ದೆಹಲಿ: ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಗೆ ಇದುವರೆಗೂ 70ಕ್ಕೂ ಹೆಚ್ಚು FIR

ದೆಹಲಿಯ ವಿರೋಧ ಪಕ್ಷಗಳು ಎಫ್ಐಆರ್ ದಾಖಲಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಪವನ್ ಖೇರಾ, ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು , ವಲಸೆ ಕಾರ್ಮಿಕರಿಗೆ ಎಚ್ಚರಿಕೆ ನೀಡದೆ ಲಾಕ್ ಡೌನ್ ಘೋಷಿಸುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರಕ್ಕೆ ಹೋಲುತ್ತದೆ ಎನ್ನುತ್ತಾರೆ
ದೆಹಲಿ: ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಗೆ ಇದುವರೆಗೂ 70ಕ್ಕೂ ಹೆಚ್ಚು FIR

ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕೋವಿಡ್ 19 ಸೋಂಕು ಭಾರತದಲ್ಲೂ ಮಾಡಿರುವ ಹಾನಿ ಊಹೆಗೂ ನಿಲುಕದ್ದು. ಇದರ ತಡೆಗಟ್ಟುವಿಕೆಗೆ ಸರ್ಕಾರಗಳು ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿವೆಯಾದರೂ ನಮ್ಮ ಜನತೆ ಮಾತ್ರ ಸರ್ಕಾರದ ಕ್ರಮಗಳಿಗೆ ಕ್ಯಾರೇ ಅನ್ನುತ್ತಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚಿನ ಕೋವಿಡ್ -19 ಉಲ್ಬಣದ ಮಧ್ಯೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಕನಿಷ್ಠ 73 ಪ್ರಥಮ ಮಾಹಿತಿ ವರದಿಗಳನ್ನು (ಎಫ್ಐಆರ್) ದಾಖಲಿಸಲಾಗಿದೆ. ನೂರಾರು ಸೋಂಕಿತರನ್ನು ಕೋವಿಡ್ -19 ಆರೈಕೆ ಅಥವಾ ಸಂಪರ್ಕತಡೆಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ ಮತ್ತು ಅವರನ್ನು ‘ಸೂಪರ್-ಸ್ಪ್ರೆಡರ್ಗಳು’ ಎಂದು ಪರಿಗಣಿಸಿ ಹೊರಗೆ ಬಾರದಂತೆ ಕಠಿಣ ಎಚ್ಚರಿಕೆಗಳನ್ನು ನೀಡಲಾಗುತ್ತಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆಯ ನಂತರ ನವೆಂಬರ್ ಮೂರನೇ ವಾರದಲ್ಲಿ ಕ್ವಾರಂಟೈನ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ. ಇದಲ್ಲದೆ ಕ್ವಾರಂಟೈನ್ ನಲ್ಲಿರುವ ರೋಗಿಗಳನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಬೇಕು ಮತ್ತು ಪ್ರತ್ಯೇಕವಾಗಿ ಆರೋಗ್ಯ ತಂಡಗಳು ಖುದ್ದಾಗಿ ಭೇಟಿ ನೀಡಬೇಕು ಮತ್ತು ಪ್ರತ್ಯೇಕತೆಯ ಮಾನದಂಡಗಳಿಗೆ ಸರಿಯಾಗಿ ಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕ್ವಾರಂಟೈನ್ ನಲ್ಲಿರುವ ಸೋಂಕಿತರು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದನ್ನು ಗಮನಿಸಿದರೆ ದೆಹಲಿ ಸರ್ಕಾರ ಹೆಚ್ಚು ಸಂಖ್ಯೆಯ ಸ್ವಯಂ ಸೇವಕರು ಮತ್ತು ಆರೋಗ್ಯ ಕಾರ್ಯ ಕರ್ತರನ್ನು ನೇಮಿಸಿಕೊಳ್ಳಬೇಕಾದ ಅವಶ್ಯಕತೆ ಕಂಡು ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ
ಕೋವಿಡ್ 19 ನಿಯಮ ಉಲ್ಲಂಘನೆಗಳ ವಿರುದ್ಧ ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸರ್ಕಾರಿ ನೌಕರರ ಆದೇಶಕ್ಕೆ ಅವಿಧೇಯತೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದು ಗರಿಷ್ಠ ಒಂದು ತಿಂಗಳು ಅಥವಾ 200 ರೂ.ಗಳ ದಂಡ ಅಥವಾ ಎರಡನ್ನೂ ವಿಧಿಸುತ್ತದೆ. ದೆಹಲಿ ಸರ್ಕಾರದ ಇತ್ತೀಚಿನ ಆರೋಗ್ಯ ಬುಲೆಟಿನ್ ಪ್ರಕಾರ ಶುಕ್ರವಾರ ಸಂಜೆಯವರೆಗೆ ಒಟ್ಟು 18,423 ಜನರು ಕ್ವಾರಂಟೈನ್ ನಲ್ಲಿದ್ದಾರೆ. ಕಣ್ಗಾವಲು ಅಧಿಕಾರಿಗಳು ಮತ್ತು ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿಗಳ ಪ್ರಕಾರ ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರೊಂದಿಗೆ ವ್ಯವಹರಿಸುವುದು ಕಷ್ಟವಾಗುತ್ತಿದೆ. ಏಕೆಂದರೆ ಕ್ವಾರಂಟೈನ್ ನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ದೆಹಲಿಯಲ್ಲಿ ಕೋವಿಡ್ -19 ರೋಗಿಗಳನ್ನು 14-17 ದಿನಗಳವರೆಗೆ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತಿದೆ. ಈ ಸಮಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ತಂಡಗಳು ರೋಗಿಗಳ ಆರೋಗ್ಯ ಮತ್ತು ಮನೆಯನ್ನು ಫೋನ್ ಕರೆಗಳು ಮತ್ತು ಬೇಟಿ ನೀಡುವ ಮೂಲಕ ಪರಿಶೀಲಿಸಬೇಕು.

