ಕೋವಿಡ್ ಲಸಿಕೆಯ ರಫ್ತುದಾರನಾಗಬೇಕಿದ್ದ ಭಾರತ ಗ್ರಾಹಕನಾಗುವುದು ಏಕೆ ?

ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯಗಳು ಜಾಗತಿಕವಾಗಿ ಪ್ರಸಿದ್ಧವಾಗಿವೆ. ಸೀರಮ್ ಇನ್ಸ್ಟಿಟ್ಯೂಟ್ ಅಂದಾಜಿನ ಪ್ರಕಾರ, ಇದು ವಾರ್ಷಿಕವಾಗಿ ತಯಾರಿಸುವ 1.5 ಬಿಲಿಯನ್ ಡೋಸ್ ಲಸಿಕೆಗಳನ್ನು ವಿಶ್ವದ ಶೇಕಡಾ 65 ರಷ್ಟು ಮಕ್ಕಳಿಗೆ ನೀಡಲಾಗುತ್ತದೆ.
ಕೋವಿಡ್ ಲಸಿಕೆಯ ರಫ್ತುದಾರನಾಗಬೇಕಿದ್ದ ಭಾರತ ಗ್ರಾಹಕನಾಗುವುದು ಏಕೆ ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ್ ರಾಘವನ್ ಅವರು ಕೋವಿಡ್ 19 ರೋಗ ನಿರೋಧಕ ಲಸಿಕೆಯನ್ನು ಮೊದಲ ಹಂತದಲ್ಲೆ 30 ಕೋಟಿ ಭಾರತೀಯರಿಗೆ ವಿತರಿಸಲು ನೀಲ ನಕಾಶೆ ಸಿದ್ದಪಡಿಸಲಾಗಿದೆ ಎಂದು ಘೋಷಿಸಿದ್ದಾರೆ, ಇದು ಸಂತೋಷದ ವಿಷಯವೇ ಆಗಿದ್ದರೂ ಭಾರತವು ತನ್ನ ನೆಲದಲ್ಲೆ ಉತ್ಪಾದನಾ ಸೌಲಭ್ಯಗಳನ್ನು ಹೊಂದುವ ಮತ್ತು ಸ್ಥಳೀಯವಾಗಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುವ ಸಾಮರ್ಥ್ಯವನ್ನು ಬಳಸಿಕೊಂಡಿದೆ.

ಈಗಾಗಲೇ 1.6 ಬಿಲಿಯನ್ ಲಸಿಕೆಗಳನ್ನು ಪಡೆಯಲು ವಿವಿಧ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇವುಗಳಲ್ಲಿ ಒಂದು ಶತಕೋಟಿ ಲಸಿಕೆಗಳನ್ನು ಅಮೇರಿಕ ಮೂಲದ ನೊವಾವಾಕ್ಸ್, ಕಂಪೆನಿಯ ಜತೆ ಮಾಡಿಕೊಂಡಿರುವ ಒಡಂಬಡಿಕೆಯ ಮೂಲಕ ಪಡೆಯಲಾಗುತಿದ್ದು ಈ ಕಂಪೆನಿ ಭಾರತ ಮತ್ತು ಇತರ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಉತ್ಪಾದನೆ ಮತ್ತು ಪೂರೈಕೆಗಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಯೊಂದಿಗೆ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದೆ. ಮತ್ತೊಂದು ಲಸಿಕೆ ತಯಾರಿಕಾ ಕಂಪೆನಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಕೂಡ 500 ಮಿಲಿಯನ್ ಡೋಸ್ ಗಳನ್ನೂ ಎಸ್ಐಐನಲ್ಲಿ ತಯಾರಿಸಲಾಗುತ್ತಿದೆ.

