ರೈತರ ಬೆಂಬಲಕ್ಕೆ ನಿಂತ ಬಾಲಿವುಡ್‌ ತಾರೆ ಧರ್ಮೇಂದ್ರ

“ನನ್ನ ಸಹೋದರರ ಕಷ್ಟಗಳನ್ನು ನೋಡಿ ತುಂಬಾ ನೋವಾಗುತ್ತಿದೆ. ಸರ್ಕಾರ ಶೀಗ್ರವೇ ಏನಾದರೂ ಮಾಡಬೇಕು,” ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಧರ್ಮೇಂದ್ರ ಬರೆದುಕೊಂಡಿದ್ದಾರೆ.
ರೈತರ ಬೆಂಬಲಕ್ಕೆ ನಿಂತ ಬಾಲಿವುಡ್‌ ತಾರೆ ಧರ್ಮೇಂದ್ರ

ರೈತರ ಪ್ರತಿಭಟನೆಗೆ ಬಾಲಿವುಡ್‌ನ ಖ್ಯಾತ ತಾರೆ ಹಾಗೂ ಮಾಜಿ ಲೋಕಸಭಾ ಸದಸ್ಯ ಧರ್ಮೇಂದ್ರ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್‌ ಮಾಡಿರುವ ಧರ್ಮೇಂದ್ರ ಅವರು, ಸರ್ಕಾರ ಶೀಘ್ರದಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

“ನನ್ನ ಸಹೋದರರ ಕಷ್ಟಗಳನ್ನು ನೋಡಿ ತುಂಬಾ ನೋವಾಗುತ್ತಿದೆ. ಸರ್ಕಾರ ಶೀಗ್ರವೇ ಏನಾದರೂ ಮಾಡಬೇಕು,” ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ, ದೆಹಲಿಯಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ, ಹೀಗಾಗಿ ಸರ್ಕಾರ ರೈತರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು. ತುಂಬಾ ನೋವಾಗುತ್ತಿದೆ. ಎಂದು ಬರೆದುಕೊಂಡಿದ್ದಾರೆ.

ಇವರು ಮಾತ್ರವಲ್ಲದೇ ಬಾಲಿವುಡ್‌ನ ಅನೇಕ ಸ್ಟಾರ್‌ ನಟ ನಟಿಯರು ರೈತರ ಬೆಂಬಲಕ್ಕೆ ನಿಂತಿದ್ದಾರೆ. ಪ್ರಿಯಾಂಕ ಚೋಪ್ರಾ, ದಿಲ್ಜೀತ್‌ ದೋಸಾಂಜ್‌ ಸೇರಿದಂತೆ ಇನ್ನೂ ಅನೇಕರು ರೈತರ ಪ್ರತಿಭಟನೆಗೆ ಬೆಂಬಲವನ್ನು ನೀಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com