ಅಮೆರಿಕದಲ್ಲಿ ಕೋವಿಡ್-19 ಲಸಿಕಾ ಆಂದೋಲನ ಆರಂಭ

ನ್ಯೂಯಾರ್ಕ್ ನ ಲಾಂಗ್ ಐಲ್ಯಾಂಡ್ ಜ್ಯೂಯಿಸ್ ಮೆಡಿಕಲ್ ಸೆಂಟರ್ ನಲ್ಲಿ ತಮ್ಮ ತೋಳಿಗೆ ಲಸಿಕೆ ಚುಚ್ಚಿಸಿಕೊಂಡ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಆಕೆ, “ಈಗ ನನಗೆ ಸಮಾಧಾನವೆನಿಸಿದೆ. ಬದುಕಿನ ಬಗ್ಗೆ ಭರವಸೆ ಬಂದಿದೆ. ನಿರಾಳಳಾಗಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಅಮೆರಿಕದಲ್ಲಿ ಕೋವಿಡ್-19 ಲಸಿಕಾ ಆಂದೋಲನ ಆರಂಭ

ಭಾರತದಲ್ಲಿ ಕೋವಿಡ್ ಲಸಿಕೆಯ ಕುರಿತು ಇನ್ನೂ ಅಸ್ಪಷ್ಟತೆ ಮುಂದುವರಿದಿರುವ ನಡುವೆಯೇ ಸೋಮವಾರ ಅಮೆರಿಕದಲ್ಲಿ ಅದರ ಇತಿಹಾಸದಲ್ಲಿಯೇ ಅತಿದೊಡ್ಡ ಲಸಿಕಾ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.

ಲಸಿಕೆಯ ಮೊದಲ ಸುತ್ತಿನ ಡೋಸ್ ತಲುಪುತ್ತಿದ್ದಂತೆ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಫೈಜರ್/ ಬಯೋಎನ್ ಟೆಕ್ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತೆಯರು ಸೇರಿದಂತೆ ಕೋವಿಡ್ -19ರ ವಿರುದ್ಧದ ಮುಂಚೂಣಿ ಕೆಲಸಗಾರರಿಗೆ ಆದ್ಯತೆಯ ಮೇರೆಗೆ ನೀಡಲಾಗುತ್ತಿದೆ. ನ್ಯೂಯಾರ್ಕ್ ನಗರದಲ್ಲಿ ಸೋಮವಾರ ಲಸಿಕೆ ನೀಡಿಕೆ ಸಮರೋಪಾದಿಯಲ್ಲಿ ಆರಂಭವಾಗಿದ್ದು, ತುರ್ತು ನಿಗಾ ಘಟಕವೊಂದರ ನರ್ಸ್ ಸಾಂಡ್ರಾ ಲಿಂಡ್ಸೆ ಲಸಿಕೆ ಪಡೆದವರಲ್ಲಿ ಮೊದಲಿಗರಲ್ಲಿ ಒಬ್ಬರಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ನ್ಯೂಯಾರ್ಕ್ ನ ಲಾಂಗ್ ಐಲ್ಯಾಂಡ್ ಜ್ಯೂಯಿಸ್ ಮೆಡಿಕಲ್ ಸೆಂಟರ್ ನಲ್ಲಿ ತಮ್ಮ ತೋಳಿಗೆ ಲಸಿಕೆ ಚುಚ್ಚಿಸಿಕೊಂಡ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಆಕೆ, “ಈಗ ನನಗೆ ಸಮಾಧಾನವೆನಿಸಿದೆ. ಬದುಕಿನ ಬಗ್ಗೆ ಭರವಸೆ ಬಂದಿದೆ. ನಿರಾಳಳಾಗಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಲಿಂಡ್ಸೆ ಲಸಿಕೆ ನೀಡಿಕೆ ವೀಕ್ಷಿಸಿದ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕೊಮೊ “ಸುರಂಗದ ಕೊನೆಯ ಭರವಸೆಯ ಬೆಳಕಿನಂತೆ ಇದು. ಆದರೆ, ಈ ಸುರಂಗ ಬಹಳ ದೀರ್ಘವಿದೆ ಎಂಬುದನ್ನು ಮರೆಯುವಂತಿಲ್ಲ”ಎಂದಿದ್ದಾರೆ.

ಜಗತ್ತಿನಲ್ಲೇ ಅತಿ ಹೆಚ್ಚುಸೋಂಕು ಪ್ರಕರಣಗಳು ಮತ್ತು ಸಾವುಗಳನ್ನು ಕಂಡಿರುವ ಅಮೆರಿಕದಲ್ಲಿ ಬಹುತೇಕ ಎಂಟು ತಿಂಗಳ ನಿರಂತರ ಆತಂಕ, ಸಾವು-ನೋವಿನ ಬಳಿಕ ಇದೀಗ ಲಸಿಕಾ ಆಂದೋಲನ ಆರಂಭವಾಗುತ್ತಲೇ ಒಂದಿಷ್ಟು ನಿರಾಳತೆ ಕಂಡುಬಂದಿದ್ದು, ಜನ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬದುಕಿನ ಭರವಸೆ ಮತ್ತೆ ಚಿಗಿತ ಸಮಾಧಾನ ಜನರಲ್ಲಿ ಮೂಡಿದೆ.

ಅತಿ ಶೀತಲ ವಾತಾವರಣದಲ್ಲಿ ಶೇಖರಿಸಿಡಬೇಕಾದ ಲಸಿಕೆ ಇದಾಗಿದ್ದು, ಮೊದಲ ಸುತ್ತಿನಲ್ಲಿ ಸುಮಾರು 30 ಲಕ್ಷ ಲಸಿಕೆ ಅಮೆರಿಕದ ಉದ್ದಗಲಕ್ಕೆ ಸರಬರಾಜಿದೆ. ವ್ಯಾಪಕ ಕ್ಲಿನಿಕಲ್ ಪ್ರಯೋಗದಲ್ಲಿ ಶೇ.95ರಷ್ಟು ಪರಿಣಾಮಕಾರಿ ಎಂಬುದು ದೃಢಪಟ್ಟ ಬಳಿಕ ಕಳೆದ ಶುಕ್ರವಾರ ಅಮೆರಿಕದ ಸರ್ಕಾರ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಮೊದಲ ಹಂತದಲ್ಲಿ ದೇಶದ 636 ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ಈ ಲಸಿಕೆ ನೀಡಲಾಗುತ್ತಿದೆ.

ಈ ನಡುವೆ ಸೋಮವಾರದ ಹೊತ್ತಿಗೆ ಅಮೆರಿಕದಲ್ಲಿ 1,62,86,343 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 2,99,489 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com