ಮಹಿಳೆಯರಿಗೆ ಸ್ವಾಲಂಬಿತ ಜೀವನ ಕಲ್ಪಿಸಿದ 'ಸಖಿ'

ಮಹಿಳೆಯರಿಗೆ ಅವರದೇ ಆದ ಗುರುತು, ಸ್ವಾವಲಂಬನೆ, ಕೌಶಲ್ಯಾಭಿವೃದ್ದಿ ಮತ್ತು ಉಳಿತಾಯದ ಮಾರ್ಗವನ್ನು ಕಲ್ಪಿಸುವ 'ಸಖಿ'ಯಂತಹ ಕಾರ್ಯಕ್ರಮಗಳ ಅಗತ್ಯ ಆರ್ಥಿಕ ಹಿಂಜರಿತದ ಈ‌ ಕಾಲದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿದೆ.
ಮಹಿಳೆಯರಿಗೆ ಸ್ವಾಲಂಬಿತ ಜೀವನ ಕಲ್ಪಿಸಿದ 'ಸಖಿ'

ಕುಟುಂಬದ ಮತ್ತು ಒಂದು‌ ಸಮುದಾಯದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಒಳಗೊಳ್ಳುವಿಕೆ ತುಂಬಾ ಮುಖ್ಯ. ಮಹಿಳೆಯರೇ ನಡೆಸುವ ಸುಸ್ಥಿರ ಸ್ವಸಹಾಯ ಸಂಘಗಳನ್ನು‌ ಪ್ರೋತ್ಸಾಹಿಸಲು 'ಸಖಿ' ಎನ್ನುವ ಕಾರ್ಯಕ್ರಮವನ್ನು ರಾಜಸ್ಥಾನದಲ್ಲಿ 2016ರಲ್ಲಿ ಪರಿಚಯಿಸಲಾಯಿತು. ಪಂಚಾಯತ್ ವ್ಯವಸ್ಥೆಯಲ್ಲಿ ಗ್ರಾಮ ಸಭೆಯ ಪಾತ್ರ ಮತ್ತು ಸ್ಥಾನದ ಬಗ್ಗೆ ನಡೆಸಿರುವ ಅಧ್ಯಯನದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ನಿಧಿ ಸೇಠ್ ಎನ್ನುವವರು 'ಸಖಿ'ಯನ್ನು ಮೊದಲು ಪ್ರಾರಂಭಿಸಿದ್ದರು.

ಹತ್ತಿರ ಹತ್ತಿರ 1.8 ಲಕ್ಷ ಜನಸಂಖ್ಯೆ ಇರುವ ಕುಶಾಲಗರ್ ಎನ್ನುವ ಬ್ಲಾಕ್‌ನಲ್ಲಿ ಸುಮಾರು 213 ಗ್ರಾಮಗಳಿವೆ. ನಿಧಿಯವರ ಅಧ್ಯಯನದ ಪ್ರಕಾರ ಸ್ಥಳೀಯವಾಗಿ ಜೀವನಾವಶ್ಯಕ ಉದ್ಯೋಗ ದೊರೆಯದೆ ಬುಡಕಟ್ಟು ಜನಾಂಗದ ಹಲವರು ನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗಿದ್ದಾರೆ, ಮತ್ತು ಪುರುಷರ ಹಾಗೂ ಮಹಿಳೆಯರ ವಲಸೆಯ ಅನುಪಾತ 79:21.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮನೆಯ ಗಂಡಸರ ಈ ವಲಸೆಯು ಬುಡಕಟ್ಟು‌ ಜನಾಂಗದ ಮಹಿಳೆಯರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿತ್ತು. ಗಂಡಂದಿರುವ ಊರಿಗೆ ಕಳುಹಿಸುವ ಅಲ್ಪ ಆದಾಯದಲ್ಲಿ ಮನೆ, ಮಕ್ಕಳು ಮತ್ತು ಇತರ ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು.

ನಿಧಿಯವರು ರಾಜಸ್ತಾನ ಸರ್ಕಾದರ‌ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲೂ‌ 'ಸಖಿ'ಯನ್ನು ತರಲು ಯತ್ನಿಸಿದ್ದರು.ಆದರೆ ಸರ್ಕಾರ 'ಸಖಿ'ಯ ಎಲ್ಲಾ ಉತ್ಪನ್ನಗಳಲ್ಲಿ ಮತ್ತು ಸಖಿ ಕೇಂದ್ರಗಳಲ್ಲಿ ಸರ್ಕಾರದ ಜಾಹೀರಾತು ಹಾಕಬೇಕೆಂದು ಷರತ್ತು ಹಾಕಿತು. ಹಾಗಾಗಿ ಆ ಯೋಜನೆಯನ್ನು ಕೈಬಿಡಲಾಯಿತು.

