2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಸ್ಪರ್ಧೆಯನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಖಚಿತಪಡಿಸಿದ್ದಾರೆ. ಉತ್ತರ ಪ್ರದೇಶವನ್ನು ʼಅಭಿವೃದ್ದಿ ಹೊಂದಿದʼ ರಾಜ್ಯವನ್ನಾಗಿಸುವುದು ಆಮ್ ಆದ್ಮಿ ಪಕ್ಷದ ಗುರಿ ಎಂದವರು ಹೇಳಿದ್ದಾರೆ.
“ಒಳ್ಳೆಯ ಆಸ್ಪತ್ರೆ ಅಥವಾ ಸರ್ಕಾರಿ ಶಾಲೆಗಳು ಉತ್ತರ ಪ್ರದೇಶದಲ್ಲಿ ಇಲ್ಲ. ಇದರೊಂದಿಗೆ ಪ್ರತೀ ಬಾರಿಯೂ ವಿದ್ಯುತ್ ವ್ಯತ್ಯಯದಿಂದ ಉತ್ತರ ಪ್ರದೇಶ ನರಳುತ್ತಿದೆ,” ಎಂದವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ 70ರಲ್ಲಿ 62 ಸ್ಥಾನಗಳನ್ನು ಗೆಲ್ಲುವ ಮುಖಾಂತರ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಏರಿತ್ತು. ಮುಂದಿನ ಉತ್ತರ ಪ್ರದೇಶ ಚುನಾವಣೆಯಲ್ಲಿ ಉಚಿತ ವಿದ್ಯುತ್, ಅಂತರಾಷ್ಟ್ರೀಯ ಮಟ್ಟದ ಶಾಲೆ ಮತ್ತು ಆಸ್ಪತ್ರೆಗಳನ್ನು ಭರವಸೆಯಾಗಿ ನೀಡಿ ಚುನಾವಣೆಯನ್ನು ಗೆಲ್ಲುವ ಉದ್ದೇಶ ಕೇಜ್ರಿವಾಲ್ ಅವರು ಹೊಂದಿದ್ದಾರೆ.
ದೆಹಲಿ ಮಾದರಿಯನ್ನು ಮುಂದಿಟ್ಟುಕೊಂಡು, ಚುನಾವಣೆ ಹೋರಾಡಲು ಹೊರಟಿರುವ ಆಮ್ ಆದ್ಮಿ ಪಾರ್ಟಿಗೆ ಮತದಾರರು ಕೈ ಹಿಡಿಯುತ್ತಾರೆಯೇ ಎಂದು ಕಾದು ನೋಡಬೇಕಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸ್ಪರ್ಧಿಸಿದ್ದ ಕೇಜ್ರವಾಲ್ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದರು.