ಪ್ರಕರಣ ಹಿಂಪಡೆಯಲು ನಿರಾಕರಣೆ: ದಲಿತ ಸಹೋದರರಿಗೆ ಥಳಿಸಿ, ಮನೆಗೆ ಬೆಂಕಿ ಹಾಕಿದ ದುಷ್ಕರ್ಮಿಗಳು

ಎರಡು ವರ್ಷದ ಹಿಂದಿನ ಪೊಲೀಸ್ ಪ್ರಕರಣವನ್ನು ಹಿಂಪಡೆಯಲು ನಿರಾಕರಿಸಿದ್ದರಿಂದ ದಲಿತ ಸಹೋದರರಿಗೆ ಥಳಿಸಿದ ದುಷ್ಕರ್ಮಿಗಳು, ಅವರ ಮನೆಗೆ ಬೆಂಕಿ ಹಚ್ಚಿದೆ
ಪ್ರಕರಣ ಹಿಂಪಡೆಯಲು ನಿರಾಕರಣೆ: ದಲಿತ ಸಹೋದರರಿಗೆ ಥಳಿಸಿ, ಮನೆಗೆ ಬೆಂಕಿ ಹಾಕಿದ ದುಷ್ಕರ್ಮಿಗಳು

ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯಲ್ಲಿ ಸುಮಾರು 15 ಜನರ ಗುಂಪೊಂದು ದಲಿತ ಸಹೋದರರ ಮೇಲೆ ನಿರ್ದಯವಾಗಿ ಥಳಿಸಿ, ಅವರ ಗುಡಿಸಲನ್ನು ಸುಟ್ಟುಹಾಕಿದೆ. ಎರಡು ವರ್ಷದ ಹಿಂದಿನ ಪೊಲೀಸ್ ಪ್ರಕರಣವನ್ನು ಹಿಂಪಡೆಯಲು ದಲಿತ ಸಹೋದರರು ನಿರಾಕರಿಸಿದ್ದರಿಂದ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವು ದೂರುದಾರ ಸಂದೀಪ್ ದೋಹರೆ ಅವರ ಸಹೋದರ - ಸಾಂತ್‌ರಾಮ್‌ ದೋಹರೆ - ಮತ್ತು ವೇತನ ಪಾವತಿಯಲ್ಲಿನ ವ್ಯತ್ಯಾಸದ ಬಗ್ಗೆ ಆರೋಪಿಸಲ್ಪಟ್ಟಿರುವ ಪವನ್ ಯಾದವ್ ನಡುವಿನ 2018 ರ ವಿವಾದಕ್ಕೆ ಸಂಬಂಧಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪೊಲೀಸರು ಆರೋಪಿಯ ಮೇಲೆ ಪ್ರಕರಣ ದಾಖಲಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯಾದವ್ ಕುಟುಂಬವು ಅವರ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕೆಂದು ಸಾಂತ್‌ರಾಮ್‌ ದೋಹರೆ ಅವರ ಮೇಲೆ ಒತ್ತಡ ಹೇರುತ್ತಿತ್ತು, ಆದರೆ ಅವರು ನಿರಾಕರಿಸಿದ್ದರು.‌ ಇದರಿಂದ ಕೋಪಗೊಂಡ ಪವನ್ ಯಾದವ್ ಕುಟುಂಬವು ಸಾಂತ್‌ರಾಮ್‌ ಮತ್ತು ಅವರ ಸಹೋದರ ಸಂದೀಪ್ ಅವರನ್ನು ರೈಫಲ್ ಬಟ್‌ಗಳಿಂದ ಹೊಡೆದು, ಅವರ ಮನೆಗೆ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ.

ಆರೋಪಿಗಳನ್ನು ಪವನ್ ಯಾದವ್, ಕಲ್ಲು ಯಾದವ್, ಅವರ ನಾಲ್ವರು ಸಂಬಂಧಿಕರು ಮತ್ತು ನೆರೆಹೊರೆಯವರು ಎಂದು ಗುರುತಿಸಲಾಗಿದೆ. ಅವರು ಐದು ಮೋಟರ್ ಸೈಕಲ್‌ಗಳಲ್ಲಿ 10-12 ಜನರ ಗುಂಪಿನೊಂದಿಗೆ ದೋಹರೆ ಅವರ ಮನೆಗೆ ಬಂದರು ಎಂದು ವರದಿಯಾಗಿದೆ.

ದೋಹರೆ ಅವರ ಮನೆಗೆ ನುಗ್ಗಿದ ದಾಳಿಕೋರರ ಗುಂಪು ಸಹೋದರರನ್ನು ರೈಫಲ್‌ಗಳು ಮತ್ತು ಕೊಡಲಿಯಿಂದ ಹೊಡೆಯಲು ಪ್ರಾರಂಭಿಸಿದ್ದು, ಮನೆಗೆ ಬೆಂಕಿ ಹಚ್ಚಿದರು. ದಾಳಿಕೋರರು ಗಾಳಿಯಲ್ಲಿ ಗುಂಡು ಹೊಡೆದ ಪರಿಣಾಮ ಕೆಲವು ಹಳ್ಳಿಗರು ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಗ್ರಾಮಸ್ಥರು ಐದು ಬೈಕ್‌ಗಳಲ್ಲಿ ಮೂರು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ ಉಳಿದ ಬೈಕ್‌ಗಳೊಂದಿಗೆ ಆರೋಪಿಗಳು ಪರಾರಿಯಾಗಿದ್ದಾರೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಅವರ ಗಾಯಗಳ ಗಂಭೀರತೆಯಿಂದಾಗಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com