ಅಮೇರಿಕಾದ ಫೈಜರ್ ಕಂಪನಿ ಅಭಿವೃದ್ಧಿಪಡಿಸಿದ ಕರೋನಾ ಲಸಿಕೆ ಅಡ್ದಪರಿಣಾಮ ಬೀರಿದೆ ಎಂದು ಬ್ರಿಟನ್ ಆರೋಗ್ಯ ಅಧಿಕಾರಿಗಳು ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ. ಕರೋನಾ ಸೋಂಕಿನ ಜೊತೆಗೆ ಅಲರ್ಜಿಯಂತಹ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಈ ಲಸಿಕೆ ನೀಡಲೇಬಾರದು ಎಂದಿದ್ದಾರೆ.
ಕೋವಿಡ್ 19 ಸಾಂಕ್ರಾಮಿಕ ರೋಗ ಮಾನವ ಪ್ರಪಂಚಕ್ಕೆ ಲಗ್ಗೆಯಿಟ್ಟು ವರ್ಷ ಕಳೆದರು ವೈದ್ಯಕೀಯ ಲೋಕದಲ್ಲಿ ಲಸಿಕೆಯ ಸಂಶೋಧನೆ ಮಾತ್ರಾ ನಡೆಯುತ್ತಲೇ ಇತ್ತು. ಕೆಲವೊಂದು ಪ್ರಯೋಗಗಳು ನಡೆದರು ಪ್ರಾಯೋಗಿಕವಾಗಿ ಯಶಸ್ಸು ಕಂಡಿರಲಿಲ್ಲ. ಕೆಲವು ದಿನಗಳ ಹಿಂದೆ ಅಮೇರಿಕಾ ಸಂಶೋಧಿಸಿದ ಪೈಝರ್ ಲಸಿಕೆ ತಜ್ಞವೈದ್ಯರಿಂದ ಮಾನ್ಯತೆ ಪಡೆದು ಸೋಂಕಿತರಿಗೆ ಚುಚ್ಚು ಮದ್ದು ನೀಡುವುದಾಗಿ ವೈದ್ಯಕೀಯ ಸಂಶೋಧಾನಾ ಸಂಸ್ಥೆ ಹೇಳಿಕೆ ಮೇರೆಗೆ ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ನೀಡುವ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೀಗಾ ಚುಚ್ಚುಮದ್ದು ಪಡೆದ ಮಹಿಳೆಯೊಬ್ಬರಲ್ಲಿ ಅಡ್ಡಪರಿಣಾಮ ಬೀರಿದೆ. ಲಸಿಕೆ ನೀಡಿದ ಕೆಲವು ಗಂಟೆಗಳಲ್ಲಿ ಅಲರ್ಜಿ ಸಮಸ್ಯೆ ಉಂಟಾಗಿದೆ ಎಂದು ಬ್ರಿಟನ್ ವೈದ್ಯಕೀಯ ಸಂಸ್ಥೆ ನಡೆಸಿದ ಸಂಶೋಧನೆಯಿಂದ ಧೃಡಪಟ್ಟಿದೆ. ಹೆಚ್ಚು ಅಲರ್ಜಿಯ ಸೋಂಕಿನಿಂದ ಬಳಲುತ್ತಿರುವವರಿಗೆ ಈ ಲಸಿಕೆ ನೀಡದಂತೆ ತಿಳಿಸಲಾಗಿದೆ.
ಕರೋನಾ ಸಮಸ್ಯೆ ಸುಳಿಯಲ್ಲಿ ಸಿಕ್ಕ ವಿಶ್ವದ ಜನತೆ ಫೈಜರ್ ಕಂಪನಿ ಹೊರತಂದ ಲಸಿಕೆಯ ಸುದ್ದಿ ಕೇಳಿ ಜನರು ನಿಟ್ಟುಸಿರು ಬಿಟ್ಟಿದ್ದರು. ಪ್ರಯೋಗದಲ್ಲಿ ಅಡ್ಡಪರಿಣಾಮದ ಸುದ್ದಿಕೇಳಿ ಮತ್ತೊಮ್ಮೆ ನಿರಾಸೆಯಾದಂತಾಗಿದೆ. ಮತ್ತೆ ಲಸಿಕೆಯನ್ನು ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಲಾಗಿದೆ.