ದೇಶಾದ್ಯಂತ ದಿನೇ-ದಿನೇ ಹಲವು ಬೇಡಿಕೆ ಮುಂದಿಟ್ಟು ಕೆಲವು ಸಂಘ ಸಂಸ್ಥೆಗಳು ಬಂದ್ಗೆ ಕೆರೆ ನೀಡುವ ಮೂಲಕ ಪ್ರತಿಭಟನೆಗಳ ಕಾವು ತೀವ್ರಗೊಳ್ಳುತ್ತಿದ್ದು, ಇನ್ನೊಂದೆಡೆ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದ ರೈತ ಸಂಘಟನೆಗಳ್ಳೆಲ್ಲ ಒಂದಾಗಿ ತೀವ್ರ ಪ್ರತಿಭಟನೆ ನಡೆಸಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸುತ್ತಿವೆ. ಇದರ ಮಧ್ಯೆ ಕೆಲವು ರಾಜ್ಯಗಳಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ಮೊನ್ನೆ ಮೊನ್ನೆ ರಾಜಸ್ಥಾನದಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯೇ ಮೈಲುಗಲ್ಲು ಸಾಧಿಸಿತ್ತು. ಆದರೀಗ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಕಮಲ ಮುದುಡಿದೆ ಕೈ ಗೆದ್ದು ಬೀಗಿದೆ.
ರಾಜಸ್ಥಾನದಲ್ಲಿ ನಗರ ಸ್ಥಳೀಯ ಚುನಾವಣೆ ನಡೆದಿದ್ದು, 50 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ 620 ಸ್ಥಾನಗಳನ್ನು ಗೆದ್ದುಗೊಂಡು ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ 7249 ಅಭ್ಯರ್ಥಿಗಳು ಕಣಕ್ಕಿಳಿದ್ದಿದ್ದು, 2622 ಮತಗಟ್ಟೆಗಳನ್ನ ಸ್ಥಾಪಿಸಲಾಗಿತ್ತು. 14.32 ಲಕ್ಷ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
1775 ವಾರ್ಡ್ ಕೌನ್ಸಿಲರ್ ಸ್ಥಾನಗಳಲ್ಲಿ ಕಾಂಗ್ರೆಸ್ 620 ಬಿಜೆಪಿ 548 ಸ್ಥಾನಗಳನ್ನು ಗಳಿಸಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯದ 12 ಜಿಲ್ಲೆಗಳಲ್ಲಿ ಬಿಎಸ್ಪಿ ಪಕ್ಷದಿಂದ ಏಳು ಅಭ್ಯರ್ಥಿಗಳು, ಸಿಪಿಐ ಮತ್ತು ಸಿಪಿಐಎಂ ನಿಂದ ತಲಾ ಇಬ್ಬರು ಅಭ್ಯರ್ಥಿಗಳು, ಆರ್ಎಲ್ಪಿ ಪಕ್ಷದಿಂದ ಒಬ್ಬರು ಗೆದ್ದಿದ್ದಾರೆ.
ಇದರ ಮಧ್ಯೆಯೇ ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೆ ಇಂದು ಅಧಿಸೂಚನೆ ಬಿಡುಗಡೆಗೊಳಿಸಿದ್ದು, ಡಿ20 ರಂದು ಅಧ್ಯಕ್ಷ ಸ್ಥಾನಕ್ಕೆ, ಡಿ21 ಕ್ಕೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಉಲ್ಲೇಖಿಸಲಾಗಿದೆ.