ದೆಹಲಿ ನೈರುತ್ಯ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಕೇಶ್ ದಹಿಯಾ ಅವರ ಪ್ರಕಾರ ಹೋಂ ಕ್ವಾರಂಟೈನ್ ನಲ್ಲಿರುವವರು ಮನೆಯೊಳಗಿರದೆ ಹೊರಗೆ ತಿರುಗಾಡುತಿದ್ದಾರೆ. ಬಹುತೇಕರು ಉದ್ಯೋಗದ ನಿಮಿತ್ತ ಕೆಲಸದ ಸ್ಥಳಗಳಿಗೆ ತೆರಳುತಿದ್ದಾರೆ. ಇದರಿಂದ ಇವರ ಸಹೋದ್ಯೋಗಿಗಳಿಗೂ ಸೋಂಕು ಹರಡಿಸುತಿದ್ದಾರೆ ಎಂದು ಅವರು ಹೇಳಿದರು. ಜಿಲ್ಲಾಡಳಿತವು ಕಳೆದ ಹದಿನೈದು ದಿನಗಳಲ್ಲಿ ಐಪಿಸಿಯ ಸೆಕ್ಷನ್ 188 ರ ಅಡಿಯಲ್ಲಿ ಎಂಟು ಎಫ್ಐಆರ್ಗಳನ್ನು ದಾಖಲಿಸಿದೆ. ಇಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂದು ಅವರು ಹೇಳಿದರು. ಇದಲ್ಲದೆ ಕ್ವಾರಂಟೈನ್ ನಲ್ಲಿರುವವರು ವಿವಾಹ ಆಮಂತ್ರಣಗಳನ್ನು ವಿತರಿಸುವ ಅಥವಾ ಮಾರುಕಟ್ಟೆಗಳಿಗೆ ಭೇಟಿ ನೀಡಿದ್ದು ಅಂತಹವರ ವಿರುದ್ಧ 15 ಎಫ್ಐಆರ್ ದಾಖಲಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೆಹಲಿ ಪಶ್ಚಿಮ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಷ್ಟೇಟ್ ಧರ್ಮೇಂದ್ರ ಸಿಂಗ್ ಅವರ ಪ್ರಕಾರ ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸುವವರಲ್ಲಿ ಕೆಳ ಸ್ತರಗಳಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಆದರೆ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಪ್ರಕರಣಗಳು ಕಡಿಮೆ ಇವೆ ಎಂದು ಅವರು ಹೇಳಿದರು. ಆದರೆ ದೆಹಲಿಯ ವಿರೋಧ ಪಕ್ಷಗಳು ಎಫ್ಐಆರ್ ದಾಖಲಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ಪವನ್ ಖೇರಾ, ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು , ವಲಸೆ ಕಾರ್ಮಿಕರಿಗೆ ಎಚ್ಚರಿಕೆ ನೀಡದೆ ಲಾಕ್ ಡೌನ್ ಘೋಷಿಸುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರಕ್ಕೆ ಹೋಲುತ್ತದೆ ಎನ್ನುತ್ತಾರೆ.

ಕೇವಲ ರಾಜಕೀಯ ನಾಯಕತ್ವವನ್ನು ಮಾತ್ರವಲ್ಲದೆ ಸರ್ಕಾರದ ಅಧಿಕಾರಿಗಳೂ ಸಹ ನೆಲದ ವಾಸ್ತವಗಳನ್ನು ನಿರ್ಲಕ್ಷಿಸುತಿದ್ದಾರೆ ಎಂದು ಅವರು ಹೇಳಿದರು. ಎಫ್ ಐ ಆರ್ ದಾಖಲಿಸುವ ಕಠಿಣ ಕ್ರಮದ ಬದಲಿಗೆ , ಕ್ವಾರಂಟೈನ್ ನಲ್ಲಿರುವವರಿಗೆ ಅನುಕೂಲವಾಗುವಂತೆ ಅವಶ್ಯಕ ವಸ್ತುಗಳನ್ನು ಸರಬರಾಜು ಮಾಡುವುದು ಮುಖ್ಯ ಎಂದು ಅವರು ಹೇಳಿದರು.

