ಪಂಜಾಬ್ ಮಾಜಿ ಡಿಜಿಪಿ ಸುಮೇದ್ ಸಿಂಗ್ ಸೈನಿ ಈಗ ಕೊಲೆ ಆರೋಪಿ

ಕಳೆದ 2012 ರ ಮಾರ್ಚ್ ನ ಲ್ಲಿ ಪಂಜಾಬ್ನಲ್ಲಿ ಅಕಾಲಿ ದಳವು ಅಧಿಕಾರಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಸೈನಿ ಅವರು ರಾಜ್ಯದ ಡಿಜಿಪಿ ಆದರು, 54 ವರ್ಷ ವಯಸ್ಸಿನಲ್ಲಿ ಅತ್ಯಂತ ಕಿರಿಯ ಡಿಜಿಪಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರವಾಗಿದ್ದರು.
ಪಂಜಾಬ್ ಮಾಜಿ ಡಿಜಿಪಿ ಸುಮೇದ್ ಸಿಂಗ್ ಸೈನಿ ಈಗ ಕೊಲೆ ಆರೋಪಿ

ನಮ್ಮ ದೇಶದಲ್ಲಿ ನಿತ್ಯ ಕೊಲೆ ಅತ್ಯಾಚಾರ ಪ್ರಕರಣಗಳು ಸಹಜವೇ ಆಗಿಬಿಟ್ಟಿದೆ. ಈ ಅಪರಾಧ ಕೃತ್ಯದಲ್ಲಿ ಪಾಲ್ಗೊಳ್ಳುವವರು ಪಕ್ಕಾ ಕ್ರಿಮಿನಲ್ ಗಳೇ ಆಗಿರುತ್ತಾರೆ. ಈ ಕ್ರಿಮಿನಲ್ ಗಳು ಸರ್ಕಾರದ ಉನ್ನತ ಹುದ್ದೆಯಲ್ಲಿ ಇದ್ದರಂತೂ ಮುಗಿದೆ ಹೋಯಿತು. ಸಂತ್ರಸ್ಥರಿಗೆ ನ್ಯಾಯ ಅನ್ನೋದು ಮರೀಚಿಕೆ ಆಗಿ ಬಿಡುತ್ತದೆ. ಅದರಲ್ಲೂ ಪೋಲೀಸ್ ಇಲಾಖೆಯ ಉನ್ನತ ಅಧಿಕಾರಿ ಆಗಿದ್ದರೆ ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು ಬಡಪಾಯಿಯ ಮೇಲೆ ಯಾವುದೇ ಅರೋಪ ಹೊರಿಸಿ ಬಚಾವಾಗಿಬಿಡಬಹುದು . ಪಂಜಾಬಿನ ಕುಟುಂಬ ವೊಂದು ತಮ್ಮ ಪುತ್ರನನ್ನು ಕಳೆದುಕೊಂಡು ಕಳೆದ ಮೂರು ದಶಕಗಳಿಂದಲೂ ನ್ಯಾಯಕ್ಕಾಗಿ ಹೋರಾಡುತ್ತಿದೆ. ಇದರಲ್ಲಿ ಕೊಲೆ ಆರೋಪಿ ಆಗಿರುವವರು ಪಂಜಾಬ್ನ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸುಮೇದ್ ಸಿಂಗ್ ಸೈನಿ ಆಗಿದ್ದು ಪ್ರಕರಣದ ವಿಚಾರಣೆ ಈಗಲೂ ನಡೆದಿದೆ. ಈ ಪ್ರಕರಣದ ಸಂತ್ರಸ್ಥನೂ ಐಏಎಸ್ ಅಧಿಕಾರಿಯೊಬ್ಬರ ಮಗನೇ ಆಗಿರುವುದು ವಿಶೇಷ.

