ರೈತರ ಪ್ರತಿಭಟನೆಗೆ ಖಲಿಸ್ತಾನ್ ಬಣ್ಣ: ಯಶಸ್ವಿ ಪ್ರತಿರೋಧ ಒಡ್ಡುತ್ತಿರುವ ಪಂಜಾಬ್‌ ಟೆಕ್ಕಿಗಳು

ಲುಧಿಯಾನ ಮೂಲದ 38 ರ ಐಟಿ ತಂತ್ರಜ್ಞ ಭವ್ಜಿತ್ ಸಿಂಗ್ ಅವರು ಅಪಪ್ರಚಾರವನ್ನು ತಡೆಯಲು ಟ್ವಿಟರ್ ನ್ನು ಬಳಸಿಕೊಂಡಿದ್ದಾರೆ.
ರೈತರ ಪ್ರತಿಭಟನೆಗೆ ಖಲಿಸ್ತಾನ್ ಬಣ್ಣ: ಯಶಸ್ವಿ ಪ್ರತಿರೋಧ ಒಡ್ಡುತ್ತಿರುವ ಪಂಜಾಬ್‌ ಟೆಕ್ಕಿಗಳು

ದೇಶದಲ್ಲಿ ಈವರೆಗಿನ ಅತ್ಯಂತ ದೊಡ್ಡ ರೈತರ ಪ್ರತಿಭಟನೆ ಎಂದೇ ಪರಿಗಣಿಸಲಾಗಿರುವ ಈ ಪ್ರತಿಭಟನೆ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಬರೇ ದೇಶದೊಳಗಿನಿಂದ ಅಲ್ಲದೆ ಹೊರಗಿನಿಂದಲೂ , ಅನಿವಾಸಿ ಭಾರತೀಯರಿಂದಲೂ ಭಾರೀ ಬೆಂಬಲ ವ್ಯಕ್ತವಾಗುತಿದ್ದು ಈಗಾಗಲೇ ಕೆನಡ ಪ್ರಧಾನಿ ಹಾಗೂ ಬ್ರಿಟನ್ ನ 36 ಸಂಸದರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಆಳುವ ಸರ್ಕಾರಕ್ಕೆ ಇದನ್ನು ಅರಗಿಸಿಕೊಳ್ಳಲು ಕಷ್ಟವಾಗಿದೆ. ಸಾಮಾಜಿಕ ತಾಣಗಳಲ್ಲಿ ಸರ್ಕಾರದ ಬೆಂಬಲಿಗರು ಈ ಪ್ರತಿಭಟನೆಗೆ ಖಲಿಸ್ತಾನ್ ಸಂಪರ್ಕ ಕಟ್ಟಿ ಕಥೆಗಳನ್ನು ಹರಿಯಬಿಡುತಿದ್ದಾರೆ. ಆದರೆ ಇದನ್ನು ಯಶಸ್ವಿಯಾಗಿ ಎದುರಿಸಲು ಪಂಜಾಬ್ ನ ಯುವ ಐಟಿ ತಂತ್ರಜ್ಞರು ಅಭಿಯಾನವನ್ನೇ ಆರಂಭಿಸಿದ್ದಾರೆ. ಈ ಐಟಿ ತಂತ್ರಜ್ಞರು ಮೂಲತಃ ರೈತರ ಮಕ್ಕಳೇ ಆಗಿದ್ದಾರೆ.

