ಏರ್ಟೆಲ್ ವೊಡಾಫೋನ್ ಸಂಸ್ಥೆ ಕಾರ್ಯಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ರೈತರ ಪ್ರತಿಭಟನೆಗೆ ಬಂಡವಾಳ ಹೂಡಿದೆ ಎಂದು ಆರೋಪಿಸಿ ರಿಲಯನ್ಸ್ ಜಿಯೋ ಸಂಸ್ಥೆಯೂ ಏರ್ಟೆಲ್ ಮತ್ತು ವೊಡಾಫೋನ್ ಸಂಸ್ಥೆಯ ಈ ಕಾರ್ಯಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಕೋರಿ TRAIಗೆ ಪತ್ರ ಬರೆದಿದೆ.
ಪ್ರತಿಸ್ಪರ್ಧಿ ಕಂಪನಿಗಳಿಗೆ ಪೈಪೋಟಿ ನೀಡುವ ಸಲುವಾಗಿ ಮತ್ತು ಬಳಕೆದಾರರನ್ನು ಸೆಳೆಯುವ ಉದ್ದೇಶದಿಂದ ಅನಗತ್ಯ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ಮೂಲಕ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಈ ರೀತಿಯ ಪ್ರತಿಭಟನೆಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಪತ್ರದಲ್ಲಿಉಲ್ಲೇಖಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಏರ್ಟೆಲ್ ಸಂಸ್ಥೆ ಮತ್ತು ವಿಐಎಲ್ ನಡೆಸುತ್ತಿರುವ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಅಭಿಯಾನವು ಅನೈತಿಕ ಮತ್ತು ಸ್ಪರ್ಧಾತ್ಮಕತೆಗೆ ವಿರೋಧಿಯಾಗಿರುವುದೆಂದು ಹೇಳಿರುವ ರಿಲಾಯನ್ಸ್ ಜಿಯೋ, ಈ ಅಭಿಯಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈಗಾಗಲೇ ದೇಶದ ಉತ್ತರ ಭಾಗಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು, ರಿಲಯನ್ಸ್ನ ಕೆಲವೊಂದು ಸೇವೆಗಳಿಗೆ ಮಾರಕವಾಗುವಂತೆ ಜೊತೆಗೆ ಗ್ರಾಹಕರನ್ನು ಪ್ರಚೋದಿಸಿ, ಸುಳ್ಳು, ಕ್ಷುಲ್ಲಕ ವದಂತಿಗಳನ್ನು ಹಬ್ಬಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಏರ್ಟೆಲ್ ಹಾಗೂ ವಿಐ ನೇರ ನೇರ ಹೊಣೆ. ಗ್ರಾಹಕರನ್ನು ಸೆಳೆಯಲು ಪ್ರಚೋದಿತ ಪೋರ್ಟಿಂಗ್ ರೂಪದಲ್ಲಿ ಲಾಭಗಳಿಸಲು ಮುಂದಾಗಿದೆ, ಎಂದು ರಿಲಾಯನ್ಸ್ ಜಿಯೋ ಆರೋಪ ಮಾಡಿದೆ.
ಜಿಯೋ ಸಂಸ್ಥೆ ಬರೆದ ಪತ್ರದಲ್ಲಿ ತನ್ನ ಮೊಬೈಲ್ ಸಂಖ್ಯೆಗಳನ್ನು ತಮ್ಮ ನೆಟ್ವರ್ಕ್ಗಳಿಗೆ ಬದಲಾಯಿಸಿಕೊಳ್ಳುವುದಲ್ಲದೇ, SMSಗಳನ್ನು ಕಳುಹಿಸುವ ಮೂಲಕ ಸಾರ್ವಜನಿಕರನ್ನು ಪ್ರಚೋದಿಸುವ ಕಾರ್ಯ ನಡೆಸಲಾಗುತ್ತಿದೆ. ಪಂಜಾಬ್ ಮತ್ತು ಉತ್ತರದ ಭಾಗಗಳಲ್ಲಿ ಗ್ರಾಹಕರನ್ನು ಸೆಳೆಯುವ ಮೂಲಕ ತಮ್ಮ ಸಂಸ್ಥೆಯ ಸೇವೆಗಳನ್ನು ರೈತ ವಿರೋಧಿ ಎಂದು ಬಿಂಬಿಸಿ, ಅವರ ಸೇವೆಯನ್ನು ರೈತ ಸ್ನೇಹಿ ಎಂದು ಬಿಂಬಿಸಲಾಗುತ್ತಿದೆ. ದೇಶಕ್ಕೆ ಮಾರಕವಾಗುವಂತಹ ಇಂತಹ ಕೆಲಸವನ್ನು ನಾವು ವಿರೋಧಿಸುತ್ತೇವೆ, ಎಂದು ಪತ್ರದಲ್ಲಿ ಹೇಳಿಲಾಗಿದೆ.
ಈ ರೀತಿಯ ಕಾರ್ಯಕ್ಕೆ ಏರ್ಟೆಲ್ ಮತ್ತು ವಿಐ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿ, ಸೇವಾ ಪೂರೈಕೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದರ ಜೊತೆಗೆ ಪ್ರಚೋದನಾಕಾರಿ ಅಭಿಯಾನವನ್ನು ತಡೆಯುವಂತೆ ಕೋರಿ ಟ್ರಾಯ್ ಸಂಸ್ಥೆಗೆ ಪತ್ರ ಬರೆಯಲಾಗಿದೆ.