಿದೆ. ಈ ಸಂಬಂಧ ಎಲ್ಲಾ ದೇಶಗಳು ಮುಂಜಾಗೃತ ಕ್ರಮಗಳನ್ನು ವಹಿಸುತ್ತಿದೆ.

ಭಾರತದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ತುರ್ತು ಸಭೆ ನಡೆಸಿ, ಭಯಪಡುವ ಅವಶ್ಯಕತೆಯಿಲ್ಲ ಎಚ್ಚರಿಕೆಯಿಂದಿರಿ, ಸರ್ಕಾರ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಬಾರಿ ಸರ್ಕಾರ ಮುಂಜಾಗೃತ ಕ್ರಮವಹಿಸಿಕೊಂಡಿದ್ದು, ಯಾರೂ ಕೂಡ ಹೆದರುವ ಅವಶ್ಯಕತೆಯಿಲ್ಲ, ಚಿಕಿತ್ಸೆಗೆ ಬೇಕಾದಂತಹ ಮುಂಜಾಗೃತ ಕ್ರಮಗಳನ್ನ ಕಲ್ಪಿಸಲಾಗುತ್ತಿದೆ. ಯುಕೆ ಗೆ ಸಾರಿಗೆ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದ್ದು, ಬ್ರಿಟನ್ನಿಂದ ಭಾರತಕ್ಕೆ ಬರುವ ವಿಮಾನ ಪ್ರಯಾಣಿಕರು ನಿಲ್ದಾಣದಲ್ಲಿ ಕೊವಿಡ್ ಪರೀಕ್ಷೆ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಹಾಗೆಯೇ ಯುಕೆ ಯಪರಿಸ್ಥಿತಿ ಗಮನಹರಿಸಿ ಡಿ22 ರಿಂದ 31 ರವರೆಗೆ ಯುಕೆಯಿಂದ ಭಾರತಕ್ಕೆ ಬರುವ ವಿಮಾನಗಳನ್ನು ತಾತ್ಕಾಲಿಕವಾಗಿ ನಿರ್ಭಂದಿಸಲಾಗಿದೆ ಎಂದಿದ್ದಾರೆ.

ಈಗಾಗಲೇ ಯೂರೋಪ್ ದೇಶಗಳಲ್ಲಿ ಸೋಂಕು ಹೆಚ್ಚು ಉಲ್ಭಣಗೊಂಡಿದ್ದು, ಹೊರ ದೇಶಗಳಿಂದ ಬರುವವರು ಮತ್ತು ಹೋಗುವವರ ಸಂಖ್ಯೆ ಅಧಿಕವಾದ ಹಿನ್ನಲೆಯಲ್ಲಿ ಸಾರಿಗೆ ಸಂಪರ್ಕವನ್ನು ಕಡಿತಗೊಳಿಸಿದೆ. ಜೊತೆಗೆ ಸೋಂಕು ನಿಯಂತ್ರಣ ಸು ನಿಟ್ಟಿನಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತುರ್ತು ಸಭೆ ಕರೆದು ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲಾಗಿದೆ. ವಿದೇಶಗಳಿಗೆ ಪ್ರಯಾಣಿಸದಂತೆ ನಿರ್ಭಂದ ಹೇರಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕ್ರಿಸ್ಮಸ್ ಸೇರಿದಂತೆ ಇತರೆ ಸಾಮೂಹಿಕ ಧಾರ್ಮಿಕ ಆಚರಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕರೋನಾ: ವಿಮಾನ ಸಂಚಾರ ನಿರ್ಬಂಧಿಸಿದ ಭಾರತ
ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕರೋನಾ ವೈರಸ್; ಮತ್ತೊಮ್ಮೆ ಲಾಕ್ ಡೌನ್ ಸಾಧ್ಯತೆ

ಎರಡನೇ ಪ್ರಭೇದದ ಕೋವಿಡ್ ವೈರಸ್ ಶೇಕಡಾ 70 ರಷ್ಟು ವೇಗವಾಗಿ ಹರಡುತ್ತಿದ್ದು, ಮಾನವ ಪ್ರಪಂಚಕ್ಕೆ ಮತ್ತಷ್ಟು ಅಪಾಯಕಾರಿಯಾಗಿದೆ. ಜೊತೆಗೆ ಲಸಿಕೆ ಸಂಶೋಧನೆಯಲ್ಲಿಯೂ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಪ್ರಮುಖ ದೇಶಗಳು ಯುಕೆ ಯಿಂದ ಬರುವ ವಿಮಾನಗಳಿಗೆ ನಿರ್ಭಂದ ಹೇರಿವೆ. ಭಾರತವು ಕೂಡ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಮುಂಜಾಗೃತಾ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ವಿದೇಶಿ ಮತ್ತು ಭಾರತ ಹಲವು ವೈದ್ಯಕೀಯ ಸಂಸ್ಥೆಗಳು ಒಗ್ಗೂಡಿ ಸಭೆ ನಡೆಸಿ ನೂತನ ಪ್ರಬೇಧದ ವೈರಸ್ ಬಗ್ಗೆ ಮಾಹಿತಿ ಕಲೆ ಹಾಕಿ ಅಧ್ಯಾಯನಗಳು ಆರಂಭವಾಗಿವೆ. ಇತ್ತ ಸಾರ್ವಜನಿಕ ಸುರಕ್ಷತೆಗೆ ಇನ್ನಷ್ಟು ಕಟ್ಟುನಿಟ್ಟಿನ ಕೆಲವೊಂದು ಕ್ರಮ ಜಾರಿಗೊಳ್ಳುವ ಸಾಧ್ಯತೆಯಿದೆ. ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com