ಇಂತಹ ಒಂದು ಅಭಿಯಾನವನ್ನು ಆರಂಭಿಸಿರುವ ಲುಧಿಯಾನ ಮೂಲದ 38 ರ ಐಟಿ ತಂತ್ರಜ್ಞ ಭವ್ಜಿತ್ ಸಿಂಗ್ ಅವರು ಅಪಪ್ರಚಾರವನ್ನು ತಡೆಯಲು ಟ್ವಿಟರ್ ನ್ನು ಬಳಸಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಇವರ ಟ್ರಾಕ್ಟರ್ 2 ಟ್ವಿಟರ್ ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಟ್ವಿಟರ್ ಬಳಕೆದಾರರು, ಪಂಜಾಬ್ ಕಲಾವಿದರು, ಕಾಂಗ್ರೆಸ್ ನಾಯಕರು, ಅಕಾಲಿ ದಳ ನಾಯಕರು, ಈ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಲು ಪ್ರಾರಂಭಿಸಿದರು. ಅಲ್ಪ ಕಾಲದಲ್ಲೇ ಇದು 7000 ಮಿಕ್ಕಿ ಹಿಂಬಾಳಕರನ್ನು ಹೊಂದಿತು ಅಲ್ಲದೆ 20 ಸಾವಿರಕ್ಕೂ ಹೆಚ್ಚು ಇಂಪ್ರಷನ್ ಪಡೆಯಿತು. ಸಿಂಗ್ ಪ್ರಕಾರ ಮೊದಲಿಗೆ ಈ ಹ್ಯಾಷ್ ಟ್ಯಾಗ್ 25 ಸಾವಿರ ಹಿಂಬಾಲಕರನ್ನು ಪಡೆಯಲು ಯೋಜಿಸಲಾಗಿತ್ತು. ಆದರೆ ಅಲ್ಪಾವಧಿಯಲ್ಲೇ ಒಂದು ಲಕ್ಷ ಹಿಂಬಾಲಕರನ್ನು ಪಡೆಯಿತಲ್ಲದೆ ಜನರೇ ಇದನ್ನು ಟ್ರೆಂಡ್ ಮಾಡಿದರು ಎಂದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ವಾರವಷ್ಟೆ ಸಿಂಗ್ ರೈತರ ಪ್ರತಿಭಟನೆಗೆ ಸಾಮಾಜಿಕ ತಾಣಗಳ ಮೂಲಕ ಹೆಚ್ಚು ಬೆಂಬಲವನ್ನು ಕ್ರೋಢೀಕರಿಸಲು ನಿರ್ಧರಿಸಿದರು. ಮೊದಲಿಗೆ ರಾಷ್ಟ್ರೀಯ ಮಾಧ್ಯಮಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿತ್ತಾದರೂ ಇವು ತಮ್ಮದೇ ಆದ ನಿಲುವುಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಯಿತು. ಪಂಜಾಭಿನ ರೈತರು ಫೇಸ್ ಬುಕ್ ಮೂಲಕ ಸಂವಹನ ಮಾಡುತಿದ್ದರು. ಆಧರೆ ಟ್ವಿಟರ್ ಇವರಲ್ಲಿ ಜನಪ್ರಿಯವಾಗಿರಲಿಲ್ಲ. ನಂತರ ಸಿಂಗ್ ಅವರು ಈ ಮೂಲಕವೇ ಪ್ರತಿಭಟನೆಗೆ ಬೆಂಬಲ ಕ್ರೋಢೀಕರಿಸಲು ಯುವ ಜನಾಂಗಕ್ಕೆ ತಿಳಿಸಿ ಟ್ವಿಟರ್ ನ ಪ್ರಾಮುಖ್ಯತೆಯನ್ನೂ ವಿವರಿಸಿದರು. ಈ ಕುರಿತು ಮಾಹಿತಿ ನೀಡಿದ ಸಿಂಗ್ ಅವರು ಮೊದಲಿಗೆ ಪ್ರತಿಭಟನಾ ನಿರತರನ್ನು ತಲುಪಲು ಮತ್ತು ಸಾಮಾಜಿಕ ತಾಣಗಳ ಮೂಲಕ ರೈತರಿಗೆ ದನಿಯಾಗಲು ನಿರ್ಧರಿಸಿದರು.

ಈಗ ಅನೇಕ ಹ್ಯಾಷ್ ಟ್ಯಾಗ್ಗಳ ಮೂಲಕ ಟ್ವಿಟರ್ ನಲ್ಲಿ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಆಮ್ ಆದ್ಮಿ ಪಕ್ಷದ ಅಧಿಕೃತ ಟ್ವಿಟರ್ ಖಾತೆ, ಕಲಾವಿದರಾದ ಜಾಝಿ, ಅಮಿ ವಿರ್ಕ್ , ಮತ್ತು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡುತಿದ್ದಾರೆ. ಶೇರ್ ಮಾಡುತಿದ್ದಾರೆ. ಮೊದಲಿಗೆ ಕೆಲವರು ಕೆಲವು ಘಂಟೆಗಳ ವರೆಗೆ ಈ ಹ್ಯಾಷ್ ಟ್ಯಾಗ್ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ. ನಂತರ ಇದು ಜನರನ್ನು, ಟ್ವಿಟರ್ ಬಳಕೆದಾರರನ್ನೂ ಸೆಳೆಯುತ್ತದೆ ಆ ಮೂಲಕ ಟ್ರೆಂಡಿಂಗ್ ಆಗುತ್ತಿದೆ. ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಲು ಹೊಸ ಬಳಕೆದಾರರ ಸೇರ್ಪಡೆಯೇ ಮುಖ್ಯ ಕಾರಣವಾಗಿದೆ. ಈ ಮೂಲಕ ಟ್ವಿಟರ್ ಕೂಡ ರೈತ ವಲಯದಲ್ಲಿ ಜನಪ್ರಿಯವಾಗುತ್ತಿದೆ. ಸಾವಿರಾರು ಹಿಂಬಾಲಕರನ್ನು ಹೊಂದಿರುವ ನಾಯಕರೂ ಈ ಹ್ಯಾಷ್ ಟ್ಯಾಗ್ ಬಳಸಿಕೊಂಡಿರುವುದು ಬೇಗನೇ ಜನಪ್ರಿಯತೆಗೆ ಕಾರಣವಾಗಿದೆ.

