TRP ಹಗರಣ: ರಿಪಬ್ಲಿಕ್‌ ಟಿವಿ CEO ವಿಕಾಸ್‌ ಖಾನ್‌ಚಂದಾನಿ ಬಂಧನ

ಕೇವಲ ರಿಪಬ್ಲಿಕ್‌ ಟಿವಿ ಮಾತ್ರವಲ್ಲದೇ, ಫಕ್ತ್‌ ಮರಾಠಿ, ಬೋಕ್ಸ್‌ ಸಿನಿಮಾ, ನ್ಯೂಸ್‌ ನೇಷನ್‌, ಮಹಾ ಮೂವೀಸ್‌ನಂತಹ ಟಿವಿ ಚಾನೆಲ್‌ಗಳು ಕೂಡಾ ಈ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.
TRP ಹಗರಣ: ರಿಪಬ್ಲಿಕ್‌ ಟಿವಿ CEO ವಿಕಾಸ್‌ ಖಾನ್‌ಚಂದಾನಿ ಬಂಧನ

ನಕಲಿ TRP ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು Republic TV ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಕಾಸ್‌ ಖಾನ್‌ಚಂದಾನಿ ಅವರನ್ನು ಬಂಧಿಸಿದ್ದಾರೆ. ಮುಂಬೈ ಕ್ರೈಮ್‌ ಬ್ರ್ಯಾಂಚ್‌ ವಿಭಾಗದ ಅಧಿಕಾರಿಗಳು ವಿಕಾಸ್‌ ಅವರ ನಿವಾಸದಿಂದಲೇ ಭಾನುವಾರ ಮುಂಜಾನೆ ಅವರನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದಲ್ಲಿ 13ನೇ ಆರೋಪಿಯಾಗಿರುವ ವಿಕಾಸ್‌ ಅವರು, ನಕಲಿ ಟಿಆರ್‌ಪಿಯ ಫಲಾನುಭವಿಯಾಗಿದ್ದರು. ಅವರಿಗೆ ಈ ಪ್ರಕರಣದ ಕುರಿತು ಮಾಹಿತಿಯಿತ್ತು ಎಂದು ಕ್ರೈಮ್‌ ಬ್ರ್ಯಾಂಚ್‌ ಪೊಲೀಸರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಕಳೆದ ವಾರವಷ್ಟೇ, ರಿಪಬ್ಲಿಕ್‌ ಟಿವಿಯ ಸಿಒಒ ಪ್ರಿಯಾ ಮುಖರ್ಜಿ ಅವರಿಗೆ ಮುಂಬೈ ಸೆಷನ್ಸ್‌ ಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ರೂ. 50 ಸಾವಿರದ ವೈಯಕ್ತಿಕ ಬಾಂಡ್‌ ಹಾಗೂ ಪ್ರತೀ ವಾರ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್‌ ಠಾಣೆಯಲ್ಲಿ ಹಾಜರಾತಿ ದಾಖಲು ಮಾಡಲು ಸೂಚಿಸಲಾಗಿದೆ.

ಈ ಪ್ರಕರಣವು ರಾಷ್ಟ್ರೀಯ ಮಟ್ಟದಲ್ಲಿ ಅತೀ ದೊಡ್ಡ ಸುದ್ದಿ ಮಾಡಿತ್ತು. ಕೇವಲ ರಿಪಬ್ಲಿಕ್‌ ಟಿವಿ ಮಾತ್ರವಲ್ಲದೇ, ಫಕ್ತ್‌ ಮರಾಠಿ, ಬೋಕ್ಸ್‌ ಸಿನಿಮಾ, ನ್ಯೂಸ್‌ ನೇಷನ್‌, ಮಹಾ ಮೂವೀಸ್‌ನಂತಹ ಟಿವಿ ಚಾನೆಲ್‌ಗಳು ಕೂಡಾ ಈ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com