ಗ್ರೇಟರ್ ಕೈಲಾಶ್ನಲ್ಲಿರುವ 33 ವರ್ಷದ ಮನೆ ಕೆಲಸಗಾರ್ತಿ ಶಾಲೀನ್ ಅವರು ತಮ್ಮ ನಾಲ್ಕು ಸದಸ್ಯರ ಕುಟುಂಬಕ್ಕೆ ಆಹಾರ ಪದಾರ್ಥಗಳು ಬೇಕಾದರೆ ಹೊರಗೆ ದುಡಿಯಲು ಹೋಗಲೇಬೇಕು ಎನ್ನುತ್ತಾರೆ. ನನ್ನ ಪತಿ ಆರ್ ಎಂ ಎಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಮತ್ತು ಅವರು ಸಹಜವಾಗೇ ಕೋವಿಡ್ -19 ಸೋಂಕಿತರೊಂದಿಗೆ ಸಂಪರ್ಕಕ್ಕೆ ಬರುತ್ತಾರೆ. ಆದ್ದರಿಂದ ಒಮ್ಮೆ ಅವರನ್ನು ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಯಿತು. ಅವರು ನಮ್ಮೊಂದಿಗೆ ಸಂಪರ್ಕಕ್ಕೆ ಬಂದ ಕಾರಣ, 14 ದಿನಗಳವರೆಗೆ ಹೊರಹೋಗದಂತೆ ನಮಗೂ ಸೂಚಿಸಲಾಯಿತು. ಇದರಿಂದ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಯಿತು ಎಂದು ಅವರು ಹೇಳಿದರು.

ದಕ್ಷಿಣ ದೆಹಲಿಯು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ದ ಮೊದಲು ಪ್ರಕರಣ ದಾಖಲಿಸಿತು ಮತ್ತು ಈಗಲೂ ಮೊದಲ ಸ್ಥಾನದಲ್ಲಿದೆ. ದಕ್ಷಿಣ ವಿಭಾಗದ ಡಿಸಿಪಿ ಅತುಲ್ ಠಾಕೂರ್ ಅವರು ನೀಡಿದ ಮಾಹಿತಿಯಂತೆ ನವೆಂಬರ್ 30 ರ ವರೆಗೆ ಕ್ವಾರಂಟೈನ್ ನಿಯಮಾವಳಿ ಉಲ್ಲಂಘನೆಯ ಆರೋಪದಡಿಯಲ್ಲಿ ಒಟ್ಟು 50 ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ , ವಾಯುವ್ಯ ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮಾವಳಿ ಉಲ್ಲಂಘನೆಯ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದು ಯಾವುದೇ ಎಸ್ಡಿಎಂಗಳಿಂದ ಈ ವಿಷಯದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚೇತನ್ ಯಾದವ್ ಹೇಳಿದರು.

ದೆಹಲಿ ಆಗ್ನೇಯ ಜಿಲ್ಲೆಯಲ್ಲೂ ಕೋವಿಡ್ ಉಲ್ಲಂಘನೆಯ ಪ್ರಕರಣಗಳ ಸಂಖ್ಯೆ ತುಂಬ ಕಡಿಮೆ ಇದೆ. ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಾನದಂಡದ ಪ್ರಕಾರ, ಕೋವಿಡ್ -19 ರೋಗಿಯನ್ನು ಕ್ವಾರಂಟೈನ್ ಕೇಂದ್ರಗಳಲ್ಲಿ ರೋಗಲಕ್ಷಣಗಳು ಕಾಣಿಸಿದ 10 ದಿನಗಳ ನಂತರ ಬಿಡುಗಡೆ ಮಾಡಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ, ಆದರೆ ಬಿಡುಗಡೆಗೂ ಮುನ್ನ ಸೋಂಕಿತ ವ್ಯಕ್ತಿಗೆ ಸತತ ಮೂರು ದಿನಗಳವರೆಗೆ ಜ್ವರದ ಲಕ್ಷಣಗಳಿರಬಾರದು. ಅದರ ನಂತರ, ರೋಗಿಯನ್ನು ಮನೆಯಲ್ಲಿ ಇನ್ನೂ ಏಳು ದಿನಗಳವರೆಗೆ ಪ್ರತ್ಯೇಕವಾಗಿರಲು ಸೂಚಿಸಲಾಗುತ್ತದೆ. ಮನೆ ಪ್ರತ್ಯೇಕತೆಯ ಅವಧಿ ಮುಗಿದ ನಂತರ ಪರೀಕ್ಷೆಯ ಅಗತ್ಯವಿಲ್ಲ, ಆದರೆ ಬಿಡುಗಡೆಯಾದ ಪ್ರತಿಯೊಬ್ಬ ವ್ಯಕ್ತಿಯು ಜಿಲ್ಲೆಯ ಅಧಿಕಾರಿಗಳಿಂದ ಫಿಟ್ನೆಸ್ ಪ್ರಮಾಣಪತ್ರವನ್ನು ಪಡೆಯಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಜುಲೈ 2 ರಂದು ಹೊರಡಿಸಿದ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

ಕೃಪೆ: the print

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com