ಈ ರೈತರ ಪ್ರತಿಭಟನೆಗೆ ಕಾಂಗ್ರೆಸ್ ಮತ್ತು ಆಮ್ ಅದ್ಮಿ ಪಕ್ಷಗಳು ಪ್ರಚೋದನೆ ನೀಡುತ್ತಿವೆ ಎಂಬ ಆರೋಪಗಳನ್ನು ಸಿಂಗ್ ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಯಾರು ಏನೇ ಆರೋಪ ಮಾಡಿದರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿರುವ ನಿಜವಾದ ರೈತರ ಸಂಖ್ಯೆಯೇ ಈ ಅರೋಪಗಳಿಗೆ ಉತ್ತರ ಎಂದು ಅವರು ಹೇಳಿದ್ದಾರೆ. ನಮಗೆ ಬಜೆಪಿಯೇತರ ಅನೇಕ ರಾಜಕೀಯ ಪಕ್ಷಗಳ ನಾಯಕರಿಂದ ಕರೆಗಳು ಬಂದವು. ಈ ಪ್ರತಿಭಟನೆಯಲ್ಲಿ ನಾವು ಸಕಾರಾತ್ಮಕವಾಗಿ ಪಾಲ್ಗೊಳ್ಳುವ ಮೂಲಕ ನಿಮ್ಮ ಆಂದೋಲನವನ್ನು ಜಂಠಿಯಾಗಿ ಮುನ್ನಡೆಸೋಣ ಎಂದು , ಆದರೆ ಇದೊಂದು ರಾಜಕೀಯ ರಹಿತ ಸಂಘಟನೆ ಆಗಿದ್ದು ಹಾಗೇಯೇ ಇದನ್ನು ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಸಿಂಗ್ ಹೇಳುತ್ತಾರೆ. ಈ ಸಾಮಾಜಿಕ ತಾಣಗಳ ಮೂಲಕ ಬೆಂಬಲ ನೀಡುವುದು ರೈತರ ಜನ ಜಾಗೃತಿಗಾಗಿ ಮಾತ್ರವೇ ಹೊರತು ಬೇರೆ ಏನಿಲ್ಲ ಎಂದು ಅವರು ಹೇಳಿದರು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲ ತಾಣ ವಿಭಾಗದ ರಾಷ್ಟ್ರೀಯ ಸಂಯೋಜಕ ಸರಳ್ ಪಟೇಲ್ ಅವರು ಈ ಸಾಮಾಜಿಕ ತಾಣ ಅಭಿಯಾನದಲ್ಲಿ ಪಕ್ಷದ ಪಾತ್ರವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಬರೇ ಇದೇ ವಿಷಯವಲ್ಲ ಯಾವುದೇ ವಿಷಯವು ಟ್ರೆಂಡಿಂಗ್ ಆದರೂ ಕಾಂಗ್ರೆಸ್ ಪಕ್ಷವು ಅದನ್ನು ಎತ್ತಿಕೊಂಡು ತನ್ನ ನಿಲುವನ್ನು ದಾಖಲಿಸುತ್ತದೆಯೇ ಹೊರತು ಇದನ್ನು ಪಕ್ಷವು ಆರಂಬಿಸಿಲ್ಲ ಎಂದರು. ಅಲ್ಲದೆ ಕಾಂಗ್ರೆಸ್ ಪಕ್ಷವು ರೈತರ ಹೋರಾಟಕ್ಕೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ದು ಇದರಲ್ಲಿ ಗುಟ್ಟೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com