'ದಿ ವೈರ್' ವರದಿ ಮಾಡಿರುವಂತೆ ಕಂಪೌಂಡರ್ ಆಗಿ ಪಶ್ಚಿಮ ಬಂಗಾಳದಲ್ಲಿ ಕೆಲಸ ಮಾಡುತ್ತಿದ್ದ ಬಿಸ್ವಾಸ್ ಕೆಲಸ ಕಳೆದುಕೊಂಡ ಊರಿಗೆ ಮರಳಿದಾಗ 'ಸಖಿ'ಯ ಮೂಲಕ ಹೊಲಿಗೆ ಕಲಿತುಕೊಂಡಿದ್ದ ದೀಪಾ ಅವರು 'ಸಖಿ'ಯಿಂದಲೇ ಆರ್ಥಿಕ ಸಹಾಯ ಪಡೆದುಕೊಂಡು ಟೈಲರಿಂಗ್ ಅಂಗಡಿ ತೆರೆದು ಕುಟುಂಬ ನಿರ್ವಹಣೆಗೆ ಅಡಿ ಇಟ್ಟರು. ಈಗ ಪತಿ ಬಿಸ್ವಾಸ್ ಅವರೂ ಅವರಿಗೆ ತನ್ನ ವ್ಯವಹಾರ ವಿಸ್ತರಿಸಲು ನೆರವು ನೀಡುತ್ತಿದ್ದಾರೆ. ಇಂತಹ ನೂರಾರು ಘಟನೆಗಳಿಗೆ ರಾಜಸ್ಥಾನದ ಕುಶಾಲಗರ್ ಸಾಕ್ಷಿಯಾಗಿದೆ.

ಕೋವಿಡ್ ಲಾಕ್ಡೌನ್ ಕಾಲದಲ್ಲಿ ಹೆಚ್ಚಿನ ಎಲ್ಲಾ ಕಡೆ ವಲಸೆ ಕಾರ್ಮಿಕರು ಕೆಲಸ, ನೆಲೆ ಕಳೆದುಕೊಂಡು ಸುದ್ದಿಯಾಗಿತ್ತು. ಆಗಲೂ 'ಸಖಿ'ಯ ನೆರವಿನೊಂದಿಗೆ ಮಹಿಳೆಯರು ತಮ್ಮ ಕುಟುಂಬವನ್ನು ಸಶಕ್ತವಾಗಿ ಮುನ್ನಡೆಸಿದ್ದರು. ಮೇಲಾಗಿ 'ಸಖಿ'ಯು ತನ್ನ ಸದಸ್ಯೆಯರಿಗೆ 'ಮಾಸ್ಕ್' ತಯಾರಿಸಲು ಪ್ರೋತ್ಸಾಹ ನೀಡಿತು. "ಲಾಕ್ಡೌನ್ ಸಂದರ್ಭದಲ್ಲಿ ಕೇಂದ್ರಕ್ಕೆ ಬರಲು ಸಾಧ್ಯವಾಗದ ಮಹಿಳೆಯರ ಮನೆಗಳಿಗೆ ನಾವು ಯಂತ್ರವನ್ನು ತಲುಪಿಸಿದ್ದೇವೆ" ಎನ್ನುತಾರೆ ನಿಧಿ. ಅವರ ಪ್ರಕಾರ 'ಸಖಿ' ಸದಸ್ಯೆಯರು ಸುಮಾರು 50000ಕ್ಕಿಂತಲೂ ಹೆಚ್ಚಿನ ಮಾಸ್ಕನ್ನು ಲಾಕ್ಡೌನ್ ಸಂದರ್ಭದಲ್ಲಿ ತಯಾರಿಸಿ ಮಾರಿದ್ದಾರೆ. ಸ್ಥಳೀಯ SBI ICICI ಬ್ಯಾಂಕ್ ಶಾಖೆಗಳಿಗೆ ಅವರ ಕೇಂದ್ರದಿಂದಲೇ ಮಾಸ್ಕ್ ಸರಬರಾಜು ಆಗುತ್ತಿತ್ತು.‌ ಹೀಗಾಗಿ ವಲಸೆ ಕಾರ್ಮಿಕರ ಸಮಸ್ಯೆ ಅಷ್ಟಾಗಿ ಕುಶಾಲಗರ್‌ನ್ನು ಕಾಡಲಿಲ್ಲ. ಬದಲಾಗಿ ಮಹಿಳೆಯರೇ ಉದ್ಯೋಗ ಮಾಡಿ ಕುಟುಂಬವನ್ನು ಸಲಹಿದ್ದಾರೆ.

ಮಹಿಳೆಯರಿಗೆ ಅವರದೇ ಆದ ಗುರುತು, ಸ್ವಾವಲಂಬನೆ, ಕೌಶಲ್ಯಾಭಿವೃದ್ದಿ ಮತ್ತು ಉಳಿತಾಯದ ಮಾರ್ಗವನ್ನು ಕಲ್ಪಿಸುವ 'ಸಖಿ'ಯಂತಹ ಕಾರ್ಯಕ್ರಮಗಳ ಅಗತ್ಯ ಆರ್ಥಿಕ ಹಿಂಜರಿತದ ಈ‌ ಕಾಲದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com