ರಾಜ್ಯಸಭಾ ಚುನಾವಣೆ: ಬಿಹಾರದಿಂದ ಸುಶೀಲ್‌ ಕುಮಾರ್‌ ಮೋದಿ ಸ್ಪರ್ಧೆ

ಮಹಾಘಟಬಂಧನ್‌ನಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದಲ್ಲಿ, ಸುಶೀಲ್‌ ಕುಮಾರ್‌ ಅವರು ನೇರವಾಗಿ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಇಲ್ಲವಾದರೆ, ಡಿಸೆಂಬರ್‌ 4ರಂದು ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ರಾಜ್ಯಸಭಾ ಚುನಾವಣೆ: ಬಿಹಾರದಿಂದ ಸುಶೀಲ್‌ ಕುಮಾರ್‌ ಮೋದಿ ಸ್ಪರ್ಧೆ

ಬಿಹಾರದ ಲೋಕ ಜನಶಕ್ತಿ ಪಾರ್ಟಿಯ ಸಂಸ್ಥಾಪಕರಾದ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಮರಣದಿಂದಾಗಿ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರನ್ನು ಬಿಜೆಪಿಯು ಆಯ್ಕೆ ಮಾಡಿದೆ.

ಒಂದು ವೇಳೆ ಮಹಾಘಟಬಂಧನ್‌ನಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದಲ್ಲಿ, ಸುಶೀಲ್‌ ಕುಮಾರ್‌ ಅವರು ನೇರವಾಗಿ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಇಲ್ಲವಾದರೆ, ಡಿಸೆಂಬರ್‌ 4ರಂದು ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಹಿಂದೆ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ನಿಚ್ಚಳವಾದ ಬಹುಮತವನ್ನು ಪಡೆದಾಗ ಘೋಷಣೆಯಾದ ಕ್ಯಾಬಿನೆಟ್‌ನಲ್ಲಿ ಸುಶೀಲ್‌ ಕುಮಾರ್‌ ಮೋದಿ ಅವರಿಗೆ ಸ್ಥಾನ ನೀಡಿರಲಿಲ್ಲ. ಈ ವಿಚಾರವು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿತ್ತು. ನಿತೀಶ್‌ ಕುಮಾರ್‌ ಅವರು ಕೂಡಾ ಬಿಜೆಪಿ ನಡೆಯ ಕುರಿತು ಮಾತನಾಡಿರಲಿಲ್ಲ. ಬಿಹಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದು ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿಯೂ ಸುಶೀಲ್‌ ಅವರು ಮುಂಚೂಣಿಯಲ್ಲಿದ್ದರು. ಆದರೂ ಅವರನ್ನು ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.

ಈಗ ಸುಶೀಲ್‌ ಕುಮಾರ್‌ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿರುವುದರಿಂದ ಎಲ್ಲಾ ಅನುಮಾನಗಳಿಗೂ ತೆರೆ ಬಿದ್ದಿದೆ.

ಯಾವುದೇ ಬೇಸರವಿಲ್ಲ: ಚಿರಾಗ್‌ ಪಾಸ್ವಾನ್‌

ಎಲ್‌ಜೆಪಿಯ ಅಅಧ್ಯಕ್ಷರಾಗಿರುವ ಚಿರಾಗ್‌ ಪಾಸ್ವಾನ್‌ ಅವರು ಮಾತನಾಡಿ, ಈ ಸ್ಥಾನವು ಬಿಜೆಪಿಯವರಿಗೆ ಸೇರಿದ್ದು. ಅವರಿಗೆ ಯಾರು ಬೇಕು ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಎಲ್ಲಾ ಅಧಿಕಾರ ಅವರಿಗಿದೆ, ಎಂದು ಹೇಳಿದ್ದಾರೆ.

ಚಿರಾಗ್‌ ಅವರ ತಂದೆ ರಾಮ್‌ ವಿಲಾಸ್‌ ಪಾಸ್ವಾನ್‌ ಅವರು ರವಿ ಶಂಕರ್‌ ಪ್ರಸಾದ್‌ ಅವರ ರಾಜಿನಾಮೆಯಿಂದ ತೆರವಾಗಿದ್ದ ರಾಝ್ಯಸಭಾ ಸ್ಥಾನಕ್ಕೆ ಆಯ್ಕೆಯಾಗಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com