ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ

ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ

ಅಸ್ಸಾಮಿನಲ್ಲಿ ಐದು ವರ್ಷಕ್ಕಿಂತ ಕೆಳಗಿನ 68% ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ‌. 2016ಕ್ಕೆ ಹೋಲಿಸಿದರೆ ಈ ಪ್ರಮಾಣ 33% ಹೆಚ್ಚಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16ರ ಪ್ರಕಾರ ಐದು ವರ್ಷಗಳೊಳಗಿನ ಮಕ್ಕಳ ಮತ್ತು ಶಿಶುಗಳ ಮರಣ ಪ್ರಮಾಣ ಭಾರತದಲ್ಲಿ ಕಡಿಮೆಯಾಗಿದೆ. ಆದರೆ, ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗುತ್ತಿದೆ. ಮಾಹಿತಿ ಲಭ್ಯವಿರುವ 18 ರಾಜ್ಯಗಳ ಪೈಕಿ 11 ರಾಜ್ಯಗಳಲ್ಲಿ ಬೆಳವಣಿಗೆ ಕುಂಠಿತವಾಗಿದೆ, 14 ರಾಜ್ಯಗಳಲ್ಲಿ ಮಕ್ಕಳಲ್ಲಿ ಕ್ಷೀಣತೆಯ ಸಮಸ್ಯೆ ಇದೆ ಮತ್ತು 17 ರಾಜ್ಯಗಳ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಡಿಸೆಂಬರ್12ರಂದು ಸರ್ಕಾರ 22 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ NFHS (National Family Health Survey) ಮಾಹಿತಿ ಬಿಡುಗಡೆ ಮಾಡಿದ್ದು, ಬಹುತೇಕ ರಾಜ್ಯಗಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಮತ್ತಷ್ಟು ಹೆಚ್ಚಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೀರ್ಘಕಾಲದ ಆಹಾರದ ಅಭಾವದಿಂದಾಗಿ ಬೆಳವಣಿಗೆಯಲ್ಲಿ ಕುಂಠಿತ ಕಂಡು ಬರುತ್ತದೆ. 2016ರ ವರದಿಗೆ ಹೋಲಿಕೆ ಮಾಡಿದರೆ ತೆಲಂಗಾಣದಲ್ಲಿ 5.1%, ಹಿಮಾಚಲ ಪ್ರದೇಶದಲ್ಲಿ 4.5% ಮತ್ತು ಕೇರಳದಲ್ಲಿ 3.7% ಬೆಳವಣಿಗೆ ಕುಂಠಿತವಾಗಿರುವ ಮಕ್ಕಳ ಪ್ರಮಾಣ ಹೆಚ್ಚಾಗಿದೆ. ದೊಡ್ಡ ರಾಜ್ಯಗಳಾದ ಗುಜರಾತಿನಲ್ಲಿ ಶೇಕಡಾ 39% ಮತ್ತು ಮಹಾರಾಷ್ಟ್ರದಲ್ಲಿ 35% ಮಕ್ಕಳು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಕ್ಷೀಣತೆಯು ಆಹಾರದ ತೀವ್ರ ಕೊರತೆಯಿಂದ ಉಂಟಾಗುವ ಸಮಸ್ಯೆಯಾಗಿದ್ದು, ಎತ್ತರಕ್ಕೆ ಹೋಲಿಸಿದರೆ ಅಸಮರ್ಪಕ ತೂಕ ಹೊಂದುವುದನ್ನು ಅಂತರಾಷ್ಟ್ರೀಯವಾಗಿ ಕ್ಷೀಣತೆ ಎಂದು ಕರೆಯುತ್ತಾರೆ. ಬಹುತೇಕ ರಾಜ್ಯಗಳಲ್ಲಿ ಪ್ರತಿ ಐದು ಮಕ್ಕಳಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಇದೆ. ಹದಿನಾಲ್ಕು ರಾಜ್ಯಗಳ ಮಕ್ಕಳು ತೀವ್ರತರವಾದ ಕ್ಷೀಣತೆಯಿಂದ ಬಳಲುತ್ತಿದ್ದಾರೆ.

ಅಸ್ಸಾಮಿನಲ್ಲಿ ಐದು ವರ್ಷಕ್ಕಿಂತ ಕೆಳಗಿನ 68% ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ‌. 2016ಕ್ಕೆ ಹೋಲಿಸಿದರೆ ಈ ಪ್ರಮಾಣ 33% ಹೆಚ್ಚಿದೆ. ಗುಜರಾತ್ ರಾಜ್ಯವು ಅತಿ ಹೆಚ್ಚು ರಕ್ತಹೀನತೆಯ ಸಮಸ್ಯೆಯನ್ನು ಹೊಂದಿರುವ ರಾಜ್ಯ. ‌ಅಲ್ಲಿ ಶೇಕಡಾ 80ರಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ.

ಬಹುತೇಕ ರಾಜ್ಯಗಳಲ್ಲಿ ಒಂದು ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣ ಪ್ರಮಾಣ, ನಾಲ್ಕು ತಿಂಗಳ ಮಕ್ಕಳ ಮರಣದ ಪ್ರಮಾಣ ಮತ್ತು ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣದ ಪ್ರಮಾಣ ಕಡಿಮೆಯಾಗಿದ್ದು ಮೇಘಾಲಯ, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಮಾತ್ರ ಈ ಪ್ರಮಾಣ ಕಡಿಮೆಯಾಗಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com