ರೈತರನ್ನು ಬೆಂಬಲಿಸಿ ರಾಜಿನಾಮೆ ನೀಡಿದ ಪಂಜಾಬ್‌ನ ಹಿರಿಯ ಪೊಲೀಸ್‌ ಅಧಿಕಾರಿ

ಆದಷ್ಟು ಶೀಘ್ರದಲ್ಲಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಸೇರಿಕೊಳ್ಳುತ್ತೇನೆ ಎಂದು ಜಾಖರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೈತರನ್ನು ಬೆಂಬಲಿಸಿ ರಾಜಿನಾಮೆ ನೀಡಿದ ಪಂಜಾಬ್‌ನ ಹಿರಿಯ ಪೊಲೀಸ್‌ ಅಧಿಕಾರಿ

ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಿ ಪಂಜಾಬ್‌ನ ಡಿಐಜಿ ಹುದ್ದೆಯ ಅಧಿಕಾರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಲಖ್ಮಿಂದರ್‌ ಸಿಂಗ್‌ ಜಾಖರ್‌ ಅವರು ರಾಜಿನಾಮೆ ನೀಡಿರುವ ಅಧಿಕಾರಿ. ಜೈಲು ವಿಭಾಗದ ಡಿಐಜಿ ಆಗಿದ್ದ ಜಾಖರ್‌ ಅವರು ಚಂಡೀಘಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರಾಜಿನಾಮೆ ನೀಡಿದ ಬಳಿಕ ಮಾತನಾಡಿರುವ ಜಾಖರ್‌ ಅವರು, “ರಾಜಿನಾಮೆಯ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳಿಗೆ ನನ್ನ ರಾಜಿನಾಮೆ ಸ್ವೀಕರಿಸಲು ಯಾವುದೇ ತೊಂದರೆಯಿರುವುದಿಲ್ಲ,” ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ತನ್ನನ್ನು ಶೀಘ್ರದಲ್ಲಿ ಸೇವೆಯಿಂದ ಕೈಬಿಡುವಂತೆ ಕೋರಿ, ಮೂರು ತಿಂಗಳ ಸಂಬಳ ಹಾಗೂ ಇತರ ಎಲ್ಲಾ ರೀತಿಯ ಹಣವನ್ನು ತುಂಬಲು ತಯಾರಾಗಿದ್ದೇನೆ ಎಂದು ಹೇಳಿದ್ದಾರೆ.

“ನಾನು ಮೊದಲು ರೈತ, ನಂತರ ಒಬ್ಬ ಪೊಲೀಸ್‌ ಅಧಿಕಾರಿ. ನಾನು ಈ ಹುದ್ದೆಗೆ ಏರಿದ್ದು ನನ್ನ ತಂದೆ ರೈತನಾಗಿ ದುಡಿದ ಕಾರಣದಿಂದಾಗಿ. ಹೀಗಾಗಿ, ರೈತರ ಋಣ ನನ್ನ ಮೇಲಿದೆ. ನನ್ನ ತಾಯಿಗೆ 81 ವರ್ಷ ವಯಸ್ಸಾಗಿದೆ. ಈಗಲೂ ಅವರು ಕೃಷಿಯ ಮೇಲ್ವಿಚಾರಣೆಯನ್ನು ಮಾಡುತ್ತಿದ್ದಾರೆ. ನನಗೆ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗುತ್ತಿಲ್ಲ,” ಎಂದಿದ್ದಾರೆ.

ಆದಷ್ಟು ಶೀಘ್ರದಲ್ಲಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಸೇರಿಕೊಳ್ಳುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com