ಐಎಎಸ್ ಅಧಿಕಾರಿಯ ಮಗನಾದ ಬಲ್ವಂತ್ ಸಿಂಗ್ ಮುಲ್ತಾನಿ 1991 ರಲ್ಲಿ ಸುಮೇದ್ ಸಿಂಗ್ ಸೈನಿ ಅವರ ಕಾರಿನಲ್ಲಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ನಂತರ ನಾಪತ್ತೆಯಾಗಿದ್ದ. ಮುಲ್ತಾನಿಯ ಸಹಚರರು ಎನ್ನಲಾದ ಇತರ ಮೂವರು ಪೋಲೀಸರ ಜತೆ ಘರ್ಷಣೆಯಲ್ಲಿ ಮೃತ ಪಟ್ಟಿದ್ದರು. ಈ ಪ್ರಕರಣದ ಬಗ್ಗೆ ಈ ವರ್ಷದ ಮೇ ತಿಂಗಳಲ್ಲಿ ಮುಲ್ತಾನಿಯ ಅಪಹರಣಕ್ಕಾಗಿ ಸೈನಿ ಮತ್ತು ಇತರ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಆಗಸ್ಟ್ ನಲ್ಲಿ , ಕೊಲೆ ಆರೋಪಗಳನ್ನು ಎಫ್ಐಆರ್ ಗೆ ಸೇರಿಸಲಾಯಿತು. ಆದರೆ ಸುಪ್ರೀಂ ಕೋರ್ಟು ಸೈನಿ ಬಂದನಕ್ಕೆ ತಡೆ ನೀಡಿರುವುದು ಸೈನಿಗೆ ದೊಡ್ಡ ಪರಿಹಾರವಾಗಿದೆ. ಸೈನಿ ಪ್ರಕಾರ ತಮ್ಮ ವಿರುದ್ದ ದಾಖಲಿಸಲಾದ ಪ್ರಕರಣವು ವೈಯಕ್ತಿಕ ಮತ್ತು ರಾಜಕೀಯ ದ್ವೇಷದಿಂದ ಮಾಡಲಾಗಿದೆ. ಇದಕ್ಕೆ ಪಂಜಾಬ್ ನ ಮುಖ್ಯಮಂತ್ರಿ ಕ್ಯಾ. ಅಮರಿಂದರ್ ಸಿಂಗ್ ಅವರ ಆದೇಶವೇ ಕಾರಣವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ 2012 ರ ಮಾರ್ಚ್ ನ ಲ್ಲಿ ಪಂಜಾಬ್ನಲ್ಲಿ ಅಕಾಲಿ ದಳವು ಅಧಿಕಾರಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಸೈನಿ ಅವರು ರಾಜ್ಯದ ಡಿಜಿಪಿ ಆದರು, 54 ವರ್ಷ ವಯಸ್ಸಿನಲ್ಲಿ ಅತ್ಯಂತ ಕಿರಿಯ ಡಿಜಿಪಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರವಾದರು. ಪಂಜಾಬ್ ನ ಕಡಕ್ ಪೋಲೀಸ್ ಅಧಿಕಾರಿ ಕೆ ಪಿಎಸ್ ಗಿಲ್ ಪಂಜಾಬ್ ಉಗ್ರಗಾಮಿ ಚಟುವಟಿಕೆಗಳನ್ನು ತಮ್ಮ ಉಕ್ಕಿನ ನೀತಿಯಿಂದ ನಿಭಾಯಿಸಿದ್ದರು. ಆದರೆ ಸೈನಿ ಅವರು ಆಗಾಗ್ಗೆ ದುರಹಂಕಾರ ಮತ್ತು ಅಧಿಕಾರದ ದುರುಪಯೋಗದೊಂದಿಗೆ ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ವಿವಾದಗಳನ್ನು ಎದುರಿಸಿದ್ದಾರೆ. ಡಿಜಿಪಿ ಆದ ಮೂರೇ ವರ್ಷದಲ್ಲಿ ಪವಿತ್ರ ಗುರು ಗ್ರಂಥ ಸಾಹಿಬ್ ನ್ನು ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಪೊಲೀಸರ ಕಳಪೆ ನಿಭಾವಣೆಯಿಂದ ಪ್ರತಿಭಟನೆಗಳಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದರು. ಈ ಘಟನೆಯ ನಂತರ ಸೈನಿ ಅವರನ್ನು ಡಿಜಿಪಿ ಹುದ್ದೆಯಿಂದ ಬೇರೆ ಹುದ್ದೆಗೆ ವರ್ಗಾವಣೆ ಮಾಡಲಾಯಿತು. 36 ವರ್ಷಗಳ ಸೇವೆಯ ನಂತರ, ಸೈನಿ ಅವರು ಜೂನ್ 2018 ರಲ್ಲಿ ನಿವೃತ್ತರಾದರು. ಅವರಿಗೆ ಧೈರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಶೌರ್ಯ ಪದಕವನ್ನೂ ನೀಡಲಾಗಿದೆ.