ನೊವಾವಾಕ್ಸ್ ಕಂಪೆನಿಯ ಲಸಿಕೆಯ ಯಶಸ್ಸು ಇನ್ನೂ ತಿಳಿದುಬಂದಿಲ್ಲ. ಏಕೆಂದರೆ ಇದು ಇಂಗ್ಲೆಂಡ್ ನಲ್ಲಿ ಮೂರನೇ ಹಂತದ ಪ್ರಯೋಗಕ್ಕಾಗಿ ಸ್ವಯಂಸೇವಕರನ್ನು ನೇಮಿಸಿಕೊಳ್ಳುತ್ತಿದೆ ಮತ್ತು ಜನವರಿ 2021 ರೊಳಗೆ ಟ್ರಯಲ್ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಪೂರ್ವ-ಖರೀದಿಗಳ ಗಾತ್ರದಲ್ಲಿ ಭಾರತವು ಇತರ ರಾಷ್ಟ್ರಗಳಿಗಿಂತ ಮುಂದಿದ್ದರೂ , ಕಡಿಮೆ ದರ, ನೋವಾವಾಕ್ಸ್ ನ ನಿಧಾನವಾಗಿರುವ ಲಸಿಕೆ ಉತ್ಪಾದನೆಯು ಜನರ ಆರೋಗ್ಯವನ್ನು ರಿಸ್ಕ್ ಗೆ ತಳ್ಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ ಅಭಿವೃದ್ಧಿ ಹೊಂದಿದ ಪ್ರಪಂಚದ ಬಹುಪಾಲು ದೇಶಗಳು ಈಗಾಗಲೇ ಫಿಜರ್, ಮಾಡರ್ನಾ ಮತ್ತು ಅಸ್ಟ್ರಾಜೆನೆಕಾ ಕಂಪೆನಿಗಳಿಂದ 3.7 ಬಿಲಿಯನ್ ಡೋಸ್ಗಳ ಖರೀದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಈ ದೇಶಗಳು ಇತರ ದೇಶಗಳ ತಯಾರಕರೊಂದಿಗೂ ಸಂಭಾವ್ಯ ಖರೀದಿ ಒಪ್ಪಂದಗಳ ಮೂಲಕ ಇನ್ನೂ ಹೆಚ್ಚಿನ ಪ್ರಮಾಣಗಳನ್ನು ಕಾಯ್ದಿರಿಸುತ್ತಿವೆ. ಈ ದೇಶಗಳು ತಮ್ಮ ಜನಸಂಖ್ಯೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣವನ್ನು ಪಡೆಯಲು ಒಪ್ಪಂದ ಮಾಡಿಕೊಳ್ಳುತ್ತಿವೆ. . ಕೆನಡಾ ಪ್ರತಿ ವ್ಯಕ್ತಿಗೆ 9.5 ಡೋಸ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರತೀ ವ್ಯಕ್ತಿಗೆ 5.3, ಯೂರೋಪಿಯನ್ ಯೂನಿಯನ್ ದೇಶಗಳು 3.2 ಮತ್ತು ಅಮೇರಿಕಾ 3.1 ಡೋಸೇಜ್ ಅನ್ನು ಸಂಗ್ರಹಿಸಿವೆ. ಈ ಲಸಿಕೆ ಸಂಗ್ರಹಿಸುವ ಉನ್ಮಾದ ಸದ್ಯಕ್ಕೆ ಕೊನೆಗೊಳ್ಳುವುದಿಲ್ಲ ಆಧರೆ ಇದರಲ್ಲಿ ಭಾರತಕ್ಕೆ ಹಣ ಗಳಿಸುವ ಅವಕಾಶವಿದೆ.


ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯಗಳು ಜಾಗತಿಕವಾಗಿ ಪ್ರಸಿದ್ಧವಾಗಿವೆ. ಸೀರಮ್ ಇನ್ಸ್ಟಿಟ್ಯೂಟ್ ಅಂದಾಜಿನ ಪ್ರಕಾರ, ಇದು ವಾರ್ಷಿಕವಾಗಿ ತಯಾರಿಸುವ 1.5 ಬಿಲಿಯನ್ ಡೋಸ್ ಲಸಿಕೆಗಳನ್ನು ವಿಶ್ವದ ಶೇಕಡಾ 65 ರಷ್ಟು ಮಕ್ಕಳಿಗೆ ನೀಡಲಾಗುತ್ತದೆ. ಭಾರತ್ ಬಯೋಟೆಕ್, ಶಾಂತ ಬಯೋಟೆಕ್ನಿಕ್ಸ್, ಇಂಡಿಯನ್ ಇಮ್ಯುನೊಲಾಜಿಕಲ್ಸ್, ಝೈಡಸ್ ಕ್ಯಾಡಿಲಾ ಮತ್ತು ಬಯೋಲಾಜಿಕಲ್ ಕಂಪೆನಿಗಳು ವಿಶ್ವಕ್ಕೆ ಸರಬರಾಜು ಮಾಡುವಷ್ಟು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಫೈಜರ್ ಮತ್ತು ಮಾಡರ್ನಾದ ಎಂಆರ್ಎನ್ಎ ಲಸಿಕೆಗಳು ಭಾರತೀಯ ತಯಾರಕರು ಮತ್ತು ಎಮ್ಕ್ಯೂರ್ ಫಾರ್ಮಾಸ್ಯುಟಿಕಲ್ಸ್ನ ಅಂಗಸಂಸ್ಥೆಯಾದ ಪುಣೆ ಮೂಲದ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ, ಮಾಡರ್ನಾ ಲಸಿಕೆಗಳ ಬೆಲೆ ಪ್ರತಿ ಡೋಸ್ಗೆ $ 10-30ರ ನಡುವೆ ಇರುತ್ತದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಅವರು ಎರಡು ಡೋಸ್ ಆಕ್ಸ್ಫರ್ಡ್ ಲಸಿಕೆ ಸುಮಾರು 1,000 ರೂ.ಗಳಿಗೆ ಲಭ್ಯವಿರುತ್ತದೆ ಎಂದು ಹೇಳಿದರೆ, ರಷ್ಯನ್ನರು ಪ್ರತೀ ಡೋಸ್ ಗೆ ಸುಮಾರು 700 ರೂ. ಗಳನ್ನು ನಿಗದಿಪಡಿಸಿದ್ದಾರೆ.


ಭಾರತದ ಜನಸಂಖ್ಯೆಯ ಶೇಕಡಾ 80 ರಷ್ಟು ಜನರಿಗೆ ಲಸಿಕೆ ಹಾಕಲು ದೊಡ್ಡ ಪ್ರಮಾಣದ ಯೋಜನೆಗಳನ್ನು ಸಿದ್ಧಪಡಿಸಲು ಭಾರತದಲ್ಲಿನ ತಜ್ಞರು ಸೂಚಿಸಿದ್ದಾರೆ ಎಂದು ಕೆಲವರು ಭಾವಿಸುತ್ತಾರೆ. ಆದರೆ , ರೋಗಲಕ್ಷಣವಿಲ್ಲದ ಪ್ರಕರಣಗಳಲ್ಲಿಯೂ ಸಹ ರೋಗ ಹರಡುವುದನ್ನು ತಡೆಗಟ್ಟುವ ಲಸಿಕೆಯ ಸಾಮರ್ಥ್ಯದ ಆಧಾರದ ಮೇಲೆ ದೀರ್ಘಕಾಲದ ಪ್ರತಿರಕ್ಷೆಯು ಯಾವುದೇ ಲಸಿಕೆಗಳೊಂದಿಗೆ ಸಾಧ್ಯ ಎಂದು ನಾವು ಪುರಾವೆಗಳನ್ನು ಪಡೆಯುವವರೆಗೆ ಅಂತಹ ಹೂಡಿಕೆ ಮೂರ್ಖತನವಾಗಿರುತ್ತದೆ. ಲಸಿಕೆ ಹಾಕುವ ಸರ್ಕಾರದ ಪ್ರಸ್ತುತ ಯೋಜನೆಗಳಿಂದ ಹೆಚ್ಚು ದುರ್ಬಲ ಜನಸಂಖ್ಯೆಯು ಅಂದಾಜು 67,000 ರಿಂದ 1 ಲಕ್ಷ ಸಾವುಗಳನ್ನು ತಡೆಯಬಹುದು, ಏಕೆಂದರೆ ಭಾರತದಲ್ಲಿ ಸಂಭವಿಸುವ ಎಲ್ಲಾ ಸಾವುಗಳಲ್ಲಿ 53 ಪ್ರತಿಶತವು 60ಕ್ಕಿಂತ ಹೆಚ್ಚು ವಯಸ್ಸಿನವರದಾಗಿದ್ದು, 45-60 ವರ್ಷ ವಯಸ್ಸಿನವರಲ್ಲಿ ಶೇ. 