ಭಜರಂಗದಳದ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಬೆಂಬಲಿಸಿದ ಫೇಸ್‌ಬುಕ್? WSJ ವರದಿ

ಖ್ಯಾತ ಪತ್ರಿಕೋದ್ಯಮ ಸಂಸ್ಥೆ ವಾಲ್ಸ್ಟ್ರೀಟ್ ಜರ್ನಲ್ ಪತ್ರಿಕೆಯು,ದೇಶದಲ್ಲಿ ಕೋಮು ಸಂಘರ್ಷವನ್ನು ಹುಟ್ಟುಹಾಕುವಂತಹ ವೀಡಿಯೋಗಳನ್ನು ಭಜರಂಗ ದಳವು ಫೇಸ್ಬುಕ್ನಲ್ಲಿ ಹಾಕಿದ್ದರೂ, ಯಾವುದೇ ಕ್ರಮ ಕೈಗಳೊಳ್ಳಲಿಲ್ಲ ಎಂದು ವರದಿ ಮಾಡಿದೆ.
ಭಜರಂಗದಳದ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಬೆಂಬಲಿಸಿದ ಫೇಸ್‌ಬುಕ್? WSJ ವರದಿ

ಸಾಮಾಜಿಕ ಜಾಲತಾಣದ ಮೂಲಕ ರಾಜಕೀಯದಲ್ಲಿ ಯಶಸ್ಸುಸಾಧಿಸಲು ಹೊರಟ ಭಜರಂಗದಳಕ್ಕೆ ಸಂಬಂಧಿಸಿದ ಪೇಸ್‌ಬುಕ್‌ ಪೇಜ್‌ಗಳ ಮೇಲೆ ಈಗ Facebook ಸಂಸ್ಥೆ ಕಣ್ಣಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಗತಿ ಹೊಂದಲು ಜೊತೆಗೆ ದೇಶದಾದ್ಯಂತ ಅಲ್ಪಸಂಖ್ಯಾತರ ಮತ್ತು ವಿರೋಧ ಪಕ್ಷಗಳ ವಿರುದ್ಧ ಕೋಮು ಕಲಹದ ಸೃಷ್ಟಿಗೆ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಾಗುತ್ತಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ಭಾನುವಾರ ವರದಿ ಮಾಡಿತ್ತು.

ಅಲ್ಲದೆ ಈ ಹಿಂದೆ ಜೂನ್‌ನಲ್ಲಿ ನವದೆಹಲಿಯ ಚರ್ಚ್ ಒಂದರ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ಕೋಮುಗಲಭೆಯಾಧಾರಿತ ವಿಡಿಯೋಗಳನ್ನು ಪೇಸ್‌ಬುಕ್‌ ಕ್ರಮ ಉಲ್ಲಂಘಿಸಿ ಪ್ರಚಾರ ಮಾಡಲಾಗಿದೆ. ಅಲ್ಲದೆ ಇದಕ್ಕೆ ಪರೋಕ್ಷವಾಗಿ ಪೇಸ್‌ಬುಕ್‌ ಸಿಬ್ಬಂದಿಗಳೇ ಕಾರಣವಾಗಿದ್ದು, 2.5 ಲಕ್ಷ ವೀಕ್ಷಣೆಗಳನ್ನು ಪಡೆಯಲು ಅನುಮತಿ ನೀಡಲಾಗಿದೆ. ಇದರೊಂದಿಗೆ ಕೋಮುದ್ವೇಷವನ್ನು ಬಿತ್ತರಿಸುವ ಪೋಸ್ಟ್‌ಗಳಿಂದ ರಾಷ್ಟೀಯವಾದಿ ರಾಜಕಾರಣಿಗಳನ್ನು ಕೆರಳಿಸ ಹೊರಟಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ವರದಿ ಬೆನ್ನಲೆ ಎಚ್ಚೆತ್ತುಗೊಂಡ ಪೇಸ್‌ಬುಕ್‌ ಸಂಸ್ಥೆ ನೌಕರರ ಕಾರ್ಯವೈಖರಿಯ ಮೇಲೆ ನಿಗಾ ವಹಿಸಿರುವುದಲ್ಲದೆ, ಆಂತರಿಕ ವರದಿಯನ್ನು ಪ್ರಕಟಿಸಿದೆ. ಭಜರಂಗದಳದ ಕೆಲವು ಸಾಮಾಜಿಕ ಜಾಲತಾಣದ ಕಾರ್ಯವೈಖರಿ ನಿಯಂತ್ರಿಸುವುದರಿಂದ ಸಿಬ್ಬಂದಿಗಳ ಮೇಲೆ ಹಲ್ಲೆ ಮತ್ತು ಕೆಲವು ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ ಎಂದು ಈಗಾಗಲೇ ಪೇಸ್‌ಬುಕ್‌ ತನ್ನ ಆಂತರಿಕ ವರದಿಯನ್ನು ಪ್ರಕಟಸಿದೆ.

ಈ ರೀತಿ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುವಂತಹ ಪೋಸ್ಟ್‌ ಹಾಗೂ ವೀಡಿಯೋಗಳಿಂದ ರಾಜಕೀಯ ಹಾಗೂ ಸಾಮಾಜಿಕ ಬಿಕ್ಕಟ್ಟು ಉಂಟಾಗುವ ಸಂಭವವಿದೆ. ಇಂತಹ ಬಿಕ್ಕಟ್ಟಿಗೆ ಫೇಸ್‌ಬುಕ್‌ ನೇರ ಹೊಣೆಗಾರರಾಗಬೇಕಾಗುತ್ತದೆ. ಈ ಕಾರಣಕ್ಕಾಗಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಂತಹ ಫೇಸ್‌ಬುಕ್‌ ಪೇಜ್‌ಗಳ ಮೇಲಿ ನಿಗಾವಹಿಸಲು ನಿರ್ಧರಿಸಲಾಗಿದೆ.

ಹಾಗೆಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಪೇಸ್‌ಬುಕ್‌ ಬಳಕೆಗೆದಾರರ ಡೇಟಾವನ್ನು ವ್ಯವಸ್ಥಿತವಾಗಿ ಸಂರಕ್ಷಿಸುವುದಾಗಿ ಸಂಸ್ಥೆಯ ವಕ್ತಾರ ಆಂಡಿ ಸ್ಟೋನ್‌ ಜರ್ನಲ್‌ ವರದಿಯ ಹಿನ್ನಲೆ ಎಚ್ಚೆತ್ತುಕೊಂಡು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com