ಇಷ್ಟಕ್ಕೂ ಸೈನಿ ಎದುರಿಸುತ್ತಿರುವ ಗಂಭೀರ ಆರೋಪವು ಕಳೆದ ಆಗಸ್ಟ್ 1991 ರಲ್ಲಿ, ನಡೆದಿದ್ದು ಆಗ ಸೈನಿ ಚಂಡೀಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ, ಕಚೇರಿಯಿಂದ ಮನೆಗೆ ಹೋಗುವಾಗ ಅವರ ಅಧಿಕೃತ ಕಾರಿನಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಡೇವಿಂದರ್ ಪಾಲ್ ಸಿಂಗ್ ಭುಲ್ಲರ್, ಆಗಿದ್ದ. ನಂತರ ಅವನನ್ನು 1993 ರ ದೆಹಲಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಅರೋಪದಡಿ ಬಂಧಿಸಲಾಯಿತು. ಕಾರ್ ಸ್ಪೋಟಕ್ಕೆ ಸಂಬಂದಿಸಿದಂತೆ ಆರೋಪಿಯೊಬ್ಬನಿಗೆ ಆಶ್ರಯ ನೀಡಿದ ಆರೋಪದಡಿಯಲ್ಲಿ ಮುಲ್ತಾನಿಯನ್ನು ಭಯೋತ್ಪಾದನೆ ತಡೆ ಆರೋಪದಡಿಯಲ್ಲಿ ಬಂದಿಸಲಾಯಿತು. ಅವರನ್ನು ಗುರುದಾಸ್ಪುರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ನಂತರ ಅವರು ಬಂಧನದಿಂದ ತಪ್ಪಿಸಿಕೊಂಡಿದ್ದಾರೆ ಎಂದು ತೋರಿಸಲಾಗಿದೆ. ನಂತರ ಅವರು ಯಾರಿಗೂ ಕಾಣಿಸಲಿಲ್ಲ. 1993 ರಲ್ಲಿ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿದೆ.ಈ ವರ್ಷದ ಮೇ ತಿಂಗಳಲ್ಲಿ ಮುಲ್ತಾನಿಯ ಸಹೋದರ ಪಾಲ್ವಿಂದರ್ ಸಿಂಗ್ ಸೈನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ತನ್ನ ದೂರಿನಲ್ಲಿ, ಸಿಂಗ್ ಔಟ್ ಲುಕ್ ನಿಯತಕಾಲಿಕೆಯ 2015 ರ ಮುಖ ಪುಟ ಸ್ಟೋರಿಯನ್ನು ಉಲ್ಲೇಖಿಸಿದ್ದು , ಅಲ್ಲಿ ಸೈನಿಗೆ ಆಪ್ತ ಮಾಜಿ ಪೊಲೀಸ್ ಗುರ್ಮೀತ್ ಸಿಂಗ್ ಅಲಿಯಾಸ್ ಪಿಂಕಿ ಎಂಬಾತನು ಪಂಜಾಬಿನಲ್ಲಿ ಉಗ್ರಗಾಮಿ ಚಟುವಟಿಕೆ ಹೆಚ್ಚಿದ್ದ ಸಮಯದಲ್ಲಿ ಸಮಯದಲ್ಲಿ ಪೋಲೀಸ್ ದೌರ್ಜನ್ಯಗಳ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ್ದ. ಪಿಂಕಿ ಪ್ರಕಾರ, ಸೈನಿ ಯು ಮುಲ್ತಾನಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡಿದ್ದು