35 ರಷ್ಟು ಸಾವುಗಳು ಸಂಭವಿಸಿವೆ.ಅಗ್ಗದ ದರದಲ್ಲಿ ಒಪ್ಪಂದ ಮಾಡಿಕೊಂಡಿರುವ ಹೊರತಾಗಿಯೂ ಸರ್ಕಾರದ ಅಂದಾಜಿನ ಪ್ರಕಾರ ಮೊದಲ ಹಂತದಲ್ಲಿ 30 ಕೋಟಿ ಜನ ದುರ್ಬಲ ವರ್ಗದವರಿಗೆ ಲಸಿಕೆ ಹಾಕಲು ನಮಗೆ ಸುಮಾರು 60,000 ಕೋಟಿ ರೂ. ವೆಚ್ಚವಾಗಲಿದೆ. ಆದರೆ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ವಾರ್ಷಿಕ ಬಜೆಟ್ ಮೊತ್ತ 69 ಸಾವಿರ ಕೋಟಿ ರೂಪಾಯಿಗಳಾಗಿವೆ. ಇನ್ನೂ ಹೆಚ್ಚು ಜನರಿಗೆ ಲಸಿಕೆ ನೀಡಲು ಮತ್ತಷ್ಟು ಹಣ ವೆಚ್ಚವಾಗಲಿದೆ. ಈಗಾಗಲೇ ಆರ್ಥಿಕ ಹಿಂಜರಿತದಲ್ಲಿರುವ ದೇಶವು ಅದಕ್ಕಾಗಿ ಹಣವನ್ನು ಹೊಂದಿಸುವುದು ಒಂದು ದೊಡ್ಡ ಸವಾಲಾಗಿದೆ. ನಾವು ಈಗಾಗಲೇ ಮಕ್ಕಳ ಲಸಿಕೆಗಳಿಗೆ ಜಾಗತಿಕ ಪೂರೈಕೆ ಸರಪಳಿ ಆಗಿದ್ದೇವೆ ಮತ್ತು ಕೋವಿಡ್ ಲಸಿಕೆಗಳಿಗೂ ನಾವು ಹಾಗೆ ಆಗಬಹುದು. ಪ್ರಸ್ತುತ ಮಾರುಕಟ್ಟೆ ಯನ್ನು ಗಮನಿಸಿದರೆ ಪಾಶ್ಚಿಮಾತ್ಯರ ಸಾಮರ್ಥ್ಯ ಮತ್ತು ಲಸಿಕೆಗೆ ಪಾವತಿಸುವ ಹಣ ಭಾರತಕ್ಕಿಂತ ಕನಿಷ್ಠ ಎರಡು ಪಟ್ಟು ಹೆಚ್ಚಾಗುತ್ತದೆ . ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪಾದನಾ ಸಾಮರ್ಥ್ಯಗಳನ್ನು ಹೊಂದಿರುವ ಭಾರತ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಬರೇ 30 ಕೋಟಿ ಭಾರತೀಯರಿಗೆ ಲಸಿಕೆ ಹಾಕುವ ನಮ್ಮ ಪ್ರಸ್ತುತ ಯೋಜನೆಗೆ ನಾವು ಅಂಟಿಕೊಂಡರೆ, ಲಸಿಕೆ ತಯಾರಕರು ಉತ್ಪಾದನಾ ಪರವಾನಗಿ ಮತ್ತು ಭಾರತದಲ್ಲಿ ಸಂಶೋದಿಸಲಾದ ಲಸಿಕೆಗಳನ್ನು ಉತ್ತೇಜಿಸುವ ಮೂಲಕ 100 ಕೋಟಿ ಡೋಸೇಜ್ ಲಸಿಕೆಗಳನ್ನು ರಫ್ತು ಮಾಡಬಹುದಾಗಿದೆ . ಇದರಿಂದ 13 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಮೌಲ್ಯವಾಗುತ್ತದೆ. , ಇದು ನಮ್ಮ ಒಟ್ಟು ಸರಕು ಮತ್ತು ಸೇವೆಗಳ ರಫ್ತಿನ ಶೇಕಡಾ 2.5 ರಷ್ಟು ಆಗಿದೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಕೃಪೆ: ದಿ ಪ್ರಿಂಟ್

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com