ಅಮೇರಿಕಾ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ ಕಾನೂನು ಹೋರಾಟಕ್ಕೆ ಬ್ರೇಕ್‌ ಹಾಕಿದ ಯುಎಸ್‌ ಸುಪ್ರೀಂಕೋರ್ಟ್‌

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ಗೊಂದಲಗಳು ಇನ್ನೂ ಅಂತ್ಯವಾಗಿಲ್ಲ. ಜೋ ಬಿಡೆನ್‌ ಗೆಲುವನ್ನು ಒಪ್ಪಲು ಮನಸ್ಸಿಲ್ಲದ ಡೊನಾಲ್ಡ್‌ ಟ್ರಂಪ್‌ ಅವರು ಕಾನೂನಿನ ಕೋರಾಟಕ್ಕೆ ಮುಂದಾಗಿದ್ದರು. ಈಗ ಆ ಅವಕಾಶವನ್ನೂ ಕಳೆದುಕೊಂಡಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ ಕಾನೂನು ಹೋರಾಟಕ್ಕೆ ಬ್ರೇಕ್‌ ಹಾಕಿದ ಯುಎಸ್‌ ಸುಪ್ರೀಂಕೋರ್ಟ್‌

ಇತ್ತೀಚೆಗೆ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್‌ ಅವರ ವಿರುದ್ಧ ಡೊನಾಲ್ಡ್‌ ಟ್ರಂಪ್‌ ಸಲ್ಲಿಸಿದ್ದ ಅರ್ಜಿಯನ್ನು ಯುಎಸ್‌ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಟೆಕ್ಸಾಸ್ ರಾಜ್ಯಾಡಳಿತ ಸೇರಿದಂತೆ ಅಮೆರಿಕಾದ 17 ರಾಜ್ಯಗಳಿಗೆ ಸೇರಿ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ವಂಚನೆ ನಡೆದಿದೆ, ಜೋ ಬೈಡನ್ ಗೆಲುವು ಸಾಧಿಸಿದ ಕೆಲವು ಕಡೆಗಳಲ್ಲಿನ ಫಲಿತಾಂಶ ಬದಲಿಸಿ ಎಂದು ಕೋರಿ ಟ್ರಂಪ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂಕೋರ್ಟ್‌ ಟ್ರಂಪ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಚುನಾವಣಾ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ. ಇದರ ಪರಿಣಾಮ ಟ್ರಂಪ್‌ ಕಾನೂನು ಹೋರಾಟಕ್ಕೆ ಭಾರೀ ಹಿನ್ನಡೆಯಾಗಿದೆ.

ಯುಎಸ್‌ ಚುನಾವಣೆ ಆಯೋಗ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯನ್ನು ಸರಿಯಾಗಿ ನಡೆಸಿಲ್ಲ. ಚುನಾವಣೆ ನಡೆಸುವ ವಿಧಾನದಲ್ಲಿ ಸರಿಯಾದ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿ ಟ್ರಂಪ್‌ ಪರ ವಕೀಲರು ಟೆಕ್ಸಾಸ್ ರಾಜ್ಯಾಡಳಿತ ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಇದಕ್ಕೆ ಟ್ರಂಪ್‌ ಜಯ ದಾಖಲಿಸಿದ್ದ 17 ರಾಜ್ಯಗಳ 126 ರಿಪಬ್ಲಿಕನ್ ಸೆನೆಟರ್‌ಗಳು ಕೂಡ ಜೊತೆಯಾಗಿದ್ದರು. ಆದರೀಗ, ಸುಪ್ರೀಂಕೋರ್ಟ್‌ ಯಾವುದೇ ಪುರಾವೆಗಳು ಇಲ್ಲದೇ ಸುಖಾಸುಮ್ಮನೇ ಆರೋಪ ಮಾಡಬೇಡಿ. ಹೊಸ ಅಧ್ಯಕ್ಷರ ಆಯ್ಕೆ ಸರಿಯಾಗಿಯೇ ನಡೆದಿದೆ ಎಂದು ಸುಪ್ರೀಂಕೋರ್ಟ್‌ ಟ್ರಂಪ್‌ಗೆ ಚಾಟೀ ಬೀಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಸುಪ್ರೀಂಕೋರ್ಟ್‌ ಈಗ ಜೋ ಬಿಡೆನ್‌ ಪರವಾಗಿ ಆದೇಶ ಹೊರಡಿಸಿದ ಕಾರಣ ಟ್ರಂಪ್‌ಗೆ ಭಾರೀ ಮುಖಭಂಗವಾಗಿದೆ. ಜೋ ಬಿಡೆನ್ ಅಮೆರಿಕಾದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಜತೆಗೆ ಅಗತ್ಯಕ್ಕಿಂತಲೂ ಹೆಚ್ಚು ಸ್ಥಾನ ಗೆದ್ದಿದ್ದಾರೆ. ಚುನಾವಣಾ ಆಯೋಗ ತನ್ನ ಕೆಲಸವನ್ನು ಸಮರ್ಥವಾಗಿ ಮಾಡಿದೆ ಎಂದು ತೀರ್ಪು ನೀಡಿ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಸ್ಯಾಮುಯಲ್ ಎಲಿಟೋ ಮತ್ತು ಥಾಮಸ್ ನೇತೃತ್ವದ ಪೀಠ ಅರ್ಜಿ ವಜಾಗೊಳಿಸಿದೆ.

ಇನ್ನು, ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಟ್ರಂಪ್‌ ಕಿಡಿಕಾರಿದ್ದಾರೆ. ಕೋರ್ಟ್ ನಿಜಕ್ಕೂ ನಮ್ಮನ್ನು ಕೆಳಕ್ಕೆ ನೂಕಿದೆ, ವಿವೇಕವಿಲ್ಲದ ತೀರ್ಪು ನೀಡಿದೆ. ನಾನು ಯಾವುದೇ ಕಾರಣಕ್ಕೂ ನನ್ನ ಕಾನೂನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಟ್ರಂಪ್ ಟ್ವೀಟ್‌ ಮಾಡಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಡೆಮಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ 284 ಸ್ಥಾನಗಳನ್ನು ಗೆದ್ದಿದ್ದಾರೆ. ಈ ಮೂಲಕ ಅಮೆರಿಕಾದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು, ಭಾರತದ ಮೂಲಕ ಕಮಲಾ ಹ್ಯಾರಿಸ್ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com