ಅವರ ಕಣ್ಮರೆಗೆ ಕಾರಣ ಎಂದು ಎಫ್ಐಆರ್ ಹೇಳಿದೆ. ಆಧರೆ ಆತನನ್ನು ಕೊಲ್ಲಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸೈನಿ ಅವರು ಮುಲ್ತಾನಿಗೆ ಹಿಂಸೆ ನೀಡಿದ್ದರೆಂದು ಇಬ್ಬರು ಮಾಜಿ ಪೋಲೀಸರು ಸಾಕ್ಷ್ಯ ನೀಡಿದ ನಂತರ ಕೊಲೆ ಪ್ರಕರಣ ದಾಖಲಿಸಲಾಗಿದೆ. ಮೊಹಾಲಿ ನ್ಯಾಯಾಲಯವು ಸೈನಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತು, ಅದರ ನಂತರ ಅವರು ಬಂಧನವನ್ನು ತಪ್ಪಿಸಿಕೊಳ್ಳಲು ಭೂಗತರಾಗಿದ್ದರು. ಕಳೆದ ಸೆಪ್ಟೆಂಬರ್ 15 ರಂದು, ಸುಪ್ರೀಂ ಕೋರ್ಟ್ ಸೈನಿಗೆ ಬಂಧನಕ್ಕೆ ತಡೆ ನೀಡಿದೆ. ಸೈನಿ ಪ್ರಕರಣದ ವಿಚಾರಣೆಗೆ ಹಾಜರಾಗುತಿದ್ದಾರೆ.

ಸೈನಿ ಬಗ್ಗೆ ಅನೇಕ ಆರೋಪಗಳೇ ಇವೆ. ಒಮ್ಮೆ ನಯಗಾಂವ್ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಗಳು ಇಲ್ಲದೆ ಇದ್ದರೂ ಇಂಡಿಯನ್ ಎಕ್ಸ್ಪ್ರೆಸ್ ವರದಿಗಾರನನ್ನು ಅತ್ಯಾಚಾರ ಆರೋಪದಡಿ ಬಂದಿಸಿದ್ದರು. ೧೯೯೪ ರಲ್ಲಿ ಲೂಧಿಯಾನದ ಎಸ್ಎಸ್ ಪಿ ಆಗಿದ್ದಾಗ ಮೂವರು ಫೈನಾನ್ಸಿಯರ್ ಗಳನ್ನು ಸೈನಿ ಅವರು ಅಪಹರಿಸಿದ್ದರು ಎಂದು ಸಿಬಿಐ ಅವರ ವಿರುದ್ದ ಮೊಕದ್ದಮೆ ದಾಖಲಿಸಿತ್ತು. ಸೈನಿ ಅವರ ಸಂಬಂದಿಕರು ನಡೆಸುತಿದ್ದ ಆಟೊಮೊಬೈಲ್ ಅಂಗಡಿಗೆ ಫೈನಾನ್ಸಿಯರ್ ಗಳು ಹಣಕಾಸು ಒದಗಿಸಿದ್ದರು. ಈ ಪ್ರಕರಣದಲ್ಲಿ ಸಂತ್ರಸ್ಥರ ಸಹೋದರ ಆಶಿಶ್ ಕುಮಾರ್ ಅವರು 26 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತಿದ್ದಾರೆ. ಸೈನಿ ಅವರ ಮೇಲಿರುವ ಎಲ್ಲ ಆರೋಪಗಳೂ ಒಬ್ಬ ಗೂಂಡಾ ಅಥವಾ ರೌಡಿ ಶೀಟರ್ ಹೊಂದಿರುವ ಆರೋಪಗಳಿಗಿಂತ ಭಿನ್ನವಾಗಿಲ್ಲ. ಇದು ಪೋಲೀಸ್ ಇಲಾಖೆಗೆ ಒಂದು ಕಪ್ಪು ಚುಕ್ಕಿ ಆಗಿದೆ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com